ಮಾನಸಿಕ ಒತ್ತಡ, ಖಿನ್ನತೆ, ಅಸ್ವಸ್ಥತೆ ನ್ಯೂ ಜನರೇಷನ್ (New Generation) ಹೊಸ ಕಾಯಿಲೆಗಳು. ಏಕಾಂಗಿತನದಿಂದ, ಟೆನ್ಶನ್ (Tension)ನಿಂದ ಹಲವರು ಡಿಪ್ರೆಶನ್ (Depression)ಗೆ ಹೋಗುತ್ತಾರೆ. ಜೀವನಕ್ಕೆ ವಿಮುಖರಾಗಿ ಬಿಡುತ್ತಾರೆ. ಮನಸ್ಸಿನಲ್ಲಿ ಯಾವಾಗಲೂ ಕೆಟ್ಟ ಯೋಚನೆಗಳೇ ಬರುತ್ತಿದೆಯಾ, ನೆಮ್ಮದಿಯೇ ಇಲ್ವಾ. ಹಾಗಿದ್ರೆ ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ?
ಉತ್ತಮವಾಗಿ ಜೀವನ (Life) ನಡೆಸಿ, ಬದುಕಿನಲ್ಲಿ ಪರಿಪೂರ್ಣತೆಯನ್ನು ಸಾಧಿಸಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ ಅದು ಸಾಧ್ಯವಾಗಬೇಕಾದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನೆಲ್ಲಾ ಧೈರ್ಯವಾಗಿ ಎದುರಿಸಿ, ಮಾನಸಿಕ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ಸಹ ಗೊತ್ತಿರಬೇಕು. ಮಾನಸಿಕ ಒತ್ತಡವನ್ನು ಸರಿಯಾಗಿ ನಿಭಾಯಿಸಲು ಆಗದ ಕಾರಣದಿಂದಲೇ ಹಲವರು ಜೀವನದಲ್ಲಿ ಸೋತು ಹೋಗುತ್ತಾರೆ. ಹೀಗಾಗಿಯೇ ಮನುಷ್ಯನಿಗೆ ಮಾನಸಿಕ ಶಕ್ತಿ (Mental Strength) ಇರಬೇಕಾದುದು ಅತೀ ಮುಖ್ಯ.
ಮಾನಸಿಕ ಶಕ್ತಿ ಎಂದರೇನು?
ಮನಸ್ಸಿಗೆ ಎದುರಾಗುವ ಒತ್ತಡವನ್ನು ಸಮರ್ಥವಾಗಿ ಎದುರಿಸುವ ರೀತಿಯನ್ನು ಮಾನಸಿಕ ಶಕ್ತಿ ಎನ್ನುತೇವೆ. ಪ್ರತಿಯೊಬ್ಬ ವ್ಯಕ್ತಿಯು ಕಠಿಣ ಪರಿಸ್ಥಿತಿಯನ್ನು ಎದುರಿಸುವಾಗ ಒಂದು ನಿರ್ದಿಷ್ಟ ರೀತಿಯ ಮನೋಭಾವವನ್ನು ವ್ಯಕ್ತಪಡಿಸುತ್ತಾನೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ಪರಿಸ್ಥಿತಿಯನ್ನು ಸಹಜವಾಗಿ ತೆಗೆದುಕೊಂಡರೆ, ಇನ್ನು ಕೆಲವರ ಮನಸ್ಸಿಗೆ ಇದು ಒತ್ತಡ (Pressure)ಕ್ಕೆ ಕಾರಣವಾಗುತ್ತದೆ. ಇದನ್ನು ಎದುರಿಸುವ ಶಕ್ತಿಯನ್ನೇ ಮಾನಸಿಕ ಶಕ್ತಿ ಎನ್ನುತ್ತೇವೆ. ಜೀವನದಲ್ಲಿ ಆಗಾಗ ಬಿಕ್ಕಟ್ಟು, ಆರ್ಥಿಕ ಸಮಸ್ಯೆಗಳು, ಅಡಚಣೆಗಳು ಎದುರಾಗುತ್ತವೆ. ಇದರ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಮತ್ತು ಈ ಪರಿಣಾಮಗಳಿಗೆ ವ್ಯಕ್ತಿಯು ಪ್ರತಿಕ್ರಿಯಿಸುವ ರೀತಿಯು ಮಾನಸಿಕ ಶಕ್ತಿಯನ್ನು ರೂಪಿಸುತ್ತದೆ.
ಮಾನಸಿಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ?
ಮಾನಸಿಕ ಶಕ್ತಿಯನ್ನು ಹೆಚ್ಚಿಸಲು, ಹಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಅದರಲ್ಲಿ ಮುಖ್ಯವಾದುದು ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಕಂಡುಹಿಡಿಯುವುದು. ನಮ್ಮ ಬಗ್ಗೆಯೇ ನಾವು ಸಂಪೂರ್ಣವಾಗಿ ತಿಳಿದಿರದಿದ್ದಾಗ ಮಾನಸಿಕವಾಗಿ ಸದೃಢರಾಗಲು ಸಾಧ್ಯವಿಲ್ಲ. ನಮ್ಮಲ್ಲಿನ ದೌರ್ಬಲ್ಯಗಳನ್ನು ತಿಳಿದುಕೊಂಡು ಅದನ್ನು ಸರಿಪಡಿಸಬೇಕು. ಹೆಚ್ಚೆಚ್ಚು ಸಕಾರಾತ್ಮಕ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು.
ಖಿನ್ನತೆಯಿಂದ ಬಳಲುತ್ತಿದ್ದರೆ ಈ ಕೆಲಸ ಮಾಡಲೇಬೇಡಿ...
ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ಯಾವಾಗಲೂ ಮಾನಸಿಕ ಶಕ್ತಿಯನ್ನು ವಿವೇಚನೆಯಿಂದ ಬಳಸಬೇಕು. ನಿಮಗೆ ನಿಯಂತ್ರಿಸಲು ಸಾಧ್ಯವಾಗದ ವಿಷಯಗಳ ಬಗ್ಗೆ ಮೆದುಳನ್ನು ವ್ಯರ್ಥ ಮಾಡುವುದರಿಂದ ಮಾನಸಿಕ ಶಕ್ತಿಯನ್ನು ತ್ವರಿತವಾಗಿ ಕ್ಷೀಣಿಸುತ್ತದೆ. ನೀವು ಪರಿಹರಿಸಲಾಗದ ನಕಾರಾತ್ಮಕ ಸಮಸ್ಯೆಗಳ ಬಗ್ಗೆ ಹೆಚ್ಚು ಯೋಚಿಸದಿರುವುದರಿಂದ, ಸೃಜನಶೀಲ ಪ್ರಯತ್ನಗಳಿಗೆ ನಿಮ್ಮಲ್ಲಿ ಕಡಿಮೆ ಶಕ್ತಿ ಉಳಿಯುತ್ತದೆ.
ಮಾನಸಿಕ ಶಕ್ತಿಯನ್ನು ಹೇಗೆ ಬಳಸುವುದು ?
ಮಾನಸಿಕ ಶಕ್ತಿಯನ್ನು ಅಗತ್ಯವಿದ್ದಲ್ಲಿ ಮಾತ್ರ ಬಳಸಿಕೊಳ್ಳಬೇಕು. ಉದಾಹರಣೆಗೆ, ಶಾಲಾ ದಿನಗಳಲ್ಲಿ ನೀವು ಆಸಕ್ತಿ ಹೊಂದಿದ್ದ ದೀರ್ಘಕಾಲ ಮರೆತುಹೋದ ಹವ್ಯಾಸ ಅಥವಾ ಚಟುವಟಿಕೆಯನ್ನು ಕಂಡುಹಿಡಿಯಲು ಪ್ರಯತ್ನಿಸಿ. ಆ ಹವ್ಯಾಸಗಳನ್ನು ಪುನರುಜ್ಜೀವನಗೊಳಿಸಿ. ನೀವು ಎಷ್ಟೇ ಒತ್ತಡದಲ್ಲಿದ್ದರೂ ಹವ್ಯಾಸವು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಇದು ಸಹಜವಾಗಿಯೇ ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಾತು ಮಾತಿಗೆ ಕೋಪ ಬರುತ್ತಾ? ಈ ಕೋಪವ ನಿವಾರಿಸೋದು ಹೇಗೆ?
ಒಬ್ಬಂಟಿಯಾಗಿರಬೇಡಿ, ಜನರೊಂದಿಗೆ ಬೆರೆಯಿರಿ
ಕೊರೋನಾ (Corona) ಸೋಂಕಿನಿಂದ ಅದೆಷ್ಟೋ ಮಂದಿ ಮೃತಪಟ್ಟಿರುವ ಹಾಗೆಯೇ ಬದುಕಿರುವ ಅದೆಷ್ಟೋ ಮಂದಿ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡರು. ಇದಕ್ಕೆ ಕಾರಣವಾಗಿದ್ದು ಒಂಟಿತನ. ಒಬ್ಬಂಟಿಯಾಗಿರುವುದು ಖಿನ್ನತೆ, ಅಸ್ವಸ್ಥತೆ ಮೊದಲಾದ ಸಮಸ್ಯೆಗೆ ಕಾರಣವಾಗಬಹುದು. ಕೊರೋನಾ ಸೋಂಕಿನ ದಿನಗಳಲ್ಲಿ ಲಾಕ್ ಡೌನ್‌ನಿಂದ ಅದೆಷ್ಟೋ ಮಂದಿ ಇದೇ ರೀತಿಯ ಮಾನಸಿಕ ಸಮಸ್ಯೆಯನ್ನು ಅನುಭವಿಸಿದರು.
ವೈರಸ್ (Virus) ಹರಡುವುದನ್ನು ತಡೆಯಲು ಒಬ್ಬರು ನಾಲ್ಕು ಗೋಡೆಗಳೊಳಗೆ ಸೀಮಿತವಾಗಿದ್ದರೂ, ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಬಹುದು. ಈ ರೀತಿಯ ನಿರ್ಬಂಧಗಳು ಇಲ್ಲದಿದ್ದಾಗ ಗುಂಪು ಸಂವಹನಗಳಲ್ಲಿ ಹೆಚ್ಚು ಭಾಗವಹಿಸಿ, ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ, ವಿವಿಧ ವಿಷಯಗಳ ಕುರಿತು ಚರ್ಚಿಸಿ ಮತ್ತು ಸಕಾರಾತ್ಮಕ ಒಳನೋಟಗಳನ್ನು ಪಡೆಯಿರಿ. ಜನರೊಂದಿಗೆ ಹೆಚ್ಚು ಬೆರೆಯುವುದು, ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುವುದು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ.
ಪುಸ್ತಕಗಳನ್ನು ಓದಿ
ಪುಸ್ತಕ (Book)ಗಳನ್ನು ಓದುವುದು ಅತ್ಯಂತ ಒಳ್ಳೆಯ ಅಭ್ಯಾಸ. ಇದು ಮನಸ್ಸಿಗೆ ಏಕಾಗ್ರತೆಯನ್ನು ತಂದು ಕೊಡುತ್ತದೆ. ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಓದಿನಲ್ಲಿ ತೊಡಗಿದ ಸಮಯ ಎಂದಿಗೂ ವ್ಯರ್ಥವಾಗುವುದಿಲ್ಲ. ಓದುವ ಅಭ್ಯಾಸ ಹೊಸ ಹೊಸ ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತದೆ.