
Tech Desk: ಕ್ಯಾಬ್ ಅಗ್ರಿಗೇಟರ್ ಓಲಾದ (Ola) ಮೊದಲ ಉದ್ಯೋಗಿ ಪ್ರಣಯ್ ಜೀವರಾಜ್ಕಾ (Pranay Jivrajka) ಅವರು ತಮ್ಮ ಸ್ವಂತ ಉದ್ಯಮವಾದ ಆಲ್ಲೋ ಹೆಲ್ತನ್ನು (Allo Health) ಪ್ರಾರಂಭಿಸಿದ್ದು ಈ ಕಂಪನಿಯೂ ಪುರುಷರ ಲೈಂಗಿಕ ಯೋಗಕ್ಷೇಮದ (sexual wellbeing for men) ಮೇಲೆ ಕೇಂದ್ರೀಕರಿಸಲಿದೆ .ಈ ಸಾಹಸೋದ್ಯಮವು ಈಗಾಗಲೇ Nexus Venture Partners ನೇತೃತ್ವದಲ್ಲಿ $4.4 ಮಿಲಿಯನ್ ಸೀಡ್ ನಿಧಿಯನ್ನು (Seed Funding) ಸಂಗ್ರಹಿಸಿದೆ ಮತ್ತು ಭಾರತದ ಕೆಲವು ಪ್ರಮುಖ ಸಂಸ್ಥಾಪಕರು ಮತ್ತು ಸ್ಟಾರ್ಟ್‌ಪ್ ಆಪರೇಟರ್‌ಗಳನ್ನು ಆರಂಭಿಕ ಹೂಡಿಕೆದಾರರನ್ನಾಗಿ ಪರಿಗಣಿಸಿದೆ. ಆಲ್ಲೋ ಹೆಲ್ತನ್ನು ಪ್ರಾರಂಭಿಸುವ ಮೊದಲು, ಜೀವರಾಜ್ಕಾ ಓಲಾ ಜೊತೆಗೆ ಸುಮಾರು ಒಂದು ದಶಕದ ಕಾಲ ಕೆಲಸ ಮಾಡಿದ್ದಾರೆ ಮತ್ತು 2017ರ ತನಕ ಓಲಾ ಫುಡ್ಸ್ ಮುಖ್ಯಸ್ಥರಾಗಿದ್ದರು
ನೆಕ್ಸಸ್ ಹೊರತುಪಡಿಸಿ, ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್, ಪ್ರಣವ್ ಪೈ (3one4), ಕಲ್ಯಾಣ್ ಕೃಷ್ಣಮೂರ್ತಿ (ಫ್ಲಿಪ್‌ಕಾರ್ಟ್), ಸುಜೀತ್ ಕುಮಾರ್ (ಉಡಾನ್), ಅಂಕಿತ್ ಭಾಟಿ (ಆಮ್ನಿಕ್/ಎಕ್ಸ್ ಓಲಾ), ದೀಪಿಂದರ್ ಗೋಯಲ್ (ಝೊಮಾಟೊ), ರೋಹಿತ್ ಎಂಎ (ಕ್ಲೌಡ್‌ನೈನ್), ಗೌರವ್ ಮುಂಜಾಲ್ (ಅನಾಕಾಡೆಮಿ), ನಿತಿನ್ ಗುಪ್ತಾ (ಯುನಿ ಕಾರ್ಡ್ಸ್), ಕುನಾಲ್ ಶಾ (CRED), ಸಂದೀಪ್ ಸಿಂಘಾಲ್ (ನೆಕ್ಸಸ್), ತರಾನಾ ಲಾಲ್ವಾನಿ (ಇನ್ನೋವೆನ್) ಮತ್ತು ಇತರರು ಫಂಡಿಂಗ್ ಸುತ್ತಿನಲ್ಲಿ ಭಾಗವಹಿಸಿದ್ದರು.
ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಮೂಲಕ ಚಿಕಿತ್ಸೆ!
ಬೆಂಗಳೂರು ಮೂಲದ ಈ ಸ್ಟಾರ್ಟಪ್ ಲೈಂಗಿಕ ಯೋಗಕ್ಷೇಮವನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಹಲವಾರು ರೀತಿಯ ಚಿಕಿತ್ಸೆಯತ್ತ ಗಮನಹರಿಸಲಿದೆ. ಮೌಲ್ಯಮಾಪನದಿಂದ ಪ್ರಾರಂಭಿಸಿ, ವೈದ್ಯರೊಂದಿಗೆ ಸಮಾಲೋಚನೆ, ಔಷಧಿಗಳ ಮನೆ ವಿತರಣೆ, ಶೆಡ್ಯೂಲಿಂಗ್ ಥೆರಪಿ ಸೆಷನ್‌ಗಳು, ಫಾಲೋಅಪ್‌ಗಳು, ಹೋಮ್ ಟೆಸ್ಟ್‌ಗಳು, ಈ ಎಲ್ಲಾ ಸೇವೆಗಳನ್ನು ವೇದಿಕೆಯು ಒದಗಿಸಲಿದೆ.
ಇದನ್ನೂ ಓದಿ: Stay Young: ಯಾವಾಗಲೂ ಯಂಗ್ ಆಗಿರಬೇಕಾದರೆ ಈ ಆಹಾರವನ್ನು ಸೇವಿಸಿ
ಕಂಪನಿಯು ರೋಗಿಗಳ ಸಮಸ್ಯೆಗಳನ್ನು ನಿಖರವಾಗಿ ಪತ್ತೆ ಮಾಡಲು ಅರ್ಹ ವೈದ್ಯರೊಂದಿಗೆ ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಮಷಿನ್ ಲರ್ನಿಂಗ್ (Machine Learning) ಮೇಲೆ ಅವಲಂಬಿತವಾಗಿದೆ. ಸ್ಟಾರ್ಟಪ್ ಪ್ರಸ್ತುತ ಮೂರು ವೈದ್ಯರನ್ನು ಆನ್‌ಬೋರ್ಡ್ ಮಾಡಿದೆ.
ಲೈಂಗಿಕತೆಗೆ ಸಂಬಂಧಿಸಿದ ವಿಷಯಗಳು ಸೂಕ್ಷ್ಮ!
"ಲೈಂಗಿಕ ಯೋಗಕ್ಷೇಮವನ್ನು ಸಾಮಾಜಿಕ ಕಳಂಕದ ರೀತಿ ನೋಡಲಾಗುತ್ತದೆ ಮತ್ತು ಅದರೊಂದಿಗೆ ಸಂಬಂಧಿಸಿದ ವಿಷಯಗಳು ಅತಿಸೂಕ್ಷ್ಮತೆಯನ್ನು ಹೊಂದಿವೆ. ಜತಗೆ ಲೈಂಗಿಕ ಶಿಕ್ಷಣದ ಮೇಲೆ ಸೀಮಿತ ಗಮನ, ಅರ್ಹ ವೈದ್ಯರ ಕೊರತೆ, ಅರಿವಿನ ಕೊರತೆ ಮತ್ತು ಪಿತೃಪ್ರಭುತ್ವದ (Patriarchal Mindset) ಮನಸ್ಥಿತಿಯಿಂದ ಅನೇಕ ವ್ಯಕ್ತಿಗಳು ಬಳಲುತ್ತಿದ್ದಾರೆ. " ಎಂದು ಜೀವರಾಜ್ಕಾ ತಮ್ಮ ಕಂಪನಿಯ ಬ್ಲಾಗ್‌ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Distant Reiki : ಕೊರೊನಾ ಸಂದರ್ಭದಲ್ಲಿ ಹೆಚ್ಚಾಗ್ತಿರುವ ಮನೋರೋಗಕ್ಕೆ ಇದು ಮದ್ದು
"ಕಡಿಮೆ ಗಮನಹರಿಸಿರುವ ಇಂಥಹ ಮಾರುಕಟ್ಟೆಗೆ ಸೇವೆ ಸಲ್ಲಿಸುವ ಆಲೋಚನೆಯಿದೆ. ಈ ನಿಧಿಯೊಂದಿಗೆ, ನಾವು ಈಗ ಕಾರ್ಯಾಚರಣೆಗಳನ್ನು ಸ್ಕೇಲಿಂಗ್ ಮಾಡಲು ಮತ್ತು ಮಾರುಕಟ್ಟೆಗಳಿಗೆ ಪ್ರವೇಶಿಸಲು ನೋಡುತ್ತಿದ್ದೇವೆ. ಕಂಪನಿಯು ಪ್ರಸ್ತುತ 13-ಸದಸ್ಯರ ತಂಡವಾಗಿದೆ ಮತ್ತು ಇತರ ರೋಲ್‌ಗಳಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ" ಎಂದು ಮನಿಕಂಟ್ರೋಲ್‌ನೊಂದಿಗೆ (Money Control) ಮಾತನಾಡುತ್ತಾ ಜೀವರಾಜ್ಕಾ ಹೇಳಿದ್ದಾರೆ
ಪುರುಷರ ಲೈಂಗಿಕ ಯೋಗಕ್ಷೇಮ ಮಾರುಕಟ್ಟೆಯಲ್ಲಿ ಮೈಮ್ಯೂಸ್ (MyMuse) ಮತ್ತು ಫಾರ್ಮೆನ್‌ನಂತಹ(Formen) ಕೆಲವು ಕೈಬೆರಳೆಣಿಕೆಯ ಕಂಪನಿಗಳಿವೆ. ಇವು ಲೈಂಗಿಕ ಸ್ವಾಸ್ಥ್ಯ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಮತ್ತೊಂದು ಕಂಪನಿ ಮೊಸಾಯಿಕ್ ವೆಲ್ನೆಸ್ ( Mosaic Wellness) ಮ್ಯಾನ್‌ಮ್ಯಾಟರ್ಸ್ ಮತ್ತು ಬಾಡಿವೈಸ್ ಅನ್ನು ನಡೆಸುತ್ತದೆ. ಇದೇ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮೊಸಾಯಿಕ್ ವೆಲ್ನೆಸ್ ಕಳೆದ ವರ್ಷ ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ ನೇತೃತ್ವದಲ್ಲಿ $24 ಮಿಲಿಯನ್ ಫಂಡಿಂಗ್ ಸಂಗ್ರಹಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.