ಗರ್ಭಿಣಿಯರಿಗೆ ಹೃದಯಾಘಾತ..! ಮುನ್ನೆಚ್ಚರಿಕೆ ಹೇಗೆ?

Published : Nov 03, 2023, 01:53 PM IST
ಗರ್ಭಿಣಿಯರಿಗೆ ಹೃದಯಾಘಾತ..! ಮುನ್ನೆಚ್ಚರಿಕೆ ಹೇಗೆ?

ಸಾರಾಂಶ

ಈಗಿನ ದಿನಗಳಲ್ಲಿ ಮಲಗಿದೋರು ಏಳೋದು ಕಷ್ಟ ಎನ್ನುವಂತಾಗಿದೆ. ನಿಂತಲ್ಲೆ, ಮಲಗಿದಲ್ಲೇ ಹೃದಯಾಘಾತವಾಗ್ತಿದೆ. ಮಕ್ಕಳು ಕೂಡ ಕುಸಿದು ಬಿದ್ದು ಅಲ್ಲೇ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯರಿಗೆ ಮಾತ್ರವಲ್ಲ ಗರ್ಭಿಣಿಯರಿಗೂ ಹೃದಯಾಘಾತ ಕಾಡುತ್ತದೆ. ಅದಕ್ಕೆ ಕಾರಣ, ಪರಿಹಾರ ಇಲ್ಲಿದೆ.  

ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಅನೇಕ ರೀತಿಯ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ. ಅನೇಕ ರೀತಿಯ ಶಾರೀರಕ ತೊಂದರೆಗಳನ್ನು ಕೂಡ ಆಕೆ ಎದುರಿಸಬೇಕಾಗುತ್ತದೆ. ಇಂತಹ ತೊಂದರೆಗಳಲ್ಲಿ ಹಾರ್ಟ್ ಅಟ್ಯಾಕ್ ಕೂಡ ಒಂದು. ಗರ್ಭಾವಸ್ಥೆಯಲ್ಲಿ ಹಾರ್ಟ್ ಅಟ್ಯಾಕ್ ಆಗುವ ಸಂಭ+ವ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಇತ್ತೀಚೆಗೆ ಮಲೆಯಾಳಿ ನಟಿ ಡಾ. ಪ್ರಿಯಾ ಅವರು ಕೂಡ ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟಿದ್ದಾರೆ. ಅವರು 8 ತಿಂಗಳ ಗರ್ಭಿಣಿಯಾಗಿದ್ದರು.

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಲ್ಲೇ ಹಾರ್ಟ್ ಫೇಲ್ (Heart Failure) ಪ್ರಕರಣ ಹೆಚ್ಚಾಗ್ತಿದೆ. ಶಾಲೆಗೆ ಹೋಗುವ ಮಕ್ಕಳು ಕೂಡ ಕುಸಿದು ಬಿದ್ದು ಅಲ್ಲೇ ಸಾವನ್ನಪ್ಪುತ್ತಿದ್ದಾರೆ. 35 ವರ್ಷದ ಮಲೆಯಾಳಿ (Malayali ) ನಟಿ ಡಾ. ಪ್ರಿಯಾ ಅವರ ನಿಧನವೂ ಹೃದಯಾಘಾತದಿಂದಲೇ ಸಂಭವಿಸಿದೆ. ಇವರ ಎಂಟು ತಿಂಗಳ ಮಗು ಸಧ್ಯಕ್ಕೆ ಐಸಿಯು ನಲ್ಲಿದೆ. ಹೃದಯಾಘಾತಕ್ಕೆ ಕೆಲವೇ ದಿನ ಮೊದಲು ಅವರು ನಿಯಮಿತ ಪ್ರೆಗ್ನೆನ್ಸಿ (Pregnancy) ತಪಾಸಣೆಗೆ ಒಳಗಾಗಿದ್ದರು. 

8 ತಿಂಗಳ ಗರ್ಭಿಣಿಯಾಗಿದ್ದ ಸೀರಿಯಲ್‌ ನಟಿ ಹೃದಯ ಸ್ತಂಭನದಿಂದ ನಿಧನ!

ಯಾರು ಈ ಮಲೆಯಾಳಿ ನಟಿ? : ಡಾ. ಪ್ರಿಯಾ ಅವರು ವೈದ್ಯ ವೃತ್ತಿಯ ಜೊತೆಗೆ ಜನಪ್ರಿಯ ಮಲೆಯಾಳಿ ನಟಿ ಕೂಡ ಆಗಿದ್ದರು. ಮದುವೆಯ ನಂತರ ಅವರು ಅಭಿನಯವನ್ನು ಮುಂದುವರೆಸಲಿಲ್ಲ. ವೈದ್ಯರಾದ ಅವರು ಎಮ್ ಡಿ ಅಭ್ಯಾಸ ಮಾಡುತ್ತಿದ್ದರು ಮತ್ತು ತಿರುವನಂತಪುರದ ಪಿ ಆರ್ ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿಲ್ಲ. ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ ಹೇಗೆ ಹೃದಯಾಘಾತವಾಯಿತು, ಗರ್ಭಧಾರಣೆಯಲ್ಲಿ ಸಾಮಾನ್ಯವಾಗಿ ಹಾರ್ಟ್ ಫೇಲ್ ಆಗುತ್ತದೆಯಾ ಎಂಬ ಪ್ರಶ್ನೆಗೆ ಇಂದು ನಾವು ಉತ್ತರ ಹೇಳಲಿದ್ದೇವೆ.

ಗರ್ಭಾವಸ್ಥೆಯಲ್ಲಿ ಹೃದಯಾಘಾತ ಏಕಾಗುತ್ತದೆ? : ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ 6 ವಾರಗಳವರೆಗೆ ಪ್ರತಿಶತ 25 ರಷ್ಟು ಮಹಿಳೆಯರು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಇದನ್ನು ಹೆಚ್ಚಿನ ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಸಮಯದಲ್ಲಿ ಕಾಣುವ ಎದೆನೋವು, ಬ್ಲೋಟಿಂಗ್ ಸಮಸ್ಯೆ, ಅಜೀರ್ಣ ಮುಂತಾದ ತೊಂದರೆಗಳನ್ನು ನಿರ್ಲಕ್ಷಿಸಿ ವೈದ್ಯಕೀಯ ಸಹಾಯ ಪಡೆದುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ.

Health Tips: ಪಿರಿಯಡ್ಸ್ ಆದಾಗ ವಿಪರೀತ ಕಾಲು ನೋವಿರುತ್ತಾ? ಹಾಗಿದ್ರೆ ನಿಮಗಿದು ಬೆಸ್ಟ್

ಗರ್ಭಿಣಿಯರಿಗೆ ಹೃದಯಾಘಾತವಾಗಲು ಕಾರಣವೇನು? : ಪ್ರೆಗ್ನೆನ್ಸಿ ಸಮಯದಲ್ಲಿ ಹಿಮೊಗ್ಲೋಬಿನ್ ಕಡಿಮೆ ಇದ್ದರು ಕೂಡ ಹೃದಯಾಘಾತವಾಗುತ್ತದೆ. ಇದರ ಹೊರತಾಗಿ ವಂಶಪಾರಂಪರ್ಯವಾಗಿ ಎನಾದರೂ ಹೃದಯದ ತೊಂದರೆಯಿದ್ದಾಗ ಅಥವಾ ಮೊದಲ ಗರ್ಭಾವಸ್ಥೆಯಲ್ಲಿ ಕ್ಲಾಟ್ ಸಮಸ್ಯೆ ಆಗಿದ್ದರೆ ಅಂತವರು ಬಹಳ ಜಾಗರೂಕರಾಗಿರಬೇಕು. ಬೇರೆ ಖಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಥವಾ ಕಿಡ್ನಿ, ಥೈರಾಯ್ಟ್ ಸಮಸ್ಯೆಗಳನ್ನು ಹೊಂದಿರುವ ಗರ್ಭಿಣಿಯರು ಎದೆನೋವನ್ನು ಕಡೆಗಣಿಸಬಾರದು.

ಗರ್ಭಾವಸ್ಥೆಯಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ರಕ್ತವನ್ನು ಸರಿಹೊಂದಿಸಲು ದೇಹದಲ್ಲಿ ರಕ್ತದ ಪ್ರಮಾಣವು ಹೆಚ್ಚಾಗುತ್ತದೆ. ಹೆಚ್ಚುವರು ರಕ್ತವನ್ನು ಪಂಪ್ ಮಾಡಲು ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳುವುದರಿಂದ ಹಾರ್ಟ್ ಅಟ್ಯಾಕ್ ಸಂಭವ  ಹೆಚ್ಚು. ಗರ್ಭಾವಸ್ಥೆಗೆ ಸಂಬಂಧಪಟ್ಟ ಪ್ರತಿಶತ 75 ರಷ್ಟು ಹೃದಯಾಘಾತಗಳು 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಮಹಿಳೆಯರಲ್ಲಿ ಸಂಭವಿಸುತ್ತದೆ.

ಗರ್ಭಿಣಿಯರಿಗೆ ಈ ಲಕ್ಷಣಗಳು ಕಂಡುಬಂದ್ರೆ ಅದನ್ನು ನಿರ್ಲಕ್ಷಿಸಬೇಡಿ : ಗರ್ಭಾವಸ್ಥೆಯಲ್ಲಿ ಹೃದಯದ ತೊಂದರೆಗಳು ಉಂಟಾದಾಗ ಮಹಿಳೆಯರು ಹೆಚ್ಚು ಗಾಬರಿಗೆ ಒಳಗಾಗುತ್ತಾರೆ. ಅವರ ದೇಹದಲ್ಲಿ ಊತ, ತಲೆ ತಿರುಗುವಿಕೆ, ಮೂರ್ಛೆ, ಆಯಾಸ, ಅತಿಯಾದ ಹೃದಯ ಬಡಿತ, ರಾತ್ರಿ ಸಮಯದಲ್ಲಿ ಆಗಾಗ ಮೂತ್ರ ವಿಸರ್ಜನೆ ಮಾಡುವುದು, ನಿರಂತರ ಕೆಮ್ಮು, ಉಸಿರಾಟದ ತೊಂದರೆ ಹಾಗೂ ಪಾದ, ಕೈ, ಕಾಲು ಮತ್ತು ಭುಜಗಳಲ್ಲಿ ಊತ ಕಾಣಿಸಿಕೊಳ್ಳುವುದು ಮುಂತಾದ ಕೆಲವು ಮುನ್ಸೂಚನೆಗಳು ಕಾಣುತ್ತವೆ. ಅಂತಹ ಮುನ್ಸೂಚನೆಗಳು ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸಿದರೆ ಹೃದಯಾಘಾತವನ್ನು ತಪ್ಪಿಸಬಹುದು.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!