ಎಚ್ಚರ...ಐದೇ ನಿಮಿಷದಲ್ಲಿ ರೆಡಿಯಾಗೋ ನೂಡಲ್ಸ್‌ನಲ್ಲೂ ಇರುತ್ತೆ ಬ್ಯಾಕ್ಟಿರೀಯಾ!

By Vinutha Perla  |  First Published May 25, 2024, 2:10 PM IST

ಹಸಿವಾದಾಗ ತಕ್ಷಣಕ್ಕೆ ಸುಲಭವಾಗಿ ಮಾಡಿಕೊಳ್ಳಲು ಸಾಧ್ಯವಾಗುವ ಫುಡ್ ಅಂದ್ರೆ ನೂಡಲ್ಸ್‌. ಅದರಲ್ಲೂ ಬ್ಯಾಚುಲರ್ಸ್‌ಗಳ ಫೇವರಿಟ್‌. ಆದ್ರೆ ಕೆಲವೇ ನಿಮಿಷಗಳಲ್ಲಿ ತಯಾರಿಸಲು ಸಾಧ್ಯವಾಗುವ ನೂಡಲ್ಸ್‌ನಿಂದ ಸಾಕಷ್ಟು ಆರೋಗ್ಯದ ಅಪಾಯಗಳಿವೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಆ ಬಗ್ಗೆ ಇಲ್ಲಿದೆ ಮಾಹಿತಿ.


ಹಸಿವಾದಾಗ ತಕ್ಷಣಕ್ಕೆ ಸುಲಭವಾಗಿ ಮಾಡಿಕೊಳ್ಳಲು ಸಾಧ್ಯವಾಗುವ ಫುಡ್ ಅಂದ್ರೆ ನೂಡಲ್ಸ್‌. ಅದರಲ್ಲೂ ಬ್ಯಾಚುಲರ್ಸ್‌ಗಳ ಫೇವರಿಟ್‌. ಆದ್ರೆ ಕೆಲವೇ ನಿಮಿಷಗಳಲ್ಲಿ ತಯಾರಿಸಲು ಸಾಧ್ಯವಾಗುವ ನೂಡಲ್ಸ್‌ನಿಂದ ಸಾಕಷ್ಟು ಆರೋಗ್ಯದ ಅಪಾಯಗಳಿವೆ ಅನ್ನೋದು ನಿಮ್ಗೆ ಗೊತ್ತಿದ್ಯಾ. ಇತ್ತೀಚಿನ ಮೈಕ್ರೋಸ್ಕೋಪಿಕ್‌ ಟೆಸ್ಟ್‌ ನೂಡಲ್ಸ್‌ನಲ್ಲಿ ಗುಪ್ತ ಜೀವಿಗಳಿರುವುದನ್ನು ಬಹಿರಂಗಪಡಿಸಿದೆ. ಈ ಕುರಿತಾದ ವೀಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ಇನ್‌ಸ್ಟಂಟ್‌ ನೂಡಲ್ಸ್‌ನಲ್ಲಿ ಹೇಗೆ ಬ್ಯಾಕ್ಟಿರೀಯಾಗಳು ನಿಲ್ಲುತ್ತದೆ ಎಂಬುದನ್ನು ತೋರಿಸಿದೆ.

ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ @cooltechtipz ಎಂಬ ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಸಂಶೋಧಕರು ಇನ್‌ಸ್ಟಂಟ್‌ ನೂಡಲ್ಸ್‌ನ್ನು ಕ್ಯಾಮರಾಗೆ ತೋರಿಸುವುದರೊಂದಿಗೆ ಒಂದು ನಿಮಿಷದ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಸಂಪೂರ್ಣ ನೂಡಲ್ಸ್‌ ಸೆಟ್‌ನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಇರಿಸುತ್ತಾರೆ. ತಕ್ಷಣ ಮೈಕ್ರೋಸ್ಕೋಪ್‌ನಲ್ಲಿ ಝೂಮ್ ಮಾಡಿದಾಗ ನೂಡಲ್ಸ್‌ನಲ್ಲಿ ಪಾರದರ್ಶಕ ಜೀವಿಗಳಂತಹ ಚಿಕ್ಕ ಉಣ್ಣಿಗಳನ್ನು ತೆವಳುವುದನ್ನು ನೋಡಬಹುದು. 

Tap to resize

Latest Videos

undefined

ಈ ರಸ್ತೆ ಬದಿಯ ಮಾರಾಟಗಾರ 1 ಪ್ಲೇಟ್ ಮ್ಯಾಗಿಗೆ ತೆಗೆದುಕೊಳ್ಳೋದು 1100 ರೂ.! ಏನಂಥಾ ವಿಶೇಷ?

ಸಂಶೋಧಕರು ಟ್ವೀಜರ್ ಅನ್ನು ಮೈಕ್ರೋಸ್ಕೋಪಿಕ್ ಜೂಮ್ ಅಡಿಯಲ್ಲಿ ಇರಿಸುತ್ತಾರೆ. ಅಲ್ಲಿ ಜೀವಿ ಲೋಹದ ಉಪಕರಣಕ್ಕೆ ಅಂಟಿಕೊಂಡಿರುತ್ತದೆ. ನಂತರ ನೂಡಲ್ಸ್‌ನ್ನು ಪುಡಿ ಮಾಡಲಾಗುತ್ತದೆ. ಬಳಿಕ ಸ್ಲೈಡ್‌ನಲ್ಲಿ, ಸಂಶೋಧಕರು ಒಂದು ಹನಿ ದ್ರವವನ್ನು ಹಾಕುತ್ತಾರೆ. ಆ ನಂತರ ಅದರ ಮೇಲೆ ನೂಡಲ್ಸ್‌ ತುಂಡುಗಳನ್ನು ಹಾಕುತ್ತಾರೆ. ಸೂಕ್ಷ್ಮದರ್ಶಕದ ಅಡಿಯಲ್ಲಿ, ನೆಟಿಜನ್‌ಗಳು ಜೀವಿಗಳ ಸ್ಪಷ್ಟವಾಗಿ ಕಾಣುತ್ತದೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಈ ಫೋಟೋಗೆ, 'ನಾವು ಸೂಕ್ಷ್ಮದರ್ಶಕದ ಅಡಿಯಲ್ಲಿ ಪ್ರತಿದಿನ ಸೇವಿಸುವ ನೂಡಲ್‌ನ ಚಿತ್ರ' ಎಂಬ ಶೀರ್ಷಿಕೆ ನೀಡಲಾಗಿದೆ.

ನೆಟ್ಟಿಗರು ಈ ಪೋಸ್ಟ್‌ಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ಬ್ಯಾಕ್ಟಿರೀಯಾಗಳನ್ನು ಕೊಲ್ಲಲು ಪರಿಹಾರಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು, 'ಈ ಬ್ಯಾಕ್ಟಿರೀಯಾಗಳು ಬೇಯಿಸಿದ ನಂತರ ಸಾಯುತ್ತದೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿಯೂ ಇದು ಕಂಡು ಬರುತ್ತದೆ' ಎಂದಿದ್ದಾರೆ. ಎರಡನೆಯ ಬಳಕೆದಾರರು, 'ಅಡುಗೆಯು ಬಹಳಷ್ಟು ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಆದರೆ, ನಿಮ್ಮ ಆಹಾರದಲ್ಲಿನ ಬ್ಯಾಕ್ಟೀರಿಯಾಗಳು 149 ° F ನಲ್ಲಿ ಸಾಯಲು ಪ್ರಾರಂಭಿಸುತ್ತವೆ ಎಂಬುದನ್ನು ಗಮನಿಸುವುದು ಮುಖ್ಯ' ಎಂದಿದ್ದಾರೆ. 

ನೂಡಲ್ಸ್‌ ಪ್ಯಾಕ್‌ನಲ್ಲಿದ್ದ ವಜ್ರ, ಗುದನಾಳದಲ್ಲಿದ್ದ ಚಿನ್ನ : 6.46 ಕೋಟಿಯ ಗೋಲ್ಡ್ ಡೈಮಂಡ್ ಜಪ್ತಿ

ಮೂರನೇ ಬಳಕೆದಾರರು,  'ಈ ನೂಡಲ್ಸ್‌ ಮಾದರಿಯು ಈಗಾಗಲೇ ಅವಧಿ ಮೀರಿರಬಹುದು. ಮೊದಲು, ನೀವು ಬಾಕ್ಸ್ ದಿನಾಂಕವನ್ನು ತೋರಿಸಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ವೈರಲ್ ಆಗಿರುವ ವೀಡಿಯೋವನ್ನು 14,000 ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ ಮತ್ತು  3.1 ಮಿಲಿಯನ್ ವೀಕ್ಷಿಸಿದ್ದಾರೆ.

The image of the Noodle we consume daily under the microscope: 👀 pic.twitter.com/01axZ8kuNV

— Learn Something (@cooltechtipz)
click me!