Festival Tips: ದೀಪಾವಳಿ ಅಂದ್ರೆ ಸಿಹಿ ಸಂಭ್ರಮ, ಡಯಟ್ ಮರೀಬೇಡಿ

By Suvarna News  |  First Published Oct 21, 2022, 4:03 PM IST

ಹಬ್ಬ ಹರಿದಿನಗಳ ಸಂದರ್ಭದಲ್ಲಿ ಡಯೆಟ್ ಬಗ್ಗೆ ಚಿಂತಿಸುವುದು ವ್ಯರ್ಥ. ಸಿಹಿ, ತುಪ್ಪ, Diet ಎಂದು ನೋಡುತ್ತಿದ್ದರೆ ಹಬ್ಬವನ್ನು ಆನಂದಿಸುವುದು, ಸಂಭ್ರಮಿಸುವುದಕ್ಕೆ ಆಗುವುದಿಲ್ಲ. ಹಬ್ಬ ಎಂದೊಡನೆ ಅದು ಸಿಹಿ ಇಲ್ಲದೆ ಅಪೂರ್ಣವಾಗಿರುತ್ತದೆ. ಸಿಹಿ ತಿಂದು ನಂತರ ಅದನ್ನು ಡಯೆಟ್ ಮೂಲಕ ಕಂಟ್ರೋಲ್ ಮಾಡಬಹುದು. ಈ ದೀಪಾವಳಿಯಲ್ಲಿ ಬಾಯಲ್ಲಿ ನೀರೂರಿಸುವ ಸಿಹಿಯನ್ನು ಮನೆಯಲ್ಲೇ ತಯಾರಿಸಿ ಹಬ್ಬಕ್ಕೆ ಇನ್ನಷ್ಟು ರಂಗು ತನ್ನಿ. ಈ ಬಗ್ಗೆ ಇಲ್ಲಿದೆ ಮಾಹಿತಿ.


ವರ್ಷದ ಕೊನೆಯ ಹಬ್ಬ ದೀಪಾವಳಿ. ಎಲ್ಲರೂ ಎದುರು ನೋಡುವ ಈ ಬೆಳಕಿನ ಹಬ್ಬದಲ್ಲಿ ಅನಗತ್ಯವಾದ ಕಿಲೋಗಳನ್ನು ಪಡೆಯುವ ಬಗ್ಗೆ ಚಿಂತಿಸುವವರು ಇದ್ದಾರೆ. ಈ ರೀತಿಯ ಚಿಂತೆಗಳು ಹಬ್ಬದ ಸಂಭ್ರಮವನ್ನು ಹಾಳುಮಾಡುತ್ತವೆ. ಅನಗತ್ಯ ಮತ್ತು ಕ್ಯಾಲೋರಿಗಳು ಎಂದಿಗೂ ಆರೋಗ್ಯಕ್ಕೆ ಉತ್ತಮವಲ್ಲ. ಮಿತವಾದ ಸೇವನೆಯ ಬಗ್ಗೆ ಆಯ್ಕೆ ಮಾಡಬೇಕು. ಸಾಮಾನ್ಯ ಉಪಹಾರವನ್ನು ತ್ಯಜಿಸಲು ಮತ್ತು ದೀಪಾವಳಿ ವಿಶೇಷ ತಿಂಡಿಗಳನ್ನು ತಿನ್ನಲು ಬಯಸುತ್ತಿದ್ದರೆ ಅದು ಅತಿರೇಕಕ್ಕೆ ಹೋಗುವುದನ್ನು ತಡೆಯಬೇಕು. ಎಲ್ಲವೂ ಮಿತವಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಅಂಗಡಿಯ ತಿಂಡಿಗಿAತ ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥಗಳು ಬಹಳ ಒಳ್ಳೆಯದು. 

ಈ ದೀಪಾವಳಿಯಲ್ಲಿ ಕೆಲವು ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ಪ್ರಯತ್ನಿಸುವ ಮೂಲಕ ಅನೇಕ Ready-made ತಿನ್ನಬಹುದಾದ ಪದಾರ್ಥಗಳಿಗಿಂತ ಉತ್ತಮ ರುಚಿಯನ್ನು ಕಂಡುಕೊಳ್ಳಬಹುದು. ಅಲ್ಲದೆ, ಹಬ್ಬದ ಆಹಾರವನ್ನು ಆನಂದಿಸುವ ಮೊದಲು ಮತ್ತು ನಂತರ ನೀವು ಏನು ಸೇವಿಸುತ್ತೀರಿ ಅಥವಾ ಮಾಡುತ್ತೀರಿ ಎಂಬುದೂ ಸಹ ಬಹಳಷ್ಟು ವ್ಯತ್ಯಾಸವನ್ನು ಉಂಟುಮಾಡಬಹುದು. ಹೆಚ್ಚು ನಡೆಯುವುದು, ಹೆಚ್ಚು ನಾರಿನಂಶವಿರುವ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ವ್ಯಾಯಾಮ ಮಾಡುವುದು ಮತ್ತು ಕ್ಯಾಲೋರಿ ಅಂಶದಲ್ಲಿ ಸ್ವಲ್ಪ ಹೆಚ್ಚಿರುವ ವಿಷಯವನ್ನು ಸಮತೋಲನಗೊಳಿಸಲು ಆಹಾರದಲ್ಲಿ ಕೆಲವು ಪರಿಣಾಮಕಾರಿ ಪ್ರೋಬಯಾಟಿಕ್‌ಗಳನ್ನು ಸೇರಿಸಿ.

Tap to resize

Latest Videos

ದೀಪಾವಳಿ, ಬೆಳಕಿನ ಹಬ್ಬ, ಒಟ್ಟಿಗೆ ಸೇರುವುದು, ಕುಟುಂಬದ ಬಾಂಧವ್ಯ ಮತ್ತು ಆಚರಣೆಗೆ ಮೆರಗು ಕೊಡುವ ಹಬ್ಬ. ಹಾಗಾದರೆ ದೀಪಾವಳಿ ಆಹಾರಕ್ರಮ ಹೇಗಿರಬೇಕು? ದೀಪಾವಳಿಯಂತಹ ಹಬ್ಬಗಳು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಹೃದಯವಾಗಿದೆ. ಆದ್ದರಿಂದ ಈ ಹಬ್ಬದ ಸಂದರ್ಭದಲ್ಲಿ ನಿರ್ಬಂಧಗಳನ್ನು ಅನುಸರಿಸಬಾರದು. ಆದರೆ ಮಿತವಾಗಿ ಮತ್ತು ಜಾಗರೂಕತೆಯಿಂದ ತಿನ್ನಬೇಕು. 

Diwali 2022: ಹಬ್ಬಕ್ಕೆ ಕಡಲೇಕಾಯಿ ಬರ್ಫಿ ಮಾಡಿ, ಗ್ಯಾಸ್ ಸಮಸ್ಯೆ ಕಾಡಲ್ಲ

ಹಬ್ಬದಲ್ಲಿ ಆಹಾರಕ್ರಮ ಹೀಗಿದ್ದರೆ ಒಳ್ಳೆಯದು.

1.ಉಪಹಾರ ಅಚ್ಚುಕಟ್ಟಾಗಿರಲಿ: ಬಾಲ್ಯದಿಂದಲೂ ಚಕ್ಕುಲಿ, ಚಿಡುವಾ, ಲಡ್ಡೂ ಮತ್ತು ವಿವಿಧ ಪ್ರಾದೇಶಿಕ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳAತಹ ಸಿದ್ಧತೆಗಳ ಪರಿಮಳವನ್ನು ಸವಿಯುತ್ತಿದ್ದೆವು. ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಉಪಹಾರದ ಜೊತೆಗೆ ನೀವು ಈ ತಿಂಡಿಗಳನ್ನು ಚೆನ್ನಾಗಿ ಆನಂದಿಸಬಹುದು. ಉದಾಹರಣೆಗೆ, ಚಕ್ಕುಲಿ ಅಥವಾ ಚಿಡುವಾವನ್ನು ಮೂಂಗ್ ದಾಲ್ ಚಿಲ್ಲಾ ಅಥವಾ ಪನೀರ್ ಭುರ್ಜಿಯೊಂದಿಗೆ ಸಂಯೋಜಿಸಿ. ಪರ್ಯಾಯವಾಗಿ, ನೀವು ಒಂದು ಲೋಟ ಹಾಲಿನೊಂದಿಗೆ ಲಡ್ಡೂವನ್ನು ಹೊಂದಬಹುದು. ಪೋಹ ಮತ್ತು ಚಕ್ಕುಲಿ ಅಥವಾ ನಮ್ಕೀನ್ ದೀಪಾವಳಿಯ ಸಮಯದಲ್ಲಿ ಸಾಮಾನ್ಯ ಉಪಹಾರ ಸಂಯೋಜನೆಯಾಗಿದೆ. ಈ ಸಮಯದಲ್ಲಿ, ಪ್ರೋಟೀನ್‌ನ ಉತ್ತಮ ಮೂಲವಾಗಿರುವ ಬಾದಾಮಿಯಂತಹ ಕೆಲವು ಬೀಜಗಳೊಂದಿಗೆ ಇದನ್ನು ಸಂಯೋಜಿಸಬಹುದು.

2. ಭಕ್ಷö್ಯಗಳಿಗೆ ಸಮಯ ಕೊಡಿ: ಹಬ್ಬದಲ್ಲಿ ಭಕ್ಷ್ಯಗಳನ್ನು ಬೆಳಗಿನ ಉಪಾಹಾರ(Breakfast) ಮತ್ತು ಊಟದ ನಡುವೆ ಮಧ್ಯ ಊಟದ ಲಘುವಾಗಿಯೂ ಸಹ ಸವಿಯಬಹುದು. ಇವುಗಳನ್ನು Mid Meal Snacksನಂತೆ ತಿನ್ನುವುದು ಭಾಗದ ನಿಯಂತ್ರಣವನ್ನು ಖಚಿತಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಹೆಚ್ಚು ಹೊಟ್ಟೆ ಹಸಿವಾಗಿರುವುದಿಲ್ಲ. ಪರ್ಯಾಯವಾಗಿ, 4 ಬಾರಿ ಸಕ್ಕರೆ ಇಲ್ಲದ ಚಹಾವನ್ನು ಕೆಲವು ಬೀಜಗಳೊಂದಿಗೆ ತಿಂಡಿಗಳನ್ನು ಸಂಯೋಜಿಸಿ ಸವಿಯಬಹುದು..

3. ಊಟ ಅಚ್ಚುಕಟ್ಟಾಗಿರಲಿ: ಸಾಮಾನ್ಯವಾಗಿ ದೀಪಾವಳಿಯ ಸಮಯದಲ್ಲಿ ಮಧ್ಯಾಹ್ನದ ಊಟ(Lunch) ಅಥವಾ ರಾತ್ರಿಯ ಊಟಗಳು(Dinner) ಕುಟುಂಬ ಮತ್ತು ಸ್ನೇಹಿತರೊಂದಿಗೆ ಇರುತ್ತದೆ. ಬಡಿಸಿದ ಕೆಲವು ಭಕ್ಷ್ಯಗಳು ಕ್ಯಾಲೋರಿಗಳೊಂದಿಗೆ ಲೋಡ್ ಆಗಿರಬಹುದು. ಅಂತಹ ಸಮಯದಲ್ಲಿ, ಊಟವನ್ನು ಸಲಾಡ್‌ನ(Salad) ಉತ್ತಮ ಭಾಗದೊಂದಿಗೆ ಪ್ರಾರಂಭಿಸಿ. ನಂತರ ರೊಟ್ಟಿ ಅಥವಾ ಅನ್ನದೊಂದಿಗೆ ದಾಲ್‌ಗಳಂತಹ ಪ್ರೋಟೀನ್ ಭಾಗವನ್ನು ತೆಗೆದುಕೊಳ್ಳಿ. ಪ್ರೋಬಯಾಟಿಕ್‌ಗಳ(Probiotics) ಮೂಲವಾಗಿರುವ ಒಂದು ಲೋಟ ಮಜ್ಜಿಗೆಯೊಂದಿಗೆ ಯಾವಾಗಲೂ ಊಟವನ್ನು ಕಟ್ಟಿಕೊಳ್ಳಿ.

4. ಹೆಚ್ಚು ನೀರು ಕುಡಿಯಿರಿ: ದೀಪಾವಳಿ ಪಾರ್ಟಿ, ತಡರಾತ್ರಿ, ಕೊಬ್ಬು ಮತ್ತು ಸಕ್ಕರೆಗಳಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುವುದರಿಂದ ಆಮ್ಲೀಯತೆ ಮತ್ತು ತಲೆನೋವಿಗೆ ನಿರ್ಜಲೀಕರಣ(Dehydrate) ಕಾರಣವಾಗಬಹುದು. ಹಾಗಾಗಿ ಕೈಯಲ್ಲಿ ನೀರಿನ ಬಾಟಲಿ ಇರಿಸಿಕೊಳ್ಳಿ ಮತ್ತು ದಿನವಿಡೀ ನೀರನ್ನು ಕುಡಿಯುತ್ತಿರಿ. ಹಬ್ಬದ ಸಮಯದಲ್ಲಿ ದೇಹ ದಣಿದಿರುತ್ತದೆ ಹಾಗಾಗಿ ಸುಮಾರು 8ರಿAದ 10 ಗ್ಲಾಸ್ ನೀರು ಕುಡಿಯಲೇಬೇಕು ಎಂಬುದು ನೆನಪಿಟ್ಟುಕೊಳ್ಳಿ. 

ಹಬ್ಬದೂಟದ ನಂತರ ಹೊಟ್ಟೆ ಭಾರ ಅನಿಸ್ತಿದ್ಯಾ ? ತಕ್ಷಣ ಪರಿಹಾರಕ್ಕಾಗಿ ಇದನ್ನು ತಿನ್ನಿ

5.ಕರುಳಿನ(Liver) ಆರೋಗ್ಯ ನೋಡಿಕೊಳ್ಳಿ: ಸಾಮಾನ್ಯ ದಿನಕ್ಕಿಂತ ಹಬ್ಬದ ಸಮಯದಲ್ಲಿ ದಿನಚರಿಯು ಸಂಪೂರ್ಣವಾಗಿ ಬದಲಾಗಿರುತ್ತದೆ. ಇದರ ಜೊತೆಗೆ ದಿನವೂ ತಿನ್ನದೆ ಇರುವ ಆಹಾರಗಳನ್ನು ಈ ಸಮಯದಲ್ಲಿ ಸೇವಿಸುತ್ತೇವೆ. ಹಾಗಾಗಿ ಸಲಾಡ್ ಮತ್ತು ಹಣ್ಣುಗಳಂತಹ ನಾರಿನಂಶವಿರುವ ಆಹಾರಗಳು, ದಿನಕ್ಕೆ ಕನಿಷ್ಠ 5 ಬಾರಿಯಾದರೂ ಸೇವಿಸಬೇಕು. ಇದರೊಂದಿಗೆ 1 ಗ್ಲಾಸ್ ಮಜ್ಜಿಗೆಯನ್ನು ಊಟದ ಜೊತೆಗೆ ಅಥವಾ ನಡುವೆ ಸೇವಿಸುವುದು ಬಹಳ ಒಳ್ಳೆಯದು. ಇದು ಜೀರ್ಣಕ್ರಿಯೆಗೆ(Digestion) ಸಹಾಯ ಮಾಡುತ್ತದಲ್ಲದೆ, ಆಮ್ಲೀಯತೆಯನ್ನು ತಡೆಯಲು ಒಂದು ಲೋಟ ನೀರಿಗೆ ನಿಂಬೆ ರಸ, ಆಮ್ಲಾ ಜ್ಯೂಸ್ ಅಥವಾ ಆಪಲ್ ಸೈಡರ್ ವಿನೆಗರ್ ಹಾಕಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿ ದಿನವನ್ನು ಪ್ರಾರಂಭಿಸಿ. ಇದರಿಂದ ಆಮ್ಲೀಯತೆ(Gastric) ಸಮಸ್ಯೆ ಹಾಗೂ ಜೀರ್ಣಕ್ರಿತೆಗೆ ಹೆಚ್ಚು ಸಹಕಾರಿಯಾಗಿದೆ.

6.ತಿಂಡಿಗಳು ಸೀಮಿತವಾಗಿರಲಿ: ಮನೆಯಲ್ಲಿ ತಯಾರಿಸಿದ ತಿಂಡಿಗಳು ಹಬ್ಬಕ್ಕಷ್ಟೇ ಸೀಮಿತವಾಗಿರಲಿ. ಅವುಗಳನ್ನು ಹೆಚ್ಚು ಕಾಲ ತಳ್ಳಬೇಡಿ. ನಿಯಮಿತ ಆಹಾರದೊಂದಿಗೆ ಆರೋಗ್ಯ ಕಾಪಾಡಿಕೊಳ್ಳಿ. ಹಬ್ಬದ ನಂತರ ಎಂದಿನAತೆ ಆಹಾರ ಕ್ರಮ ಅನುಸರಿಸಲು ಸಹಾಯವಾಗುತ್ತದೆ.
 

click me!