
ಸ್ಥೂಲಕಾಯ, ಬೊಜ್ಜು, ಕೊಬ್ಬು, ತೂಕ ಏರಿಕೆ ಈ ಶಬ್ಧಗಳನ್ನೇ ನಾವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳ್ತಿದ್ದೇವೆ. ತೂಕ ಇಳಿಸಲು ನಾನಾ ಕಸರತ್ತು ಮಾಡಿ, ಸುಲಭ ಮಾರ್ಗವನ್ನು ಅನುಸರಿಸಿ ಸಾವು ತಂದುಕೊಂಡವರು ನಮ್ಮಲ್ಲಿದ್ದಾರೆ. ಮತ್ತೆ ಕೆಲವರು ಆರೋಗ್ಯಕರ ವ್ಯಾಯಾಮ, ಯೋಗ ಮಾಡಿದ್ರೂ ತೂಕ ಇಳಿಸಲು ಸಾಧ್ಯವಾಗೋದಿಲ್ಲ. ಸ್ಥೂಲಕಾಯ ಏರಿದಷ್ಟು ಸುಲಭವಾಗಿ ಇಳಿಯೋದಿಲ್ಲ. ಹಾಗೆ ಮ್ಯಾಜಿಕ್ ಮಾಡಿ ನೀವು ತೂಕ ಕಡಿಮೆ ಮಾಡಿಕೊಳ್ಳೋದು ಅಸಾಧ್ಯದ ಮಾತು. ನಮ್ಮ ಅಡುಗೆ ಮನೆಯಲ್ಲೇ ತೂಕ ಇಳಿಸಬಲ್ಲ ಕೆಲ ಮಸಾಲೆಗಳಿರುವಂತೆ ತೋಟದಲ್ಲಿ ತೂಕ ಕಡಿಮೆ ಮಾಡುವ ತರಕಾರಿಗಳಿವೆ. ನೀವು ಅದನ್ನು ಸೇವನೆ ಮಾಡುವ ಮೂಲಕ ಆರಾಮವಾಗಿ ಬೊಜ್ಜನ್ನು ಕರಗಿಸಿಕೊಳ್ಳಬಹುದು.
ಆರೋಗ್ಯ (Health), ಯೋಗ, ಸಂಬಂಧ ಸೇರಿದಂತೆ ಜೀವನ ನಡೆಸಲು ಅಗತ್ಯವಿರುವ ವಿಷ್ಯಗಳನ್ನು ಜನರಿಗೆ ನೀಡಿ ಅವರನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವ ಸದ್ಗುರು ಎಂದೇ ಪ್ರಸಿದ್ಧಿ ಪಡೆದಿರುವ ಜಗ್ಗಿ ವಾಸುದೇವ್ ತೂಕ ಇಳಿಕೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಸದ್ಗುರು (Sadhguru) ತಮ್ಮ ತೂಕ ಇಳಿಸಲು ಬೆಳಗಿನ ಉಪಾಹಾರ (breakfast)ದಲ್ಲಿ ಒಂದು ಆಹಾರವನ್ನು ಸೇವಿಸುತ್ತಾರೆ. ಅದನ್ನು ನೀವೂ ಸೇವನೆ ಮಾಡೋದ್ರಿಂದ ನಿಮ್ಮ ತೂಕವನ್ನು ಇಳಿಸಬಹುದು. ಅದು ನಿಮ್ಮ ಹೃದಯ ಮತ್ತು ಮೂಳೆಗಳನ್ನು ಸಹ ಆರೋಗ್ಯಕರವಾಗಿಡಲು ನೆರವಾಗುತ್ತದೆ. ಹಾಗಿದ್ರೆ ಸದ್ಗುರು ಬೆಳಗಿನ ಉಪಹಾರದಲ್ಲಿ ಸೇವಿಸಲು ಹೇಳಿದ ಆ ಪದಾರ್ಥ ಯಾವುದು ಅಂತಾ ನಾವು ಹೇಳ್ತೇವೆ.
ಏನೇ ಮಾಡಿದ್ರೂ ಹೆಣ್ಣು ಮಕ್ಕಳು ತೂಕ ಇಳಿಸೋದು ಕಷ್ಟವೇಕೆ?
ನೀರಿಗಿಂತ ಹೆಚ್ಚು ಪ್ರಯೋಜನಕಾರಿ : ಸದ್ಗುರು ಪ್ರಕಾರ, ಬೆಳಿಗ್ಗೆ ಉಪಹಾರದಲ್ಲಿ ನೀವು ಸೌತೆ ಕಾಯಿ ಸೇವನೆ ಮಾಡಬೇಕು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೌತೆಕಾಯಿ ನೀರಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಸದ್ಗುರು ಹೇಳಿದ್ದಾರೆ. ನಾವು ಪ್ರತಿ ದಿನ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡುವ ಬದಲು ನೀರಿನಿಂದ ಕೂಡಿರುವ ತರಕಾರಿ, ಹಣ್ಣುಗಳನ್ನು ಸೇವನೆ ಮಾಡಬೇಕು ಎನ್ನುತ್ತಾರೆ ಸದ್ಗುರು. ಹೀಗೆ ಮಾಡಿದ್ರೆ ಇವು ಇಡೀ ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತವೆ. pH ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದ್ರಲ್ಲಿ ವಿಟಮಿನ್ ಕೆ ಪ್ರಮಾಣ ಕೂಡ ಹೆಚ್ಚಿದೆ. ಇದು ನಿಮ್ಮ ಮೂಳೆಗಳ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಸದ್ಗುರು. ಇಷ್ಟೇ ಅಲ್ಲ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸೌತೆಕಾಯಿ ಬೆಸ್ಟ್. ಹೃದಯದ ಆರೋಗ್ಯವನ್ನು ಕಾಪಾಡುವಲ್ಲೂ ಸೌತೆಕಾಯಿ ಪಾತ್ರ ದೊಡ್ಡದಿದೆ.
ಬ್ರೈನ್ ಟ್ಯೂಮರ್ ಚಿಕಿತ್ಸೆಗೆ ನೆರವಾಗಬಲ್ಲದು ಈ ಥೆರಪಿ.. ವೈದ್ಯಕೀಯ ಕ್ಷೇತ್ರದ ಭರವಸೆ
ಸೌತೆಕಾಯಿ ಸೇವನೆಯಿಂದ ಇಳಿಯುತ್ತೆ ತೂಕ : ಸದ್ಗುರು ಪ್ರಕಾರ, ನೀವು ತೂಕ ಇಳಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದರೆ ಬೆಳಗಿನ ಉಪಹಾರದಲ್ಲಿ ಸೌತೆಕಾಯಿ ಸೇವನೆ ಮಾಡಬೇಕು. ಸೌತೆಕಾಯಿ ಫೈಬರ್ ಹೊಂದಿದೆ. ಇದು ಚಯಾಪಚಯವನ್ನು ವೇಗಗೊಳಿಸುತ್ತದೆ. ಕಡಿಮೆ ಕ್ಯಾಲೋರಿ ಹೊಂದಿರುವ ಸೌತೆಕಾಯಿ ನಿಮ್ಮ ತೂಕ ಇಳಿಸಿಕೊಳ್ಳಲು ದೊಡ್ಡಮಟ್ಟದಲ್ಲಿ ನೆರವಾಗುತ್ತದೆ. ಯೋಗಿಗಳು ಸ್ಲಿಮ್ ಆಗಿರಲು ಬೆಳಗಿನ ಆಹಾರದಲ್ಲಿ ಸೌತೆಕಾಯಿ ಸೇವನೆ ಮಾಡ್ತಾರೆ ಎಂದು ಸದ್ಗುರು ಹೇಳಿದ್ದಾರೆ.
ಸೌತೆಕಾಯಿಯಿಂದಾಗುವ ಪ್ರಯೋಜನಗಳು : ಸೌತೆಕಾಯಿಯಿಂದ ಇಷ್ಟೇ ಅಲ್ಲ ಇನ್ನೂ ಅನೇಕ ಪ್ರಯೋಜನಗಳಿವೆ. ಸೌತೆಕಾಯಿ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಸೌತೆಕಾಯಿಯನ್ನು ಕತ್ತರಿಸಿ ಕಣ್ಣುಗಳ ಮೇಲಿಡುವುದ್ರಿಂದ ಕಣ್ಣು ತಂಪಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ಇದು ಒಳ್ಳೆಯದು.
ಸೌತೆಕಾಯಿ ಕರುಳಿನ ಆರೋಗ್ಯವನ್ನು ಸುಧಾರಿಸುವ ಕೆಲಸವನ್ನು ಮಾಡುತ್ತದೆ. ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸೌತೆಕಾಯಿ ಒಳ್ಳೆಯದು.
ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ಸೇವನೆ ಮಾಡುವುದ್ರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಸೌತೆಕಾಯಿಯು ತ್ವಚೆಯ ಆರೈಕೆಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೌತೆಕಾಯಿ ರಸವು ದೇಹದಿಂದ ವಿಷವನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ, ಇದು ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.