
ಮೆಕ್ಸಿಕೊ ಸಿಟಿ: ನಗರದಲ್ಲಿ ಕಳೆದ ತಿಂಗಳು ಸಾವನ್ನಪ್ಪಿದ ವ್ಯಕ್ತಿಯೊಬ್ಬರಿಗೆ ಹಕ್ಕಿಜ್ವರದ ಸೋಂಕು ತಗುಲಿರುವುದು ದೃಢಪಟ್ಟಿದ್ದು, ವಿಶ್ವದಲ್ಲೇ ಹಕ್ಕಿಜ್ವರ ಸೋಂಕಿನಿಂದಾಗಿ ಮೊದಲ ವ್ಯಕ್ತಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.
59 ವರ್ಷದ ವ್ಯಕ್ತಿಯೊಬ್ಬರು ಏಪ್ರಿಲ್‌ನಲ್ಲಿ ಉಸಿರಾಟದ ತೊಂದರೆ, ಅತಿಸಾರ, ವಾಕರಿಕೆ, ಮೂತ್ರಪಿಂಡದ ಖಾಯಿಲೆ, ಎರಡನೇ ಹಂತದ ಡಯಾಬಿಟೀಸ್ ಹಾಗೂ ಇತರ ರೋಗಗಳೂ ಇತ್ತು ಎಂದು ಆಸ್ಪತ್ರೆಗೆ ದಾಖಲಾದರು. ಅದರ ಜೊತೆಗೆ ರಾಜ್ಯದ ಕೋಳಿಫಾರಂನಲ್ಲಿ ಕೆಲಸ ಮಾಡಿದ ಕಾರಣ ಹಕ್ಕಿಜ್ವರ ಇರುವುದು ದೃಢಪಟ್ಟಿತ್ತು. ಈ ರೀತಿಯಲ್ಲಿ ಎಲ್ಲ ರೋಗಗಳೂ ಉಲ್ಬಣಗೊಂಡು ಸಾವನ್ನಪ್ಪಿದ್ದಾರೆಯೇ ಹೊರತು ಹಕ್ಕಿಜ್ವರ ಒಂದರಿಂದಲೇ ಸತ್ತಿದ್ದಾರೆ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಚೀನಾ ಲ್ಯಾಬ್‌ನಲ್ಲಿ ಮತ್ತೊಂದು ಮಾರಣಾಂತಿಕ ವೈರಸ್ ವಿನ್ಯಾಸಗೊಳಿಸಿದ ವಿಜ್ಞಾನಿಗಳು!
ಸೋಂಕು ಹರಡಿಲ್ಲ: ಹಕ್ಕಿಜ್ವರದ ಸೋಂಕು ಇತರರಿಗೆ ಹರಡಿರಬಹುದೇ ಎಂಬುದನ್ನು ಅವರ ನಿಕಟವರ್ತಿಗಳಲ್ಲಿ ಪರೀಕ್ಷಿಸಿದಾಗ ಎಲ್ಲರಲ್ಲೂ ನಕಾರಾತ್ಮಕ ಫಲಿತಾಂಶ ಬಂದಿದ್ದು, ಈ ಮೂಲಕ ಹಕ್ಕಿಜ್ವರ ಅಷ್ಟು ಸುಲಭವಾಗಿ ಹರಡುವುದಿಲ್ಲ ಎಂದೂ ದೃಢಪಟ್ಟಿದೆ ಎಂದು ವರದಿ ತಿಳಿಸಿದೆ. ಜೊತೆಗೆ ಹಕ್ಕಿಜ್ವರವು ಇತ್ತೀಚೆಗೆ ಪಕ್ಷಿ ಸಂಕುಲಕ್ಕಿಂತ ಸಸ್ತನಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.