Latest Videos

ನಿಮ್ಮ ಬಾಸ್‌ನಲ್ಲಿ ಈ ಗುಣಗಳಿದ್ದರೆ, ಕಾರ್ಪೋರೇಟ್ ಸೈಕೋಫಾಥ್ ಎನ್ನಲಡ್ಡಿಯಿಲ್ಲ!

By Suvarna NewsFirst Published Jun 27, 2023, 3:51 PM IST
Highlights

ಕಾರ್ಪೋರೇಟ್​ ಜಗತ್ತಿನಲ್ಲಿ ಕೆಲವು ಬಾಸ್​ಗಳು ಮನರೋಗಿಗಳಂತೆ ವರ್ತಿಸುತ್ತಾರೆ. ಅಂಥವರ ಸ್ವಭಾವ ಹೇಗಿರುತ್ತೆ ಗೊತ್ತಾ? 
 

ನಿಮ್ಮ ಬಾಸ್​ನಲ್ಲಿ ಅಹಂಕಾರ, ಪರಭಕ್ಷಕತೆ, ಅಜಾಗರೂಕತೆ, ಸಹಾನುಭೂತಿಯ ಕೊರತೆ ಮತ್ತು  ಶೋಷಣಾ ಪ್ರವೃತ್ತಿ ಇದೆಯೆ? ಹಾಗಿದ್ದರೆ ಅವರನ್ನು ಕಾರ್ಪೊರೇಟ್​ ಸೈಕೋಪಾಥ್ಸ್​ ಎಂದು ಕರೆಯಬಹುದು. ಹೌದು! ಹೊಸ ಸಂಶೋಧನೆಯೊಂದು ಇದೀಗ ಬಹಿರಂಗಗೊಂಡಿದ್ದು ಅದರಲ್ಲಿ ಕಾರ್ಪೋರೇಟ್​ ಸೈಕೋಪಾಥ್​ಗಳ ವಿವರಣೆ ನೀಡಲಾಗಿದೆ. ಸೈಕೋಪಾಥ್​ (psychopaths) ಎಂದರೆ ಮನೋರೋಗ. ಮನೋರೋಗ ಎಂದರೇನು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇದು  ಒಂದು ನರಮಾನಸಿಕ ಅಸ್ವಸ್ಥತೆ ಆಗಿದೆ. ಇದು ಹಲವಾರು ಕಾರಣಗಳಿಂದ ರೂಪು ಪಡೆಯುತ್ತವೆ. ಆದರೆ ಮನೋರೋಗದಿಂದ ಬಳಲುತ್ತಿರುವ ವ್ಯಕ್ತಿಯು ಹಲವಾರು ಆಕ್ರಮಣಕಾರಿ ಕೆಲಸವನ್ನು ಮಾಡಬಲ್ಲರು. ಪರಾನುಭೂತಿಯ ಕೊರತೆಯಿಂದ ಸಮಾಜವಿರೋಧಿ ನಡವಳಿಕೆಯನ್ನೂ ಮಾಡಬಲ್ಲರು. ಇದು ಸಾಮಾನ್ಯವಾಗಿ ಅಪರಾಧದ ಜೊತೆಗೆ ಜೋಡಿಸಿಕೊಳ್ಳುತ್ತದೆ. ಆದರೆ ಇಲ್ಲಿ ಹೇಳಹೊರಟಿರುವುದು ಕಾರ್ಪೊರೇಟ್​ ಮನೋರೋಗಿಗಳ ಕುರಿತು.  ಕೆಲವು ಕಂಪೆನಿಗಳು ತಮಗಾಗುತ್ತಿರುವ ಆರ್ಥಿಕ ವಿನಾಶದಿಂದ ತಮ್ಮನ್ನು ರಕ್ಷಿಸಿಕೊಳ್ಳಲು  ಕಾರ್ಪೊರೇಟ್​ ಸೈಕೋಪಾಥಿಸ್ಟ್​ಗಳಂತೆ ವರ್ತಿಸಿದರೆ ಇನ್ನು ಕೆಲವರ ಗುಣ ಇದಾಗಿರುತ್ತದೆ.
 
ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ಬರ್ನಿ ಮ್ಯಾಡಾಫ್‌ನವರು  ಕಾರ್ಪೊರೇಟ್ (Corporate) ಸೈಕೋಪಾಥ್ಸ್​ ಅರ್ಥಾತ್​ ಕಾರ್ಪೋರೇಟ್​ ವಲಯದ ಮನೋರೋಗಿಗಳ ಕುರಿತು ವಿವರಿಸಿದ್ದಾರೆ.  ಅವರಿಂದ ಜನರು ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಬಗ್ಗೆಯೂ ವಿವರಿಸಿದ್ದಾರೆ. ಇದರ ಕುರಿತು  ಇಂಟರ್​ನ್ಯಾಷನಲ್​  ಜರ್ನಲ್ ಆಫ್ ಮಾರ್ಕೆಟ್ ರಿಸರ್ಚ್‌ನಲ್ಲಿ ಬರೆಯಲಾಗಿದೆ.  ಈ ತಿಂಗಳು ಪ್ರಕಟವಾದ ಹೊಸ ಸಂಶೋಧನಾ ಲೇಖನದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಇವರು ಒಂದು ರೀತಿಯಲ್ಲಿ 'ಯಶಸ್ವಿ ಮನೋರೋಗಿಗಳು' ಆಗಿರುತ್ತಾರೆ. ಅಂದರೆ ಇದು ಸಾಮಾನ್ಯ  ಮನೋರೋಗದ ಒಂದು  ಉಪವಿಭಾಗವಾಗಿದ್ದರೂ  ಸಾಮಾನ್ಯವಾಗಿ ಇದು ಪತ್ತೆಯಾಗುವುದಿಲ್ಲ. ಆದರೆ ಇಂಥ ಪ್ರವೃತ್ತಿ ಇರುವವರು ತಮ್ಮ ಆಕ್ರಮಣಕಾರಿ, ಸಾಮಾಜಿಕ ವಿರೋಧಿ   ಪ್ರವೃತ್ತಿಯಿಂದ ಇತರರನ್ನು  ನಿಯಂತ್ರಿಸಲು ಸಮರ್ಥರಾಗಿರುತ್ತಾರೆ ಎಂದು ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾಲಯದ ಸಂಶೋಧನಾ ವಿಧಾನಶಾಸ್ತ್ರಜ್ಞ ಕ್ಲೈವ್ ಬಾಡಿ ಹೇಳಿದ್ದಾರೆ. ಇವರು ಇಂಗ್ಲೆಂಡ್​ನ ಕಾರ್ಪೊರೇಟ್ ಮನೋರೋಗ ಕ್ಷೇತ್ರದಲ್ಲಿ ಪ್ರವರ್ತಕರಾಗಿದ್ದಾರೆ. ಇಂಥ ಮನೋರೋಗಿಗಳು ಸಾಮಾನ್ಯವಾಗಿ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ.  ಕಾರ್ಪೊರೇಟ್ ಸಮಾಜದಲ್ಲಿ ತುಲನಾತ್ಮಕವಾಗಿ ಪತ್ತೆಯಾಗದ ಕೆಲಸ ಮಾಡಲು ಸಮರ್ಥರಾಗಿದ್ದಾರೆ. ಇಂಥ  ವ್ಯಕ್ತಿಗಳನ್ನು ಕೈಗಾರಿಕೆಗಳು, ಸಂಘ ಸಂಸ್ಥೆಗಳು, ವ್ಯಾಪಾರದ ಸ್ಥಳ ಇಲ್ಲವೇ ಎಲ್ಲಾ ರೀತಿಯ ಉದ್ಯೋಗಗಳಲ್ಲಿ ಕಾಣಬಹುದಾಗಿದೆ.  

ಸಕ್ಸಸ್‌ಗಾಗಿ ಒದ್ದಾಡಬೇಕಿಲ್ಲ..ಯಶಸ್ವಿನ ಸೂತ್ರ ತುಂಬಾ ಸಿಂಪಲ್‌

ಇಂಥ ಮನೋರೋಗಿಗಳು ಹೆಚ್ಚಾದರೆ ಅದು  ಆರ್ಥಿಕತೆಯ ಮೇಲೆ ಪ್ರಭಾವ ಬೀರಬಹುದು ಎಂದು ಹೊಸ ಅಧ್ಯಯನ ತಿಳಿಸುತ್ತಿದೆ.  ಇಂಥವರನ್ನು ಗುರುತಿಸುವುದು ಕೂಡ ಸುಲಭ ಎನ್ನಲಾಗಿದೆ.  ಕಾರ್ಪೋರೇಟ್​ ವಲಯದಲ್ಲಿ ಸುಮಾರು ಶೇಕಡಾ 12ರಷ್ಟು ಮಂದಿ ಸೈಕೋಪಾಥ್​ಗಳು ಇದ್ದಾರೆ ಎಂದು ಈ ಅಧ್ಯಯನ ಹೇಳಿದೆ. 

ಇಂಥವರನ್ನು ಗುರುತಿಸುವುದು ಹೇಗೆ ಗೊತ್ತಾ?
- ಬಾಹ್ಯ ಮೋಡಿ ಮಾಡುವ ಸ್ವಭಾವ ಹೊಂದಿರುತ್ತಾರೆ ಹಾಗೂ ಇವರಲ್ಲಿ ಬುದ್ಧಿವಂತಿಕೆ ಸ್ವಲ್ಪ ಹೆಚ್ಚೇ ಇರುತ್ತದೆ. 
- ಇವರು ಅಸತ್ಯ ಎನಿಸಿದರೂ  ಪ್ರಾಮಾಣಿಕ ಸ್ವಭಾವದವರ ರೀತಿ ವರ್ತಿಸುತ್ತಾರೆ.
- ವಂಚನೆಯ ವ್ಯಕ್ತಿತ್ವ ಹೊಂದಿರುತ್ತಾರೆ.
- ಸಂಪೂರ್ಣವಾಗಿ ಅಹಂಕಾರಿ ವ್ಯಕ್ತಿತ್ವ ಇವರದ್ದಾಗಿರುತ್ತದೆ. 
- ವೈಯಕ್ತಿಕ ಸಂವಹನಗಳಿಗೆ ಇಂಥವರು ಪ್ರತಿಕ್ರಿಯಿಸುವುದಿಲ್ಲ
 - ಸ್ವಯಂ ಪ್ರಜ್ಞೆ ಕಳೆದುಕೊಂಡಿರುತ್ತಾರೆ
- ತಾನೇ ಸರ್ವಸ್ವ ಎನ್ನುವ ಮನೋಭಾವ ಹೊಂದಿರುತ್ತಾರೆ. 

ಪುರುಷರಿಗಿಂತ ಮಹಿಳೆಯರಿಗೆ ಸದಾ ಏನನ್ನಾದರೂ ತಿನ್ನಬೇಕು ಅನಿಸೋದು ಯಾಕೆ?
 

ಈ ಮೇಲ್ಕಂಡ ನಡವಳಿಕೆಗಳನ್ನು ನಿಮ್ಮ ಬಾಸ್​ನಲ್ಲಿ ನೀವು ಕಂಡಿರುವಿರಾ? ಮುಂದಿನ ಯೋಚನೆ ನಿಮಗೆ ಬಿಟ್ಟಿದ್ದು

 

click me!