
ಕೊಬ್ಬು ಕರಗಿಸಲು ಮಾಧುರಿ ದೀಕ್ಷಿತ್ ಗಂಡ ನೀಡಿದ ಆರೋಗ್ಯ ಸೂತ್ರಗಳು!
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಪತಿ ಡಾ. ಶ್ರೀರಾಮ್ ನೇನೆ ಖ್ಯಾತ ಕಾರ್ಡಿಯೋಥೊರಾಸಿಕ್ ಸರ್ಜನ್ - ಹೃದಯ ತಜ್ಞ. ಮಾಧುರಿ ದೀಕ್ಷಿತ್ ಸೌಂದರ್ಯ ಪಾಲನೆಗೆ ಸಂಬಂಧಿಸಿದ ಸೂತ್ರಗಳನ್ನು ನೀಡಿದರೆ ಅದನ್ನು ಪಾಲಿಸಿ. ಆದರೆ ಹೃದಯದ ಆರೋಗ್ಯಕ್ಕೆ ಸಂಬಂಧಿಸಿ ಸಲಹೆ ಕೇಳುವುದಾದರೆ ನೀವು ಮಾಧುರಿಯ ಪತಿ ನೇನೆ ಹೇಳುವ ಮಾತುಗಳನ್ನೇ ಕೇಳಬೇಕು. ಶ್ರೀರಾಮ್ ನೇನೆ ಆಗಾಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಹೇಗೆ ಫಿಟ್ ಆಗಿರಬೇಕೆಂದು ಟಿಪ್ಸ್‌ಗಳನ್ನು ನೀಡುತ್ತಿರುತ್ತಾರೆ. ಅಂಥ ಕೆಲವು ಟಿಪ್ಸ್ ಇಲ್ಲಿವೆ.
ನೇನೆ ಪ್ರಕಾರ ಒಂದು ಸಾಂಪ್ರದಾಯಿಕ ಪಾನೀಯ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅದು ಬಾರ್ಲಿ ನೀರು. ಶ್ರೀರಾಮ್ ನೇನೆ, ಬಾರ್ಲಿ ನೀರಿನ ಆರೋಗ್ಯ ಪ್ರಯೋಜನಗಳನ್ನು, ವಿಶೇಷವಾಗಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವಲ್ಲಿ ಅದರ ಸಾಮರ್ಥ್ಯವನ್ನು ಎತ್ತಿ ತೋರಿಸಿದ್ದಾರೆ. ಬೇಸಿಗೆಯಲ್ಲಿ ಇದು ಅತ್ಯುತ್ತಮವಾದ ಡಿಟಾಕ್ಸ್ ಪಾನೀಯವಂತೆ. ಈ ಪಾನೀಯ ಶಾಖದ ಸಮಯದಲ್ಲಿ ನಿಮ್ಮನ್ನು ತಂಪಾಗಿಸುವುದರ ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.
ಡಾ. ನೇನೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಬಾರ್ಲಿ ನೀರನ್ನು ಬೇಸಿಗೆಯ ಉಲ್ಲಾಸಕರ ಪಾನೀಯವೆಂದು ಪರಿಚಯಿಸಿದ್ದಾರೆ. ಇದು ದೇಹವನ್ನು ತಂಪಾಗಿಸುವುದಲ್ಲದೆ, ನಿರ್ವಿಷಗೊಳಿಸುವ ಗುಣಗಳನ್ನು ಸಹ ನೀಡುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡುವಲ್ಲಿ ಅದರ ಪಾತ್ರ ಮುಖ್ಯ. ಇದು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ. ಬಾರ್ಲಿ ನೀರು ಕರಗುವ ಫೈಬರ್‌ನಿಂದ ಸಮೃದ್ಧವಾಗಿದೆ. ವಿಶೇಷವಾಗಿ ಬೀಟಾ-ಗ್ಲುಕನ್‌ಗಳು, ಇವು ಜೀರ್ಣಾಂಗ ವ್ಯವಸ್ಥೆಯಲ್ಲಿ ಕೊಲೆಸ್ಟ್ರಾಲ್‌ನೊಂದಿಗೆ ಜೋಡಿಸಿಕೊಂಡು ದೇಹದಿಂದ ಅದನ್ನು ಹೊರಹಾಕಲು ಸಹಾಯ ಮಾಡುತ್ತವೆ ಎಂದು ತಿಳಿದುಬಂದಿದೆ.
ಬಾರ್ಲಿ ನೀರನ್ನು ತಯಾರಿಸುವುದು ಹೇಗೆ? 1/4 ಕಪ್ ಬಾರ್ಲಿಯನ್ನು 4 ಕಪ್ ನೀರಿನಲ್ಲಿ ಸುಮಾರು 5-10 ನಿಮಿಷಗಳ ಕಾಲ ಕುದಿಸಿ, ನಂತರ ಅದನ್ನು ಸೋಸಿ. ಒಂದು ಚಿಟಿಕೆ ಉಪ್ಪು, ಸ್ವಲ್ಪ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ರಸದೊಂದಿಗೆ ರುಚಿಯನ್ನು ಹೆಚ್ಚಿಸಿ. ಹದವಾದ ಬೆಚ್ಚಗಿರುವಾಗ ಈ ಪಾನೀಯವನ್ನು ಸೇವಿಸಿ.
ಇದಲ್ಲದೇ ಬಾರ್ಲಿ ನೀರಿಗೆ ಇನ್ನೂ ಕೆಲ ಆರೋಗ್ಯ ಲಾಭಗಳಿವೆ. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಬಾರ್ಲಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿನ ಫೈಬರ್ ಅಂಶ ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡಲು ಸಹಾಯ ಮಾಡುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಇದು ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಮೂತ್ರಪಿಂಡದ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ವಿಷವನ್ನು ಹೊರಹಾಕುತ್ತದೆ.
ʼಸ್ವದೇಶ್ʼ ಫಿಲಂಗೆ ಈ ಹಿಂದಿ ಸೀರಿಯಲ್ಲೇ ಸ್ಫೂರ್ತಿಯಂತೆ! ಅದರಲ್ಲಿದ್ರು ನಟಿ ಮಾಲವಿಕಾ!
ಹಾಗೇ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಹೃದಯ ಕಾಯಿಲೆಗಳನ್ನು ದೂರವಿಡಬಹುದು. ಸಾಲ್ಮನ್, ಟ್ಯೂನ, ಸಾರ್ಡೀನ್ ಮತ್ತು ಹೆರಿಂಗ್ ನಂತಹ ಅನೇಕ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲಗಳಾಗಿವೆ. ಬಾದಾಮಿ, ವಾಲ್ನಟ್ಸ್ ಇತರ ಬೀಜಗಳು ಹೃದಯಕ್ಕೆ ಆರೋಗ್ಯಕರವಾದ ಕೊಬ್ಬುಗಳು, ಪ್ರೋಟೀನ್ ಮತ್ತು ನಾರಿನ ಪ್ರಬಲ ಪ್ಯಾಕ್ ಅನ್ನು ನೀಡುತ್ತವೆ. ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.
ಸಂಸ್ಕರಿಸಿದ ಮತ್ತು ರೆಸ್ಟೋರೆಂಟ್‌ನಲ್ಲಿ ತಯಾರಿಸಿದ ಆಹಾರಗಳಲ್ಲಿ ವಿಶೇಷವಾಗಿ ಉಪ್ಪು ಅಧಿಕವಾಗಿರುತ್ತದೆ. ನಿಮ್ಮ ನೆಚ್ಚಿನ ಫಾಸ್ಟ್ ಫುಡ್ ಸೇವಿಸುವ ಮೊದಲು ಎರಡು ಬಾರಿ ಯೋಚಿಸಿ. ನಿಮಗೆ ಅಧಿಕ ರಕ್ತದೊತ್ತಡ ಅಥವಾ ಹೃದಯ ವೈಫಲ್ಯವಿದ್ದರೆ ಉಪ್ಪು ಬಳಸದಿರಿ. ಹಾಗೇ ಹಾಲಿನ ಟೀಗಿಂತಲೂ ಗ್ರೀನ್ ಅಥವಾ ಬ್ಲ್ಯಾಕ್ ಟೀ ಹೃದಯಕ್ಕೆ ಒಳ್ಳೆಯದು. ದಿನಕ್ಕೆ ಒಂದರಿಂದ ಮೂರು ಕಪ್ ಚಹಾ ಕುಡಿದರೆ ನಿಮ್ಮ ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.