ಡಯಟ್‌ ಕೋಕ್‌, ಚ್ಯೂಯಿಂಗ್‌ ಗಮ್‌ಗಳಲ್ಲಿರುವ ಆಸ್ಪರ್‌ಟೇಮ್‌ ಸ್ವೀಟ್ನರ್‌ನಿಂದ ಬರುತ್ತೆ ಕ್ಯಾನ್ಸರ್‌

By Kannadaprabha NewsFirst Published Jun 30, 2023, 7:17 AM IST
Highlights

ಸಕ್ಕರೆಗೆ ಪರ್ಯಾಯವಾಗಿ ವಿಶ್ವಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುವ ಕೃತಕ ಸ್ವೀಟ್ನರ್‌ ‘ಆಸ್ಪರ್‌ಟೇಮ್‌’ ಸೇವನೆ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬ ಮಹತ್ತರ ಘೋಷಣೆಯನ್ನು ಜಾಗತಿಕ ಆರೋಗ್ಯ ಸಂಸ್ಥೆಗಳು ಮುಂದಿನ ವಾರ ಮಾಡಲಿವೆ ಎಂದು ವರದಿಗಳು ತಿಳಿಸಿವೆ.

ನವದೆಹಲಿ: ಸಕ್ಕರೆಗೆ ಪರ್ಯಾಯವಾಗಿ ವಿಶ್ವಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುವ ಕೃತಕ ಸ್ವೀಟ್ನರ್‌ ‘ಆಸ್ಪರ್‌ಟೇಮ್‌’ ಸೇವನೆ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬ ಮಹತ್ತರ ಘೋಷಣೆಯನ್ನು ಜಾಗತಿಕ ಆರೋಗ್ಯ ಸಂಸ್ಥೆಗಳು ಮುಂದಿನ ವಾರ ಮಾಡಲಿವೆ ಎಂದು ವರದಿಗಳು ತಿಳಿಸಿವೆ.

ಸಕ್ಕರೆ ಅಂಶ ಇಲ್ಲ ಎಂದು ಜನರು ಹೆಚ್ಚಾಗಿ ಸೇವಿಸುವ ಕೋಕಾ ಕೋಲಾದ ಡಯಟ್‌ ಸೋಡಾದಿಂದ ಹಿಡಿದು ಮಾರ್ಸ್ ಕಂಪನಿಯ ಎಕ್ಸ್‌ಟ್ರಾ ಚ್ಯೂಯಿಂಗ್‌ ಗಮ್‌ ಹಾಗೂ ಇನ್ನಿತರೆ ಹಲವಾರು ಪಾನೀಯಗಳಲ್ಲಿ ಆಸ್ಪರ್‌ಟೇಮ್‌ (Aspartame) ಅನ್ನು ಬಳಕೆ ಮಾಡಲಾಗುತ್ತಿದೆ ಎಂದು ರಾಯಿಟ​ರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಹೀಗೆ ಬಳಕೆಯಾಗುತ್ತಿರುವ ಆಸ್ಪರ್‌ಟೇಮ್‌ನಿಂದ ಮಾನವರಿಗೆ ಕ್ಯಾನ್ಸರ್‌ (Cancer) ಬರಬಹುದು ಎಂದು ಜುಲೈನಲ್ಲಿ ಅಂತಾರಾಷ್ಟ್ರೀಯ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆ (IARC) ಹಾಗೂ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಕ್ಯಾನ್ಸರ್‌ ಸಂಶೋಧನಾ ವಿಭಾಗಗಳು ಘೋಷಣೆ ಮಾಡಲಿವೆ ಎಂದು ‘ರಾಯಿಟ​ರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಬೆಳವಣಿಗೆ ಆಹಾರ ಉದ್ಯಮ ಹಾಗೂ ನಿಯಂತ್ರಕ ಸಂಸ್ಥೆಗಳ ನಡುವೆ ಸಮರವನ್ನೇ ಸೃಷ್ಟಿಸುವ ಸಾಧ್ಯತೆ ಇದೆ.

ಸಕ್ಕರೆ ಪಕ್ಕಕ್ಕಿಟ್ಟು Artificial Sweetener ಬಳಸ್ತೀರಾ ? ಹೃದಯದ ಆರೋಗ್ಯ ಕೆಡುತ್ತೆ ಹುಷಾರ್‌

ಬಾಹ್ಯ ಪರಿಣತರ ಸಮೂಹದ ಸಭೆಯನ್ನು ನಡೆಸಿ ತನ್ನ ನಿರ್ಧಾರವನ್ನು ಐಎಆರ್‌ಸಿ ಅಂತಿಮಗೊಳಿಸಿದೆ. ಜು.14ರಂದು ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಅದೇ ದಿನ ಡಬ್ಲ್ಯುಎಚ್‌ಒ ಸಮಿತಿ ಕೂಡ ಘೋಷಣೆ ಮಾಡಲಿದೆ ಎಂದು ವರದಿ ಹೇಳಿದೆ.  ಆಸ್ಪರ್‌ಟೇಮ್‌ ಬಳಕೆಯ ಕುರಿತು ಹಲವಾರು ವರ್ಷಗಳಿಂದ ಅಧ್ಯಯನಗಳು ನಡೆಯುತ್ತಲೇ ಇವೆ. ಆಸ್ಪರ್‌ಟೇಮ್‌ ಸೇರಿದಂತೆ ಕೃತಕ ಸ್ವೀಟ್ನರ್‌ ಸೇವಿಸುವ 1 ಲಕ್ಷ ಮಂದಿಯ ಮೇಲೆ ಕಳೆದ ವರ್ಷ ಫ್ರಾನ್ಸ್‌ನಲ್ಲಿ ಅಧ್ಯಯನ ನಡೆದಿತ್ತು. ಅವರಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಿನ ಕ್ಯಾನ್ಸರ್‌ ಅಪಾಯ ಕಂಡುಬಂದಿತ್ತು. 2000ನೇ ಇಸ್ವಿಯ ಆರಂಭದಲ್ಲಿ ಇಟಲಿಯ ರಮಜಿನಿ ಸಂಸ್ಥೆ ಆಸ್ಪರ್‌ಟೇಮ್‌ನಿಂದಾಗಿ ಇಲಿ, ಹೆಗ್ಗಣಗಳಲ್ಲಿ ಕ್ಯಾನ್ಸರ್‌ ಗೋಚರಿಸುವುದನ್ನು ಪತ್ತೆ ಮಾಡಿತ್ತು.

click me!