Health Tips : ಸಣ್ಣ ಪುಟ್ಟ ತಪ್ಪು ದೃಷ್ಟಿಯನ್ನೇ ತೆಗೆಯಬಹುದು, ಇರಲಿ ಎಚ್ಚರ

Suvarna News   | Asianet News
Published : Jan 12, 2022, 06:12 PM IST
Health Tips : ಸಣ್ಣ ಪುಟ್ಟ ತಪ್ಪು ದೃಷ್ಟಿಯನ್ನೇ ತೆಗೆಯಬಹುದು, ಇರಲಿ ಎಚ್ಚರ

ಸಾರಾಂಶ

ಆರೋಗ್ಯವೆ ಭಾಗ್ಯ. ನಮ್ಮ ದೇಹದ ಪ್ರತಿಯೊಂದು ಅಂಗದ ಆರೈಕೆ ಬಹಳ ಮುಖ್ಯ. ಅದರಲ್ಲೂ ಕೆಲವು ಸೂಕ್ಷ್ಮ ಭಾಗಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ನಮ್ಮ ಕೆಲ ಹವ್ಯಾಸ ಶಾಶ್ವತ ಅಂದತ್ವಕ್ಕೆ ಕಾರಣವಾಗಬಹುದು. 

ಕಣ್ಣು (Eyes)ಗಳನ್ನು ದೇವರು (God) ನೀಡಿದ ಅತ್ಯಂತ ಸುಂದರವಾದ ಉಡುಗೊರೆ (Gift )ಎಂದು ಪರಿಗಣಿಸಲಾಗಿದೆ. ಕಣ್ಣುಗಳಿಲ್ಲದಿದ್ದರೆ, ಪ್ರಪಂಚದ ಸುಂದರವಾದ ವಸ್ತುಗಳನ್ನು ಆನಂದಿಸಲು ಸಾಧ್ಯವಿಲ್ಲ. ಆರೋಗ್ಯಕರ (Healthy)  ಕಣ್ಣುಗಳನ್ನು ರಕ್ಷಿಸಲು ನಾವು ಪ್ರತಿನಿತ್ಯ ಕಣ್ಣಿಗೆ ಆರೈಕೆ ಮಾಡಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಜೀವನಶೈಲಿ (Lifestyle)ಯು ಬಹಳಷ್ಟು ಬದಲಾವಣೆಯಾಗಿದೆ. ಇದು ಕಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಚಿಕ್ಕ ವಯಸ್ಸಿನಲ್ಲಿ, ಜನರು ಅನೇಕ ಗಂಭೀರ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಡಯಟ್ ಕೂಡ ವಿಶೇಷ ಪಾತ್ರ ವಹಿಸುತ್ತದೆ.

ಪೌಷ್ಟಿಕ ಆಹಾರದ ಕೊರತೆಯು ದೃಷ್ಟಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ  ನಾವು ತಿಳಿದೋ ಅಥವಾ ತಿಳಿಯದೆಯೋ ಇಂತಹ ಅನೇಕ ತಪ್ಪುಗಳನ್ನು ಮಾಡುತ್ತೇವೆ. ಅವು ಕಣ್ಣುಗಳಿಗೆ ಗಂಭೀರ ಹಾನಿಯುಂಟು ಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ ನಾವು ಮಾಡಿದ ಯಡವಟ್ಟಿನಿಂದ ನಮ್ಮ ಕಣ್ಣನ್ನು ಕಳೆದುಕೊಳ್ಳುತ್ತೇವೆ. ನಮ್ಮ ಕಣ್ಣುಗಳಿಗೆ ಗಂಭೀರ ಹಾನಿಯನ್ನುಂಟುಮಾಡುವ ಕೆಲವು ಅಭ್ಯಾಸಗಳ ಬಗ್ಗೆ ನಾವಿಂದು ಹೇಳುತ್ತೇವೆ.

ಹೆಚ್ಚಾದ ಸ್ಕ್ರೀನ್ ಟೈಮ್ : ಇದು ಆನ್ಲೈನ್ ಯುಗ. ಇಲ್ಲಿ ಎಲ್ಲವೂ,ಎಲ್ಲರೂ ಆನ್ಲೈನ್. ಬಹುತೇಕರ ಕೆಲಸ ಆನ್ಲೈನ್ ಮೂಲಕವೇ ನಡೆಯುತ್ತದೆ. ಹಾಗಾಗಿ ಜನರ ಸ್ಕ್ರೀನ್ ಟೈಮ್ ಹೆಚ್ಚಾಗಿದೆ. ಕೆಲವರು ಅನಿವಾರ್ಯ ಕಾರಣಕ್ಕೆ ಹೆಚ್ಚಿನ ಸಮಯವನ್ನು ಪರದೆ ಮುಂದೆ ಕಳೆದ್ರೆ ಮತ್ತೆ ಕೆಲವರಿಗೆ ಇದು ಅಭ್ಯಾಸವಾಗಿದೆ. ಕಂಪ್ಯೂಟರ್ ನಲ್ಲಿ ಕೆಲಸ ಮುಗಿಸಿ,ಮೊಬೈಲ್ ನಲ್ಲಿ ಅಥವಾ ಟಿವಿಯಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿದೆ. ಜನರು ಇಡೀ ದಿನ ಒಂದಲ್ಲ ಒಂದು ಕಾರಣಕ್ಕೆ ಮೊಬೈಲ್,ಟಿವಿ,ಲ್ಯಾಪ್ ಟಾಪ್ ಬಳಸ್ತಾರೆ.

ಇದು ಕಣ್ಣಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಕಣ್ಣನ್ನು ಹಾನಿಗೊಳಿಸ್ತಿದೆ. ಕಣ್ಣುಗಳಲ್ಲಿ ಶುಷ್ಕತೆ, ಕಣ್ಣು ಕೆಂಪಾಗುವುದು ಮತ್ತು ಕಣ್ಣಿನ ತುರಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಇದಲ್ಲದೆ ಬಹುತೇಕ ಜನರು ಕತ್ತಲೆಯಲ್ಲಿ ಅಥವಾ ಕಡಿಮೆ ಬೆಳಕಿನಲ್ಲಿ ಸ್ಕ್ರೀನ್ ನೋಡ್ತಾರೆ. ಮಧ್ಯರಾತ್ರಿಯವರೆಗೆ ಮೊಬೈಲ್,ಟಿವಿ ವೀಕ್ಷಣೆ ಮಾಡುವವರಿದ್ದಾರೆ. ಕರೆಂಟ್ ಬಂದ್ ಮಾಡಿ ಮೊಬೈಲ್ ನೋಡುವುದ್ರಿಂದ ಇದು ಕಣ್ಣಿನ ಮೇಲೆ ಹೆಚ್ಚು ಒತ್ತಡ ಬೀಳಲು ಕಾರಣವಾಗುತ್ತಿದೆ.

ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಕಣ್ಣಿನ ಕೆಲ ವ್ಯಾಯಾಮಗಳನ್ನು ಪ್ರತಿ ದಿನ ಮಾಡಬೇಕು. ಆಗಾಗ ಕಣ್ಣುಗಳನ್ನು ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸಬೇಕು. ಕೆಲಸಕ್ಕೆ ಬ್ರೇಕ್ ನೀಡಿ, ಹೊರಗಿನ ಬೆಳಕು,ಪರಿಸರವನ್ನು ವೀಕ್ಷಿಸಬೇಕು. ಕಣ್ಣುಗಳನ್ನು 10-15 ಬಾರಿ ಮಿಟುಕಿಸಬೇಕು. 

Health Tips: ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಿಂದ ರಕ್ಷಿಸಿಕೊಳ್ಳಲು ಬ್ಲ್ಯಾಕ್ ಟೀ ಕುಡಿಯಿರಿ

ಪೌಷ್ಠಿಕ ಆಹಾರದ ಕೊರತೆ : ಕಣ್ಣುಗಳು ಆರೋಗ್ಯವಾಗಿರಲು ಅನೇಕ ಪೋಷಕಾಂಶಗಳ ಅಗತ್ಯವಿದೆ. ವಿಟಮಿನ್ ಎ, ಸತು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳು ಆರೋಗ್ಯಕರ ಕಣ್ಣುಗಳನ್ನು ಕಾಪಾಡಿಕೊಳ್ಳಲು ಅವಶ್ಯಕ. ಕ್ಯಾರೆಟ್   ದೃಷ್ಟಿ ಹೆಚ್ಚಿಸಲು ಉತ್ತಮ ಆಹಾರವಾಗಿದೆ. ಹಳದಿ ಮತ್ತು ಕಿತ್ತಳೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು,ಹಸಿರು ತರಕಾರಿ,ಸೊಪ್ಪು, ಮೊಟ್ಟೆಗಳು, ಡ್ರೈ ಫ್ರುಟ್ಸ್ ಮತ್ತು ಸಮುದ್ರದ  ಆಹಾರಗಳು ದೃಷ್ಟಿ ಸುಧಾರಿಸಲು ನೆರವಾಗುತ್ತವೆ. ಈ ಆಹಾರಗಳ ಸೇವನೆ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. 

Immunity Increase: ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ನಿದ್ರೆಯ ಕೊರತೆ : ನಿದ್ರೆಯ ಕೊರತೆಯೂ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ 7-9 ಗಂಟೆಗಳ ಕಾಲ ನಿದ್ದೆ ಮಾಡುವ ಅವಶ್ಯಕತೆಯಿದೆ. ಕನಿಷ್ಠ 6 ಗಂಟೆ ನಿದ್ರೆ ಅತ್ಯಗತ್ಯ. ಇದು ಸಾಧ್ಯವಾಗದಿದ್ದರೆ, ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜತೆಗೆ ಕಣ್ಣಿಗೆ ಹಾನಿಯಾಗುತ್ತದೆ. ವಿಶ್ರಾಂತಿಯ ಕೊರತೆಯಿಂದಾಗಿ ನಿಮ್ಮ ಕಣ್ಣುಗಳು ಕೆಂಪಾಗಬಹುದು. ಕಣ್ಣುಗಳ ಶುಷ್ಕತೆ ಮತ್ತು ಮಸುಕಾದ ದೃಷ್ಟಿಗೆ ಕಾರಣವಾಗಬಹುದು. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾತ್ರಿ ಸರಿಯಾಗಿ ನಿದ್ರೆ ಮಾಡುವುದು ಬಹಳ ಮುಖ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ