ಜಾರ್ಖಂಡ್‌ನಲ್ಲಿ ಮೂವರಿಗೆ ಹಂದಿ ಜ್ವರ: ಸೋಂಕಿಗೆ 800 ಹಂದಿ ಬಲಿ

By Kannadaprabha NewsFirst Published Aug 29, 2022, 9:39 AM IST
Highlights

ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಮೂವರಲ್ಲಿ ಹಂದಿ ಜ್ವರ ಸೋಂಕು ಕಾಣಿಸಿಕೊಂಡಿದೆ. ಕೋವಿಡ್‌ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಮೂವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಹಂದಿ ಜ್ವರದ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ರಾಂಚಿ: ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಮೂವರಲ್ಲಿ ಹಂದಿ ಜ್ವರ ಸೋಂಕು ಕಾಣಿಸಿಕೊಂಡಿದೆ. ಕೋವಿಡ್‌ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಮೂವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಹಂದಿ ಜ್ವರದ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಇನ್ನೂ ಇಬ್ಬರಲ್ಲಿ ಇದೇ ರೀತಿಯ ಲಕ್ಷಣಗಳಿದ್ದು, ಸೋಮವಾರ ಅವರ ಪರೀಕ್ಷಾ ವರದಿ ಹೊರಬರಲಿದೆ.

ಈ ನಡುವೆ ರಾಜ್ಯದಲ್ಲಿ ಆಫ್ರಿಕನ್‌ ಹಂದಿ ಜ್ವರಕ್ಕೆ ಈವರೆಗೆ 800ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜು.27ರಂದು ರಾಜ್ಯದಲ್ಲಿ ಹಂದಿಯೊಂದು ಸೋಂಕಿನಿಂದ ಸಾವನ್ನಪ್ಪಿತ್ತು. ನಂತರ ಹಂದಿಗಳ ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಆಫ್ರಿಕನ್‌ ಹಂದಿ ಜ್ವರ ಪ್ರಾಣಿಗಳಿಂದ ಮಾನವರಿಗೆ ಹಬ್ಬುವುದಿಲ್ಲ. ಆದರೆ ಪ್ರಾಣಿಗಳ ನಡುವೆ ಅತ್ಯಂತ ವೇಗವಾಗಿ ಹಬ್ಬುತ್ತದೆ.

ಮದ್ಯಪ್ರದೇಶದಲ್ಲಿ 2000 ಹಂದಿ ಸಾವು:

ಈ ನಡುವೆ ಮಧ್ಯಪ್ರದೇಶದಲ್ಲೂ ಆಫ್ರಿಕನ್‌ ಹಂದಿಜ್ವರ ಕಾಟವಿದೆ. ಇಲ್ಲಿ 2 ವಾರದಲ್ಲಿ 2000 ಹಂದಿಗಳು ಬಲಿಯಾಗಿವೆ ಎಂದು ತಿಳಿದು ಬಂದಿದೆ.  

ಟೊಮೇಟೋ ಜ್ವರ ಭೀತಿ ಬೆನ್ನಲ್ಲೇ ಪಂಜಾಬ್‌ನಲ್ಲಿ ಆಫ್ರಿಕನ್ 'ಹಂದಿ ಜ್ವರ' ಪತ್ತೆ

ಹಾಗೆಯೇ ಛತ್ತೀಸ್‌ಗಡದಲ್ಲು ಹಂದಿ ಜ್ವರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಹಂದಿ ಜ್ವರಕ್ಕೆ ಆಗಸ್ಟ್‌ನಲ್ಲಿ ಬಲಿಯಾದವರ ಸಂಖ್ಯೆ ಒಂಭತ್ತಕ್ಕೇರಿದೆ. ಛತ್ತೀಸ್‌ಗಡದ ಹಲವು ಜಿಲ್ಲೆಗಳಲ್ಲಿ ಹಂದಿ ಜ್ವರ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಛತ್ತೀಸ್‌ಗಡ ರಾಜಧಾನಿ ರಾಯ್‌ಪುರದಲ್ಲಿ ಸೋಂಕಿತರ ಸಂಖ್ಯೆ ಅತ್ಯಧಿಕ ಸಂಖ್ಯೆಯಲ್ಲಿದೆ. ಶನಿವಾರ ಸಂಜೆ ವೇಳೆ ತಪಾಸಣೆ ನಡೆಸಿದಾಗ 16 ಹೊಸ ಸೋಂಕಿತರಿಗೆ ಪಾಸಿಟಿವ್ ಬಂದಿದೆ. ಅದರಲ್ಲಿ 14 ಜನ ಸೋಂಕಿತರು ರಾಯ್‌ಪುರದವರು. ಹಾಗೂ ಮತ್ತಿಬ್ಬರು ಕ್ರಮವಾಗಿ ರಾಜ್‌ಗರ್ ಹಾಗೂ ಸೂರಜ್‌ಪುರದವರು, ಇವರನ್ನು ಸೇರಿಸಿದರೆ ಹೆಚ್‌1ಎನ್‌1 ಸೋಂಕಿತರ ಸಂಖೈ 161ಕ್ಕೆ ಏರಿದೆ. 

ಹರಡ್ತಿದೆ ಡೇಂಜರಸ್ ಹಂದಿ ಜ್ವರ; ಮಾಂಸ ತಿನ್ನೋದ್ರಿಂದ ಕಾಯಿಲೆ ಬರುತ್ತಾ ?

ಬಿಲಾಸ್ಪುರ ಹಾಗೂ ರಾಯ್‌ಪುರದ 62 ವರ್ಷದ ಇಬ್ಬರು ಕೆಲ ದಿನಗಳ ಹಿಂದೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ತಪಾಸಣೆ ನಡೆಸಿದಾಗ ಇಬ್ಬರಿಗೂ ಹಂದಿಜ್ವರವಿರುವುದು ತಿಳಿದು ಬಂದಿತ್ತು. ನಂತರ ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಇವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಹಂದಿ ಜ್ವರ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.  ರಾಜ್ಯದಲ್ಲಿ ಒಟ್ಟು 161 ಸೋಂಕಿತರಿದ್ದು, ಅದರಲ್ಲಿ ರಾಯ್‌ಪುರವೊಂದರಲ್ಲೇ 92 ಜನ ರೋಗಿಗಳಿದ್ದಾರೆ.

click me!