ತಲೆ ನೋವಿದ್ಯಾ? ಏನೇನೋ ಔಷಧಿ ಮಾಡೋ ಮುನ್ನು ಈ ಮನೆ ಮದ್ದು ಟ್ರೈ ಮಾಡಿ

By Suvarna News  |  First Published Oct 21, 2022, 4:12 PM IST

ಕಾಡಿಸುವ ತಲೆನೋವಿಗೆ ಮನೆಯಲ್ಲೇ ಕೆಲವು ಚಿಕಿತ್ಸೆ ಮಾಡಿಕೊಳ್ಳಿ. ಮನೆಯ ಮದ್ದು ಸೇರಿದಂತೆ ಮನೆಯಲ್ಲೇ ಕೆಲವು ಚಿಕ್ಕಪುಟ್ಟ ವಿಧಾನಗಳ ಮೂಲಕ ತಲೆನೋವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಈ ಕೆಲವು ವಿಧಾನಗಳು ತಲೆನೋವಿಗೆ ತಕ್ಷಣವೇ ಪರಿಹಾರ ನೀಡಬಲ್ಲವು.
 


ಸುಸ್ತು, ಬಳಲಿಕೆ, ಒತ್ತಡ ಇಂದಿನ ದಿನಗಳಲ್ಲಿ ಸಾಮಾನ್ಯ. ಇವುಗಳಿಂದ ಇದ್ದಕ್ಕಿದ್ದ ಹಾಗೆ ಕೆಲವೊಮ್ಮೆ ತಲೆನೋವು ಕಾಡಿಸುತ್ತದೆ. ತಲೆನೋವಿಗೆ ಪರಿಣಾಮಕಾರಿ ಔಷಧಗಳನ್ನು ತೆಗೆದುಕೊಳ್ಳುವುದು ಇದ್ದೇ ಇದೆ. ಆದರೆ, ಸಾಕಷ್ಟು ಬಾರಿ ಸ್ವಲ್ಪ ತಾಳ್ಮೆಯಿಂದ ವರ್ತಿಸಿದರೆ ಮನೆಯಲ್ಲೆ ಕೆಲವು ಸಿಂಪಲ್ ಚಿಕಿತ್ಸೆಗಳನ್ನು ಮಾಡಿಕೊಳ್ಳುವ ಮೂಲಕ ತಲೆನೋವನ್ನು ದೂರ ಮಾಡಿಕೊಳ್ಳಬಹುದು. ಒತ್ತಡ, ಡಿಹೈಡ್ರೇಷನ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಅನ್ನು ನಿರಂತರವಾಗಿ ಏಳೆಂಟು ಗಂಟೆಗಳ ಕಾಲ ನಿರೀಕ್ಷಿಸುತ್ತಿದ್ದರೆ ಉಂಟಾಗುವ ಬಳಲಿಕೆಯಿಂದ ತಲೆನೋವು ಉಂಟಾದ ಸಮಯದಲ್ಲಿ ಮನೆಯ ಮದ್ದುಗಳೇ ಉತ್ತಮ ಪರಿಹಾರ ನೀಡುತ್ತವೆ. ತಲೆನೋವಿಗೆ ನೋವು ಶಮನ ಮಾತ್ರೆಗಳನ್ನು ತೆಗೆದುಕೊಳ್ಳುವುದು ಆರೋಗ್ಯದ ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾದೀತು. ಹೀಗಾಗಿ, ಸಾಧ್ಯವಾದಷ್ಟು ಮನೆಯಲ್ಲೇ ಮಾಡಿಕೊಳ್ಳಬಹುದಾದ ಚಿಕ್ಕಪುಟ್ಟ ಚಿಕಿತ್ಸಾ ವಿಧಾನಗಳ ಮೊರೆ ಹೋಗುವುದು ಉತ್ತಮ. ಕೆಲವು ವಿಧಾನಗಳ ಮೂಲಕ ತಲೆನೋವನ್ನು ತಕ್ಷಣ ದೂರ ಮಾಡಿಕೊಳ್ಳಬಹುದು. ದೀರ್ಘಕಾಲದ ತಲೆನೋವಿಗೆ ಬೇರೆಯದೇ ಪರಿಹಾರ ಕ್ರಮಗಳು ಬೇಕಾಗಬಹುದು. ಆದರೆ, ದಿನನಿತ್ಯದ ಒತ್ತಡದಿಂದ ಆಗಾಗ ಕಾಡುವ ತಲೆನೋವಿಗೆ ಇವು ಅತ್ಯುತ್ತಮ ಪರಿಹಾರ ನೀಡುವುದರಲ್ಲಿ ಅನುಮಾನವಿಲ್ಲ. ಅಂತಹ ವಿಧಾನಗಳನ್ನು ಅರಿತುಕೊಳ್ಳಿ. 

•    ಮಸಾಜ್ ಥೆರಪಿ (Massage Therapy)
ನಿಮಗೆ ಗೊತ್ತೇ ಇದೆ. ಮಸಾಜ್ ಮಾಡಿಕೊಳ್ಳುವುದು ಯಾವುದೇ ನೋವಿನ (Pain) ಶಮನಕ್ಕಾದರೂ ಭಾರೀ ಹಿತ (Comfort) ನೀಡುತ್ತದೆ. ಕೆಲವು ಬಾರಿ ಮಾಂಸಖಂಡಗಳು (Muscles) ಬಿಗಿತಕ್ಕೆ (Tightness) ಒಳಗಾಗುತ್ತವೆ. ದಿನನಿತ್ಯದ ಕಾರ್ಯಶೈಲಿ, ಒತ್ತಡದಿಂದ (Stress) ಮಾಂಸಖಂಡಗಳಲ್ಲಿ ಬಿಗಿತವಾದಾಗ ಮಸಾಜ್ ಮಾಡುವುದು ಅತ್ಯುತ್ತಮ ವಿಧಾನ. ಒತ್ತಡ (Tension) ಮತ್ತು ವಿವಿಧ ನಕಾರಾತ್ಮಕ ಭಾವಗಳಿಂದಾಗಿ ಸಾಮಾನ್ಯವಾಗಿ ನಮ್ಮ ದೇಹದ ಮೇಲ್ಭಾಗದಲ್ಲಿ ಒತ್ತಡವುಂಟಾಗುತ್ತದೆ. ಅಥವಾ ಕುಳಿತುಕೊಳ್ಳುವ ಭಂಗಿಯಲ್ಲೂ ಸಮಸ್ಯೆ ಇದ್ದಿರಬಹುದು. ಅಂತಹ ಸಮಯದಲ್ಲಿ ಮಾಂಸಖಂಡಗಳ ಮಸಾಜ್ ಮಾಡಿ ಸಡಿಲಗೊಳಿಸುವುದರಿಂದ ಭಾರೀ ಅನುಕೂಲವಾಗುತ್ತದೆ. ನೋವಿನ ನಿರ್ದಿಷ್ಟ ಜಾಗವನ್ನು ಒತ್ತಿದರೆ ತಕ್ಷಣ ಪರಿಹಾರ ಸಿಗುತ್ತದೆ.

Latest Videos

undefined

Home Remedies: ಬೆಳಿಗ್ಗೆ ಕಾಡುವ ತಲೆನೋವನ್ನು ಹೀಗೆ ಗಾಯಬ್ ಮಾಡಿ

•    ಐಸ್ ಪ್ಯಾಕ್ (Ice Pack)
ಒಂದೊಮ್ಮೆ ನಿಮಗೆ ತಲೆ (Head) ಅಥವಾ ಹಣೆಯ (Forehead) ಭಾಗದಲ್ಲಿ ನೋವಿದ್ದರೆ ಐಸ್ ಪ್ಯಾಕ್ ಇಟ್ಟುಕೊಳ್ಳುವುದು ಉತ್ತಮ. ತಕ್ಷಣ ನೋವನ್ನು ನಿವಾರಣೆ ಮಾಡುತ್ತದೆ. ಐಸ್ ಪ್ಯಾಕ್ ರಕ್ತದ ಹರಿವನ್ನು ಉತ್ತಮಗೊಳಿಸುವುದರಿಂದ ನೋವು ಮಾಯವಾಗುತ್ತದೆ. ಒಂದೊಮ್ಮೆ ಐಸ್ ಪ್ಯಾಕ್ ಇಲ್ಲವಾದರೆ ತಣ್ಣಗಿನ ನೀರಿನಲ್ಲಿ (Cold Water) ಹತ್ತಿ ಬಟ್ಟೆಯನ್ನು ಅದ್ದಿ ನೋವಿನ ಜಾಗದಲ್ಲಿ ಇಟ್ಟುಕೊಳ್ಳಬಹುದು.

•    ಲ್ಯಾವೆಂಡರ್ ತೈಲ (Lavender Oil)
ತಲೆನೋವು ಹಾಗೂ ಮಾಂಸಖಂಡಗಳ ನೋವಿಗೆ ಲ್ಯಾವೆಂಡರ್ ತೈಲ ಉತ್ತಮ. ಇದರಿಂದ ಮನಸ್ಸು ಶಾಂತವಾಗಿ (Calm) ಹಿತವಾದ ಭಾವನೆ ಮೂಡುತ್ತದೆ. ಇದನ್ನು ತೆಂಗಿನ ಎಣ್ಣೆಯೊಂದಿಗೆ ಸೇರಿಸಿ ಬಳಕೆ ಮಾಡಬಹುದು. ನೋವಿರುವ ಜಾಗದಲ್ಲಿ ಹಚ್ಚಿ ನಿಧಾನಕ್ಕೆ ಮಸಾಜ್ ಮಾಡುವುದರಿಂದ ತಕ್ಷಣ ಪರಿಹಾರ ಲಭ್ಯ. ಹಾಗೂ ಇದನ್ನು ಉಸಿರಿನಲ್ಲಿ ಎಳೆದುಕೊಳ್ಳಬೇಕು. 

Gastric Headache: ಗ್ಯಾಸ್ಟ್ರಿಕ್‌ ತಲೆನೋವೇ? ಶೀಘ್ರ ಪರಿಹಾರ ಇಲ್ಲಿದೆ

•    ಉಸಿರಾಟದ ವ್ಯಾಯಾಮ (Breathing Exercise)
ಯಾವುದೇ ರೀತಿಯ ತಲೆನೋವಿದ್ದರೂ ದೀರ್ಘ ಉಸಿರಾಟದ ವ್ಯಾಯಾಮಗಳು ಭಾರೀ ಫಲ ಕೊಡುತ್ತವೆ. ಅನುಲೋಮ-ವಿಲೋಮ ಪ್ರಾಣಾಯಾಮ ಹಿತ ನೀಡುತ್ತದೆ. ಪಿತ್ತ, ಒತ್ತಡ, ಡಿಹೈಡ್ರೇಷನ್ (Dehydration) ಯಾವುದೇ ಕಾರಣದಿಂದ ತಲೆನೋವು ಉಂಟಾಗಿದ್ದರೂ ಕಡಿಮೆ ಆಗುತ್ತದೆ. ಉಸಿರಾಟದ ವ್ಯಾಯಾಮಗಳಿಂದ ಮಾಂಸಖಂಡಗಳಲ್ಲಿ ಬಿಗಿತ ಕಡಿಮೆ ಆಗುತ್ತದೆ. ಇಡೀ ದೇಹಕ್ಕೆ ಚೈತನ್ಯ ದೊರೆಯುತ್ತದೆ. 

•    ಹೊಟ್ಟೆಯ (Stomach) ಕಡೆಗೆ ಗಮನವಿರಲಿ 
ಸಾಮಾನ್ಯವಾಗಿ ತಲೆನೋವಿಗೂ ಕರುಳಿಗೂ (Gut) ಸಂಬಂಧವಿದೆ. ಪಿತ್ತವಾದರೆ, ಆಹಾರ ಜೀರ್ಣವಾಗದೆ ಇದ್ದರೆ, ಕೆಲವು ಆಹಾರಗಳ ಸೇವನೆ ಮಾಡಿದಾಗ ತಲೆನೋವು ಉಂಟಾಗುತ್ತದೆ. ಈ ಬಗ್ಗೆ ಗಮನ ನೀಡಿ ಪರಿಹಾರ ಮಾಡಿಕೊಳ್ಳಬೇಕು. ಹಸಿಶುಂಠಿಯನ್ನು ಅಗಿಯುವುದರಿಂದ ಸಾಕಷ್ಟು ಸಮಸ್ಯೆ ಕಡಿಮೆ ಆಗುತ್ತದೆ. 
ಹಾಗೆಯೇ, ಬಿಸಿಬಿಸಿಯಾದ ನೀರು (Water), ಟೀ, ಕಾಫಿ ಅಥವಾ ಗ್ರೀನ್ ಟೀ (Green Tea) ಸೇವನೆ ಮಾಡುವುದರಿಂದಲೂ ಹಿತವೆನಿಸುತ್ತದೆ. ಆದರೆ, ಪಿತ್ತವಾಗಿದ್ದಾಗ ಟೀ, ಕಾಫಿ ಸೇವನೆ ಒಳ್ಳೆಯದಲ್ಲ. ಹರ್ಬಲ್ ಟೀ (Herbal Tea) ಪ್ರಯೋಜನಕಾರಿ. 

click me!