ಪ್ರಪಂಚದಾದ್ಯಂತ ಟೈಪ್ 2 ಡಯಾಬಿಟಿಸ್ ಪ್ರಕರಣಗಳು ಹೆಚ್ಚುತ್ತಿದೆ. ಮಧುಮೇಹ ಗುಣಪಡಿಸಲಾಗದಿದ್ದರೂ, ಅದನ್ನು ನಿಯಂತ್ರಿಸಬಹುದು. ಟೈಪ್ 2 ಡಯಾಬಿಟಿಸ್‌ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಡಿಜಿಟಲ್ ಟ್ವಿನ್ ಚಿಕಿತ್ಸೆಯ ಮೂಲಕ ಮಧುಮೇಹದ ಲಕ್ಷಣಗಳನ್ನು ಯಶಸ್ವಿಯಾಗಿ ಕಡಿಮೆಗೊಳಿಸಿದ್ದಾರೆ.
ಪ್ರಪಂಚದಾದ್ಯಂತ ಟೈಪ್ 2 ಡಯಾಬಿಟಿಸ್ ಪ್ರಕರಣಗಳು ಹೆಚ್ಚುತ್ತಿದೆ. ಮಧುಮೇಹ ಗುಣಪಡಿಸಲಾಗದಿದ್ದರೂ, ಅದನ್ನು ನಿಯಂತ್ರಿಸಲು ಮತ್ತು ಅದರ ಪರಿಣಾಮಗಳನ್ನು ಕಡಿಮೆ ಮಾಡಲು ಹಲವಾರು ಮಾರ್ಗಗಳಿವೆ. ಟೈಪ್ 2 ಡಯಾಬಿಟಿಸ್‌ನಿಂದ ಬಳಲುತ್ತಿದ್ದ ಡೆವ್ಲಿನ್ ಡೊನಾಲ್ಡ್‌ಸನ್ ಮಧುಮೇಹದ ಲಕ್ಷಣವನ್ನು ಹಿಮ್ಮೆಟ್ಟಿಸಿ ಸುಮಾರು 18 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. 66 ವರ್ಷ ವಯಸ್ಸಿನ ಡೊನಾಲ್ಡ್ ಡಿಜಿಟಲ್ ಟ್ವಿನ್ ಮೂಲಕ ಈ ರೀತಿ ರೋಗಲಕ್ಷಣಗಳನ್ನು ಹಿಮ್ಮೆಟ್ಟಿಸಿದ್ದಾರೆ.
ಡಿಜಿಟಲ್ ಟ್ವಿನ್ ಚಿಕಿತ್ಸೆ ಎಂದರೇನು?
'ಡಿಜಿಟಲ್ ಟ್ವಿನ್', ಆಹಾರ ನಿಯಂತ್ರಣ, ವ್ಯಾಯಾಮ ಮತ್ತು ಔಷಧಿಗಳ ಬಗ್ಗೆ ಸಂಪೂರ್ಣ ಸಲಹೆಯನ್ನು ಹೊಂದಿರುವ ಅಪ್ಲಿಕೇಶನ್ ಆಗಿದೆ. ದೀರ್ಘಾಯುಷ್ಯದ ಚಿಕಿತ್ಸಾಲಯಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಡಯಾಬಿಟಿಸ್ ರೋಗಿಯ ಆರೋಗ್ಯವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಡೊನಾಲ್ಡ್ ಸುಮಾರು ಮೂರು ವರ್ಷಗಳ ನಂತರ ತಮ್ಮ ಮಧುಮೇಹದ ಲಕ್ಷಣಗಳನ್ನು ಕಡಿಮೆಗೊಳಿಸಿದರು.
ಕೇವಲ ಮೂರು ನೈಟ್‌ಶಿಫ್ಟ್ ಮಧುಮೇಹ, ಬೊಜ್ಜು ಅಪಾಯವನ್ನು ಹೆಚ್ಚಿಸಬಹುದು; ಅಧ್ಯಯನ
'ನಾನು ಹೆಚ್ಚು ಉತ್ಸಾಹಿ ಆಗಿರಲಿಲ್ಲ. ಆದರೆ ಡಿಜಿಟಲ್ ಸ್ಕೇಲ್, ಬ್ಲಡ್ ಪ್ರೆಶರ್ ಕಫ್, ಸ್ಮಾರ್ಟ್ ವಾಚ್ ಮತ್ತು ನಿರಂತರ ಗ್ಲೂಕೋಸ್ ಮಾನಿಟರ್ (CGM) ಒಳಗೊಂಡಿರುವ ಟ್ವಿನ್ಸ್ ಬಾಕ್ಸ್‌ನ್ನು ಬಳಸಿದ ನಂತರ ದೇಹದಲ್ಲಾಗುವ ಹಲವು ಬದಲಾವಣೆಯನ್ನು ತಿಳಿದುಕೊಂಡೆ. ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲೆ ವಿವಿಧ ಆಹಾರಗಳು ಮತ್ತು ಚಟುವಟಿಕೆಗಳ ಪ್ರಭಾವವನ್ನು ಪತ್ತೆಹಚ್ಚಲು ಪ್ರಾರಂಭಿಸಿದೆ' ಎಂದು ಡೊನಾಲ್ಡ್ ತಿಳಿಸಿದ್ದಾರೆ.
ಕೇವಲ ಒಂದು ತಿಂಗಳೊಳಳೆ ಡೇವಿಡ್ ಹಲವು ವಿಚಾರಗಳನ್ನು ತಿಳಿದುಕೊಂಡರು. ಉದಾಹರಣೆಗೆ ತಿಂಡಿಗಳಿಗೆ ಬೀಜಗಳು, ಊಟಕ್ಕೆ ತರಕಾರಿಗಳು ಮತ್ತು ಹೆಚ್ಚಿನ ಫೈಬರ್ ಸೇವನೆ. ಅಷ್ಟೇ ಅಲ್ಲ, ಚಿಕಿತ್ಸೆಯು ಅವರ ಜೀವನದಲ್ಲಿ ನಿದ್ರೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡಿತು. 'ನಾನು ಚೆನ್ನಾಗಿ ನಿದ್ದೆ ಮಾಡಲು ಪ್ರಾರಂಭಿಸಿದಾಗ, ನಾನು ಹೆಚ್ಚು ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ. ಆರು ತಿಂಗಳೊಳಗೆ, ನಾನು 200 ಪೌಂಡ್‌ಗಳಷ್ಟು ತೂಕವನ್ನು ಕಡಿಮೆ ಮಾಡಿಕೊಂಡೆ' ಎಂದು ಡೊನಾಲ್ಡ್ ತಿಳಿಸಿದ್ದಾರೆ.
ಮಧುಮೇಹ ಇರುವವರು ಅನ್ನವನ್ನು ಹೇಗೆ ತಿನ್ನಬೇಕು?
'ನನ್ನ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಯಿತು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಯಿತು, ನನ್ನ ಟ್ರೈಗ್ಲಿಸರೈಡ್‌ಗಳು ಕಡಿಮೆಯಾಯಿತು, ನನ್ನ ಉರಿಯೂತದ ಸ್ಕೋರ್‌ಗಳು ಕಡಿಮೆಯಾಯಿತು. ನನ್ನ ಪ್ರಕಾರ, ಎಲ್ಲಾ ಸಂಖ್ಯೆಗಳು ಅಷ್ಟು ಬೇಗನೆ ಸರಿಯಾದ ದಿಕ್ಕಿನಲ್ಲಿ ಹೋದವು' ಡೊನಾಲ್ಡ್ ಹೇಳಿದ್ದಾರೆ. ತನ್ನ ಮಧುಮೇಹವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ನಂತರ, ಡೊನಾಲ್ಡ್ ಅಂತಿಮವಾಗಿ ಮಧುಮೇಹ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟುಬಿಟ್ಟರು.