ಸರಿಯಾದ ನಿದ್ರೆ ಇಲ್ಲದಿದ್ದರೆ ಸ್ವಾರ್ಥವೂ ಹೆಚ್ಚುತ್ತಂತೆ!

By Suvarna NewsFirst Published Aug 29, 2022, 5:23 PM IST
Highlights

ಮನೆ ಕಟ್ಟಲು ಹೇಗೆ ಫೌಂಡೇಶನ್ ಬಹಳ ಮುಖ್ಯವಾಗುತ್ತಯೋ ಹಾಗೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ದೈನಂದಿನ ಕಾರ್ಯ ವೈಖರಿಯೇ ಉತ್ತಮ ಜೀವನದ ಅಡಿಪಾಯ. ಹಲವು ಅಂಶಗಳು ಈ ವ್ಯಾಪ್ತಿಗೆ ಬರುತ್ತದಾದರೂ, ಅದರಲ್ಲಿ ಪ್ರಮುಖವಾದುದದು ನಿದ್ರೆ. ನಿದ್ರೆ ಸರಿಯಿದ್ದರೆ ದಿನವೂ ಚೆನ್ನಾಗಿರುತ್ತದೆ ಹಾಗೂ ಆರೋಗ್ಯವೂ. ನಿದ್ರೆಗೆಟ್ಟರೆ ದೈಹಿಕ ಅಷ್ಟೇ ಅಲ್ಲ ಮಾನಸಿಕವಾಗಿಯೂ ಹಲವು ತೊಂದರೆಗಳನ್ನು ಅನುಭವಿಸುತ್ತೇವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಮನೆ ಕಟ್ಟಲು ಹೇಗೆ ಫೌಂಡೇಶನ್ ಬಹಳ ಮುಖ್ಯವಾಗುತ್ತಯೋ ಹಾಗೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ದೈನಂದಿನ ಕಾರ್ಯ ವೈಖರಿಯೇ ಉತ್ತಮ ಜೀವನದ ಅಡಿಪಾಯ. ಹಲವು ಅಂಶಗಳು ಈ ವ್ಯಪ್ತಿಗೆ ಬರುತ್ತದಾದರೂ ಅದರಲ್ಲಿ ಪ್ರಮುಖವಾದುದದು ನಿದ್ರೆ. ನಿದ್ರೆ ಸರಿಯಿದ್ದರೆ ದಿನವೂ ಚೆನ್ನಾಗಿರುತ್ತದೆ ಹಾಗೂ ಆರೋಗ್ಯವೂ. ನಿದ್ರೆಗೆಟ್ಟರೆ ದೈಹಿಕ ಅಷ್ಟೇ ಅಲ್ಲ ಮಾನಸಿಕವಾಗಿಯೂ ಹಲವು ತೊಂದರೆಗಳನ್ನು ಅನುಭವಿಸುತ್ತೇವೆ. ನಿದ್ರೆ ಸರಿಯಾಗದಿದ್ದರೆ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಈ ಬಗ್ಗೆ ಇಲ್ಲಿದೆ ಮಾಹಿತಿ. ರಾತ್ರಿಯ ನಿದ್ರೆ ವ್ಯಕ್ತಿಯ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಇದರಿಂದ ದೇಹ ಮತ್ತು ಮೆದುಳು ಸಹ ಆರೋಗ್ಯವಾಗಿರಲು ಸಾಧ್ಯ. ಇತ್ತೀಚೆಗೆ ಅಧ್ಯಯನ ಒಂದು ನಡೆದಿದ್ದು, ಇದರ ಪ್ರಕಾರ ನಿದ್ರೆ ಇಲ್ಲದ ರಾತ್ರಿಗಳು ವ್ಯಕ್ತಿಯಲ್ಲಿ ಸ್ವಾರ್ಥದ ವರ್ತನೆಗಳಿಗೆ ಕಾರಣವಾಗಬಹುದು ಎಂದು. 

ಜರ್ನಲ್ ಪಿಎಲ್‌ಓಎಸ್ ಬಯಾಲಜಿಯಲ್ಲಿ ನಿದ್ರೆ ಇಲ್ಲದ ರಾಥ್ರಿಗಳ ಬಗ್ಗೆ ಸಂಶೋಧನೆಯು ಪ್ರಕಟವಾಗಿದ್ದು, ಸಾಕಷ್ಟು ನಿದ್ರೆಯ ಕೊರತೆಯಿಂದ ಒಬ್ಬ ವ್ಯಕ್ತಿಯು ಇತರರಿಗೆ ಹೇಗೆ ಸಹಾಯ ಮಾಡಲು ಸಾಧ್ಯ ಎಂದು ಹೇಳಿದೆ. ಈ ಅಧ್ಯಯನವು ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯ ನಡೆಸಿದ್ದು, ವ್ಯಕ್ತಿಯ ನಿದ್ರೆಯಲ್ಲಿ ಒಂದು ಗಂಟೆ ಕೊರತೆಯಾದರೂ ಸಹ ಇನ್ನೊಬ್ಬರಿಗೆ ಸಹಾಯಮಾಡುವ ನಡವಳಿಕೆಯಲ್ಲಿ ಬದಲಾವಣೆಯಾಗುತ್ತದೆ. ಅಂದರೆ ವ್ಯಕ್ತಿಯಲ್ಲಿ ಸ್ವಾರ್ಥದ ಭಾವನೆ ಬೆಳೆಯುತ್ತದೆ ಎಂದು. 

ಒಂದು ಕಾಲನ್ನು ಕಂಬಳಿಯಿಂದ ಹೊರಗಿಟ್ಟು ಮಲಗಿದ್ರೆ ಸೊಂಪಾಗಿ ನಿದ್ರೆ ಬರುತ್ತಾ?

ಕೇವಲ ಒಂದು ಗಂಟೆಯ ನಿದ್ರೆಯ ನಷ್ಟವು ಇನ್ನೊಬ್ಬರಿಗೆ ಸಹಾಯ ಮಾಡುವ ಆಯ್ಕೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಹೀಗೆ ನಿದ್ರೆ ಕಳೆದುಕೊಂಡಾಗ, ನಮ್ಮ ಸಹಜ ಮಾನವ ದಯೆ ಮತ್ತು ಅಗತ್ಯವಿರುವ ಇತರೆ ಜನರಿಗೆ ಸಹಾಯ ಮಾಡಲು ಪ್ರೇರಣೆಯ ಮೇಲೆ ಸ್ಪಷ್ಟವಾದ ಹೊಡೆತ ಬೀರುತ್ತದೆ. 

ನಿದ್ರೆಯ ನಷ್ಟದ ಪರಿಣಾಮವನ್ನು ವಿಶ್ಲೇಷಿಸಲು ಮೂರು ವಿಭಿನ್ನ ಅಧ್ಯಯನಗಳನ್ನು ನಡೆಸಲಾಯಿತು. ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟ ಎರಡೂ ವ್ಯಕ್ತಿಯ ಭಾವನಾತ್ಮಕ ಮತ್ತು ಸಾಮಾಜಿಕ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಸಂಶೋಧಕರು ಗಮನಿಸಿದ್ದಾರೆ. ಒಂದು ಅಧ್ಯಯನದಲ್ಲಿ, ಡೇಲೈಟ್ ಸೇವಿಂಗ್ಸ್ ಸಮಯದ ನಂತರ ದತ್ತಿ ದೇಣಿಗೆಗಳು ಶೇ. ೧೦ರಷ್ಟು ಕುಸಿಯಿತು. ಇನ್ನೊಂದರಲ್ಲಿ, ನಿದ್ರಾಹೀನತೆಯ ನಂತರ ಇತರೆ ಜನರ ಅಗತ್ಯಗಳನ್ನು ಪರಿಗಣಿಸುವುದರೊಂದಿಗೆ ಮೆದುಳಿನ ಭಾಗದಲ್ಲಿ ಕಡಿಮೆ ಚಟುವಟಿಕೆ ಕಂಡುಬAದಿದೆ. ಅಲ್ಲದೆ ಮೂರನೇ ಅಧ್ಯಯನದಲ್ಲಿ 100 ಕ್ಕು ಹೆಚ್ಚು ಜನರಲ್ಲಿ ಸ್ವಾರ್ಥದ ಪರಿಣಾಮಗಳನ್ನು ಅಳೆಯುವಾಗ ಪ್ರಮಾಣಕ್ಕಿಂತ ನಿದ್ರೆಯ ಗುಣಮಟ್ಟವು ಹೆಚ್ಚು ಮುಖ್ಯವಾಗಿದೆ ಎಂದು ಅಧ್ಯಯನದಿಂದ ಬಂದ ಮಾಹಿತಿ.

ಆಫೀಸಿನಲ್ಲಿ ತುಂಬಾ ನಿದ್ರೆ ಬರುತ್ತಾ? ಓವರ್‌ಕಮ್ ಮಾಡಲಿವೆ ಟಿಪ್ಸ್

ನಿದ್ರೆಯು ನಮ್ಮ ಮನಸ್ಥಿತಿ ಮತ್ತು ನಮ್ಮ ಅರಿವಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸಲಾಗಿದೆ. ಹೀಗಾಗಿ ನಾವು ಇತರರೊಂದಿಗೆ ಹೇಗೆ ಸಂಬAಧ ಹೊಂದಿದ್ದೇವೆ ಎಂಬುದರ ಮೇಲೂ ಗಣನೆಗೆ ಬರುತ್ತದೆ.  ಒಮ್ಮೆ ನಿದ್ರೆ ಆರಂಭಿಸಿದರೆ ಎಷ್ಟು ಹೊತ್ತು ನಿದ್ರಿಸಿದೆ ಎನ್ನುವುದಕ್ಕಿಂತಬ ಗುಣಮಟ್ಟದ ನಿದ್ರೆ ಅಥವಾ ಉತ್ತಮ ನಿದ್ರೆ ಸಾಧ್ಯವಾಯಿತೆ ಎಂಬುದು ಮುಖ್ಯ. ಗುಣಮಟ್ಟದ ನಿದ್ರೆ ಸರಿಯಾಗಿದ್ದರೆ ನಮ್ಮಲ್ಲಿ ಸ್ವಾರ್ಥದ ಭಾವನೆ ಕಡಿಮೆಯಾಗುತ್ತದೆ ಎನ್ನಲಾಗಿದೆ. ಕ್ರಮೇಣ ಇದು ವ್ಯಕ್ತಿಯನ್ನು ಸಾಮಾಜಿಕ ಅಂತರದಿAದ ದೂರ ಇರಿಸುವುದಲ್ಲದೆ, ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 
ಕೇವಲ ಒಂದು ಗಂಟೆಯ ನಿದ್ರೆಯ ವ್ಯತ್ಯಾಸ ಅಥವಾ ಕೊರತೆಯು, ಆತನನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಲ್ಲದೆ, ವ್ಯಕ್ತಿಯಲ್ಲಿನ ಆಸೆ, ಆಕಾಂಕ್ಷೆ ಹಾಗೂ ಸಮಾಜಮುಖಿ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ನಿದ್ರೆ ಬಂದಾಗ ಅದನ್ನು ಹತ್ತಿಕ್ಕಬಾರದು. ಕಣ್ಣು ತುಂಬಾ ನಿದ್ರೆ ಮಾಡಿ ಫ್ರೆಶ್ ಮೂಡ್‌ನಲ್ಲಿ ಎದ್ದರೆ ದೈನಂದಿನ ಜೀವನ ಹಾಗೂ ಆರೋಗ್ಯ ಎರಡೂ ಉತ್ತಮವಾಗಿರುತ್ತದೆ. 

click me!