
ಧಾರವಾಡ (ಸೆ.30) : ರಾಜ್ಯ ಸರಕಾರ ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಆರಂಭಿಸಿರುವ ನಮ್ಮ ಕ್ಲಿನಿಕ್ ಆಸ್ಪತ್ರೆ ಪೈಕಿ ಧಾರವಾಡ ಮದಿಹಾಳದ ಮತ್ತು ಹುಬ್ಬಳ್ಳಿ ಎಸ್.ಎಂ.ಕೃಷ್ಣಾ ನಗರದ ಆಸ್ಪತ್ರೆಗಳ ಕಾರ್ಯನಿರ್ವಣೆ ಅವಧಿಯನ್ನು ಕೂಲಿ ಕಾರ್ಮಿಕರ, ಸಾರ್ವಜನಿಕರ ಅನುಕೂಲಕ್ಕಾಗಿ ಬದಲಾವಣೆ ಮಾಡಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರಿಂದ ಈ ಎರಡು ನಮ್ಮ ಕ್ಲಿನಿಕ್ ಗಳ ಕಾರ್ಯ ನಿರ್ವಹಣೆಯ ಸಮಯ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಾಟೀಲ ಶಶಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ರಾಜ್ಯ ಸರಕಾರವು ಧಾರವಾಡದಲ್ಲಿ ಎರಡು ಹುಬ್ಬಳ್ಳಿಯಲ್ಲಿ ಎರಡು ಮತ್ತು ನವಲಗುಂದ ಹಾಗೂ ಅಣ್ಣಿಗೇರಿ ಪಟ್ಟಣದಲ್ಲಿ ತಲಾ ಒಂದು ಸೇರಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 6 ನಮ್ಮ ಕ್ಲಿನಿಕ್ ಆಸ್ಪತ್ರೆಗಳು ನಡೆಯುತ್ತಿವೆ ಅಣ್ಣಿಗೇರಿ, ನವಲಗುಂದ, ಹುಬ್ಬಳ್ಳಿಯ ಬೈರಿದೇವರಕೋಪ್ಪ ಮತ್ತು ಧಾರವಾಡದ ಲಕ್ಷ್ಮಿಸೀಂಗನಕೇರಿಯಲ್ಲಿ ಆರಂಭಿಸಿರುವ ನಮ್ಮ ಕ್ಲಿನಿಕ್ ಆಸ್ಪತ್ರೆಗಳು ಬೆಳಿಗ್ಗೆ 9 ರಿಂದ 4:30 ರ ವೆರೆಗೆ ಕಾರ್ಯನಿರ್ವಹಿಸುತ್ತವೆ.
225 ವಾರ್ಡ್‌ನಲ್ಲಿ ನಮ್ಮ ಕ್ಲಿನಿಕ್ ಶುರು, ವೈದ್ಯರ ಕೊರತೆಗೂ ಪರಿಹಾರ ಹುಡುಕಿದ ಬಿಬಿಎಂಪಿ
ಧಾರವಾಡ ಮದಿಹಾಳದ ಮತ್ತು ಹುಬ್ಬಳ್ಳಿ ಎಸ್.ಎಂ.ಕೃಷ್ಣಾ ನಗರದ ನಮ್ಮ ಕ್ಲಿನಿಕ್ ಆಸ್ಪತ್ರೆಗಳು ಸೆ.27 ರಿಂದ ಮುಂದಿನ ದಿನಗಳಲ್ಲಿ ಬೆಳಿಗ್ಗೆ 8 ರಿಂದ 12 ಗಂಟೆವರೆಗೆ ಹಾಗೂ ಸಂಜೆ 4 ರಿಂದ 8 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ. ಚಿಕಿತ್ಸೆ ಅಗತ್ಯವಿರುವ ನಾಗರಿಕರೊಂದಿಗೆ ಕೂಲಿಕಾರ್ಮಿಕರಿಗೆ ಕೃಷಿ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಅಗತ್ಯ ಆರೋಗ್ಯ ಸೌಲಭ್ಯ ಮತ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಸರಕಾರದ ನಿರ್ದೇಶನದಂತೆ ಬದಲಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ನಮ್ಮ ಕ್ಲಿನಿಕ್ ಆಸ್ಪತ್ರೆಗಳಲ್ಲಿ ಜನರ್ಲ ಓಪಿಡಿ, ಲ್ಯಾಬ್ ಟೆಸ್ಟ್, ಉಚಿತ ಔಷಧಿ ವಿತರಣೆ ಹಾಗೂ ವಾರದಲ್ಲಿ ಎರಡು ದಿನ ಯೋಗ ಹಾಗೂ ಉತ್ತಮ ಆರೋಗ್ಯ ಹವ್ಯಾಸಕ್ಕೆ ಸಂಭಂದಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ನಮ್ಮ ಕ್ಲಿನಿಕ್ ಗಳ ಬಗ್ಗೆ ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದೆ ಎಂದು ಡಿಎಚ್ಓ ಡಾ.ಪಾಟೀಲ ಶಶಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಒಂದೇ ದಿನ 108 ‘ನಮ್ಮ ಕ್ಲಿನಿಕ್’ ಶುರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.