
ನಮ್ಮ ದೇಹದ ಆರೋಗ್ಯಕ್ಕೆ ಪ್ರೊಟೀನ್ ಅತ್ಯಂತ ಅವಶ್ಯಕ. ದೇಹದ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶ ಎಂದೇ ಇದನ್ನು ಪರಿಗಣಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವವರ ವಿವಿಧ ಡಯೆಟ್ ಗಳ ಕಾರಣದಿಂದಾಗಿ ಪ್ರೊಟೀನ್ ಇನ್ನಷ್ಟು ಖ್ಯಾತಿ ಪಡೆದುಕೊಂಡಿದೆ ಎಂದು ಹೇಳಬಹುದು. ಆಹಾರದ ಮೂಲಕ ಪ್ರೊಟೀನ್ ಸೇವನೆ ಮಾಡುವುದು ಅತ್ಯಂತ ಅಗತ್ಯ. ತೂಕ ಇಳಿಸಿಕೊಳ್ಳಲೆಂದು ಯಾವ್ಯಾವುದೋ ಆಹಾರ ಸೇವನೆ ಮಾಡಿ, ಅನೇಕ ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿರುವ ಜನರೂ ಇದ್ದಾರೆ. ಆ ಬಳಿಕವೇ, ಪ್ರೊಟೀನ್ ಆಹಾರದಲ್ಲಿ ಇರಬೇಕಾದುದು ಎಷ್ಟು ಅಗತ್ಯ ಎನ್ನುವುದು ಹೆಚ್ಚು ಪ್ರಚಾರ ಪಡೆದುಕೊಂಡಿತು. ಅದಿರಲಿ. ಈಗಂತೂ ನೀವು ಎಲ್ಲೇ ಹೋಗಿ, ಪ್ರೊಟೀನ್ ಭರಿತ ಆಹಾರ, ಪ್ರೊಟೀನ್ ಯುಕ್ತ ಪೌಡರ್, ಅಧಿಕಾಂಶ ಪ್ರೊಟೀನ್ ಇರುವ ವಿವಿಧ ರೀತಿಯ ತಿನಿಸುಗಳೂ ಸಹ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಪ್ರೊಟೀನ್ ಹೆಸರನ್ನು ಹೇಳಿಕೊಂಡು ನೂರಾರು ಕಂಪೆನಿಗಳು ತಮ್ಮ ಫುಡ್ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ನೆನಪಿಡಿ. ಮಾರುಕಟ್ಟೆಯಲ್ಲಿ ಸಿಗುವ ಪ್ರೊಟೀನ್ ಯುಕ್ತ ಆಹಾರ ವಸ್ತುಗಳಲ್ಲಿ ಕೇವಲ ಪ್ರೊಟೀನ್ ಒಂದೇ ಇರುವುದಿಲ್ಲ ಹಾಗೂ ಪ್ರೊಟೀನ್ ಅಂಶ ಅಧಿಕವಾಗಿಯೂ ಇರುವುದಿಲ್ಲ, ಜತೆಗೆ, ಕ್ಯಾಲರಿಯೂ ದುಪ್ಪಟ್ಟು ಪ್ರಮಾಣದಲ್ಲಿರುತ್ತದೆ. ಹೆಚ್ಚು ಪ್ರೊಟೀನ್ ಯುಕ್ತ ಆಹಾರವೆಂದು ನಾವು ಭಾವಿಸಿರುವ ಕೆಲವು ವಸ್ತುಗಳು ಯಾವುವು ಎಂದು ಅರಿತಿಟ್ಟುಕೊಳ್ಳುವುದು ಉತ್ತಮ.
• ಪ್ರೊಟೀನ್ ಸ್ನ್ಯಾಕ್ಸ್ (Protein Snacks)
ಮಾರುಕಟ್ಟೆಯಲ್ಲಿಂದು ಸಾಕಷ್ಟು ವಿಧದ ಪ್ರೊಟೀನ್ ಸ್ನ್ಯಾಕ್ಸ್ ಲಭ್ಯ ಇವೆ. ಕುಕ್ಕೀಸ್ (Cookies), ಪ್ರೊಟೀನ್ ಬಾರ್ (Bar), ಚಿಪ್ಸ್ (Chips) ಗಳ ಹೆಸರಿನಲ್ಲಿರುವ ಇವುಗಳಲ್ಲಿ ಪ್ರೊಟೀನ್ ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಅದಕ್ಕಿಂತ ಹೆಚ್ಚಾಗಿ ಕ್ಯಾಲರಿಯೇ (Calorie) ಇರುತ್ತದೆ. ಇಂತಹ ಅನೇಕ ಖಾದ್ಯ ಪದಾರ್ಥಗಳ ಒಂದು ಪ್ಯಾಕೆಟ್ ನಲ್ಲಿ 4 ಗ್ರಾಮ್ ಪ್ರೊಟೀನ್ ಇದ್ದರೆ, 132 ಗ್ರಾಮ್ ಕ್ಯಾಲರಿ ಇರುತ್ತದೆ. ಇದಕ್ಕಿಂತ ಉತ್ತಮ ಎಂದರೆ, ಎರಡು ತುಣುಕು ಬೆಣ್ಣೆ (Cheese) ಸೇವನೆ ಮಾಡುವುದು. ಒಂದು ಚಮಚ ಬೆಣ್ಣೆಯಲ್ಲಿ ಇದಕ್ಕಿಂತ ಹೆಚ್ಚು ಪ್ರೊಟೀನ್ ಸಿಗುತ್ತದೆ.
• ಪ್ರೊಟೀನ್ ಬ್ರೆಡ್ (Bread)
ಅಧಿಕ ಪ್ರೊಟೀನ್ ಹೊಂದಿದೆ ಎಂದು ಬೋರ್ಡ್ ತಗುಲಿಸಿಕೊಂಡಿರುವ ಬ್ರೆಡ್ ಗಳಲ್ಲೂ ಪ್ರೊಟೀನ್ ಹೆಚ್ಚು ಪ್ರಮಾಣದಲ್ಲಿ ಇರುವುದಿಲ್ಲ. ನಿಮಗೆ ಯಾವುದಾದರೂ ಖಾದ್ಯ ಪದಾರ್ಥಗಳಲ್ಲಿ 160 ಗ್ರಾಮ್ ಕ್ಯಾಲರಿ ಜತೆಗೆ 8 ಗ್ರಾಮ್ ಪ್ರೊಟೀನ್ ಸಿಗುತ್ತದೆ ಎಂದಾದರೆ ಇದು ಉತ್ತಮ ಪ್ರಮಾಣವೇ ಸರಿ. ಏಕೆಂದರೆ, ಪ್ರೊಟೀನ್ ಬ್ರೆಡ್ ಗಳಲ್ಲಿ 230 ಗ್ರಾಮ್ ಕ್ಯಾಲರಿ ಹಾಗೂ 9 ಗ್ರಾಮ್ ಪ್ರೊಟೀನ್ ಇರುತ್ತದೆ. ಇವುಗಳ ಸೇವನೆಯಿಂದ ಪ್ರೊಟೀನ್ ಜತೆಗೆ ಅಧಿಕ ಕ್ಯಾಲರಿಯನ್ನೂ ಸೇವನೆ ಮಾಡುತ್ತೀರಿ.
ಮಾರ್ಕೆಟ್ಟಲ್ಲಿ ಸಿಗೋ ಪ್ರೋಟೀನ್ ಪೌಡರ್ ಬಿಡಿ, ಮನೆಯಲ್ಲೇ ಮಾಡ್ಬಹುದು ನೋಡಿ!
• ಶೇಂಗಾ ಬೆಣ್ಣೆ (Peanut Butter)
ಇತ್ತೀಚೆಗೆ ಪೀನಟ್ ಬಟರ್ ಕೂಡ ತೂಕ ಇಳಿಸಿಕೊಳ್ಳುವವರ ನಡುವೆ ಪ್ರೊಟೀನ್ ಯುಕ್ತ ಆಹಾರವಾಗಿ ಜನಪ್ರಿಯವಾಗಿದೆ. ಆದರೆ, ತಜ್ಞರ ಪ್ರಕಾರ ಇದು ಸಹ ಸಾಮಾನ್ಯ ಮಟ್ಟದಲ್ಲೇ (Common Level) ಪ್ರೊಟೀನ್ ಹೊಂದಿರುತ್ತದೆ. ಕಡಲೆಕಾಯಿ ಬೆಣ್ಣೆ ದೇಹಕ್ಕೆ ಉತ್ತಮ ಕೊಬ್ಬು (Fat), ಶಕ್ತಿ (Energy) ಹಾಗೂ ಪ್ರೊಟೀನ್ ನೀಡುತ್ತದೆ ಎನ್ನುವುದು ನಿಜ. ಆದರೆ, ನಿಮ್ಮ ನಿರೀಕ್ಷೆಯಷ್ಟೇನೂ ಅಲ್ಲ. ಇದರಲ್ಲೂ ಕ್ಯಾಲರಿ ಹೆಚ್ಚು, ಪ್ರೊಟೀನ್ ಅಂಶ ಕಡಿಮೆ. ತಜ್ಞರ ಪ್ರಕಾರ, ಒಂದು ಚಮಚ ಅಥವಾ 15 ಗ್ರಾಮ್ ಪೀನಟ್ ಬಟರ್ ನಲ್ಲಿ 4 ಗ್ರಾಮ್ ಪ್ರೊಟೀನ್ ಹಾಗೂ 95 ಗ್ರಾಮ್ ಕ್ಯಾಲರಿ ಇರುತ್ತದೆ.
Food And Mood: ತಿನ್ನೋ ಆಹಾರಕ್ಕೂ ಮನಸ್ಥಿತಿಗೂ ಸಂಬಂಧವಿದ್ಯಾ ?
• ಬೀಜಗಳು (Nuts)
ಹೆಚ್ಚು ಪ್ರೊಟೀನ್ ಗಾಗಿ ವಿವಿಧ ಬೀಜಗಳನ್ನು ಸೇವನೆ ಮಾಡುವುದು ಸಾಮಾನ್ಯ. ಬೀಜಗಳು ಆರೋಗ್ಯಕ್ಕೆ ಅತ್ಯುತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನೀವು ಅಂದುಕೊಂಡಂತೆ ಇವುಗಳಲ್ಲಿ ಭಾರೀ ಅಧಿಕ ಪ್ರಮಾಣದ (High Level) ಪ್ರೊಟೀನ್ ಇರುವುದಿಲ್ಲ. ಉದಾಹರಣೆಗೆ, 100 ಗ್ರಾಮ್ ಕಡಲೆಕಾಯಿ ಸೇವನೆ ಮಾಡಿದರೆ 30 ಗ್ರಾಮ್ ಪ್ರೊಟೀನ್ ಸಿಗುತ್ತದೆ. ಆದರೆ, ಇದೇ ಸಮಯದಲ್ಲಿ 620 ಗ್ರಾಮ್ ಕ್ಯಾಲರಿ ಕೂಡ ದೇಹ ಸೇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.