Personality Test: ತುಟಿ ನೋಡಿ ನೀವು ಎಷ್ಟು ಒಳ್ಳೆಯವರು ಅಂತ ಹೇಳಿಬಿಡ್ಬೋದು!

By Vinutha Perla  |  First Published Sep 3, 2023, 10:19 AM IST

ವ್ಯಕ್ತಿತ್ವ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ವ್ಯಕ್ತಿಯ ಕಣ್ಣು, ಅಂಗೈ, ಮುಷ್ಟಿ ಹಿಡಿಯುವ ರೀತಿ ನೋಡಿ ಅವರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು. ಹಾಗೆಯೇ ತುಟಿಯನ್ನು ನೋಡಿ ಪರ್ಸನಾಲಿಟಿ ಬಗ್ಗೆ ತಿಳ್ಕೋಬೋದು ಅನ್ನೋದು ನಿಮ್ಗೆ ಗೊತ್ತಿದ್ಯಾ?


ಮನುಷ್ಯನ ಗುಣ, ಸ್ವಭಾವ, ಮಾತು ಎಲ್ಲವೂ ವ್ಯಕ್ತಿತ್ವವನ್ನು ನಿರ್ಧರಿಸುತ್ತೆ. ಆದರೆ ಈ ಪರ್ಸನಾಲಿಟಿ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಒಬ್ಬರ ಸ್ವಭಾವ ಇನ್ನೊಬ್ಬರಿಗೆ ಇರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಬಹುಶಃ ನಾವು ನಾವೇ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಕಷ್ಟ. ಇನ್ನೊಬ್ಬರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ನಾವು ನಿರ್ಧರಿಸುವುದು ಕಷ್ಟ. ಒಬ್ಬ ವ್ಯಕ್ತಿಯ ಜೊತೆಗೆ ಹೆಚ್ಚು ಬೆರೆತಾಗ ನಾವು ಆ ವ್ಯಕ್ತಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಮನುಷ್ಯನ ತುಟಿಯನ್ನು ನೋಡಿ ಪರ್ಸನಾಲಿಟಿ ಬಗ್ಗೆ ತಿಳ್ಕೊಳ್ಬೋದು ಅನ್ನೋದು ನಿಮ್ಗೆ ಗೊತ್ತಿದ್ಯಾ?

ವ್ಯಕ್ತಿಯ ತುಟಿಗಳು (Lips) ವ್ಯಕ್ತಿಯ ಭಾವನಾತ್ಮಕ ಸ್ಥಿತಿ, ಆತ್ಮವಿಶ್ವಾಸದ ಮಟ್ಟ, ಬುದ್ಧಿವಂತಿಕೆಯ ಮಟ್ಟ, ಮುಕ್ತತೆಯ ಮಟ್ಟ ಮತ್ತು ಇತರ ಅನೇಕ ಮಾಹಿತಿಗಳನ್ನು ಬಹಿರಂಗಪಡಿಸಬಹುದು.ಆ ಬಗ್ಗೆ ಇಲ್ಲಿದೆ ಮಾಹಿತಿ.

Latest Videos

undefined

ಹೊಸಬರನ್ನು ನೋಡಿ ಎಂಥವರೋ ಹೇಗೋ ಅನ್ನೋ ಡೌಟಾ, ಕುತ್ತಿಗೆ ನೋಡಿ ವ್ಯಕ್ತಿತ್ವ ತಿಳ್ಕೊಳ್ಳಿ

ತೆಳುವಾದ ತುಟಿಯಿರುವವರು ವ್ಯಕ್ತಿತ್ವ ಹೇಗಿರುತ್ತೆ?
ತೆಳ್ಳಗಿನ ತುಟಿಗಳನ್ನು ಹೊಂದಿರುವ ವ್ಯಕ್ತಿ ಬೌದ್ಧಿಕವಾಗಿ ಹೆಚ್ಚು ಸ್ಟ್ರಾಂಗ್ ಆಗಿರುತ್ತಾರೆ. ಮಾತ್ರವಲ್ಲ ಹೆಚ್ಚು ಸ್ವಾವಲಂಬಿಯೂ ಆಗಿರುತ್ತಾರೆ. ಆದರೆ ಇಂಥವರು ಸಾಮಾನ್ಯವಾಗಿ, ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು (Feelins) ಇತರರೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಕಡಿಮೆ. ಅಂತರ್ಮುಖಿ ಮತ್ತು ನಾಚಿಕೆ ಸ್ವಭಾವದವರಾಗಿರುತ್ತಾರೆ. ಸಮಸ್ಯೆಯನ್ನು ಪರಿಹರಿಸುವಲ್ಲಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಉತ್ತಮರಾಗಿರುತ್ತಾರೆ. ಸಾಮಾನ್ಯವಾಗಿ ತಮ್ಮ ಸ್ವಂತ ಸಮಯವನ್ನು ತಮ್ಮೊಂದಿಗೆ ಕಳೆಯಲು ಇಷ್ಟಪಡುತ್ತಾರೆ. ತೆಳ್ಳಗಿನ ತುಟಿ ಇರುವವರು ಬಹಳಷ್ಟು ಯೋಚಿಸುತ್ತಾರೆ. ಆದರೆ ಅತಿಯಾಗಿ ಯೋಚಿಸುವವರಾಗಿರುವುದಿಲ್ಲ. ಎಲ್ಲರೂ ಇಂಥವರನ್ನು ಒಂಟಿಯಾಗಿದ್ದಾರೆ ಎಂದು ಅಂದುಕೊಳ್ಳಬಹುದು. ಆದರೆ ಇಂಥಾ ವ್ಯಕ್ತಿತ್ವ (Personality) ಇರುವವರು ಏಕಾಂಗಿಯಾಗಿದ್ದಾಲೂ ತಮ್ಮ ಆಲೋಚನೆಗಳ ಮೇಲೆ ಕೆಲಸ ಮಾಡುತ್ತಾರೆ

ಪೂರ್ಣ ತುಟಿಯಿರುವವರ ವ್ಯಕ್ತಿತ್ವ ಹೇಗಿರುತ್ತದೆ?
ಪೂರ್ಣ ತುಟಿಗಳನ್ನು ಹೊಂದಿದ್ದದವರು, ಹೆಚ್ಚು ಪ್ರೀತಿಯುಳ್ಳವರು, ಆಶಾವಾದಿ ಎಂದು ತಿಳಿದು ಬರುತ್ತದೆ. ಸ್ವಂತಕ್ಕಿಂತ ಹೆಚ್ಚಾಗಿ ಇತರರ ಅಗತ್ಯತೆಗಳನ್ನು ಪೂರೈಸಲು ಶ್ರಮ ಪಡುತ್ತಾರೆ. ಯಾವಾಗಲೂ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇಷ್ಟಪಡುತ್ತಾರೆ. ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ, ಕೆಲವೊಮ್ಮೆ, ಹಠಮಾರಿ ಮತ್ತು ಭಿನ್ನಾಭಿಪ್ರಾಯವನ್ನು ಹೊಂದಿರಬಹುದು. ಯಾವಾಗಲೂ ಒಳ್ಳೆಯ ಸಮಯಕ್ಕಾಗಿ ಮತ್ತು ಸುಲಭವಾಗಿ ಸ್ನೇಹಿತರನ್ನು (Friends) ಮಾಡಿಕೊಳ್ಳಬಹುದು. 

ಕಣ್ಣಿನ ಬಣ್ಣದಿಂದ ತಿಳಿಯುತ್ತೆ ಮನುಷ್ಯನ ರಹಸ್ಯ; ಅದು ಹೇಳುತ್ತೆ ಮನದ ಮಾತು..!

ಪೂರ್ಣ ತುಟಿಯಿರುವವರು ತುಂಬಾ ಮಾತನಾಡುವವರಾಗಿರಬಹುದು. ತಮ್ಮ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ವಿಷಯಗಳನ್ನು ಜೋರಾಗಿ, ಸ್ಪಷ್ಟವಾಗಿ ಮತ್ತು ಪಾರದರ್ಶಕವಾಗಿರಲು ಇಷ್ಟಪಡುತ್ತಾರೆ. ಕೋಪವನ್ನು ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆ. ಮುಖದ ಅಭಿವ್ಯಕ್ತಿಗಳು ಅಥವಾ ದೇಹ ಭಾಷೆಯ ಮೂಲಕ ತಮ್ಮ ಕೋಪವನ್ನು ಬಾಹ್ಯವಾಗಿ ತೋರಿಸುವ ಸಾಧ್ಯತೆಯಿದೆ. 

ಆಸಕ್ತಿದಾಯಕ ತುಟಿ ಆಕಾರದ ವ್ಯಕ್ತಿತ್ವ ಪರೀಕ್ಷೆಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ. ಲಿಪ್ಸ್ ಶೇಪ್ ನಿಮ್ಮ ಪರ್ಸನಾಲಿಟಿ ಬಗ್ಗೆ ಏನನ್ನು ಬಹಿರಂಗಪಡಿಸುತ್ತದೆ ಎಂಬುದನ್ನು ತಿಳಿಯಿರಿ.

click me!