
ಇವತ್ತಿನ ದಿನಗಳಲ್ಲಿ ಜನರನ್ನು ಕಾಡ್ತಿರೋ ಕಾಯಿಲೆಗಳು ಒಂದೆರಡಲ್ಲ. ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರೂ ರೋಗಗಳಿಂದ ಬಳಲ್ತಿರ್ತಾರೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಜೀವಿತಾವಧಿಯು ತುಂಬಾ ಕಡಿಮೆಯಾಗಿದೆ. ಇದಕ್ಕೆ ಮಲಗೋ ಸಮಯ ಸಹ ಕಾರಣವಾಗ್ತಿದೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ತಡವಾಗಿ ಮಲಗುವ ಜನರು ಅನಾರೋಗ್ಯಕರ ಅಭ್ಯಾಸಗಳಿಂದ ಮೊದಲೇ ಸಾಯುತ್ತಾರೆ ಎಂದು ಅಧ್ಯಯನವು ಹೇಳುತ್ತದೆ. ರಾತ್ರಿ ತಡವಾಗಿ ಮಲಗುವವರು ಅನಾರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಹೊಸ ಅಧ್ಯಯನದ ಪ್ರಕಾರ, ಬೇಗ ಏಳುವವರಿಗಿಂತ, ತಡವಾಗಿ ಮಲಗುವವರೇ ಮುಂಚೆ ಸಾಯಬಹುದು ಎಂದು ತಿಳಿಸಿದೆ.
ಕ್ರೊನೊಬಯಾಲಜಿ ಇಂಟರ್‌ನ್ಯಾಶನಲ್ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯು ಫಿನ್‌ಲ್ಯಾಂಡ್‌ನಲ್ಲಿ 37 ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ ಸುಮಾರು 23,000 ಅವಳಿಗಳ ಡೇಟಾವನ್ನು ಮೌಲ್ಯಮಾಪನ ಮಾಡಿದೆ. ಸಾವಿನ ಅಪಾಯವು (Danger) ಸ್ಪಷ್ಟವಾಗಿ ರಾತ್ರಿ (Night) ತಡವಾಗಿ ಮಲಗುವವರಿಗೆ ಸಂಬಂಧಿಸಿದೆ ಎಂದು ತಿಳಿಸಿದೆ.
Health Tips: ರಾತ್ರಿ ಲೇಟ್ ಊಟ, ತಕ್ಕದ ನಿದ್ರೆ, ಖತರ್ನಾಕ್ ಖಾಯಿಲೆಗೆ ಆಹ್ವಾನ!
ರಾತ್ರಿ ತಡವಾಗಿ ಮಲಗುವವರಿಂದ ಧೂಮಪಾನ, ಮದ್ಯಪಾನ
ರಾತ್ರಿಯಲ್ಲಿ ತಡವಾಗಿ ಮಲಗುವ ಜನರು ತಂಬಾಕು ಮತ್ತು ಮದ್ಯದ ಹೆಚ್ಚಿನ ಸೇವನೆಯಿಂದಾಗಿ ಆರೋಗ್ಯ ಸಮಸ್ಯೆಗಳಿಗೆ (Health problem) ತುತ್ತಾಗಬಹುದು. ನಿದ್ರೆಯ ಅವಧಿ ಮತ್ತು ಗುಣಮಟ್ಟ (Quality) ಮತ್ತು ರಾತ್ರಿ ಪಾಳಿಯ (Night shift) ಕೆಲಸವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳಿವೆ. ಹಿಂದಿನ ಅಧ್ಯಯನಗಳು ರಾತ್ರಿ ತಡವಾಗಿ ರೋಗದ (Disease) ಹೆಚ್ಚಿನ ಅಪಾಯವಿದೆ ಎಂಬುದಾಗಿ ಎಚ್ಚರಿಸಿದ್ದಾರೆ.
ವಿಶೇಷವಾಗಿ ಇಂಥವರಲ್ಲಿ ಹೃದಯ ಸಮಸ್ಯೆಗಳು (Heart disease) ಹೆಚ್ಚಾಗಿ ಕಂಡು ಬರುತ್ತವೆ. ಹೊಸ ಸಂಶೋಧನೆಯು 1981 ರಿಂದ 2018 ರವರೆಗೆ 24 ವರ್ಷ ವಯಸ್ಸಿನ 22,976 ಪುರುಷರು ಮತ್ತು ಮಹಿಳೆಯರನ್ನು ಆಧರಿಸಿ ಸಂಶೋಧನೆ ನಡೆಸಲಾಯಿತು. ಸಂಶೋಧಕರು ಭಾಗವಹಿಸುವವರ ಶಿಕ್ಷಣ, ದೈನಂದಿನ ಅಲ್ಕೊಹಾಲ್ ಸೇವನೆ, ಧೂಮಪಾನದ ಸ್ಥಿತಿ ಮತ್ತು ಪ್ರಮಾಣ, BMI ಮತ್ತು ನಿದ್ರೆಯ ಅವಧಿಯನ್ನು ಸಹ ಗಣನೆಗೆ ತೆಗೆದುಕೊಂಡಿದ್ದಾರೆ.
Mental Health : ರಾತ್ರಿ ನಿದ್ರೆ ಸೊಂಪಾಗಿ ಆಗ್ಬೇಕು ಅಂದ್ರೆ ಈ ವಸ್ತು ಬಳಸಿ ನೋಡಿ
ದೇಹದ ನೈಸರ್ಗಿಕ ಪ್ರಕ್ರಿಯೆಗೆ ವಿರುದ್ಧವಾಗಿ ರಾತ್ರಿ ನಿದ್ದೆ ಮಾಡದಿದ್ದರೆ ಸಮಸ್ಯೆ
ರಾತ್ರಿಯ ತಡವಾಗಿ ಮಲಗುವವರು ಬೇಗ ಮಲಗುವವರಿಗೆ ಹೋಲಿಸಿದರೆ ಹೆಚ್ಚು ಕುಡಿಯುತ್ತಾರೆ ಮತ್ತು ಧೂಮಪಾನ ಮಾಡುತ್ತಾರೆ. ಹೆಲ್ಸಿಂಕಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ಒಂದು ನಿರ್ದಿಷ್ಟ ಸಮಯದಲ್ಲಿ ಮನುಷ್ಯನ ದೇಹವು ನಿದ್ರೆ ಮಾಡಲು ನೈಸರ್ಗಿಕ ಒಲವು ತೋರುತ್ತದೆ. ಹಾಗೆ ಮಾಡಿದ್ದಲ್ಲಿ ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ ವರ್ತಿಸಿದಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದೆ.
2018 ರಲ್ಲಿ ಭಾಗವಹಿಸಿದವರನ್ನು ಅನುಸರಿಸಿ ಅವರಲ್ಲಿ ಯಾರಾದರೂ ಸಾವನ್ನಪ್ಪಿದ್ದಾರೆಯೇ ಎಂದು ಕಂಡುಹಿಡಿಯಲಾಯಿತು. 2018ರ ವೇಳೆಗೆ ಸುಮಾರು 23,000 ಭಾಗವಹಿಸುವವರಲ್ಲಿ 8,700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂತು.
ನಿದ್ರೆಯ ಅವಧಿ, ನೈಟ್ ಶಿಫ್ಟ್ ಕೆಲಸಗಳು ಮನುಷ್ಯನ ದೇಹದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ ಎಂಬುದರ ಕುರಿತು ಹಲವು ಪುರಾವೆಗಳಿವೆ. ಹೆಚ್ಚಾಗಿ ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಬಹುದು ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಈ ಮೂಲಕ ತಿಳಿದು ಬಂದಿರುವುದೇನೆಂದರೆ ರಾತ್ರಿ ಹೊತ್ತು ತಡವಾಗಿ ಮಲಗುವುದರಿಂದ ಸಾಯುವ ಸಾಧ್ಯತೆಯೂ ಶೇ. 09ರಷ್ಟು ಹೆಚ್ಚಿದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.