ಸೊಳ್ಳೆ ಅಪಾಯಕಾರಿ. ಇದ್ರಿಂದ ನಾನಾ ರೋಗ ಹರಡುವ ಜೊತೆಗೆ ಜೀವ ಹೋಗುತ್ತದೆ. ವಿಚಿತ್ರವೆಂದ್ರೆ ಕೆಲವರ ಬಳಿ ಸೊಳ್ಳೆ ಸುಳಿಯೋದಿಲ್ಲ. ಮತ್ತೆ ಕೆಲವರನ್ನು ಸೊಳ್ಳೆ ಬಿಡೋದಿಲ್ಲ. ಒಬ್ಬರಿಗೇ ಸೊಳ್ಳೆ ಕಚ್ಚಲು ಕಾರಣವೇನು ಗೊತ್ತಾ?
ಒಂದ್ಕಡೆ ನಾಲ್ಕೈದು ಜನರ ಜೊತೆ ನಿಂತಿರ್ತೇವೆ, ಅಲ್ಲಿರೋರಿಗೆ ಯಾರಿಗೂ ಸೊಳ್ಳೆ ಕಚ್ಚೋದಿಲ್ಲ, ನಿಮಗೆ ಮಾತ್ರ ಒಂದಾದ್ಮೇಲೆ ಒಂದ್ಕಡೆ ಸೊಳ್ಳೆ ಕಚ್ಚುತ್ತಿರುತ್ತದೆ. ಸಿಕ್ಕಾಪಟ್ಟೆ ಸೊಳ್ಳೆ ಇಲ್ಲಿ ಅಂತಾ ನೀವು ಹೇಳಿದ್ರೆ ಅವರು ನಮಗೊಂದು ಕಚ್ಚಿಲ್ವಲ್ಲ ಅಂತಿರುತ್ತಾರೆ. ಈ ಅನುಭವ ಅನೇಕರಿಗೆ, ಅನೇಕ ಬಾರಿ ಆಗಿರುತ್ತದೆ. ಸೊಳ್ಳೆ ನನಗೊಬ್ಬನಿಗೆ ಕಚ್ಚೋದು ಯಾಕೆ ಎಂಬ ಪ್ರಶ್ನೆ ನಮ್ಮನ್ನು ಕಾಡೋದು ಸಹಜ ಕೂಡ. ಈ ಬಗ್ಗೆ ಸಂಶೋಧಕರು ಸಾಕಷ್ಟು ಬೆವರಿಳಿಸಿದ್ದಾರೆ. ಅನೇಕ ವರ್ಷಗಳ ಕಾಲ ಸೊಳ್ಳೆಯ ಬಗ್ಗೆ ಅಧ್ಯಯನ ನಡೆಸಿದ್ದಾರೆ ಕೊನೆಗೂ ಸಂಶೋಧಕರಿಗೆ ಸೊಳ್ಳೆ ಒಬ್ಬರಿಗೇ ಹೆಚ್ಚು ಕಚ್ಚಲು ಕಾರಣವೇನು ಎಂಬುದು ಗೊತ್ತಾಗಿದೆ. ನಾವಿಂದು ಸೊಳ್ಳೆ ನಿಮಗೊಂದೇ ಕಚ್ಚುತ್ತಿದೆ ಎಂದಾದ್ರೆ ನಿಮ್ಮಲ್ಲಿ ಏನು ವಿಶೇಷವಿದೆ ಎಂಬುದನ್ನು ಹೇಳ್ತೇವೆ.
ನಿಮಗೆ ಆಕರ್ಷಿತವಾಗುತ್ತೆ ಸೊಳ್ಳೆ (Mosquito) ? : ವ್ಯಕ್ತಿಗಳು ಪರಸ್ಪರ ಆರ್ಷಿತರಾಗುವ ಸಂಗತಿ ನಿಮಗೆ ಗೊತ್ತು. ಮನುಷ್ಯರಂತೆ ಸೊಳ್ಳೆ ಕೂಡ ಮನುಷ್ಯನಿಗೆ ಆಕರ್ಷಿತವಾಗುತ್ತದೆ. ಮನುಷ್ಯದ ದೇಹದ ವಾಸನೆ ಇದಕ್ಕೆ ಮುಖ್ಯ ಕಾರಣ. ಹಸಿವಾದ ಸೊಳ್ಳೆಗೆ ನಿಮ್ಮ ದೇಹದಿಂದ ಒಡೆದ ಕಾಲುಗಳಿಂದ ಬರುವಂತಹ ವಾಸನೆ ಬರಲು ಶುರುವಾಗುತ್ತದೆ. ಆಗ ಅದು ನಿಮ್ಮ ಬಳಿ ಬರುತ್ತದೆ. ನೀವು ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ ಅದು ನಿಮ್ಮನ್ನು ಬಿಡೋದಿಲ್ಲ.
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಆಹಾರದ ರುಚಿ ಹೆಚ್ಚಿಸೋದು ಮಾತ್ರವಲ್ಲ, ಆರೋಗ್ಯಾನೂ ಕಾಪಾಡುತ್ತೆ
ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ಮಾಡುವ ಪ್ರಯತ್ನ ವ್ಯರ್ಥ : ದೇಹದ ವಾಸನೆಗೆ ಸೊಳ್ಳೆ ಆಕರ್ಷಿತವಾಗ್ತಿದೆ ಎಂದಾದ್ರೆ ನಾವು ಡಿಯೋ (Deo) ಅಥವಾ ಸೆಂಟ್ ಹಾಕಿಕೊಳ್ತೇವೆ ಅಂತಾ ನೀವು ಹೇಳಬಹುದು. ಆದ್ರೆ ನಿಮ್ಮ ಡಿಯೋ ಅಥವಾ ಸೆಂಟ್ ಯಾವುದೇ ಪರಿಣಾಮ ಬೀರುವುದಿಲ್ಲ. ಸೊಳ್ಳೆಗಳಿಗೂ ದೇಹದ ವಾಸನೆಗೂ ವಿಶೇಷ ಸಂಬಂಧವಿದೆ. ಮೂರು ವರ್ಷಗಳ ಕಾಲ ನಡೆದ ಸಂಶೋಧನೆಯ ಪ್ರಕಾರ, ಡಿಯೋ ಅಥವಾ ಪರ್ಫ್ಯೂಮ್ ಹಾಕಿಕೊಂಡ್ರೆ ಅಥವಾ ಶಾಂಪೂ (Shampoo) ಬದಲಾಯಿಸಿದ್ರೆ ಸೊಳ್ಳೆ ಆಕರ್ಷಣೆ ತಪ್ಪಿಸಲು ಸಾಧ್ಯವಿಲ್ಲ. ನಿಮ್ಮ ದೇಹದ ವಾಸನೆ ನೀವು ಏನೇ ಮಾಡಿದ್ರೂ ಬದಲಾಗುವುದಿಲ್ಲ. ನಿಮ್ಮ ಬೆವರಿನ ವಾಸನೆ ಹಾಗೂ ನೀವು ಬೆಳಿಗ್ಗೆ ಏನು ಆಹಾರ ಸೇವನೆ ಮಾಡಿದ್ದೀರಿ ಎನ್ನುವುದು ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ನಿಮ್ಮ ದೇಹದಿಂದ ಬರುವ ವಾಸನೆ ಒಮ್ಮೆ ಸೊಳ್ಳೆಗೆ ಇಷ್ಟವಾದ್ರೆ ಮುಗೀತು. ಸೊಳ್ಳೆಗಳಿಂದ ನೀವು ಏನೇ ಮಾಡಿದ್ರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೊಳ್ಳೆಯ ನೆಚ್ಚಿನ ಆಹಾರ ನೀವಾಗಿರೋದು ನಿಶ್ಚಿತ.
ಸೊಳ್ಳೆ ಹೆಚ್ಚು ಆಕರ್ಷಿತವಾಗೋದು ಯಾವಾಗ ? : ಸಂಶೋಧಕರು ಸೊಳ್ಳೆ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ. ಇನ್ನೂ ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಸದ್ಯದ ವರದಿ ಪ್ರಕಾರ, ಮಹಿಳೆಯರು ಗರ್ಭಿಣಿಯಾಗಿದ್ದಾಗ ಅಥವಾ ಜನರು ಬಿಯರ್ ಕುಡಿಯುವಾಗ ಸೊಳ್ಳೆಗಳು ಹೆಚ್ಚು ಆಕರ್ಷಕವಾಗಿವೆ ಎಂದು ತಜ್ಞರು ಕಂಡುಕೊಂಡಿದ್ದಾರೆ.
ಕೋವಿಡ್ ಸೋಂಕಿನ ನಂತ್ರ ಹೆಚ್ತಿದೆ ಸರ್ವಿಕೋಜೆನಿಕ್ ತಲೆನೋವು, ನಿಮ್ಮನ್ನೂ ಕಾಡ್ತಿದ್ಯಾ ?
ಸೊಳ್ಳೆ ಆಕರ್ಷಣೆಗೆ ಇದೂ ಒಂದು ಕಾರಣ : ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಕಾರ್ಬಾಕ್ಸಿಲಿಕ್ ಆಮ್ಲಗಳ (Carboxylic Acids) ವಾಸನೆ ಹೆಚ್ಚಿರುವ ವ್ಯಕ್ತಿಯನ್ನು ಸೊಳ್ಳೆ ಆಕರ್ಷಿಸುತ್ತದೆ. ಈಡಿಸ್ ಈಜಿಪ್ಟಿ (Aedes aegypti) ಜಾತಿಯ ಸೊಳ್ಳೆಗಳು ಉಳಿದ ಜನರಿಗೆ ಹೋಲಿಸಿದ್ರೆ ಕಾರ್ಬಾಕ್ಸಿಲಿಕ್ ಆಮ್ಲದ ವಾಸನೆ ಹೊಂದಿರುವ ಜನರನ್ನು 100 ಪಟ್ಟು ಹೆಚ್ಚು ಆಕರ್ಷಿತವಾಗುತ್ತವೆ. ಈ ಹೆಣ್ಣು ಸೊಳ್ಳೆಗಳು ತುಂಬಾ ಅಪಾಯಕಾರಿ ಎಂದು ತಜ್ಞರು ಹೇಳಿದ್ದಾರೆ. ಈ ಸೊಳ್ಳೆ ಡೆಂಗ್ಯೂ, ಚಿಕೂನ್‌ಗುನ್ಯಾ, ಹಳದಿ ಜ್ವರ ಮತ್ತು ಝಿಕಾ ಮುಂತಾದ ರೋಗಗಳನ್ನು ಹರಡಲು ಕಾರಣವಾಗುತ್ತವೆ. ಸೊಳ್ಳೆ ಹೆಚ್ಚು ಅಪಾಯಕಾರಿ. ಪ್ರತಿ ವರ್ಷ 700 ಮಿಲಿಯನ್ ಜನರು ಈ ಸೊಳ್ಳೆಯಿಂದ ಸಾವನ್ನಪ್ಪುತ್ತಾರೆ. ಸೊಳ್ಳೆಯಿಂದ ರಕ್ಷಣೆಪಡೆಯುವುದು ಬಹಳ ಮುಖ್ಯ.