ನೀವೂ ಪ್ರತಿ ದಿನ Nasal Spray ಬಳಸ್ತೀರಾ? ಆರೋಗ್ಯ ಹಾಳಾಗಬಹುದು, ಎಚ್ಚರ!

By Suvarna NewsFirst Published Jan 18, 2022, 4:19 PM IST
Highlights

ಬದಲಾಗುತ್ತಿರುವ ವಾತಾವರಣದಿಂದ ಅನಾರೋಗ್ಯ ಹೆಚ್ಚಾಗ್ತಿದೆ. ಅದ್ರಲ್ಲಿ ಮೂಗು ಕಟ್ಟುವ ಸಮಸ್ಯೆಯೂ ಒಂದು. ದಿಂಬಿನ ಮೇಲೆ ದಿಂಬಿಟ್ಟು ಮಲಗಿದ್ರೂ ಕೆಲವೊಮ್ಮೆ ನಿದ್ರೆ ಬರುವುದಿಲ್ಲ. ಆಗ ಕೈ ಹೋಗುವುದು ಮೂಗಿನ ಸ್ಪ್ರೇ ಮೇಲೆ. ಇದು ಒಂದೆರಡು ದಿನಕ್ಕಾದ್ರೆ ಓಕೆ. ವಾರಪೂರ್ತಿ ಇದನ್ನೇ ಬಳಸಿದ್ರೆ ಹೊಸ ಸಮಸ್ಯೆ ಹುಟ್ಟಿಕೊಳ್ತದೆ.
 

ಮೂಗು (Nose) ಕಟ್ಟುವುದು ಸಾಕಷ್ಟು ಕಿರಿಕಿರಿಯುಂಟು ಮಾಡುತ್ತದೆ. ಒಂದು ಮೂಗು ಕಟ್ಟಿದಲ್ಲಿ ಅಥವಾ ಎರಡೂ ಮೂಗು ಕಟ್ಟಿದಾಗ ಸರಾಗ ಉಸಿರಾಟ (Breathing) ಸಾಧ್ಯವಾಗುವುದಿಲ್ಲ. ಸಿಂಬಳ ಹೆಚ್ಚಾಗಿರುವ ಕಾರಣ ಮೂಗು ಕಟ್ಟಿಕೊಳ್ಳುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದ್ರೆ ಇದು ಉರಿಯೂತದ ರಕ್ತನಾಳ (Blood Vessel)ಗಳ ಪರಿಣಾಮವಾಗಿದೆ.

ಶೀತ, ಜ್ವರ, ಅಲರ್ಜಿಗಳು ಅಥವಾ ಸೈನಸ್ ಸೋಂಕು ಇದಕ್ಕೆ ಕಾರಣವಾಗುತ್ತದೆ. ನೆಗಡಿಯಾದಾಗ ಅನೇಕರಿಗೆ ಮೂಗು ಕಟ್ಟಿಕೊಳ್ಳುತ್ತದೆ. ಇದ್ರಿಂದ ಉಸಿರಾಡುವುದು ಕಷ್ಟವಾಗುತ್ತದೆ. ವಾರಗಟ್ಟೆಲೆ ಇದ್ರಿಂದ ನಿದ್ರೆ ಬಿಡುವವರಿದ್ದಾರೆ. ಇನ್ನು ಕೆಲವರಿಗೆ ಮೂಗಿನ ಅಲರ್ಜಿ ಜೀವನ ಪರ್ಯಂತ ಕಾಡುತ್ತದೆ. ರಾತ್ರಿ ಸರಿಯಾಗಿ ನಿದ್ರೆಬರದ ಕಾರಣ ಮೂಗಿಗೆ ಸ್ಪ್ರೇ ಹಾಕುವ ಅಭ್ಯಾಸ ಬೆಳೆಸಿಕೊಳ್ತಾರೆ. ಮೂಗಿನ ಸ್ಪ್ರೇ ತಕ್ಷಣ ಪರಿಹಾರ ನೀಡುತ್ತದೆ. ರಾತ್ರಿಯಿಡಿ ಆರಾಮದಾಯಕ ನಿದ್ರೆ ಬರುತ್ತದೆ. ಆರಂಭದಲ್ಲಿ ಇದು ಹಿತವೆನಿಸುತ್ತದೆ. ವೈದ್ಯರೂ ಮೂಗು ಕಟ್ಟಿದಾಗ ಸ್ಪ್ರೇ ಬಳಸಲು ಸಲಹೆ ನೀಡ್ತಾರೆ. ಆದ್ರೆ ಪ್ರತಿ ದಿನ ಮೂಗಿನ ಸ್ಪ್ರೇ ಬಳಸುವುದು ಒಂದು ವ್ಯಸನ. ಇದನ್ನು ಬಿಟ್ಟು ಮಲಗುವುದು ಅನೇಕರಿಗೆ ಕಷ್ಟವಾಗುತ್ತದೆ. ನಿತ್ಯ ಮೂಗಿನ ಸ್ಪ್ರೇ ಸಂಪೂರ್ಣವಾಗಿ ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಇಂದು ಅದ್ರ ಬಗ್ಗೆ ಮಾಹಿತಿಯನ್ನು ನೀಡ್ತೆವೆ. 

ನಾಸಲ್ ಸ್ಪ್ರೇ ವಿಧಗಳು : ಮಾರುಕಟ್ಟೆಯಲ್ಲಿ ಅನೇಕ ವಿಧದ ನಾಸಲ್ ಸ್ಪ್ರೇ ಲಭ್ಯವಿದೆ. ಲವಣಯುಕ್ತ,ಸ್ಟೀರಾಯ್ಡ್,ಹಿಸ್ಟಮಿನ್ರೋಧಕ ಮತ್ತು ಡಿಕೊಂಜೆಸ್ಟೆಂಟ್. ಸಲೈನ್ ಮೂಗಿನ ಸ್ಪ್ರೇ ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಉಳಿದವುಗಳ ಮಿತಿಮೀರಿದ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ನಾಸಲ್ ಸ್ಪ್ರೇ ಬಳಸುವ ಜನರು ನಾಸಲ್ ಸ್ಪ್ರೇ ವ್ಯಸನಿಯಾಗುತ್ತಾರೆ. ಈ ಸ್ಪ್ರೇಗಳು ಅಲ್ಪಾವಧಿಯ ಪರಿಹಾರವನ್ನು ಮಾತ್ರ ನೀಡುತ್ತವೆ.

Chewing gum ತಿನ್ನುವಾಗ ಈ ತಪ್ಪು ಮಾಡೋದು ಡೇಂಜರ್

ದೀರ್ಘಾವದಿಯ ಬಳಕೆಯಿಂದ ಏನಾಗುತ್ತೆ? 
ಮೊದಲೇ ಹೇಳಿದಂತೆ ನೆಗಡಿಯಿಂದ ಶುರುವಾಗು ಈ ಮೂಗಿನ ಸ್ಪ್ರೇ ಬಳಕೆ ನಂತ್ರ ಚಟ(addiction)ವಾಗುತ್ತದೆ. ಇದಕ್ಕೆ ಕಾರಣ ಅದ್ರಲ್ಲಿರುವ ಔಷಧಿ. ನಾಸಲ್ ಸ್ಪ್ರೇ ದೀರ್ಘಾವಧಿಯ ಬಳಕೆ ಎಂದಿಗೂ ಸುರಕ್ಷಿತವಲ್ಲ. ಮೂಗಿನ ಸ್ಪ್ರೇ ದೀರ್ಘಕಾಲದವರೆಗೆ ಬಳಸುವುದರಿಂದ ಮೂಗಿನಿಂದ ರಕ್ತಸ್ರಾವವಾಗುವ ಸಾಧ್ಯತೆಯಿರುತ್ತದೆ. ಅನೇಕರಿಗೆ ತಲೆನೋವು(headache) ಉಂಟಾಗುತ್ತದೆ. ಇದರ ಹೊರತಾಗಿ, ನೀವು ಅದಕ್ಕೆ ವ್ಯಸನಿಯಾಗುತ್ತೀರಿ. ಈ ಸ್ಪ್ರೇಗಳು ಮೂಗಿನ ಅಂಗಾಂಶವನ್ನು ಮಾತ್ರ ಹಾನಿಗೊಳಿಸುವುದಿಲ್ಲ. ಮೂಗಿನಲ್ಲಿ ಊತವನ್ನು ಉಂಟುಮಾಡಬಹುದು.

ಈ ಸ್ಪ್ರೇಗಳು ನಿಮ್ಮ ರಕ್ತದೊತ್ತಡ(blood pressure)ವನ್ನು ಹೆಚ್ಚಿಸುತ್ತವೆ. ಇದು ತಲೆಸುತ್ತಿದಂತಹ ಅನುಭವವವನ್ನುಂಟು ಮಾಡುತ್ತದೆ. ಈ ಸ್ಪ್ರೇಗಳು ಮೂಗಿನ ಕಿರಿಕಿರಿ ಮತ್ತು ಉರಿಯೂತವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಗಂಟಲಿನ ಕಿರಿಕಿರಿ ಮತ್ತು ಸೀನು ಕಾಡಬಹುದು.  

ಸ್ಪ್ರೇ ಬಳಸುವುದನ್ನು ನಿಲ್ಲಿಸಿದರೂ ಸಹ, ನೀವು ಹಲವಾರು ರೋಗಲಕ್ಷಣ ಎದುರಿಸಬೇಕಾಗುತ್ತದೆ. ನೀವು ಸ್ಪ್ರೇ ಬಳಸುವುದನ್ನು ನಿಲ್ಲಿಸಿದರೆ ನಿದ್ರಾಹೀನತೆ ಸಮಸ್ಯೆ ಕಾಡುಬಹುದು. ಪ್ರಕ್ಷುಬ್ಧತೆಯನ್ನು ಅನುಭವಿಸಬಹುದು. ರಾತ್ರಿ ಇದು ಅಭ್ಯಾಸವಾದ ಕಾರಣ ಸ್ಪ್ರೇ ಬಳಸದೆ ಮಲಗಿದ್ರೆ ನಿದ್ರೆ ಬರುವುದಿಲ್ಲ.

New Dad: ಮೊದಲ ಬಾರಿ ತಂದೆಯಾಗ್ತಿದ್ದರೆ ನಿಮ್ಮ ತಯಾರಿ ಹೀಗಿರಲಿ 

ಮೂಗಿನ ಸ್ಪ್ರೇ ಬಳಕೆ ಹೇಗೆ? : ಮೂಗಿನ ಸ್ಪ್ರೇ ಸರಿಯಾಗಿ ಬಳಸುವುದು ಮೊದಲು ತಿಳಿದಿರಬೇಕು. ಸಾಮಾನ್ಯವಾಗಿ ಸ್ಪ್ರೇ ಬಾಕ್ಸ್ ಮೇಲೆಯೇ ಬಳಕೆ ಬಗ್ಗೆ ಹೇಳಿರುತ್ತಾರೆ. ವೈದ್ಯರ ಸಲಹೆ ಪಡೆದು ಅದನ್ನು ಬಳಸಬೇಕು. ಮೂರು ದಿನಗಳಿಗಿಂತ ಹೆಚ್ಚು ಕಾಲ ಅದನ್ನು ಬಳಸಬಾರದು. ಪ್ರತಿ 10 ರಿಂದ 12 ಗಂಟೆಗಳಿಗೊಮ್ಮೆ ಮಾತ್ರ ಇದನ್ನು ಬಳಸಬೇಕು. 24 ಗಂಟೆಗಳಲ್ಲಿ ಎರಡು ಬಾರಿಗಿಂತ ಹೆಚ್ಚಾಗಿ ಇದನ್ನು ಬಳಸುವುದು ಒಳ್ಳೆಯದಲ್ಲ. ವಾರಕ್ಕಿಂತ ಹೆಚ್ಚು ಸಮಯ ನೀವು ಸ್ಪ್ರೇ ಬಳಕೆ ಮಾಡ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ವರ್ಷಾನುಗಟ್ಟಲೆ ಸ್ಪ್ರೇ ಬಳಕೆ ಒಳ್ಳೆಯದಲ್ಲ. ಆರಂಭದಲ್ಲಿಯೇ ಇದಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕರೆ ನಿಮ್ಮ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಮೂಗಿನ ಕಟ್ಟುವಿಕೆಗೆ ಸ್ಪ್ರೇ ಮಾತ್ರ ಔಷಧವಲ್ಲ. ಇದಕ್ಕೆ ಬೇರೆ ವಿಧಾನಗಳಿವೆ.  
 

click me!