Food
ಭಾರತೀಯ ಮನೆಗಳಲ್ಲಿ ತುಪ್ಪವನ್ನು ಅಡುಗೆಮನೆಗಳಲ್ಲಿ ಧಾರಾಳವಾಗಿ ಬಳಸಲಾಗುತ್ತದೆ. ಮಳೆಗಾಲದಲ್ಲಿ ತುಪ್ಪದ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನೋದು ನಿಮಗೆ ಗೊತ್ತಿದ್ಯಾ?
ಮಾನ್ಸೂನ್‌ನಲ್ಲಿ ತುಪ್ಪದ ಸೇವನೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪದಲ್ಲಿರುವ ಆಂಟಿಆಕ್ಸಿಡೆಂಟ್ಸ್ ಶೀತ ಮತ್ತು ವೈರಲ್ ಜ್ವರದ ವಿರುದ್ಧ ಹೋರಾಡಲು ನೆರವಾಗುತ್ತದೆ.
ತುಪ್ಪದ ಸೇವನೆ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತುಪ್ಪದ ಸೇವನೆ ಕರುಳಿನಲ್ಲಿ ಉತ್ತಮ ಬ್ಯಾಕ್ಟಿರೀಯಾ ರೂಪುಗೊಳ್ಳಲು ಕಾರಣವಾಗುತ್ತದೆ. ಇದು ಆಹಾರ ಜೀರ್ಣಕ್ಕೆ ಸಹಕಾರಿ.
ತುಪ್ಪದ ಸೇವನೆ ಚಯಾಪಚಯವನ್ನೂ ವೃದ್ಧಿಸುತ್ತದೆ. ಇದರಲ್ಲಿರುವ ಮೀಡಿಯಂ ಚೈನ್ ಫ್ಯಾಟಿ ಚಯಾಪಚಯ ಉತ್ತಮಗೊಳ್ಳಲು ಕಾರಣವಾಗುತ್ತದೆ. ಇದರಿಂದ ವೈಟ್ ಲಾಸ್ ಸಹ ಸುಲಭವಾಗುತ್ತದೆ.
ಮೆದುಳು ಚುರುಕಾಗಲು ತುಪ್ಪದ ಸೇವನೆ ತುಂಬಾ ಒಳ್ಳೆಯದು. ತುಪ್ಪದಲ್ಲಿರುವ ಒಮೆಗಾ-3 ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಮಾತ್ರವಲ್ಲ ಮೂಡ್ ಸ್ವಿಂಗ್ಸ್‌ನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ತುಪ್ಪ ದೇಹಕ್ಕೆ ಅಗತ್ಯವಾದ ವಿಟಮಿನ್ ಎ, ಡಿ,ಇ ಮತ್ತು ಕೆ2ವನ್ನು ಒದಗಿಸುತ್ತದೆ. ಈ ವಿಟಮಿನ್‌ಗಳು ದೇಹದ ಒಟ್ಟಾರೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.
ಹಾಗೆಯೇ ತುಪ್ಪ ಕ್ಯಾಲ್ಸಿಯಂ, ಮೆಗ್ನೀಷಿಯಂ, ಜಿಂಕ್ ಸೇರಿದಂತೆ ಹೇರಳವಾದ ಮಿನರಲ್‌ನ್ನು ಸಹ ಹೊಂದಿರುತ್ತದೆ. ಇದು ಮಳೆಗಾಲದಲ್ಲಿ ಆರೋಗ್ಯಕರ ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.