ಸಾವಿನ ನಂತ್ರ ಶ್ರೀಮಂತರಲ್ಲಿ ಶ್ರೀಮಂತನಾದ ವ್ಯಕ್ತಿ, ಎಲ್ಲರಿಗೂ ಮಾದರಿಯಾದ ಆಟೋ ಡ್ರೈವರ್!

By Suvarna News  |  First Published Sep 2, 2023, 2:25 PM IST

ಶ್ರೀಮಂತಿಕೆಯನ್ನು ಹಣದಿಂದ ಅಳೆಯೋದು ಸಾಧ್ಯವಿಲ್ಲ. ಸತ್ತ ಮೇಲೆ ಹಣ ನಮ್ಮ ಜೊತೆ ಬರೋದಿಲ್ಲ ಅಂತಾ ದೊಡ್ಡವರು ಹೇಳ್ತಾರೆ. ಜೀವನ ನಿರ್ವಹಣೆಗೆ ಹಣ ಮುಖ್ಯವಾದ್ರೂ ಇದ್ದಾಗ ಹಾಗೇ ಸತ್ತಾಗ ನೀವು ಗುಣವಂತರಾಗ್ಬೇಕೆಂದ್ರೆ ಈ ಕೆಲಸ ಮಾಡ್ಬೇಕು.
 


ಸಾವಿಲ್ಲದ ಮನೆಯಿಲ್ಲ… ಸಾವಿಲ್ಲದ ವ್ಯಕ್ತಿಯಿಲ್ಲ. ಇದು ಗೊತ್ತಿದ್ರೂ ಮನುಷ್ಯ ಸಣ್ಣ ವಿಷ್ಯಕ್ಕೆ ಗಲಾಟೆ ಮಾಡಿಕೊಳ್ತಾನೆ. ಹಣಕ್ಕಾಗಿ ಜೀವನ ಪರ್ಯಂತ ಹಾತೊರೆಯುತ್ತಾನೆ. ಸತ್ತ ಮೇಲೆ ಕೂಡಿಟ್ಟ ಹಣ ಕಂಡವರ ಪಾಲಾಗುತ್ತದೆ. ಅದೇ ನೀಡಿದ ದಾನ, ಒಳ್ಳೆಯ ಗುಣ ಸದಾ ನೆನಪಿನಲ್ಲಿರುತ್ತದೆ. ನಮ್ಮಿಂದ ನೆರವು ಪಡೆದವರು ನಮ್ಮನ್ನು ನೆನೆಯುತ್ತಾರೆ. ಸಾವಿಗಿಂತ ಮೊದಲು ನಮ್ಮ ಜೀವನ ನಡೆಸೋದು ನಮ್ಮ ಕೈನಲ್ಲಿದೆ. ಹಾಗೆ ಸಾವಿನ ನಂತ್ರ ಒಂದಿಷ್ಟು ಮಂದಿಗೆ ಜೀವದಾನ ನೀಡುವ ಸಾಮರ್ಥ್ಯವೂ ನಮಗಿರುತ್ತದೆ. ಅಂಗಾಗ ದಾನ ಮಾಡುವಂತೆ, ಮೊದಲೇ ಈ ಬಗ್ಗೆ ಬರೆದಿಡುವಂತೆ ಸಾಮಾಜಿಕ ಕಳಕಳಿಯಿರುವ ಜನರು ಸಾಮಾನ್ಯರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಕೆಲವರು ಅಂಗಾಂಗ ದಾನಕ್ಕೆ ಮುಂದಾದ್ರೆ ಮತ್ತೆ ಕೆಲವರು ಈ ಸಹವಾಸಕ್ಕೆ ಹೋಗೋಗಿಲ್ಲ.

ಸಾವಿನ ಮನೆಯಲ್ಲಿ, ಆಪ್ತರನ್ನು ಕಳೆದುಕೊಂಡ ಸಂದರ್ಭದಲ್ಲಿ ಅವರ ಅಂಗಾಗ (Organs) ದಾನ ಮಾಡುವ ನಿರ್ಧಾರ ತೆಗೆದುಕೊಳ್ಳೋದು ಸುಲಭದ ಮಾತಲ್ಲ. ಆದ್ರೆ ಮಹಿಳೆಯೊಬ್ಬಳು ಸಾವನ್ನಪ್ಪಿದ ಪತಿಯ ಅಂಗಾಗ ದಾನದ ದೊಡ್ಡ ನಿರ್ಧಾರ ಕೈಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ನಾಲ್ಕು ಮಂದಿ ಜೀವ ಉಳಿಸಿದ ಪುಣ್ಯದ ಕೆಲಸ ಮಾಡಿದ್ದಾಳೆ. ಸತ್ತ ಪತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಕೆಲಸ ಮಾಡಿದ್ದಾಳೆ. ದೆಹಲಿಯಲ್ಲಿ ಈ ಮನಮೆಚ್ಚುವ ಘಟನೆ ನಡೆದಿದೆ. 

Latest Videos

undefined

ಯಾರಪ್ಪ ಅಡುಗೆ ಮಾಡೋದು ಅಂತ ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ರೆ ಆರೋಗ್ಯ ಅಷ್ಟೇ!

48 ವರ್ಷದ ರಿಕ್ಷಾ ಚಾಲಕ ಸುರೇಶ್ ಕುಮಾರ್ ಅಪಘಾತ (Accident) ದಲ್ಲಿ ಸಾವನ್ನಪ್ಪಿದ್ದಾನೆ. ಅವನ ಸಾವಿನ ನಂತ್ರ ಸಂಬಂಧಿಕರು ಸುರೇಶ್ ಕುಮಾರ್ ಅಂಗಗಳನ್ನು ದಾನ ಮಾಡಿದ್ದಾರೆ. ಇದರೊಂದಿಗೆ ತನ್ನೊಳಗಿನ ಮಾನವೀಯತೆಯನ್ನು ಪರಿಚಯಿಸಿದ್ದಲ್ಲದೆ ನಾಲ್ಕು ಜನರಿಗೆ ಹೊಸ ಬದುಕನ್ನು ನೀಡಿದ್ದಾರೆ. ಸುರೇಶ್ ಕುಮಾರ್ ಆಗಸ್ಟ್ 23 ರ ರಾತ್ರಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಅಪಘಾತದ ನಂತರ ಸುರೇಶ್ ಅವರನ್ನು ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಕುಮಾರ್ ಸಾವನ್ನಪ್ಪಿದ್ದರು. ವೈದ್ಯರು ಸುರೇಶ್ ಕುಮಾರ್  ಬ್ರೈನ್ ಡೆಡ್ ಎಂದು ಘೋಷಿಸಿದರು.

ಸುರೇಶ್ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸುರೇಶ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಹಾಗೂ ಮಕ್ಕಳ ರೋಧನ ಮುಗಿಲು ಮುಟ್ಟಿತ್ತು. ಈ ದುಃಖದ ಮಧ್ಯೆಯೂ ವೈದ್ಯರು ಸುರೇಶ್ ಅಂಗಾಂಗ ದಾನದ ಬಗ್ಗೆ ಕುಟುಂಬಸ್ಥರಿಗೆ ತಿಳಿಸುವ ಧೈರ್ಯ ಮಾಡಿದ್ದಾರೆ. ಅಂಗಾಂಗ ದಾನದಿಂದ ಹಲವಾರು ಜೀವಗಳನ್ನು ಉಳಿಸಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ವೈದ್ಯರ ಮಾತನ್ನು ಆಲಿಸಿದ ಸುರೇಶ್ ಪತ್ನಿ, ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದಾದ ನಂತರ ವೈದ್ಯರು ಸುರೇಶ್ ಅವರ ಹೃದಯ, ಮೂತ್ರಪಿಂಡ ಮತ್ತು ಕಾರ್ನಿಯಾವನ್ನು ಸುರಕ್ಷಿತವಾಗಿ ಹೊರತೆಗೆದು ಅಗತ್ಯವಿರುವ ರೋಗಿಗಳಿಗೆ ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಈ ಮೂಲಕ ಸುರೇಶ ಇಹಲೋಕ ತ್ಯಜಿಸಿದ ಬಳಿಕವೂ 4 ಮಂದಿಗೆ ಹೊಸ ಜೀವ ನೀಡಿದ್ದಾನೆ.

ಫೋಟೋದಲ್ಲಿರೋ ಗೂಬೆ ಹತ್ತೇ ಸೆಕೆಂಡಲ್ಲಿ ಪತ್ತೆ ಹಚ್ಚಿದ್ರೆ ನಿಮ್ಗೆ ಹದ್ದಿನ ಕಣ್ಣಿದೆ ಎಂದರ್ಥ

ಪ್ರತಿಯೊಬ್ಬರೂ 8 ಜೀವವನ್ನು ಉಳಿಸ್ಬಹುದು ಗೊತ್ತಾ? : ಅಂಗಾಗ ದಾನವನ್ನು ಮಹಾದಾನವೆಂದೆ ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರ ಜೀವವನ್ನು ಉಳಿಸಬಹುದು. ಮೂತ್ರಪಿಂಡ, ಹೃದಯ, ಶ್ವಾಸಕೋಶ, ಯಕೃತ್ತು,  ಕರುಳು ಮತ್ತು ಮೇದೋಜ್ಜೀರಕ ಗ್ರಂಥಿಯನ್ನು ದಾನ ಮಾಡಬಹುದು. ಇದಲ್ಲದೆ ನೀವು ಇನ್ನು ಕೆಲ ಭಾಗಗಳನ್ನು ದಾನು ಮಾಡಿ ಮತ್ತಷ್ಟು ಮಂದಿ ಜೀವ ರಕ್ಷಣೆ ಆಡಬಹುದು. ಹೃದಯ ಕವಾಟಗಳು ಮತ್ತು ಅಂಗಾಂಶಗಳು, ಮೂಳೆ ಮತ್ತು ಸ್ನಾಯುರಜ್ಜು, ಚರ್ಮ ಮತ್ತು ಕಣ್ಣುಗಳನ್ನು ದಾನ ಮಾಡಬಹುದು. ನಮ್ಮ ದೇಶದಲ್ಲಿ ಜನರು ಅಂಗಾಂಗ ದಾನಕ್ಕೆ ಹಿಂದೇಟು ಹಾಕ್ತಾರೆ. ಬದುಕಿರುವಾಗ ರಕ್ತದಾನ ಹಾಗೂ ಸತ್ತ ಮೇಲೆ ಅಂಗಾಂಗ ದಾನ ಮಾಡಿದ್ರೆ ಅನೇಕರಿಗೆ ಹೊಸ ಜೀವನ ನೀಡಬಹುದು. 
 

click me!