ಹೊಟ್ಟೆ ಕರಗಿಸುವ ಮ್ಯಾಜಿಕ್​! ಎರಡು ಗಂಟೆಯ ಸೀಕ್ರೆಟ್​ ಹೇಳಿದ ಜಗ್ಗೇಶ್ ಹೆಂಡತಿ ಪರಿಮಳ

By Suvarna News  |  First Published Oct 6, 2023, 12:13 PM IST

ದೇಹವನ್ನು ಆರೋಗ್ಯಪೂರ್ಣವಾಗಿಟ್ಟುಕೊಳ್ಳಲು ಏನು ಮಾಡಬೇಕು ಎನ್ನುವ ಎ,ಬಿ,ಸಿ,ಡಿ ಸೀಕ್ರೆಟ್​ ತಿಳಿಸಿಕೊಟ್ಟಿದ್ದಾರೆ ನಟ ಜಗ್ಗೇಶ್​ ಅವರ ಪತ್ನಿ ಪರಿಮಳಾ ಜಗ್ಗೇಶ್​ 
 


ತೆಳ್ಳಗೆ, ಬೆಳ್ಳಗೆ ಇರಬೇಕು ಎಂದು ಬಯಸುವವ ಹೆಣ್ಣುಮಕ್ಕಳೇ ಹೆಚ್ಚು. ತೆಳ್ಳಗೆ ಆಗಬೇಕೆಂದರೆ ಇಲ್ಲಸಲ್ಲದ ಡಯೆಟ್​ಗಳಿಗೆ ಮೊರೆ ಹೋಗುವುದು ಇದೆ. ಬಳಕುವ ಬಳ್ಳಿಯಂತೆ ಇದ್ದರಷ್ಟೇ ತಮಗೆ ಬೆಲೆ ಎನ್ನುವ ಸಿನಿಮಾ ತಾರೆಯರನ್ನೇ ಆದರ್ಶವಾಗಿಟ್ಟುಕೊಂಡು ಅವರಂತೆಯೇ ಇರಬೇಕು ಎಂದು ಎಷ್ಟೋ ಮಂದಿ ಕನಸು ಕಾಣುತ್ತಾರೆ. ಹಾಗೆಂದು ಡಯೆಟ್​ ಎನ್ನುವುದು ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಲ್ಲ, ಪುರುಷರೂ ಜಿಮ್​ಗೆ ಹೋಗಿ ಸಿಕ್ಸ್​ ಪ್ಯಾಕ್​ ಮಾಡಿಕೊಳ್ಳಲು ಹವಣಿಸುತ್ತಾರೆ. ಇದಕ್ಕಾಗಿ ಹಲವಾರು ಡಯೆಟ್​ಗಳ ಮೊರೆ ಹೋಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವೊಂದು ಕಂಪೆನಿಗಳು ಡಯೆಟ್​ ಹೆಸರಿನಲ್ಲಿ ಕೋಟ್ಯಂತರ ಡಾಲರ್​ಗಳ ವಹಿವಾಟು ನಡೆಸುತ್ತಿರುವುದು ನಮ್ಮ ಕಣ್ಣೆದುರೇ ಇವೆ. ಭಾರತೀಯರಲ್ಲಿ ಇದರ ಹುಚ್ಚು ಹೆಚ್ಚಾಗಿರುವ ಕಾರಣ, ವಿದೇಶಗಳಲ್ಲಿ ಬ್ಯಾನ್​ ಆಗಿರೋ ಫುಡ್​ಗಳನ್ನು ಡಯೆಟ್​ ಹೆಸರಿನಲ್ಲಿ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ. ಡಯೆಟ್​ ಮಾಡುವುದು ಮಾತ್ರವಲ್ಲದೇ, ಹಣ ಕೂಡ ಸಂಪಾದನೆ ಮಾಡಬಹುದು ಎನ್ನುವ ಆಮಿಷ ಒಡ್ಡುತ್ತಿದೆ. ಇದರ ಆಮಿಷಕ್ಕೆ ಬಿದ್ದು ಡಯೆಟ್​ ಹೆಸರಿನಲ್ಲಿ ಆ ಪದಾರ್ಥಗಳನ್ನು ಸೇವನೆ ಮಾಡುತ್ತಾ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿರುವ ಸಾಕಷ್ಟು ಉದಾಹರಣೆಗಳು ಇದ್ದರೂ, ಇನ್ನೂ ಅವ್ಯಾಹತವಾಗಿ  ಮೋಸ-ವಂಚನೆ ನಡೆಯುತ್ತಲೇ ಇದೆ. 

ಆದರೆ ನಿಜವಾಗಿಯೂ ಡಯೆಟ್​ ಎಂದ್ರೇನು? ಅದರ ತಂತ್ರಗಳೇನು? ಜೀವನದಲ್ಲಿ ಖುಷಿಯಾಗಿ ಇರಬೇಕು ಎಂದರೆ ಏನು ಮಾಡಬೇಕು ಎಂದು ನವರಸ ನಾಯಕ ಜಗ್ಗೇಶ್​ ಅವರ ಪತ್ನಿ ಪರಿಮಳ ಅವರು ತಿಳಿಸಿದ್ದು, ಅದರ ವಿಡಿಯೋ ವೈರಲ್​ ಆಗುತ್ತಿವೆ. ಹೊಟ್ಟೆ ಸಣ್ಣದು ಮಾಡುವುದಾಗಿ ಹೇಳುವ ಪ್ರಾಡಕ್ಟ್​ಗಳು ಬರುತ್ತವೆ. ನಿಜಕ್ಕೂ ಹೊಟ್ಟೆ ಮಾತ್ರ ಸಣ್ಣಗೆ  ಮಾಡುವುದು ಎನ್ನುವುದು ಎಲ್ಲೂ ಇದೆ. ಇಡೀ ದೇಹಕ್ಕೆ ವರ್ಕ್​​ಔಟ್​ ಮಾಡಿದರೆ ದೇಹ ಸಣ್ಣಗಾಗುತ್ತದೆ ಅಷ್ಟೇ ಎಂದಿರುವ ಪರಿಮಳ ಅವರು, ಸುಮ್ಮನೇ ಡಯೆಟ್​ ಹೆಸರಿನಲ್ಲಿ ಮೋಸ ಹೋಗಬೇಡಿ ಎಂದಿದ್ದಾರೆ. ಇಡೀ ದೇಹವನ್ನು ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳಿ ಎಂದಿದ್ದಾರೆ. ದೇಹಕ್ಕೆ ಎನರ್ಜಿ ತುಂಬಾ ಮುಖ್ಯ. ಆದ್ದರಿಂದ ಸಮತೋಲನದಲ್ಲಿ ಆಹಾರದ ಜೊತೆ ನೀರನ್ನೂ ಕುಡಿಯಬೇಕು. ಎಂದಿಗೂ ದೇಹವನ್ನು ನಿರ್ಜಲೀಕರಣ ಮಾಡಿಕೊಳ್ಳಬಾರದು ಎಂದಿರುವ ಪರಿಮಳ ಅವರು,  ಕಡಿಮೆ ಊಟ, ಕಡಿಮೆ ನೀರು ಕೂಡಿದರೆ ಎನರ್ಜಿ ಇರಲ್ಲ. ಇದನ್ನು ಮಕ್ಕಳಿಗೂ ಹೇಳಿ. ಅವರಿಗೂ ವಾಟರ್​ ಬಾಟಲ್​ ಕೊಟ್ಟು ಮೇಲಿಂದ ಮೇಲೆ ನೀರು ಕುಡಿಯಲು ಹೇಳಿ ಎಂದಿದ್ದಾರೆ. 

Latest Videos

undefined

ನವರಾತ್ರಿ ಉಪವಾಸ ಮಾಡ್ತೀರಿ ಅಂತಾದ್ರೆ ಇವನ್ನು ಫಾಲೋ ಮಾಡಿ, ಆರಾಮಾಗಿರಿ

ಡಯಟ್​ ಚಾರ್ಜ್​ ಅಂತ ಹೋಗಬೇಡಿ. ಹೊಟ್ಟೆ ಕರಗಿಸುವ ಮ್ಯಾಜಿಕ್ ಎನ್ನುವುದನ್ನು ನಂಬಬೇಡಿ. ಡಯಟೀಷಿಯನ್​ ಬಳಿ ಒಂದು ಚಾರ್ಟ್​ ಕೊಡಿ ಅಂತ ಹೋಗಬೇಡಿ. ಇದರಲ್ಲಿ ಅರ್ಥವೇ ಇಲ್ಲ. ಒಬ್ಬೊಬ್ಬರ ದೇಹಕ್ಕೆ ಒಂದೊಂದು ರೀತಿಯ ಆಹಾರ ಬೇಕಾಗುತ್ತದೆ ಎಂದಿರುವ ಪರಿಮಳ ಅವರು, ಏನು ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುವ ಸೀಕ್ರೆಟ್​ ಹೇಳಿದ್ದಾರೆ. ಎರಡು ಗಂಟೆ ನಮಗಾಗಿ ಇರಿಸಿದರೆ ದೇಹ ಆರೋಗ್ಯಪೂರ್ಣವಾಗಿರುತ್ತದೆ ಎನ್ನುವುದು ಅವರ ಮಾತು. 

ಎ ಬಿ ಸಿ ಡಿ ಟಿಪ್ಸ್​:

ಇದೇ ವೇಳೆ ಎ ಬಿ ಸಿ ಡಿ ಸೀಕ್ರೇಟ್​ ಅನ್ನೂ ಪರಿಮಳ ಅವರು ಹೇಳಿದ್ದಾರೆ.
 ಎ ಫಾರ್​ ಆ್ಯಕ್ಟೀವ್ (A for Active)​: ಜಿಮ್​ನಲ್ಲಿ ವರ್ಕ್​ಔಟ್​ ಮಾಡಿ ಅಂತ ಮಲಗಿಕೊಳ್ಳುವುದು ಆ್ಯಕ್ಟೀವ್​ ಅಲ್ಲ. ವ್ಯಾಯಾಮ ಅಥವಾ ಯಾವುದೇ ವರ್ಕ್​ಔಟ್​ಗಳನ್ನು ಶಿಕ್ಷೆ ಎಂದುಕೊಳ್ಳಬಾರದು. ಅದನ್ನು ಎಂಜಾಯ್​ ಮಾಡಬೇಕು. ವ್ಯಾಯಾಮ ಮಾಡಿ ಚಟುವಟಿಕೆಯಿಂದ  ಕೆಲಸ ಮಾಡಬೇಕು, ವ್ಯಾಯಾಮ ಮಾಡಿ ಸುಸ್ತು ಎಂದು ಮಲಗಿದರೆ ಅದು ಆರೋಗ್ಯವಂತ ದೇಹ ಪಡೆಯಲು ಸಾಧ್ಯವಿಲ್ಲ. ಮಾಡುವ ಕೆಲಸವನ್ನು ಎಂಜಾಯ್​ ಮಾಡಿದರೆ ಆ್ಯಕ್ಟೀವ್​ ಆಗಿರಬಹುದು ಎಂದಿರುವ ಪರಿಮಳಾ ಅವರು, ನಿಮಗೆ ಏನು ಮಾಡಿದರೆ ಖುಷಿ ಕೊಡುತ್ತದೆಯೋ ಅದನ್ನು ಮಾಡಿ ಆ್ಯಕ್ಟೀವ್ ಆಗಿರಿ ಎಂದಿದ್ದಾರೆ. ಕೆಲವರಿಗೆ ಡ್ಯಾನ್ಸ್​ ಮಾಡುವುದು ಎಂದರೆ ಖುಷಿ ಇರುತ್ತದೆ. ಆದರೆ ಗಂಡ- ಮಕ್ಕಳು ಏನನ್ನುತ್ತಾರೋ ಅನ್ನುವ ಹಿಂಜರಿಕೆ. ಅಂಥ ಸಮಯದಲ್ಲಿ ಯಾರೂ ಇಲ್ಲದಾಗ ಇಲ್ಲವೇ ರೂಮ್​ ಬಾಗಿಲು ಹಾಕಿಕೊಂಡು ಒಬ್ಬರೇ ಡ್ಯಾನ್ಸ್​ ಮಾಡಿ, ಅದರಷ್ಟು ಖುಷಿ ಇನ್ನೊಂದಿಲ್ಲ. ಇದು ದಿನಪೂರ್ತಿ ಆ್ಯಕ್ಟೀವ್​ ಆಗಿರಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಡೆಂಗ್ಯೂ-ಮಲೇರಿಯಾದಿಂದ ದೂರವಿರಲು ರುಜುತಾ ದಿವೇಕರ್ ಸಲಹೆ ಪಾಲಿಸಿ

ಬಿ ಫಾರ್​ ಬ್ಯಾಲೆನ್ಸ್​ಡ್​ ನ್ಯೂಟ್ರಿಷನ್ (Balanced Nutrition)​. ಸರಿಯಾದ ರೀತಿಯಲ್ಲಿ ಆಹಾರ ಸೇವಿಸಿ. ಪ್ರತಿ ದಿನ ಆಹಾರದಲ್ಲಿ  ಒಂದೆರಡು ಚಮಚ ತುಪ್ಪ ಇರಲಿ. ಇದು ತುಂಬಾ ಒಳ್ಳೆಯದು ಎಂದಿದ್ದಾರೆ.  
ಸಿ ಫಾರ್​  ಕಂಟ್ರೋಲ್​ ಯುವರ್​ ಇಮೋಷನ್ (Controling Emotion)​. ನಮ್ಮ ಇಮೋಷನ್​ ಅನ್ನು ಕಂಟ್ರೋಲ್​  ಮಾಡಿಕೊಳ್ಳಲು ಕಲಿಯಬೇಕು. ಸುಖ ದುಃಖ ಯಾವುದೂ  ಶಾಶ್ವತ ಅಲ್ಲ. ಮುಳುಗಿ ಹೋದೆ ಅಂದಾಗ ಯಾರೋ ಸಹಾಯ ಮಾಡ್ತಾರೆ, ಒಂದು ಕೆಟ್ಟು ಹೋಗಿರುವುದು ಗಡಿಯಾರ ಎರಡು ಸರಿಯಾದ ಟೈಂ ತೋರಿಸುತ್ತದೆ. ಅದೇ ರೀತಿ ಲೈಫ್​. ಯಾವುದೂ ಶಾಶ್ವತವಲ್ಲ ಎಂದುಕೊಂಡು ನಡೆಯಬೇಕು. ಕೆಟ್ಟ ದಿನಗಳು- ಒಳ್ಳೆಯ ದಿನಗಳು ಎಲ್ಲವನ್ನೂ ಸಮನಾಗಿ ಪಡೆಯಬೇಕು ಎಂದಿದ್ದಾರೆ. 
ಡಿ- ಡೀಪ್​ ಸ್ಲೀಪ್ (Deep Sleep)​: ಎಷ್ಟು ಗಂಟೆ ಮಲಗಿದ್ದೀರಿ ಎನ್ನುವ ಬದಲು ಮಲಗುವ ಸಮಯದಲ್ಲಿ ಡೀಪ್​ ಸ್ಲೀಪ್​ಮಾಡಬೇಕು. ಇದರ ಸಮಸ್ಯೆಯಿಂದಲೇ  ಯಂಗ್​ಸ್ಟರ್​ಗಳಲ್ಲಿಯೂ  ಆರೋಗ್ಯ ಸಮಸ್ಯೆ ಬರ್ತಾ ಇದೆ ಎಂದಿರುವ ಪರಿಮಳ ಅವರು ಇದಕ್ಕೆ  3-2-1 ಟಿಪ್ಸ್​ ಕೊಟ್ಟಿದ್ದಾರೆ. ಅದೇನೆಂದರೆ, ಮಲಗುವ ಮೂರು ಗಂಟೆ ಮೊದಲು ಊಟ ಮಾಡಬೇಕು, 2 ಗಂಟೆ ಮೊದಲು ನೀರು ಕುಡಿಯಬೇಕು ಹಾಗೂ ಒಂದು ಗಂಟೆ ಮೊದಲು ಟಿ.ವಿ. ಮೊಬೈಲ್​ ಸ್ಕ್ರೀನ್​ಗಳನ್ನು ಆಫ್​ ಮಾಡಬೇಕು ಎಂದಿದ್ದಾರೆ.  

click me!