
ತನ್ನ ಪ್ರೀತಿಯನ್ನು ತಲುಪಲು ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಸೀಮಾ ಹೈದರ್ ಕತೆ ಕೇಳಿ ಇಡೀ ದೇಶ ಅಚ್ಚರಿಪಟ್ಟಿದೆ. ಕೆಲವರು ಪ್ರೀತಿಯ ಶಕ್ತಿಗೆ ಮಾರುಹೊದರೆ, ಕೆಲವರು ಇಡೀ ಪ್ರಕರಣವನ್ನು ಶಂಕಿಸಿದವರೂ ಇದ್ದಾರೆ. ಆ ವಿಚಾರವಿರಲಿ. ಪ್ರೀತಿಗೆ ಅದ್ಭುತ ಶಕ್ತಿ ಇರುವುದಂತೂ ನಿಜ. ಬರೀ ಮಾನವರಲ್ಲಷ್ಟೇ ಅಲ್ಲ, ಎಲ್ಲ ಜೀವಿಗಳಿಗೂ ಪ್ರೀತಿ ಬೇಕು. ಅದರಲ್ಲೂ ಮಾನವರ ಡಿಎನ್ ಎ ಹೋಲುವ ಇಲಿಗಳಿಗೂ ಪ್ರೀತಿಯಿದ್ದರೆ ಸಾಕು, ಆರೋಗ್ಯಕರವಾಗಿರುತ್ತವೆ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿ. ಕೆಲ ಸಮಯದ ಹಿಂದೆ ಓಹಿಯೋ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಒಂದು ಅಧ್ಯಯನ ಇದನ್ನು ಸಾಬೀತುಪಡಿಸಿದೆ. ಕೆಟ್ಟ ಆಹಾರ ನೀಡಿದರೂ ಅಪ್ರತಿಮ ಪ್ರೀತಿಯಿಂದ ಸಾಕಲ್ಪಟ್ಟಿದ್ದ ಇಲಿಗಳು ಅದರ ಪ್ರಭಾವ ತಡೆದುಕೊಂಡವು. ಆದರೆ, ಪ್ರೀತಿ ಸಿಗದೇ ಇದ್ದ ಇಲಿಗಳು ಕೆಟ್ಟ ಆಹಾರದ ಪ್ರಭಾವಕ್ಕೆ ತುತ್ತಾದವು. ಇಂಥದ್ದೊಂದು ಅಚ್ಚರಿಯ ಫಲಿತಾಂಶ ಈ ಅಧ್ಯಯನದಲ್ಲಿ ದೊರೆತಿದೆ. ಅಷ್ಟೇ ಅಲ್ಲ, ಪ್ರೀತಿಯೊಂದಿದ್ದರೆ ಏನನ್ನಾದರೂ ತಡೆದುಕೊಳ್ಳುವ ದೇಹದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜತೆಗೆ, ನಾವು ಸೇವಿಸುವ ಆಹಾರಕ್ಕಿಂತ ಅಧಿಕವಾಗಿ ನಮ್ಮ ಮನಸ್ಥಿತಿಯೇ ಆರೋಗ್ಯವಾಗಿರಲು ಕಾರಣವಾಗುತ್ತದೆ ಎನ್ನುವುದನ್ನೂ ತಿಳಿಸಿದೆ.
ಪ್ರೀತಿಗಿರುವ ಶಕ್ತಿ ಅಪಾರ. ಪ್ರೀತಿಯ ಭಾವನೆ (Feeling of Love) ಕೇವಲ ಮನಸ್ಸನ್ನು ಅರಳಿಸುವುದಷ್ಟೇ ಅಲ್ಲ, ಅದು ಇಡೀ ದೇಹದ ಮೇಲೆ ಸಕಾರಾತ್ಮಕ ಪ್ರಭಾವ (Positive Effect) ಬೀರುತ್ತದೆ. ಕಳೆದ ಫೆಬ್ರವರಿಯಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಒಂದು ಅಧ್ಯಯನವೂ (Study) ಇದನ್ನೇ ಹೇಳಿದೆ. ಪ್ರೀತಿಯ ಭಾವನೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಇದು ತಿಳಿಸಿದೆ. ಪ್ರೀತಿಗೆ ಸಂಬಂಧಿಸಿದ ಆಕ್ಸಿಟೋಸಿನ್ (Oxytocin) ಮತ್ತು ಖುಷಿಯಾಗಿಡುವ ಡೊಪಮೈನ್ (Dopamine) ಹಾರ್ಮೋನುಗಳ ಪಾತ್ರದ ಕುರಿತು ಕುತೂಹಲಕರ ಮಾಹಿತಿ ಈ ಅಧ್ಯಯನದಿಂದ ಹೊರಬಿದ್ದಿದೆ.
ಮಕ್ಕಳು ಹುಷಾರು ತಪ್ಪಿದಾಗ, ಸಾಮಾನ್ಯ ಜ್ವರವಲ್ಲ ಅಂತ ತಿಳ್ಕೊಳ್ಳೋದು ಹೇಗೆ?
ಒತ್ತಡವೇ (Stress) ಅನಾರೋಗ್ಯಕ್ಕೆ ಮೂಲ
ಸಾಮಾನ್ಯವಾಗಿ, ಸಿಹಿ (Sweet) ತಿಂಡಿಗಳನ್ನು ತಿಂದಾಕ್ಷಣ ಮಧುಮೇಹ (Diabetes) ಬಂದುಬಿಡುತ್ತದೆ ಎನ್ನುವ ಭಾವನೆ ಎಲ್ಲರಲ್ಲೂ ದಟ್ಟವಾಗಿದೆ. ಆದರೆ, ಸಿಹಿ ತಿಂಡಿಗಳನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಒತ್ತಡ (Stress), ಚಿಂತೆ ಹಾಗೂ ಜಡತ್ವದ ಜೀವನಶೈಲಿಯಿಂದ (Inactive Lifestyle) ಮಧುಮೇಹ ಉಂಟಾಗುತ್ತದೆ. ಆಹಾರ (Food) ಹೇಗೇ ಇದ್ದರೂ ಕ್ರಿಯಾಶೀಲವಾಗಿದ್ದರೆ ದೇಹ ಅದನ್ನು ಜೀರ್ಣಿಸಿಕೊಳ್ಳುತ್ತದೆ. ದೀರ್ಘಕಾಲ ಪೌಷ್ಟಿಕಾಂಶವಿಲ್ಲದ, ಜಂಕ್ ಆಹಾರ ಸೇವಿಸಿದರೆ ದೇಹಕ್ಕೆ ಸಮಸ್ಯೆ ಆಗುತ್ತೆಯೇ ಹೊರತು ಒಮ್ಮೊಮ್ಮೆ ಸೇವಿಸಿದರೆ ಅಥವಾ ಸಿಹಿ ಸೇವನೆ ಮಾಡಿದರೆ ಏನೂ ಆಗುವುದಿಲ್ಲ. ಆದರೆ, ವ್ಯಕ್ತಿಯಲ್ಲಿರುವ ಒತ್ತಡ ಮತ್ತು ಚಿಂತೆಯೇ ಅನಾರೋಗ್ಯಕ್ಕೆ ಮೂಲ ಕಾರಣ. ಜತೆಗೆ, ಪ್ರೀತಿಪಾತ್ರರ ಪ್ರೀತಿ ಇದ್ದಾಗ ಮನಸ್ಸು ಖುಷಿಯಾಗಿರುತ್ತದೆ ಹಾಗೂ ಎಲ್ಲ ರೀತಿಯ ರೋಗ ನಿರೋಧಕ ಶಕ್ತಿ (Immune) ಹೊಂದುತ್ತದೆ ಎಂದು ಓಹಿಯೋ ಸ್ಟೇಟ್ ವಿಶ್ವವಿದ್ಯಾಲಯದ ಅಧ್ಯಯನ ಬಹಿರಂಗಪಡಿಸಿದೆ.
ಸ್ಪರ್ಶದ (Touch) ಮಹತ್ವ
ಪ್ರೀತಿಪಾತ್ರರ ಸ್ಪರ್ಶದಿಂದ ಆತಂಕ ಮತ್ತು ಏಕಾಂಗಿತನದ ಕಳವಳ ದೂರವಾಗುತ್ತದೆ. ಹೀಗಾಗಿ, ಪರಸ್ಪರ ಸ್ಪರ್ಶ ದಂಪತಿಗಳಿಗೆ ಅತಿ ಅಗತ್ಯ. ಅಷ್ಟೇ ಅಲ್ಲ, ಖಿನ್ನತೆ, ಒತ್ತಡ, ಆತಂಕದ ಸಮಸ್ಯೆ ನಿವಾರಣೆಗೂ ಸ್ಪರ್ಶ ಅತ್ಯದ್ಭುತ ಮಾರ್ಗ. ಕೊಲಂಬಿಯಾ ವಿಶ್ವವಿದ್ಯಾಲಯ ನಡೆಸಿದ್ದ ಒಂದು ಅಧ್ಯಯನದಲ್ಲಿ, ಸಾಮಾಜಿಕ ಒಡನಾಟ, ಪ್ರೀತಿಪಾತ್ರರ ಸ್ಪರ್ಶದಿಂದ ಡೊಪಮೈನ್ ಹಾರ್ಮೋನ್ (Hormone) ಹೆಚ್ಚು ಸ್ರವಿಕೆಯಾಗುತ್ತದೆ.
Health Tips : ಹುಷಾರ್..! ಬಾಯಿ ದುರ್ವಾಸನೆ ಅಂತ ಬಳಸೋ ಮೌತ್ ವಾಶ್ ರಕ್ತದೊತ್ತಡ ಹೆಚ್ಚಿಸುತ್ತೆ
ಹೃದಯ (Heart) ಒಡೆಯೋದು ನಿಜವಾ?
ಸಾಮಾನ್ಯವಾಗಿ ಏನಾದರೂ ತೀವ್ರ ಬೇಸರವಾದಾಗ ಹೃದಯ ಚೂರಾಯಿತು, ಒಡೆದು ಹೋಯಿತು ಎನ್ನುವ ಮಾತುಗಳನ್ನು ಆಡುತ್ತೇವೆ. ವಾಸ್ತವದಲ್ಲಿ ಇದು ನಿಜವಾಗಲಿಕ್ಕಿಲ್ಲ ಎಂದುಕೊಳ್ಳಬೇಡಿ. ಒಂದು ಅಧ್ಯಯನದ ಪ್ರಕಾರ, ನೋವಿಗೆ ತುತ್ತಾಗುವ ಹೃದಯ ಒಡೆದಂತೆ ಹಾನಿಗೆ ಒಳಗಾಗುತ್ತದೆ. ಆಗ ಪ್ರೀತಿಗೆ ಸಂಬಂಧಿಸಿದ ಹಾರ್ಮೋನ್ ಆಗಿರುವ ಆಕ್ಸಿಟೋಸಿನ್ ಮದ್ದಿನಂತೆ ಕೆಲಸ ಮಾಡುತ್ತದೆ. ಹೃದಯಕ್ಕೆ ಆಗಿರುವ ಹಾನಿಯನ್ನು ರಿಪೇರಿ (Repair) ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.