Mental Health Tips: ವೃದ್ಧಾಪ್ಯ ಚೆನ್ನಾಗಿರ್ಬೇಕು ಅಂದ್ರೆ ಯವೌನದ ಈ ಗುಣಗಳನ್ನ ಬಿಡ್ಲೇ ಬೇಕು

By Suvarna News  |  First Published Jun 27, 2023, 4:23 PM IST

ವೃದ್ಧಾಪ್ಯದ ಬಗ್ಗೆ ಅನಗತ್ಯವಾಗಿ ಭಯ ಪಡುವುದನ್ನು ಬಿಟ್ಟು ಆ ಸಮಯವನ್ನು ನೆಮ್ಮದಿಯಿಂದ ಕಳೆಯಲು ಏನು ಬೇಕೋ ಅದನ್ನು ರೂಢಿಸಿಕೊಳ್ಳುವುದು ಉತ್ತಮವಾದ ಸಂಗತಿ. ವೃದ್ಧಾಪ್ಯವನ್ನು ಹಿತವಾಗಿ ಕಳೆಯಲು ಕೆಲವು ಗುಣಗಳನ್ನು ದೂರವಿಡುವುದು ಅತ್ಯಗತ್ಯ. 
 


ವಯಸ್ಸಾಗುವುದಕ್ಕೆ, ಹಿರಿಯರು ಎನಿಸಿಕೊಳ್ಳುವುದಕ್ಕೆ ಎಲ್ಲರೂ ಭಯಪಡುತ್ತಾರೆ. ನಲ್ವತ್ತು ವರ್ಷ ಕಳೆಯುತ್ತಿದ್ದ ಹಾಗೆಯೇ “ಇನ್ನೇನು, ವಯಸ್ಸಾಗುತ್ತಿದೆʼ ಎಂದು ತಮ್ಮಷ್ಟಕ್ಕೆ ತಾವೇ ಅಂದುಕೊಂಡು ಕುಗ್ಗುವ ಮಧ್ಯವಯಸ್ಕರು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ಮಾನಸಿಕವಾಗಿ ಸ್ವೀಕರಿಸಲು ಸಿದ್ಧವಾಗಿರುವುದಿಲ್ಲ. “ಈಗಲೇ ಹೀಗೆ, ಇನ್ನು ೬೦ ವರ್ಷ ಮೇಲ್ಪಟ್ಟ ಬಳಿಕ ಹೇಗಿರುತ್ತೇವೆಯೋʼ ಎನ್ನುವ ಮಾತುಗಳನ್ನು ಹರೆಯವರಿಂದ ಹಿಡಿದು ಎಲ್ಲ ವಯೋಮಾನವರೂ ಆಡುತ್ತಾರೆ. ವಯಸ್ಸಾಗುವಿಕೆ ಸಹಜ. ಅದನ್ನು ಸಹಜವಾಗೇ ಸ್ವೀಕಾರ ಮಾಡುವುದರಲ್ಲಿ ಹಿತವಿದೆ. ಏಕೆಂದರೆ, ನಿಮಗೆ ಇಷ್ಟವೋ ಇಲ್ಲವೋ ವಯಸ್ಸು ನಿಲ್ಲುವುದಿಲ್ಲ, ದಿನಗಳು ಕಳೆಯುತ್ತ ವಯಸ್ಸಾಗೇ ಆಗುತ್ತದೆ. ಹೀಗಾಗಿ, ಅದನ್ನು ಅತ್ಯಂತ ಸಹಜವಾಗಿ ಸ್ವೀಕರಿಸುವುದು ಉತ್ತಮ. ಆದರೆ, ಹಾಗೆ ಸ್ವೀಕಾರ ಮಾಡುವುದಕ್ಕೆ ಮೊದಲು ನಮ್ಮ ಮನಸ್ಥಿತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಳ್ಳಬೇಕು. ಆಗ ವಯಸ್ಸಾದರೂ ಜೀವನ ಹಿತವಾಗಿರುತ್ತದೆ. ಸಮಸ್ಯೆ ಎನಿಸುವುದಿಲ್ಲ. ವಯಸ್ಸಾಗುವ ಕ್ರಿಯೆಯನ್ನು ಅಥವಾ ಹಿರಿಯರಾಗುತ್ತ ಸಾಗುವುದನ್ನು ಹೊರೆ ಎಂದು ಭಾವಿಸಬೇಕಾಗಿಲ್ಲ. ಆದರೆ, ಕೆಲವು ಗುಣಗಳನ್ನು ಹಿಂದಿನಂತೆಯೇ ಮುಂದುವರಿಸಿದರೆ ವೃದ್ಧಾಪ್ಯ  ಕಾಡುವ ಸಮಯವಾಗುತ್ತದೆ. ವೃದ್ಧಾಪ್ಯ ಸಹಜವಾಗಿ ನೆಮ್ಮದಿಯಿಂದ ಕೂಡಿರಬೇಕೆಂದರೆ ಕೆಲವು ಗುಣಗಳನ್ನು ಕೈಬಿಡಿ.

•    ದೇಹದ ಅಗತ್ಯ (Body Needs) ನಿರ್ಲಕ್ಷಿಸಬೇಡಿ
ನಮ್ಮ ದೇಹ ನಮ್ಮೊಂದಿಗೆ ಹಲವು ರೀತಿಯಲ್ಲಿ ಸಂವಹನ (Communicate) ನಡೆಸುತ್ತದೆ. ಅಹಿತದ ಅಥವಾ ಹಿತವಾದ  (Comfort) ಭಾವನೆಗಳ ಮೂಲಕ ಮಾತನಾಡುತ್ತದೆ. ಆದರೆ, ದೇಹವನ್ನು ನಿರ್ಲಕ್ಷಿಸುವುದು ನಿಮ್ಮ ಅಭ್ಯಾಸವಾಗಿದ್ದರೆ ಬಿಟ್ಟುಬಿಡಿ. ಸುಸ್ತಾಗುತ್ತಿದ್ದರೆ ಅವಾಯ್ಡ್‌ ಮಾಡಬೇಡಿ. ದೇಹ ಜಡವೆಂದು ಅನಿಸುತ್ತಿದ್ದರೆ ನಿಮಗೆ ಹೆಚ್ಚು ಶಕ್ತಿ (Energy) ದೊರೆಯುವಂತಹ ಆಹಾರಗಳು ಬೇಕಿರಬಹುದು. ದೇಹದ ಸಂದೇಶಗಳಿಗೆ ಕಿವಿಯಾಗಿ. ಜೀವನಶೈಲಿಯಲ್ಲಿ (Lifestyle) ಕೆಲವು ಬದಲಾವಣೆ (Change) ತಂದುಕೊಳ್ಳಿ. ಉತ್ತಮ ಆಹಾರ (Food), ವ್ಯಾಯಾಮ, ನಿಯಮಿತ ತಪಾಸಣೆ ರೂಢಿಸಿಕೊಳ್ಳಿ.

Tap to resize

Latest Videos

ಮಳೆಗಾಲದಲ್ಲಿ ತುಪ್ಪ ಜಾಸ್ತಿ ತಿನ್ನಿ, ಯಾಕ್ ಗೊತ್ತಾ?

•     ಚಿಂತೆ (Worry) ಬೇಡ
ದೇಹ ಮಾಗುವ ಸಮಯದಲ್ಲಿ ಹೆಚ್ಚು ಚಿಂತೆಯಾಗಬಹುದು. ದೈಹಿಕವಾಗಿ ಶಕ್ತಿ ಕಡಿಮೆ ಆಯಿತು, ಇನ್ನೇನು ಮಾಡುವುದು ಎನ್ನುವ ಪ್ರಶ್ನೆಗಳು ಕಾಡಬಹುದು. ನಿಮ್ಮ ದೇಹದಲ್ಲಿನ್ನೂ ಶಕ್ತಿಯಿದೆ. ಶಕ್ತಿ ಇಲ್ಲದ ದಿನಗಳಲ್ಲಿ ಹೇಗೋ ಆಗುತ್ತದೆ ಎಂದು ಧೈರ್ಯವಾಗಿ ಇರಿ. ಚಿಂತಿಸುವುದನ್ನು ಬಿಡಿ. ಮಕ್ಕಳ ಬಗ್ಗೆ ಚಿಂತಿಸಿದರೂ ಪ್ರಯೋಜನವಿಲ್ಲ. ಅವರ ಜೀವನ ರೂಪಿಸಿಕೊಳ್ಳುವ ಜವಾಬ್ದಾರಿ ಅವರದ್ದು. ಹೀಗಾಗಿ, ಮಾಡುವ ಕೆಲಸವನ್ನು ಧ್ಯಾನವಿಟ್ಟು ಮಾಡುವುದು, ಧ್ಯಾನ (Meditation), ಪ್ರಾಣಾಯಾಮಗಳನ್ನು ರೂಢಿಸಿಕೊಂಡು ಮನಸ್ಸನ್ನು ತಂಪಾಗಿ ಇರಿಸಿಕೊಳ್ಳಿ.

•    ಇತಿಹಾಸ ಕೆದಕಬೇಡಿ (No Dwelling Past)
ಭವಿಷ್ಯದ (Future) ಬಗ್ಗೆ ಚಿಂತಿಸುವುದನ್ನು ಬಿಡುವಂತೆಯೇ ಇತಿಹಾಸದ ಬಗೆಗೂ ಯೋಚಿಸುವುದನ್ನು ಬಿಡಬೇಕು. ಅಂದುಕೊಂಡಂತೆ ಆಗದಿದ್ದುದು, ನಿಮ್ಮದೇ ತಪ್ಪು (Wrong) ನಿರ್ಧಾರಗಳು, ಮಕ್ಕಳ ತಪ್ಪು ನಡೆಗಳಿಂದಾದ ಸಮಸ್ಯೆಗಳ ಬಗ್ಗೆ ಚಿಂತಿಸಬೇಡಿ. ಇತಿಹಾಸದಲ್ಲಿ ಆಗಿಹೋದುದನ್ನು ಸರಿಪಡಿಸಲು ಸಾಧ್ಯವಿಲ್ಲ. ವೃದ್ಧಾಪ್ಯದಲ್ಲಿ (Aging) ನೆಮ್ಮದಿ ಬೇಕು ಎಂದಾದರೆ ಇತಿಹಾಸದ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟುಬಿಡಿ. 

•    ದ್ವೇಷದಿಂದ (Grudge) ದೂರ
ದ್ವೇಷ ನಮ್ಮನ್ನೇ ಸುಡುತ್ತದೆ. ದ್ವೇಷಿಸುವುದು ಇತಿಹಾಸವನ್ನು ಮತ್ತೊಂದು ರೀತಿಯಲ್ಲಿ ಅಗೆದಂತೆ. ಹಳೆಯ ದ್ವೇಷವನ್ನು ಇಟ್ಟುಕೊಳ್ಳುವುದು, ಬೇಸರ ಮುಂದುವರಿಸುವುದು ಅನಾರೋಗ್ಯಕರ (Unhealthy) ವಿಧಾನ. ಇದು ಕುಡಿತದ ವಿಷಕ್ಕೆ ಸಮನಾದ ವಿಷ. ದ್ವೇಷ ಇಟ್ಟುಕೊಳ್ಳುವವರು ಬೇಗ ವೃದ್ಧಾಪ್ಯಕ್ಕೆ ತುತ್ತಾಗುತ್ತಾರೆ ಎನ್ನುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.

Mental Health Tips: ಆತಂಕದ ಸಮಸ್ಯೆಯೇ? ಆತಂಕ ಬೇಡ, ದಿನವೂ ಆರೇ ಕೆಲಸ ಮಾಡಿ ಆರಾಮಾಗಿರಿ

•    ಕಟ್ಟುನಿಟ್ಟಾದ ಮನಸ್ಥಿತಿ
ವಯಸ್ಸಾಗುತ್ತಿರುವಾಗ ಹೊಸತನ್ನು ಕಲಿತುಕೊಳ್ಳುವ (New Learning) ಆಸಕ್ತಿ ತೋರಿ. ನನಗೆಲ್ಲ ಗೊತ್ತು ಎನ್ನುವ ಧೋರಣೆ ಬಿಡಿ. ಕಲಿಯುವಿಕೆ ಎನ್ನುವುದು ಅಂತ್ಯವಾಗದ ಸಂಗತಿ. ಹೊಸತರ ಕಲಿಕೆ ಮಿದುಳನ್ನು ಉಲ್ಲಸಿತವಾಗಿರಿಸುತ್ತದೆ. ಎಷ್ಟೇ ವಯಸ್ಸಾಗಿರಲಿ, ಹೊಸತನ್ನು ಕಲಿತುಕೊಳ್ಳುವುದರಿಂದ ಕೌಶಲ್ಯ, ಸಾಮರ್ಥ್ಯ (Capacity) ಹೆಚ್ಚಿ ವಿಶ್ವಾಸ ಮೂಡುತ್ತದೆ.
ಹಾಗೆಯೇ, ನಿಮ್ಮ ಭಾವನೆಗಳನ್ನು ಯಾರಲ್ಲೂ ಹೇಳಿಕೊಳ್ಳದೆ ಮುಚ್ಚಿಡಬೇಡಿ. ಒತ್ತಡ (Stress) ನಿಭಾಯಿಸುವುದನ್ನು ಕಲಿತುಕೊಳ್ಳಿ. ನ್ಯಾಯವಾದಿ ಧೋರಣೆಯಿಂದ ದೂರವಿರಿ.   

click me!