Mental Health : ರಾತ್ರಿ ನಿದ್ರೆ ಸೊಂಪಾಗಿ ಆಗ್ಬೇಕು ಅಂದ್ರೆ ಈ ವಸ್ತು ಬಳಸಿ ನೋಡಿ

By Suvarna NewsFirst Published Jun 30, 2023, 7:00 AM IST
Highlights

ರಾತ್ರಿ ಪೂರ್ತಿ ನಿದ್ರೆ ಬಂದಿಲ್ಲ ಅಂತಾ ಮಗ್ಗಲು ಬದಲಿಸ್ತಿದ್ರೆ ಬೆಳಿಗ್ಗೆ ಮೂಡ್ ಹಾಳಾಗಿರುತ್ತೆ. ಆರೋಗ್ಯವೂ ದಿನೇ ದಿನೇ ಹದಗೆಡುತ್ತೆ. ನಿದ್ರೆ ಸರಿಯಾಗಿ ಆಗ್ಬೇಕು ಅಂದ್ರೆ ಮನೆಯಲ್ಲಿರೋ ಅದ್ರ ಜೊತೆ ಮಲಗಿನೋಡಿ. ಅದ್ಯಾವುದು ಅಂದ್ರಾ?
 

ಒಳ್ಳೆಯ ನಿದ್ರೆ ಉತ್ತಮ ಆರೋಗ್ಯದ ಮೂಲವಾಗಿದೆ. ನಿದ್ರೆ ಚೆನ್ನಾಗಿ ಬಂತೆಂದರೆ ಅದರಿಂದ ಅನೇಕ ರೀತಿಯ ಮಾನಸಿಕ ಹಾಗೂ ಶಾರೀರಿಕ ಸಮಸ್ಯೆಗಳು ದೂರವಾಗುತ್ತವೆ ಹಾಗೂ ಇದರಿಂದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ರಾತ್ರಿ (Night) ಮಲಗುವಾಗ ಕೆಲವರು ತಲೆದಿಂಬಿನ ಆಸರೆ ಪಡೆಯುತ್ತಾರೆ. ಕೆಲವರು ಮೆತ್ತನೆಯ ಬ್ಲಾಂಕೆಟ್ (Blanket) ಅನ್ನು ಹಿಡಿದು ಮಲಗುತ್ತಾರೆ. ಪುಟ್ಟ ಮಕ್ಕಳಿಗಂತೂ ಪಕ್ಕದಲ್ಲಿ ಗೊಂಬೆ ಬೇಕೆ ಬೇಕು. ಚಿಕ್ಕ ಮಕ್ಕಳಷ್ಟೇ ಏಕೆ ದೊಡ್ಡವರು ಕೂಡ ಕೆಲವರು ಟೆಡ್ಡಿ ಬೇರ್ ಹಿಡಿದು ಮಲಗುತ್ತಾರೆ. ತಲೆದಿಂಬು, ಟೆಡ್ಡಿ (Teddy) ಬೇರ್ ಹಿಡಿದು ಮಲಗುವ ಅಭ್ಯಾಸ ಇರುವವರಿಗೆ ಅವುಗಳನ್ನು ಹಿಡಿದುಕೊಳ್ಳದೇ ಮಲಗಿದರೆ ನಿದ್ದೆಯೇ ಬರುವುದಿಲ್ಲ. ಅಷ್ಟರಮಟ್ಟಿಗೆ ಅವರು ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ಹೀಗೆ ಮೆತ್ತನೆಯ ಗೊಂಬೆಗಳನ್ನು ಹಿಡಿದು ಮಲಗೋದ್ರಿಂದ ಉತ್ತಮ ನಿದ್ರೆ ಬರುತ್ತದೆ ಮತ್ತು ಒತ್ತಡ ಹಾಗೂ ಆತಂಕವೂ ಕಡಿಮೆಯಾಗುತ್ತಂತೆ. ಈಗ ವೈದ್ಯಕೀಯ ವಿಜ್ಞಾನವೂ ಈ ಮಾತನ್ನು ಸಾಬೀತುಪಡಿಸಿದೆ. ಇಂತಹ ಅಭ್ಯಾಸ ಕೆಲವರಿಗೆ ಬಾಲಿಶ ಎನಿಸಬಹುದು. ಆದರೆ ಇದು ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಅನೇಕ ವೈದ್ಯರು ಹೇಳುತ್ತಾರೆ.

Latest Videos

ಡೆಂಗ್ಯೂ-ಮಲೇರಿಯಾ ಜ್ವರ ಶೀಘ್ರ ನಿವಾರಣೆಗೆ ಆಯುರ್ವೇದ ಔಷಧಿಗಳು

ಟೆಡ್ಡಿ ಬೇರ್ ಅನ್ನು ತಬ್ಬಿಕೊಂಡು ಮಲಗಿದ್ರೆ ಆತಂಕ ಕಡಿಮೆಯಾಗುತ್ತೆ : ಎನ್ಐಎಚ್ ನ್ಯೂಸ್ ವರದಿಯ ಪ್ರಕಾರ ಪ್ರತಿಶತ 20ರಷ್ಟು ಅಮೆರಿಕದ ವಯಸ್ಕರು ಆತಂಕದ ಕಾರಣ ಸರಿಯಾಗಿ ನಿದ್ರೆ ಮಾಡುತ್ತಿಲ್ಲ. ಇದರಿಂದ ಅವರಲ್ಲಿ ಇನ್ಸೊಮ್ನಿಯಾ ತೊಂದರೆ ಕಾಣಿಸಿಕೊಳ್ಳುತ್ತಿದೆ. ಆತಂಕ ಮತ್ತು ನಿದ್ರೆ ಎರಡೂ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಒಬ್ಬ ವ್ಯಕ್ತಿಗೆ ಆತಂಕವಿದ್ದರೆ ಆತ ಚೆನ್ನಾಗಿ ನಿದ್ದೆ ಮಾಡಲಾರ. ಆತಂಕವು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಆಕ್ಸ್ ಫರ್ಡ್ ಅಕಾಡೆಮಿಕ್ ಪ್ರಕಟಿಸಿದ ವರದಿಯ ಪ್ರಕಾರ, ಮೃದುವಾದ ಹೊದಿಕೆ, ಟೆಡ್ಡಿ ಬೇರ್, ಮೃದುವಾದ ದಿಂಬು ಮುಂತಾದವುಗಳೊಂದಿಗೆ ಮಲಗೋದ್ರಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಬಹುದಾಗಿದೆ. ಇಂತಹ ಮೆತ್ತನೆಯ ವಸ್ತುಗಳನ್ನು ಹಿಡಿದು ಮಲಗುವುದರಿಂದ ಒಂದು ರೀತಿಯ ಕಂಫರ್ಟ್ ಸೆಂನ್ಸೇಶನ್ ಉಂಟಾಗುತ್ತೆ. ಅದರಿಂದಲೇ ಆತಂಕ, ಒತ್ತಡಗಳು ದೂರವಾಗಿ ಶರೀರ ಮತ್ತು ಮನಸ್ಸು ಎರಡಕ್ಕೂ ಆರಾಮ ಸಿಗುತ್ತೆ ಎಂದು ವರದಿ ಹೇಳಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಮೆತ್ತನೆಯ ಗೊಂಬೆಗಳು ಕೇವಲ ಮಕ್ಕಳ ಆಟಿಕೆಗಳಷ್ಟೇ ಅಲ್ಲ ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಕೂಡ ಸಹಕಾರಿಯಾಗಿದೆ.

ಮಳೆ ಬಂದ್ರೆ ಚಡ್ಡಿ ಒಣಗೋಲ್ಲ, ಆದ್ರೆ ಒದ್ದೆ ಒಳ ಉಡುಪು ತರೋ ಅಪಾಯ ಗೊತ್ತಾ?

ಮೆತ್ತನೆಯ ವಸ್ತುಗಳ ಜೊತೆ ಮಲಗೋದ್ರಿಂದ ಉಂಟಾಗುವ ಪ್ರಯೋಜನಗಳು : 

ಒಂಟಿತನ ದೂರವಾಗುತ್ತೆ : ಒಮ್ಮೆ ನೀವು ಒಂಟಿಯಾಗಿದ್ದರೆ ಅಥವಾ ಮನೆಯಿಂದ ದೂರವಿದ್ದರೆ ಒಂಟಿತನ ನಿಮ್ಮನ್ನು ಕಾಡಬಹುದು. ಅಂತಹ ಸಮಯದಲ್ಲಿ ಮೆತ್ತನೆಯ ದಿಂಬು, ಗೊಂಬೆ, ಹೊದಿಕೆ ಮುಂತಾದವು ನಿಮ್ಮ ಒಂಟಿತನವನ್ನು ಹೋಗಲಾಡಿಸಬಹುದು.

ಕಂಫರ್ಟ್ ಎನಿಸುತ್ತೆ : ಕೆಲವೊಮ್ಮೆ ನಾವು ಮಲಗುವ ಹಾಸಿಗೆ ಅಥವಾ ಕೋಣೆಯ ವಾತಾವರಣ ನಮಗೆ ಹಿತ ಎನಿಸುವುದಿಲ್ಲ. ಆಗ ನಿದ್ರೆ ಚೆನ್ನಾಗಿ ಬರಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ನೀವು ಮೆತ್ತನೆಯ ಟೆಡ್ಡಿ ಬೇರ್ ಅನ್ನು ತಬ್ಬಿ ಮಲಗಿದರೆ ನಿಮಗೆ ಕಂಫರ್ಟ್ ಫೀಲ್ ಆಗುತ್ತದೆ ಮತ್ತು ನಿದ್ರೆಯೂ ಚೆನ್ನಾಗಿ ಬರುತ್ತದೆ.

ಆಕ್ಸಿಟೋಸಿನ್ ಬಿಡುಗಡೆ ಮಾಡುತ್ತದೆ : ನಾವು ಮೆತ್ತನೆಯ ಆಟಿಕೆ ಅಥವಾ ಹೊದಿಕೆಗಳನ್ನು ಅಪ್ಪಿಕೊಂಡು ಮಲಗುವುದರಿಂದ ಶರೀರದಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಆಕ್ಸಿಟೋಸಿನ್ ನಮ್ಮ ದೇಹವನ್ನು ಶಾಂತಗೊಳಿಸುವ ಮತ್ತು ಒಳ್ಳೆಯ ಅನುಭೂತಿ ನೀಡುವ ಹಾರ್ಮೋನ್ ಆಗಿದೆ.

ಶಾರೀರಿಕ ಆರೋಗ್ಯ (Physical Health) : ಮೆತ್ತನೆಯ ವಸ್ತುಗಳನ್ನು ಹಿಡಿದು ಮಲಗುವುದರಿಂದ ಮಾನಸಿಕ ಆರೋಗ್ಯದ ಜೊತೆಗೆ ಶಾರೀರಿಕ ಆರೋಗ್ಯವೂ ಸುಧಾರಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಒಳ್ಳೆಯ ನಿದ್ರೆ ಬಂದಾಗ ಶರೀರದ ಹೀಲಿಂಗ್ ಪ್ರೊಸೆಸ್ ವೃದ್ಧಿಯಾಗುತ್ತದೆ. ಇದರಿಂದ ಅನೇಕ ಶಾರೀರಿಕ ಸಮಸ್ಯೆಗಳು ತಾವಾಗಿಯೇ ದೂರಹೋಗುತ್ತದೆ.
 

click me!