
ವೀಕ್ ಡೇಸ್ ನಲ್ಲಿ ಬೆಳಿಗ್ಗೆ ಕಚೇರಿಗೆ ಹೋಗುವ ಆತುರದಿಂದ ಜನರು ಉಪಹಾರ ಮಾಡೋದಿಲ್ಲ. ಇನ್ನು ವೀಕೆಂಡ್ ನಲ್ಲಿ ಏಳೋದೇ ಕಷ್ಟ. ಹಾಗಿರುವಾಗ ಬೆಳಿಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ಒಂದೇ ಸಮಯಕ್ಕೆ ಆಗುತ್ತೆ. ಮನೆ ಕೆಲಸ, ಮಕ್ಕಳ ಕೆಲಸ ಅಂತಾ ಕೆಲ ಮಹಿಳೆಯರು ಬೆಳಿಗ್ಗೆ ಉಪಹಾರ ತಪ್ಪಿಸಿಕೊಳ್ತಾರೆ. ಡಯಟ್ ಹೆಸರಿನಲ್ಲೂ ಅನೇಕರು ಉಪಹಾರ ಮಾಡೋದಿಲ್ಲ. ಆದ್ರೆ ತಜ್ಞರು, ಯಾವುದೇ ಕಾರಣಕ್ಕೂ ಬೆಳಗಿನ ಉಪಹಾರ ತಪ್ಪಿಸಿಕೊಳ್ಳಬೇಡಿ ಎನ್ನುತ್ತಾರೆ.
ಉಪಹಾರ (Breakfast) ಅನ್ನೋದು ದಿನದ ಪ್ರಮುಖ ಊಟವೆಂದೇ ತಜ್ಞರು ಪರಿಗಣಿಸ್ತಾರೆ. ಇದು ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಏಕಾಗ್ರತೆಯ ಸಾಮರ್ಥ್ಯವನ್ನು ಅಲ್ಪಾವಧಿಯಲ್ಲೇ ಸುಧಾರಿಸುವ ಸಾಮರ್ಥ್ಯ ಬೆಳಗಿನ ಉಪಹಾರಕ್ಕಿದೆ. ಬೆಳಗ್ಗೆ ಉಪಹಾರ ಸೇವನೆ ಮಾಡೋದ್ರಿಂದ ತೂಕ (Weight) ಕೂಡ ನಿಯಂತ್ರಣಕ್ಕೆ ಬರುತ್ತದೆ. ಇಷ್ಟೇ ಅಲ್ಲ ದೀರ್ಘಾವಧಿಯಲ್ಲಿ ಟೈಪ್ -2 ಮಧುಮೇಹ ಮತ್ತು ಹೃದ್ರೋಗದ ಅಪಾಯ ಕೂಡ ಕಡಿಮೆಯಾಗುತ್ತೆ ಎನ್ನುತ್ತಾರೆ ತಜ್ಞರು. ಬೆಳಗಿನ ಉಪಹಾರವನ್ನು ನಿಯಮಿತವಾಗಿ ಸೇವನೆ ಮಾಡೋದ್ರಿಂದ ಬರೀ ಇಷ್ಟು ಲಾಭ ಮಾತ್ರವಲ್ಲ. ಅನೇಕ ಕ್ಯಾನ್ಸರ್ (Cancer) ಅಪಾಯ ಕೂಡ ಕಡಿಮೆಯಾಗುತ್ತೆ ಎಂಬ ವಿಷ್ಯ ಬಹಿರಂಗವಾಗಿದೆ.
ಚೆಂದ ಕಾಣಲು ಬ್ರೆಸ್ಟ್ ಸರ್ಜರಿ ಮಾಡ್ಕೊಂಡವಳಿಗೆ ಡ್ರೆಸ್ ಧರಿಸೋ ಅವಕಾಶವೇ ಸಿಗ್ಲಿಲ್ಲ !
ದಿನನಿತ್ಯ ಉಪಹಾರ ಸೇವಿಸುವವರಿಗೆ ಹೋಲಿಕೆ ಮಾಡಿದ್ರೆ ಉಪಹಾರ ಸೇವನೆ ಮಾಡದವರು ಹೆಚ್ಚು ಕ್ಯಾನ್ಸರ್ ಅಪಾಯ ಎದುರಿಸುತ್ತಾರೆ. ಸಂಶೋಧನೆ ಪ್ರಕಾರ, ಅನ್ನನಾಳದ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್ ಮತ್ತು ಪಿತ್ತಕೋಶ ಮತ್ತು ಪಿತ್ತರಸ ನಾಳದ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ. ಬೆಳಿಗ್ಗೆ ಉಪಹಾರ ಸೇವನೆ ಮಾಡದೆ ಊಟದ ಸಮಯದವರೆಗೆ ಖಾಲಿ ಹೊಟ್ಟೆಯಲ್ಲಿರುವುದು ದೀರ್ಘಕಾಲದ ಉರಿಯೂತ, ಸ್ಥೂಲಕಾಯತೆ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಚೀನಾದ ಸಂಶೋಧಕರು ಹೇಳಿದ್ದಾರೆ. ಆಹಾರ ತಜ್ಞರ ಪ್ರಕಾರ, ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ಜಠರಗರುಳಿನ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ. ಏಕೆಂದರೆ ಇದು ಗ್ಲೂಕೋಸ್ ಚಯಾಪಚಯವನ್ನು ತಡೆಯುತ್ತದೆ. ಗೆಡ್ಡೆಯ ಬೆಳವಣಿಗೆಗೆ ಕಾರಣವಾಗುತ್ತದೆ. ಕ್ಯಾನ್ಸರ್ ಇಲ್ಲದ 63,000 ವಯಸ್ಕರ ಮೇಲೆ ಈ ಅಧ್ಯಯನ ನಡೆದಿದೆ.
Bryan Johnson: ಸದಾ ಯಂಗ್ ಆಗಿರೋಕೆ ಪ್ರತಿ ದಿನ 111 ಮಾತ್ರೆ ಸೇವನೆ ಮಾಡ್ತಾನೆ ಈತ!
ಹಿಂದೆ ರಾಷ್ಟ್ರೀಯ ಆರೋಗ್ಯ ಮತ್ತು ಪೌಷ್ಟಿಕಾಂಶ ಪರೀಕ್ಷಾ ಸಮೀಕ್ಷೆ ನಡೆಸಿತ್ತು. ಅದ್ರಲ್ಲಿ ಉಪಹಾರವನ್ನು ಅಪರೂಪವಾಗಿ ಸೇವಿಸುವ ಕಿರಿಯರು ಮತ್ತು ಧೂಮಪಾನ ಮಾಡುವವರು, ಬೊಜ್ಜು, ಜಡ ಜೀವನಶೈಲಿಯನ್ನು ಹೊಂದಿರುತ್ತಾರೆ. ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುತ್ತಾರೆ ಎನ್ನಲಾಗಿತ್ತು.
ಬೆಳಿಗ್ಗೆ ಉಪಹಾರ ಸೇವನೆ ಮಾಡುವವರು ಹಾಗೂ ಬೆಳಿಗ್ಗೆ ಉಪಹಾರ ಸೇವನೆ ಮಾಡದವರು ಇಬ್ಬರೂ ಕ್ಯಾಲೋರಿಯನ್ನು ಒಂದೇ ಪ್ರಮಾಣದಲ್ಲಿ ಸೇವನೆ ಮಾಡಿದ್ರೂ ಉಪಹಾರ ಮಾಡದ ಜನರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉತ್ಪಾದನೆ ಹೆಚ್ಚಾಗುತ್ತದೆ. ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ ಪ್ರಮಾಣ ಕೂಡ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಸೇರುತ್ತದೆ.
ಬೆಳಗ್ಗೆ ಉಪಾಹಾರ ಸೇವನೆ ಮಾಡೋದ್ರಿಂದ ಆಗುವ ನಷ್ಟ : ಬೆಳಿಗ್ಗೆ ಉಪಹಾರ ಮಾಡದೆ ಹೋದ್ರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿಯುತ್ತದೆ. ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಉದ್ವೇಗ ಹೆಚ್ಚಾಗುತ್ತದೆ. ತೂಕದಲ್ಲಿ ಏರಿಕೆಯಾಗುತ್ತದೆ. ಹೃದಯ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಕೂದಲು ಉದುರುವುದು ಮತ್ತು ಊತ ಕೂಡ ಕಾಣಿಸಿಕೊಳ್ಳುತ್ತದೆ.
ಬೆಳಗಿನ ಉಪಹಾರ ಸೇವನೆ ಮಾಡೋದ್ರಿಂದ ಆಗುವ ಲಾಭ : ದೇಹದ ಇನ್ಸುಲಿನ್ ಮಟ್ಟವನ್ನು ಸ್ಥಿರಗೊಳಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೆ ಮೆದುಳಿನ ಶಕ್ತಿ ಹೆಚ್ಚುತ್ತದೆ. ಚಯಾಪಚಯವನ್ನು ಸುಧಾರಿಸುತ್ತದೆ. ಮನಸ್ಥಿತಿ ಮತ್ತು ಸಂತೋಷವನ್ನು ಸುಧಾರಿಸುತ್ತದೆ. ಹೃದಯ ಆರೋಗ್ಯ ಹೆಚ್ಚಾಗುತ್ತದೆ.
ಬೆಳಿಗ್ಗೆ ಉಪಹಾರಕ್ಕೆ ಇವೆಲ್ಲ ಸೇವನೆ ಮಾಡಿ : ತಾಜಾ ಹಣ್ಣು, ತರಕಾರಿ, ಮೊಸರು ಮತ್ತು ಹಾಲಿನ ಉತ್ಪನ್ನ, ಬೇಯಿಸಿದ ಮೊಟ್ಟೆ, ಪೋಹಾ, ಉಪ್ಮಾ ಸೇರಿದಂತೆ ಆರೋಗ್ಯಕರ ಆಹಾರ ಸೇವನೆ ಮಾಡ್ಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.