
ಆಲ್ವಾರ್: ದೇಶದೆಲ್ಲೆಡೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ರಾಜಸ್ಥಾನದ ಆಲ್ವಾರ್‌ನ ಗಂಗಾವಿಹಾರ್ ಕಾಲೋನಿಯಲ್ಲಿ 21 ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಜಲದ್ ಇನ್ನೇನು ಸ್ವಲ್ಪ ದಿನ ಕಳೆದರೆ ವೈದ್ಯರಾಗಿ ಕೆಲಸ ಶುರು ಮಾಡುತ್ತಿದ್ದರು. ಆದರೆ ಅಷ್ಟರಲ್ಲೇ ವಿಧಿ ಘೋರವಾದ ಆಟವಾಡಿದ್ದು, ಇಹಲೋಕ ತ್ಯಜಿಸಿದ್ದಾರೆ. 21 ವರ್ಷದ ಜಲದ್ ಶರ್ಮಾ ಜೈಪುರದ ನಿಮ್ಸ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು, ಶನಿವಾರ ಸಂಜೆ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ಆಲ್ವಾರ್‌ನಲ್ಲಿ ಮನೆಯಲ್ಲಿ ದುಃಖ ಮಡುಗಟ್ಟಿದ ಶೋಕ
ಮಾಹಿತಿಯ ಪ್ರಕಾರ ಜಲದ್ ಶರ್ಮಾಗೆ ಬೆಳಗ್ಗೆ ಸ್ವಲ್ಪ ಎದೆನೋವು ಕಾಣಿಸಿಕೊಂಡಿತ್ತು. ಆಗ ಮೊದಲು ಅವರು ಸ್ವಯಂ ಔಷಧಿ ತೆಗೆದುಕೊಂಡರು, ಆದರೆ ನೋವು ಕಡಿಮೆಯಾಗದಿದ್ದಾಗ ಸ್ನೇಹಿತರು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ನಡುವೆಯೇ ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ. ಜಲದ್ ಅವರ ಪಾರ್ಥಿವ ಶರೀರ ರಾತ್ರಿ ಸುಮಾರು 9.45ಕ್ಕೆ ಆಲ್ವಾರ್‌ನಲ್ಲಿರುವ ಅವರ ಮನೆಗೆ ತಲುಪಿತು.ಈ ವೇಳೆ ನೂರಾರು ಜನರು ಅಂತಿಮ ದರ್ಶನ ಪಡೆದರು. ಆದರೆ ಜಲದ್ ಶರ್ಮಾ ತಮ್ಮ ಪೋಷಕರಿಗೆ ಒಬ್ಬನೇ ಒಬ್ಬ ಮಗನಾಗಿದ್ದು, ಮಗನ ಮೇಲೆಯೇ ಭವಿಷ್ಯದ ಎಲ್ಲಾ ನಿರೀಕ್ಷೆಗಳನ್ನು ಇಟ್ಟು ವೈದ್ಯಕೀಯ ಶಿಕ್ಷಣ ಕೊಡಿಸಿದ್ದರು. ಆದರೆ ಮಗನ ಹಠಾತ್ ನಿಧನ ಪೋಷಕರಿಗೆ ನುಂಗಲಾರದ ತುತ್ತಾಗಿದೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಆಘಾತಕ್ಕೀಡಾದ ಅವಧ್ ಶರ್ಮಾ ತಾಯಿಗೆ ಮಗನ ಶವ ನೋಡುತ್ತಿದ್ದಂತೆ ಪ್ರಜ್ಞೆ ತಪ್ಪಿದ್ದು, ಇಡೀ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ಇದನ್ನೂ ಓದಿಒಂದು ತಿಂಗಳು ಆಲ್ಕೋಹಾಲ್ ಕುಡಿಯದೇ ಇದ್ದರೆ ಆಗುವ ಲಾಭಗಳೇನು? ಆಯಸ್ಸು ಹೆಚ್ಚಿಸಿಕೊಳ್ಳಬಹುದಾ?
ಜಲದ್ ತಂದೆ ದೆಹಲಿಯಲ್ಲಿ ನರ್ಸಿಂಗ್ ಅಧಿಕಾರಿ, ತಾಯಿ ಶಿಕ್ಷಕಿ
ಜಲದ್ ಶರ್ಮಾ ತಮ್ಮ ಹೆತ್ತವರ ಒಬ್ಬನೇ ಮಗನಾಗಿದ್ದು, ಇವರ ತಂದೆ ಮನೋಜ್ ಶರ್ಮಾ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನರ್ಸಿಂಗ್ ಅಧಿಕಾರಿಯಾಗಿದ್ದಾರೆ ಮತ್ತು ತಾಯಿ ಶಿಕ್ಷಕಿಯಾಗಿದ್ದಾರೆ. ಜಲದ್ ಅವರ ಚಿಕ್ಕಪ್ಪ ಆಲ್ವಾರ್ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಭಾವಂತ ಮಗನ ಹಠಾತ್ ಸಾವು ಇಡೀ ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಆಘಾತ ತಂದಿದೆ.
ಕಝಾಕಿಸ್ತಾನದಲ್ಲಿಯೂ ಆಲ್ವಾರ್ ವಿದ್ಯಾರ್ಥಿ ಸಾವು
ಕೆಲವು ದಿನಗಳ ಹಿಂದೆ ಕಝಾಕಿಸ್ತಾನದಲ್ಲಿಯೂ ಆಲ್ವಾರ್‌ನ ಮತ್ತೊಬ್ಬ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿದ್ದರು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಯುವಕರಲ್ಲಿ ಹೆಚ್ಚುತ್ತಿರುವ ಹೃದ್ರೋಗಗಳು ಈಗ ದೊಡ್ಡ ಆತಂಕಕಾರಿ ವಿಷಯವಾಗಿದೆ.
ವರದಕ್ಷಿಣೆ ತರಲಿಲ್ಲ ಅಂತ ಮಹಿಳೆಯ ತಲೆಕೂದಲು ಕತ್ತರಿಸಿದ ಗಂಡ
ನಕಲಿ ವೈದ್ಯನಿಂದ ಹಿಂಭಾಗದ ಗಾತ್ರ ಹೆಚ್ಚಿಸುವ ಸರ್ಜರಿಗೆ ಒಳಗಾದ ಮಹಿಳೆ ಸಾವು
ನಕಲಿ ವೈದ್ಯನಿಂದ ಪೃಷ್ಠದ ಗಾತ್ರ ಹೆಚ್ಚಿಸುವ ಸರ್ಜರಿಗೆ ಒಳಗಾದ ಮಹಿಳೆ ಸಾವನ್ನಪ್ಪಿದ ಆಘಾತಕಾರಿ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಮಾರಿಯಾ ಪೆನಲೋಜಾ ಕ್ಯಾಬ್ರೆರಾ ಸಾವನ್ನಪ್ಪಿದ ಮಹಿಳೆ. ಇವರು ಮಾರ್ಚ್ 28 ರಂದು ಕ್ವೀನ್ಸ್‌ನಲ್ಲಿರುವ ಅವರ ಮನೆಯಲ್ಲಿಯೇ ಬಟ್ ಲಿಫ್ಟ್ ಇಂಪ್ಲಾಂಟ್ ತೆಗೆಯುವ ಪ್ರಕ್ರಿಯೆಗೆ ಒಳಗಾಗಿದ್ದರು. ಈ ಘಟನೆ ನಡೆದು ವಾರಗಳ ನಂತರ ಏಪ್ರಿಲ್ 11 ರಂದು ಮಾರಿಯಾ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇವರಿಗೆ 38 ವರ್ಷದ ಫೆಲಿಪೆ ಹೊಯೊಸ್-ಫೊರೊಂಡಾ ಎಂಬ ನಕಲಿ ವೈದ್ಯ ಈ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದಾನೆ. ಇದಕ್ಕಾಗಿ ಆತ ಆಕೆಗೆ ಲಿಡೋಕೇಯ್ನ್ ಎಂಬ ಔಷಧಿಯನ್ನು ಸಿರಿಂಜ್ ಮೂಲಕ ಮಾರಿಯಾಗೆ ನೀಡಿದ್ದಾನೆ. ಈ ಇಂಜೆಕ್ಷನ್ ನೀಡಿದ ಕೂಡಲೇ ಮರಿಯಾಗೆ ಹೃದಯಾಘಾತವಾಗಿದೆ. ಕೂಡಲೇ ಆಕೆಯನ್ನು ಮನೆಯವರು ಆಸ್ಪತ್ರೆಗೆ ದಾಖಿಸಿದ್ದಾರೆ. ಈ ವೇಳೆ ಆಕೆಯ ಮಿದುಳು ಕೆಲಸ ಮಾಡುತ್ತಿಲ್ಲ ಎಂದು ಹೇಳಿದ ವೈದ್ಯರು ಬದುಕುವ ಸಾಧ್ಯತೆ ತುಂಬಾ ಕ್ಷೀಣ ಎಂದು ಹೇಳಿದ್ದಾರೆ. ಇದಾದ ನಂತರ ಏಪ್ರಿಲ್ 11ರಂದು ಮಾರಿಯಾ ಸಾವನ್ನಪ್ಪಿದ್ದಾರೆ. ಮಹಿಳೆಯ ಹಠಾತ್ ಸಾವಿನಿಂದ ಗಾಬರಿಯಾಗಿರುವ ಕುಟುಂಬದವರು ಗೋ ಫಂಡ್ ಮಿ ಪೇಜ್ ಮೂಲಕ ಘಟನೆಯ ಬಗ್ಗೆ ವಿವರಿಸಿ ಸಹಾಯಕ್ಕೆ ಮನವಿ ಮಾಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.