ನಮಗೆ ಏನೂ ಚಟವಿಲ್ಲ.. ಟೀ ಮಾತ್ರ ಸೇವನೆ ಮಾಡ್ತೇವೆ ಅನ್ನೋರು ನೀವಾಗಿದ್ರೆ, ಟೀ ಬಿಡೋಕೆ ಟ್ರೈ ಮಾಡಿ.. ನಿಮ್ಮ ಹತ್ರ ಚಹಾ ಕುಡಿದೆ ಇರೋಕೆ ಆಗಲ್ಲ. ಅದು ಸದ್ದಿಲ್ಲದೆ ನಿಮ್ಮನ್ನು ಆವರಿಸಿಕೊಂಡು ಹಾನಿ ಮಾಡ್ತಿದೆ.
ಬ್ಲಾಕ್ ಟೀ, ಗ್ರೀನ್ ಟೀ ಅಂತಾ ಎಷ್ಟೇ ಟೀ ವೆರೈಟಿ ಬಂದ್ರೂ ಜನರಿಗೆ ಹೆಚ್ಚು ಇಷ್ಟವಾಗೋದು ಮಿಲ್ಕ್ ಟೀ. ಹಾಲು- ಸಕ್ಕರೆ ಬೆರೆಸಿದ ಟೀ ರುಚಿ ಹೆಚ್ಚು. ಬೆಳಿಗ್ಗೆ ಹಾಸಿಗೆಯಿಂದ ಏಳ್ತಾ ಇದ್ದಂತೆ ಒಂದು ಕಪ್ ಬಿಸಿ ಬಿಸಿ ಟೀ ಬಾಯಿಗೆ ಹೋದ್ರೆ ಹಿತವೆನ್ನಿಸುತ್ತೆ. ಇಡೀ ದಿನ ಫ್ರೆಶ್ ಆಗಿರೋಕೆ ಜನರು ಬೆಳಿಗ್ಗೆಯಿಂದ ಸಂಜೆಯವರೆಗೆ ಟೀ ಸೇವನೆ ಮಾಡ್ತಾರೆ. ಬರೀ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿ ಟೀ ಪ್ರಸಿದ್ಧಿ ಪಡೆದಿದೆ. ಕೋಟ್ಯಾಂತರ ಜನರು ಪ್ರತಿ ದಿನ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ.
ಮಾಹಿತಿ ಪ್ರಕಾರ, ನೀರಿನ ನಂತರ ಅತಿ ಹೆಚ್ಚು ಸೇವನೆ ಮಾಡುವ ಪಾನೀಯಗಳಲ್ಲಿ ಟೀ (Tea) ಒಂದು ಅಂದ್ರೆ ನೀವು ನಂಬ್ಲೇಬೇಕು. ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಟೀ ಕುಡಿಯಲು ಆಸಕ್ತಿ ತೋರ್ತಾರೆ. ಪ್ರತಿ ದಿನ ಟೀ ಸೇವನೆ ಮಾಡೋರು ನೀವಾಗಿದ್ದು, ಟೀ ನಿಮ್ಮ ಆರೋಗ್ಯ (Health) ಹಾಳು ಮಾಡುತ್ತಾ ಎಂಬ ಅನುಮಾನ ನಿಮಗೆ ಬಂದಿದ್ರೆ ಈ ಅಧ್ಯಯನ (Study) ದ ವರದಿ ಓದಿ. ನಿಜವಾಗ್ಲೂ ಇದು ನಿಮಗೆ ಅಚ್ಚರಿಯುಂಟು ಮಾಡುತ್ತದೆ.
undefined
ನವರಾತ್ರಿ ಪುಣ್ಯಕಾಲದಲ್ಲಿ ಯಾವ ಆಹಾರ ಸೂಕ್ತ? ಯಾವ ಕೆಲಸವನ್ನೆಲ್ಲ ಮಾಡ್ಲೇಬಾರ್ದು ಗೊತ್ತಾ?
ಮಿಲ್ಕ್ ಟೀ (Milk Tea) ಕುಡಿಯೋದು ಎಷ್ಟು ಒಳ್ಳೆಯದು? : ಹಾಲಿನ ಟೀ ಮೂಡ್ ಫ್ರೆಶ್ ಮಾಡುತ್ತೆ, ಕೆಲಸ ಮಾಡಲು ಶಕ್ತಿ ನೀಡುತ್ತೆ ಎಂದು ಜನರು ಹೇಳ್ತಾರೆ. ಒಂದು ದಿನ ಟೀ ಕುಡಿದಿಲ್ಲ ಅಂದ್ರೆ ತಲೆನೋವು ಬಂತು ಎನ್ನುವರಿದ್ದಾರೆ. ಟೀಯ ಈ ಎಲ್ಲ ಲಾಭದ ಹೊರತಾಗಿ ನಷ್ಟವೂ ಸಾಕಷ್ಟಿದೆ. ನೀವು ಪ್ರತಿ ದಿನ ಹಾಲು ಬೆರೆಸಿದ ಟೀ ಸೇವನೆ ಮಾಡಿದ್ರೆ ಮಾನಸಿಕ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಿದೆ. ಹದಿಹರೆಯದವರಲ್ಲಿ ಸಾಮಾಜಿಕ ಸಂವಹನ ಇದ್ರಿಂದ ಕಡಿಮೆಯಾಗುತ್ತೆ ಎಂದು ಇತ್ತೀಚಿಗೆ ನಡೆದ ಅಧ್ಯಯನವೊಂದು ಬಹಿರಂಗಪಡಿಸಿದೆ.
ಸ್ಪೈಸಿ ತಿಂದಾಗ ಮೈ ಬಿಸಿಯಾಗೋದು, ಕಣ್ಣಲ್ಲಿ, ಮೂಗಲ್ಲಿ ನೀರು ಬರೋದ್ಯಾಕೆ?
ಅಧ್ಯಯನ ಹೇಳೋದೇನು? : ತ್ಸಿಂಗ್ವಾ ವಿಶ್ವವಿದ್ಯಾಲಯ ಮತ್ತು ಚೀನಾದ ಸೆಂಟ್ರಲ್ ಯೂನಿವರ್ಸಿಟಿ ಆಫ್ ಫೈನಾನ್ಸ್ ಅಂಡ್ ಎಕನಾಮಿಕ್ಸ್ ನ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಬೀಜಿಂಗ್ 5,281 ಕಾಲೇಜು ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಮಿಲ್ಕ್ ಟೀ ಸೇವನೆ ಒಂದು ಚಟ ಮಾತ್ರವಲ್ಲ ಇದ್ರಿಂದ ಖಿನ್ನತೆ ಹಾಗೂ ಆತಂಕ ಸಮಸ್ಯೆ ಕಾಡುತ್ತದೆ ಎಂಬುದು ಇಲ್ಲಿ ಪತ್ತೆಯಾಗಿದೆ.
ಯುವಕರು ತಮ್ಮ ಮಾನಸಿಕ ಆರೋಗ್ಯ ನಿಯಂತ್ರಿಸಲು ಹಾಗೂ ಭಾವನೆಗಳನ್ನು ಕಂಟ್ರೋಲ್ ಮಾಡಲು ಟೀ ಸೇವನೆ ಮಾಡ್ತಾರೆ. ಟೀ ಕೂಡ ಮದ್ಯವೆಸನದಂತೆ. ಆರಂಭದಲ್ಲಿ ಚಿಕ್ಕದಾಗಿ ಶುರುವಾಗುವ ಹವ್ಯಾಸ ನಂತ್ರ ಚಟವಾಗುತ್ತದೆ. ಅದನ್ನು ಬಿಡೋದು ಸಾಧ್ಯವಾಗೋದಿಲ್ಲ. ಇದು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತೆ. ಚೀನಾದಲ್ಲಿ, ವಿಶೇಷವಾಗಿ ಯುವಜನರಲ್ಲಿ ಹಾಲಿನ ಚಹಾದ ಜನಪ್ರಿಯತೆಯಲ್ಲಿ ಮಹತ್ತರವಾದ ಹೆಚ್ಚಳ ಕಂಡುಬಂದಿದೆ ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ. ಹಾಲಿನ ಟೀ, ಚಟವಾಗೋದಲ್ಲದೆ ಇದ್ರಿಂದ ಖಿನ್ನತೆ, ಆತಂಕ, ಆತ್ಮಹತ್ಯೆ ಆಲೋಚನೆಗಳು ಬರುತ್ವೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ಟೀ ಸೇವನೆ ಮಾಡುವುದ್ರಿಂದ ನಿದ್ರಾಹೀನತೆ,ಸ್ನಾಯುವಿನ ಸಮಸ್ಯೆ, ಜೀರ್ಣಾಂಗಕ್ಕೆ ಸಂಬಂದಿಸಿದ ಸಮಸ್ಯೆ, ತೀವ್ರ ರಕ್ತದೊತ್ತಡ, ತ್ವರಿತ ಹೃದಯ ಬಡಿತ, ಸುಸ್ತು ಹಾಗೂ ಪದೇ ಪದೇ ಮೂತ್ರ ವಿಸರ್ಜನೆ ಸೇರಿದಂತೆ ಅನೇಕ ಅನಾರೋಗ್ಯ ನಿಮ್ಮನ್ನು ಕಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುವ ಸಾಧ್ಯತೆಯಿದೆ. ಖಿನ್ನತೆ, ಆತಂಕ ಸೇರಿದಂತೆ ಮಾನಸಿಕ ಸಮಸ್ಯೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಬೇಕೆಂದ್ರೆ ಹದಿಹರೆಯದವರು ಹಾಲು ಬೆರೆಸಿದ ಟೀ ಸೇವನೆಯನ್ನು ನಿಲ್ಲಿಸಬೇಕು ಇಲ್ಲವೆ ನಿಯಂತ್ರಿಸಬೇಕೆಂದು ತಜ್ಞರು ಹೇಳಿದ್ದಾರೆ.