Personality Tips: ಲೈಫ್‌ ಸೂಪರ್ ಆಗಿರ್ಬೇಕಾ, ಹಾಗಿದ್ರೆ ವಿಲ್ ಪವರ್ ಹೆಚ್ಚಿಸ್ಕೊಳ್ಳಿ

By Vinutha Perla  |  First Published Dec 6, 2022, 12:43 PM IST

ಜೀವನದಲ್ಲಿ ಎಲ್ಲವನ್ನೂ ಸಾಧಿಸಬೇಕೆಂಬ ಛಲ, ಅಭಿಲಾಷೆ ಎಲ್ಲರಿಗೂ ಇರುತ್ತದೆ. ಆದರೆ ಎಲ್ಲರಿಂದಲೂ ಅದು ಸಾಧ್ಯವಾಗುವುದಿಲ್ಲ. ಏನನ್ನಾದರೂ ಸಾಧಿಸಬೇಕುಎ ಎಂದಾದರೆ ಪ್ರಬಲವಾದ ಇಚ್ಛಾಶಕ್ತಿ ಇರಬೇಕು. ಹಾಗಿದ್ರೆ ವಿಲ್‌ ಪವರ್ ಹೆಚ್ಚಿಸಿಕೊಳ್ಳುವುದು ಹೇಗೆ ? ಇಲ್ಲಿದೆ ಮಾಹಿತಿ.


ಜೀವನ (Life)ದಲ್ಲಿ ಸಾಧನೆ ಮಾಡಿ ಯಶಸ್ವಿಯಾಗಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಸಹ ಪಡುತ್ತಾರೆ. ಆದರೆ ಕೆಲವೊಬಮ್ಮೆ ಜೀವನದಲ್ಲಿ ಏನು ಮಾಡಿದರೂ ಸಹ ಎಲ್ಲವೂ ಸರಿಯಾಗಿಲ್ಲ ಅನಿಸುತ್ತದೆ. ಹೀಗಿದ್ದಾಗ ಇಚ್ಛಾಶಕ್ತಿಯೊಂದೇ  ಬದುಕಿನಲ್ಲಿ ನಮಗೆ ಪ್ರೇರಣೆ ನೀಡಬಲ್ಲದು. ಆದ್ರೆ ಎಲ್ಲರಲ್ಲೂ ಈ ವಿಲ್‌ ಪವರ್ ಇರುವುದಿಲ್ಲ. ಹಾಗೆ ಮಾಡಿದರೆ ಎಲ್ಲಿ ಸೋತು ಹೋಗ್ತೇವೋ ಅನ್ನೋ ಭಯದಲ್ಲೇ ರಿಸ್ಕ್‌ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಆದ್ರೆ ವಿಲ್‌ ಪವರ್‌ ಇದ್ದರೆ ಎಂಥಹದ್ದೇ ಸಾಧನೆ (Achievement) ಮಾಡಲು ಸಾಧ್ಯವಾಗುತ್ತದೆ. ಆದ್ರೆ ವಿಲ್ ಪವರ್ ಅಥವಾ ಇಚ್ಛಾಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ. ಇಲ್ಲಿದೆ ಉಪಯುಕ್ತ ಮಾಹಿತಿ. ವಿಲ್‌ ಪವರ್‌ ಹೆಚ್ಚಿಸಲು ಮಾನಸಿಕ ಆರೋಗ್ಯ ತಜ್ಞರು (Health experts) ಸೂಚಿಸಿದ ಕೆಲವು ಮಾರ್ಗಗಳು ಇಲ್ಲಿವೆ.

ವಿಲ್ ಪವರ್ ಹೆಚ್ಚಿಸಿಕೊಳ್ಳುವುದು ಹೇಗೆ?

Latest Videos

undefined

1. ವಾಸ್ತವಿಕ ಗುರಿಗಳನ್ನು ಹೊಂದಿಸುವುದು: ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದು, ಅದನ್ನು ತಲುಪಲು ಸಾಧ್ಯವಾಗದಿದ್ದಾಗ ಮನಸ್ಸು ಕುಗ್ಗುತ್ತದೆ. ಜೀವನೋತ್ಸಾಹ ಕುಸಿಯುತ್ತದೆ. ನಿಮ್ಮ ನಿಮ್ಮ ಬಗ್ಗೆ ಭರವಸೆ (Hope)ಯನ್ನು ಸಹ ಕಳೆದುಕೊಳ್ಳಬಹುದು. ಅದರ ಬದಲು ಸಾಧಿಸಲು ಸಾಧ್ಯವಿರುವ ಗುರಿಗಳನ್ನು ಮಾತ್ರ ಹೊಂದಿಸುವುದು ನಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಟೈಮ್‌ಲೈನ್ ರೂಪಿಸುವುದು ಅಥವಾ ಪ್ರತಿದಿನ ಕಾರ್ಯಗಳನ್ನು ನಿಯೋಜಿಸುವುದು ಸಾಧಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಯಶಸ್ಸಿನ ಭಾವನೆಯು ನಿಮ್ಮ ಸ್ವಾಭಿಮಾನ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ.

ಕಾನ್ಫಿಡೆಂಟ್ ಆಗಿ ಕಾಣ್ಬೇಕಾ ? ಹಾಗಿದ್ರೆ ನಿಮ್ ಬಾಡಿ ಲಾಂಗ್ವೇಜ್ ಸರಿ ಮಾಡ್ಕೊಳ್ಳಿ

2. ಸಾಧನೆಯನ್ನು ಸೆಲಬ್ರೇಟ್ ಮಾಡಿ: ಯಾವುದೇ ಸಾಧನೆ ಮಾಡಿದಾಗ ಯಾವಾಗಲೂ ಖುಷಿಪಟ್ಟು ಸುಮ್ಮನಾಗಬೇಡಿ. ಬದಲಿಗೆ ಆ ಖುಷಿಯ ಕ್ಷಣವನ್ನು ಸೆಲಬ್ರೇಟ್ ಮಾಡಿ. ನಿಮ್ಮ ಸಾಧನೆಗಳನ್ನು ಆಚರಿಸಲು ಸಮಯವನ್ನು ತೆಗೆದುಕೊಳ್ಳುವುದು ನೀವು ಮೋಟಿವೇಟ್ ಆಗಿರಲು ಸಹಾಯ ಮಾಡುತ್ತದೆ. ಖುಷಿಯಾಗಿರುವುದು ದೇಹ (Body)ದಲ್ಲಿ ಎಂಡಾರ್ಫಿನ್‌ಗಳನ್ನು ಹೆಚ್ಚಿಸುತ್ತದೆ, ಇದು ಯಾವಾಗಲೂ ಖುಷಿಯಾಗಿರಲು ಕಾರಣವಾಗುತ್ತದೆ.. ವಿಲ್‌ಪವರ್‌ ಹೆಚ್ಚಿಸುವುದು ಅಲ್ಪಾವಧಿಯ ಕೆಲಸವಲ್ಲ. ಇದಕ್ಕೆ ನಿರಂತರ ಪ್ರಯತ್ನದ ಅಗತ್ಯವಿರುತ್ತದೆ. 

3. ಸಾಕಷ್ಟು ನಿದ್ರೆ ಮಾಡಿ: ಆಗಾಗ ತೀವ್ರವಾದ ಕೆಲಸದ ವೇಳಾಪಟ್ಟಿಗಳು ಮತ್ತು ಕುಟುಂಬವನ್ನು ನಿರ್ವಹಿಸುವುದು ಮನಸ್ಸಿಗೆ ಒತ್ತಡವನ್ನುಂಟು ಮಾಡುತ್ತದೆ. ಹೀಗಾಗಿ ಹೆಚ್ಚಿನವರು ನಿದ್ದೆ (Sleep)ಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಇದು ದೇಹದ ಒಟ್ಟಾರೆ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯದ ಮೇಲೆ ದೀರ್ಘಕಾಲೀನ ಹಾನಿಕಾರಕ ಪರಿಣಾಮವನ್ನು ಬೀರುವುದು ಮಾತ್ರವಲ್ಲದೆ, ಇದು ನಿಮ್ಮ ಗಮನ ಮತ್ತು ಸ್ಪಷ್ಟತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದು ನಿಮ್ಮ ಆಲೋಚನಾ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.

ಪಾರ್ಟಿಯಂದ್ರೆ ಆಗಲ್ಲ, ಹೋಗೋಕು ಇಷ್ಟವಿಲ್ಲ, ನನಗಿರೋ ಸಮಸ್ಯೆಯೇನು ?

4. ಆತಂಕವನ್ನು ತಪ್ಪಿಸಲು ಧ್ಯಾನ ಮಾಡುವುದು: ಯೋಗ ಮತ್ತು ಧ್ಯಾನವು ಸ್ವಯಂ ವಿಮರ್ಶಾತ್ಮಕ ಆಲೋಚನೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಗುರಿಗಳ (Target) ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ. ಶಾಂತವಾಗಿರುವ ಮನಸ್ಸು ತರ್ಕಬದ್ಧ ಚಿಂತನೆ ಮತ್ತು ಸಕಾರಾತ್ಮಕತೆಯನ್ನು ಆಹ್ವಾನಿಸುತ್ತವೆ. ಆದರೆ ಆತಂಕ ಮತ್ತು ಒತ್ತಡವು ನಿಮ್ಮನ್ನು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಹತಾಶೆಗೆ ಬೀಳುವಂತೆ ಮಾಡುತ್ತದೆ. ವ್ಯಾಯಾಮ ಮಾಡಲು ಅಥವಾ ಪ್ರೀತಿಪಾತ್ರರ ಜೊತೆ ಮಾತನಾಡಲು ಸಮಯ ತೆಗೆದುಕೊಳ್ಳುವುದು ಮನಸ್ಸಿಗೆ ನೆಮ್ಮದಿಯನ್ನುಂಟು ಮಾಡುತ್ತದೆ.

5. ಸಮತೋಲಿತ ಆಹಾರ ಸೇವನೆ: ದೇಹ, ಮನಸ್ಸಿನ ಆರೋಗ್ಯ ಚೆನ್ನಾಗಿರಬೇಕಾದರೆ ಸೇವಿಸುವ ಆಹಾರವೂ (Food) ಚೆನ್ನಾಗಿರಬೇಕು. ಹೀಗಾಗಿ ಯಾವಾಗಲೂ ಪೋಷಕಾಂಶಭರಿತ ಆಹಾರ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಕಾರ್ಬೋಹೈಡ್ರೇಟ್‌ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಗಣನೀಯ ಪ್ರಮಾಣದ ಪ್ರೋಟೀನ್‌ಗಳ ಸಮತೋಲಿತ ಆಹಾರವನ್ನು ಸೇವಿಸುವುದು ಅವಶ್ಯಕ. 

click me!