ವ್ಯಕ್ತಿಗೆ ಪ್ರಜ್ಞೆಯಿರುವಾಗ್ಲೇ ಮೆದುಳಿನ ಸರ್ಜರಿ; ಪಿಯಾನೋ ನುಡಿಸಿ, ಹನುಮಾನ್ ಚಾಲೀಸಾ ಪಠಿಸಿದ ಯುವಕ!

By Vinutha Perla  |  First Published Nov 4, 2023, 11:53 AM IST

ವ್ಯಕ್ತಿ ಎಚ್ಚರವಾಗಿದ್ದಾಗಲೇ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿರೋ ಘಟನೆ ಭೋಪಾಲ್‌ನ ಏಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ. ಸರ್ಜರಿ ಮಾಡುವಾಗ ವ್ಯಕ್ತಿ ನ್ಯೂಸ್ ಪೇಪರ್ ಓದುತ್ತಿದ್ದರು. ನಂತರ ಪಿಯಾನೋ ನುಡಿಸಿ, ಬಳಿಕ ಹನುಮಾನ್ ಚಾಲೀಸಾವನ್ನು ಪಠಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಮಧ್ಯಪ್ರದೇಶ: ವ್ಯಕ್ತಿ ಎಚ್ಚರವಾಗಿದ್ದಾಗಲೇ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿರೋ ಘಟನೆ ಭೋಪಾಲ್‌ನ AIIMS ಆಸ್ಪತ್ರೆಯಲ್ಲಿ ನಡೆದಿದೆ. ಬ್ರೈನ್‌ ಟ್ಯೂಮರ್‌ ಸಮಸ್ಯೆಯಿಂದ ವ್ಯಕ್ತಿಯೊಬ್ಬನಿಗೆ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಮಾಡಿದರು. ಈ ಸಂದರ್ಭದಲ್ಲಿ ರೋಗಿ ಎಚ್ಚರವಾಗಿಯೇ ಇದ್ದರು. ಪಿಯಾನೋ ನುಡಿಸುತ್ತಿದ್ದರು ಮತ್ತು ಹನುಮಾನ್‌ ಚಾಲೀಸಾ ಪಠಿಸುತ್ತಿದ್ದರು ಎಂದು ತಿಳಿದುಬಂದಿದೆ. ವೈದ್ಯರು ವ್ಯಕ್ತಿಯ ಮೆದುಳಿನಲ್ಲಿರುವ ಗಡ್ಡೆಯನ್ನು ತೆಗೆದು ಹಾಕಲು ಯಶಸ್ವಿ ಅವೇಕ್ ಕ್ರ್ಯಾನಿಯೊಟೊಮಿಯನ್ನು ನಡೆಸಿ ಯಶಸ್ವಿಯಾಗಿದ್ದಾರೆ.

ಬಿಹಾರದ ಬಕ್ಸಾರ್‌ನ 28 ವರ್ಷದ ವ್ಯಕ್ತಿ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಈ ಬಗ್ಗೆ ಭೋಪಾಲ್‌ನ ಏಮ್ಸ್ ಆಸ್ಪತ್ರೆಯ ವೈದ್ಯರು (Doctors) ಪರಿಶೀಲನೆ ನಡೆಸಿದಾಗ ವ್ಯಕ್ತಿಗೆ ಬ್ರೈನ್‌ ಟ್ಯೂಮರ್ ಇರೋದು ತಿಳಿದುಬಂದಿತ್ತು. ವ್ಯಕ್ತಿಯ ವಯಸ್ಸು ಕಡಿಮೆಯಾಗಿದ್ದ ಕಾರಣ ಮತ್ತು ಮೆದುಳಿನಲ್ಲಿರುವ ಗಡ್ಡೆಯ ಸಾಮೀಪ್ಯವನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಎಚ್ಚರವಾದ ಮಿದುಳಿನ ಶಸ್ತ್ರಚಿಕಿತ್ಸೆ (Brain surgery)ಯನ್ನು ಮಾಡಲು ನಿರ್ಧರಿಸಿದರು. ಅದರಂತೆ ವೈದ್ಯರ ತಂಡ ಯಶಸ್ವೀಯಾಗಿ ಸರ್ಜರಿ ಮಾಡಿದೆ. ಈ ಸಂದರ್ಭದಲ್ಲಿ ವ್ಯಕ್ತಿ ಪಿಯಾನೋ ನುಡಿಸಿಕೊಂಡು ನಂತರ ಹನುಮಾನ್ ಚಾಲೀಸಾವನ್ನು ಪಠಿಸಿ, ಸರ್ಜರಿಯ ನಂತರ ವಿಶ್ರಾಂತಿ (Rest) ಪಡೆದಿದ್ದಾರೆ.

Latest Videos

undefined

ಕ್ಯಾನ್ಸರ್‌ಗೆ 2 ವರ್ಷ ಔಷಧಿ ತೆಗೆದುಕೊಂಡವಳಿಗೆ ರೋಗವೇ ಇರ್ಲಿಲ್ಲ, ಆಸ್ಪತ್ರೆ ತಪ್ಪಿಗೆ ಶಿಕ್ಷೆಯಾಯ್ತಾ?

ಮೆದುಳಿನ ಸರ್ಜರಿ ಮಾಡುವಾಗ ಹನುಮಾನ್ ಚಾಲೀಸಾ ಪಠಿಸಿದ ವ್ಯಕ್ತಿ
ಶಸ್ತ್ರಚಿಕಿತ್ಸೆಯ ವೀಡಿಯೊಗಳು ವ್ಯಕ್ತಿ ಆಪರೇಷನ್ ಟೇಬಲ್ ಮೇಲೆ ಮಲಗಿರುವುದನ್ನು ಮತ್ತು ವೈದ್ಯರು ಸರ್ಜರಿ ಮಾಡುವಾ ಕೀಬೋರ್ಡ್ ಪಿಯಾನೋ ನುಡಿಸುವುದನ್ನು ತೋರಿಸುತ್ತವೆ. ಶಸ್ತ್ರಚಿಕಿತ್ಸಕರ ಪ್ರಕಾರ, ಸಂಪೂರ್ಣ ಸರ್ಜರಿ ನಡೆಸುವಾಗ ವ್ಯಕ್ತಿಯಲ್ಲಿ ಯಾವುದೇ ಒತ್ತಡ (Pressure) ಉಂಟಾಗಲ್ಲಿಲ್ಲ. ಏಕೆಂದರೆ ವೈದ್ಯರು ನಿರಂತರವಾಗಿ ಅವನೊಂದಿಗೆ ಮಾತನಾಡುತ್ತಿದ್ದರು. ಹೀಗಾಗಿ ವ್ಯಕ್ತಿ ಆರಾಮವಾಗಿ ದಿನಪತ್ರಿಕೆ ಓದುತ್ತಿದ್ದರು. ಪಿಯಾನೋ ಪ್ಲೇ ಮಾಡಿದ ಬಳಿಕ ಹನುಮಾನ್ ಚಾಲೀಸಾ ಪಠಿಸಿದರು ಎಂದು ತಿಳಿದುಬಂದಿದೆ.

ಮೆದುಳಿನಿಂದ ಗೆಡ್ಡೆ ತೆಗೆದ ಕ್ಷಣದಲ್ಲೂ ಆ ವ್ಯಕ್ತಿ ಪಿಯಾನೋ ನುಡಿಸುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸರ್ಜರಿ ನಡೆಸಿದ ತಂಡದ ವೈದ್ಯರಾದ ದು ನರಶಸ್ತ್ರಚಿಕಿತ್ಸೆಯ ಸಹಾಯಕ ಪ್ರಾಧ್ಯಾಪಕ ಡಾ. ಸುಮಿತ್ ರಾಜ್ ಮಾತನಾಡಿ, 'ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಸರ್ಜರಿಯಿಂದ ಯಾವುದೇ ತೊಂದರೆಯಾಗಿರುವುದು ತಿಳಿದುಬಂದಿಲ್ಲ' ಎಂದು ತಿಳಿಸಿದ್ದಾರೆ. 

ಒಂದಲ್ಲ ಎರಡಲ್ಲ, ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 15 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಉತ್ತಮ ಫಲಿತಾಂಶಗಳ ಕಾರಣದಿಂದಾಗಿ, ಕಳೆದ ಕೆಲವು ವರ್ಷಗಳಲ್ಲಿ ಅನೇಕ ವೈದ್ಯರು ಎಚ್ಚರವಾಗಿದ್ದು ಮಾಡುವ ಸರ್ಜರಿ ವಿಧಾನವನ್ನು ಅಳವಡಿಸಿಕೊಳ್ಳುವುದರೊಂದಿಗೆ ಅವೇಕ್ ಕ್ರ್ಯಾನಿಯೊಟೊಮಿಗಳು ಸಾಕಷ್ಟು ಜನಪ್ರಿಯವಾಗಿವೆ.

click me!