ವಿಶ್ವದಾದ್ಯಂತ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾದಂತೆ ಕಂಡುಬರುತ್ತಿದೆ. ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಕಾರಣ ಜನರ ಆತಂಕ ಸಹ ಕಡಿಮೆಯಾಗಿದೆ. ಈ ಮಧ್ಯೆ ನಾವು ಕೋವಿಡ್ ಸಾಂಕ್ರಾಮಿಕದ ಅಂತ್ಯದ ಹತ್ತಿರದಲ್ಲಿದ್ದೇವೆಯೇ ಹೊರತೂ, ಸಾಂಕ್ರಾಮಿಕ ಇನ್ನೂ ಅಂತ್ಯಗೊಂಡಿಲ್ಲ. ಹೀಗಾಗಿ ಎಚ್ಚರಿಕೆ ಅಗತ್ಯ’ ಎಂದು ಡಬ್ಲ್ಯುಹೆಚ್‌ಒ ಎಚ್ಚರಿಕೆ ನೀಡಿದೆ.
ನ್ಯೂಯಾರ್ಕ್: ವಿಶ್ವದಾದ್ಯಂತ ಹೊಸ ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದ್ದರೂ, ಸೋಂಕಿನ ಮೇಲೆ ನಿಗಾ, ಸೋಂಕಿತರ ಪತ್ತೆಗೆ ಪರೀಕ್ಷೆ (Test), ಹೊಸ ತಳಿಗಳ ಪತ್ತೆಗೆ ಸ್ವೀಕ್ಸೆನ್ಸಿಂಗ್, ಲಸಿಕಾಕರಣದಲ್ಲಿನ ನಿರ್ಲಕ್ಷ್ಯವು ಹೊಸ ಕುಲಾಂತರಿ ಉಗಮಕ್ಕೆ ವೇದಿಕೆ ಸೃಷ್ಟಿಸಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಹೇಳಿದ್ದಾರೆ. ‘ನಾವು ಕೋವಿಡ್ ಸಾಂಕ್ರಾಮಿಕದ ಅಂತ್ಯದ ಹತ್ತಿರದಲ್ಲಿದ್ದೇವೆಯೇ ಹೊರತೂ, ಸಾಂಕ್ರಾಮಿಕ ಇನ್ನೂ ಅಂತ್ಯಗೊಂಡಿಲ್ಲ. ಹೀಗಾಗಿ ಎಚ್ಚರಿಕೆ ಅಗತ್ಯ’ ಎಂದು ಹೇಳಿದ್ದಾರೆ. ಚೀನಾ ಮತ್ತು ಬ್ರಿಟನ್‌ನ ಕೆಲ ಭಾಗಗಳಲ್ಲಿ ಮತ್ತೆ ಹೊಸ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ಟೆಡ್ರೋಸ್ ಈ ಹೇಳಿಕೆ ನೀಡಿದ್ದಾರೆ.
‘ಕಳೆದ ವರ್ಷ ಕಾಣಿಸಿಕೊಂಡ ಒಮಿಕ್ರೋನ್‌ನ 500ಕ್ಕೂ ಹೆಚ್ಚು ಉಪತಳಿಗಳು ಇದೀಗ ವಿಶ್ವದಾದ್ಯಂತ ಪ್ರಸರಣದಲ್ಲಿವೆ. ಅವು ಅತ್ಯಂತ ತೀವ್ರವಾಗಿ ಹಬ್ಬಬಲ್ಲವು. ಹಿಂದಿನ ರೂಪಾಂತರಿಗಳಿಗೆ ಹೋಲಿಸಿದರೆ ಶ್ವಾಸಕೋಶ (Lungs) ವ್ಯವಸ್ಥೆಗೆ ಹೆಚ್ಚು ವೇಗವಾಗಿ ಹಬ್ಬಿ ಗಂಭೀರ ಹಾನಿ ಮಾಡಬಲ್ಲವು. ಇವುಗಳಲ್ಲಿನ ರೂಪಾಂತರಿಗಳು (Variant), ದೇಹದಲ್ಲಿ ಸೃಷ್ಟಿಯಾಗಿರುವ ಜೀವ ನಿರೋಧಕ ವ್ಯವಸ್ಥೆಯನ್ನೂ ಸುಲಭವಾಗಿ ದಾಟಬಲ್ಲ ಶಕ್ತಿ ಹೊಂದಿವೆ. ಹೀಗಾಗಿ ಎಚ್ಚರ ಅಗತ್ಯ’ ಎಂದು ಟೆಡ್ರೋಸ್ ಹೇಳಿದ್ದಾರೆ.
ಇದೆ ವೇಳೆ ಇದೀಗ ವಿಶ್ವದ ಶೇ.90ರಷ್ಟುಜನರು ಈಗಾಗಲೇ ಕೋವಿಡ್ ಬಂದಿರುವ ಕಾರಣ ಅಥವಾ ಲಸಿಕೆ (Vaccine) ಪಡೆದ ಕಾರಣದಿಂದಾಗಿ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ (Immunity power) ಬೆಳೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
China Covid: ಚೀನಾದಲ್ಲಿ ಕೋವಿಡ್‌ಗೆ ಇನ್ನೂ 20 ಲಕ್ಷ ಮಂದಿ ಬಲಿಯಾಗುವ ಆತಂಕ !
ಕೊರೋನಾ, ಮಾನವ ನಿರ್ಮಿತ ವೈರಸ್ ಎಂದ ವಿಜ್ಞಾನಿ
ವಿಶ್ವವನ್ನೇ ಮಾರಣಾಂತಿಕವಾಗಿ ಕಾಡಿದ, ಲಕ್ಷಾಂತರ ಜನರ ಜೀವ ಬಲಿಪಡೆದ ಕೊರೋನಾ ಸಾಂಕ್ರಾಮಿಕ ಪ್ರಕೃತಿಯಿಂದ ಬಂದಿದ್ದಲ್ಲ, ಮಾನವ ನಿರ್ಮಿತ ವೈರಸ್ (Man made virus) ಎಂದು ವಿಜ್ಞಾನಿಯೊಬ್ಬರು ಹೇಳಿದ್ದರು. ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅಮೆರಿಕಾ ಮೂಲದ ವಿಜ್ಞಾನಿ ಹೀಗೆ ತಿಳಿಸಿದ್ದಾರೆ. ಚೀನಾದ ವುಹಾನ್‌ನಲ್ಲಿರುವ ವಿವಾದಾತ್ಮಕ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಯುಎಸ್ ಮೂಲದ ವಿಜ್ಞಾನಿ ಆಂಡ್ರ್ಯೂ ಹಫ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೊರೋನಾ ವೈರಸ್ ಮಾನವ ನಿರ್ಮಿತ ವೈರಸ್ ಆಗಿದ್ದು, ಅದು ಚೀನಾದ ವುಹಾನ್ ನಲ್ಲಿರುವ ವೈರಾಣು ಸಂಶೋಧನಾ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂದು ಅದೇ ಲ್ಯಾಬ್ ನಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ್ದ ಹಫ್ ಹೇಳಿದ್ದಾರೆ.
ಚೀನಾದ ವೈರಸ್ ಸಂಶೋಧನೆಗೆ ಅಮೆರಿಕ ಸರ್ಕಾರದಿಂದ ಧನಸಹಾಯ
ಇತ್ತೀಚಿನ ಪುಸ್ತಕ, 'ದಿ ಟ್ರೂತ್ ಎಬೌಟ್ ವುಹಾನ್'ನಲ್ಲಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಡ್ರ್ಯೂ ಹಫ್ ಅವರು ಚೀನಾ ಈ ಮಾರಕ ಸಾಂಕ್ರಾಮಿಕ ರೋಗದ ಸೃಷ್ಟಿಕರ್ತ ಎಂದು ಹೇಳಿದ್ದಾರೆ. ಮತ್ತೊಂದು ಹೇಳಿಕೆಯಲ್ಲಿ ಚೀನಾದ ಈ ವೈರಸ್ ಸಂಶೋಧನೆಗೆ ಅಮೆರಿಕ ಸರ್ಕಾರವೇ ಧನಸಹಾಯ ಒದಗಿಸಿದ್ದ ಆತಂಕಕಾರಿ ವಿಚಾರವನ್ನೂ ಅವರು ಬಹಿರಂಗ ಪಡಿಸಿದ್ದಾರೆ. ಆಂಡ್ರ್ಯೂ ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು (Pandemic) ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ.
Covid Cases: ಬೆಂಗಳೂರಿನಲ್ಲಿ ಕೊರೋನಾ ಸೋಂಕು ಇಳಿಮುಖ
'ಚೀನಾ ಪ್ರಯೋಗಾಲಯಗಳು ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಹೊಂದಿಲ್ಲ. ಸರಿಯಾದ ಜೈವಿಕ ಸುರಕ್ಷತೆ ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಂಡಿರದ ಕಾರಣ ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ವೈರಸ್ ಸೋರಿಕೆಗೆ ಕಾರಣವಾಯಿತು' ಎಂದು ಆಂಡ್ರ್ಯೂ ಹಫ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಮಾತ್ರವಲ್ಲ ಇದು ದೇಶಿಯವಾಗಿ ವಿನ್ಯಾಸಗೊಳಿಸಲಾದ ರೋಗದ ತಳಿ ಎಂದು ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು ಎಂದು ಪುಸ್ತಕದಲ್ಲಿ ಬರೆದಿದ್ದಾರೆ.