ವಾಯು ಮಾಲಿನ್ಯ ಹೆಚ್ಚಾಗ್ತಿದೆ ಎಂಬ ಸುದ್ದಿಯನ್ನು ನೀವು ಕೇಳ್ತಿದ್ದೀರಿ. ಈ ಮಾಲಿನ್ಯ ನಮ್ಮ ಕಣ್ಣಿಗೆ ಕಾಣದೆ ಹೋದ್ರೂ ಆರೋಗ್ಯವನ್ನು ಹಾಳು ಮಾಡ್ತಿದೆ. ಅನೇಕ ಸಮಸ್ಯೆ ಇದ್ರಿಂದ ಕಾಡ್ತಿದೆ. ನಿಮ್ಮ ಲೈಂಗಿಕ ಆಸಕ್ತಿ ಕಡಿಮೆ ಆಗಲು ವಾಯು ಮಾಲಿನ್ಯ ಕಾರಣವಾಗ್ತಿದೆ.
ದಿನೇ ದಿನೇ ಭೂಮಿ ಮಲೀನಗೊಳ್ತಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ಧ ಮಾಲಿನ್ಯ ಸೇರಿದಂತೆ ಅನೇಕ ಮಾಲಿನ್ಯ ವಾತಾವರಣವನ್ನು ವಿಷ ಮಾಡ್ತಿದೆ. ನಾವು ಉಸಿರಾಡುವ ಗಾಳಿ ವಿಷಪೂರಿತವಾಗ್ತಿದೆ. ಇದ್ರಿಂದಾಗಿ ಅನೇಕ ರೋಗಗಳಿಗೆ ಮನುಷ್ಯ ಬಲಿ ಆಗ್ತಿದ್ದಾನೆ. ಈ ದೀಪಾವಳಿ ಸಮಯದಲ್ಲಿ ವಾಯು ಮಾಲಿನ್ಯ ಮತ್ತಷ್ಟು ಹೆಚ್ಚಾಗುತ್ತದೆ. ಪಟಾಕಿ ನಮ್ಮ ಪರಿಸರವನ್ನು ಹಾಳು ಮಾಡುತ್ತದೆ. ಮಾಲಿನ್ಯದಿಂದ ಸೋಂಕುಗಳು, ಅಲರ್ಜಿ, ಚರ್ಮದ ಸಮಸ್ಯೆ, ಉಸಿರಾಟದ ತೊಂದರೆ ಮಾತ್ರ ನಮ್ಮನ್ನು ಕಾಡುವುದಿಲ್ಲ. ಮಾಲಿನ್ಯ ಮನುಷ್ಯನ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಮಾಲಿನ್ಯ ಹಾಗೂ ಲೈಂಗಿಕ ಜೀವನದ ಮಧ್ಯೆಯೂ ಸಂಬಂಧವಿದೆ. ನಾವಿಂದು ಶಾರೀರಿಕ ಸಂಬಂಧದ ಮೇಲೆ ಪರಿಸರ ಮಾಲಿನ್ಯ ಹೇಗೆ ಅಡ್ಡಪರಿಣಾಮ ಬೀರುತ್ತದೆ ಎಂಬುದನ್ನು ಹೇಳ್ತೇವೆ.
ಲೈಂಗಿಕ (Sexual) ಜೀವನದ ಮೇಲೆ ಪರಿಸರ (Environment) ಮಾಲಿನ್ಯದ ಪ್ರಭಾವ :
ಕಡಿಮೆಯಾಗುವ ಕಾಮಾಸಕ್ತಿ : ವಾಯು ಮಾಲಿನ್ಯವು ಕಾಮಾಸಕ್ತಿಯ ಕೊರತೆಯನ್ನು ಉಂಟುಮಾಡಬಹುದು. ಇದು ವೀರ್ಯ (Sperm) ದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಹೈಡ್ರೋಕಾರ್ಬನ್‌ಗಳು ಮತ್ತು ಪಾದರಸ ಮತ್ತು ಕ್ಯಾಡ್ಮಿಯಮ್‌ನಂತಹ ಭಾರವಾದ ಲೋಹಗಳು ಹಾರ್ಮೋನಿನ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತವೆ. ಇದ್ರಿಂದ ಪುರುಷರಲ್ಲಿ ವೀರ್ಯದ ಗುಣಮಟ್ಟ ಕಡಿಮೆ ಆಗುತ್ತದೆ. ಈ ಕಾರಣದಿಂದಾಗಿ, ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೊಜೆನ್ ಮಟ್ಟಗಳು ವೇಗವಾಗಿ ಇಳಿಯುತ್ತವೆ. ಇದು ಕಡಿಮೆಯಾದ್ರೆ ಸೆಕ್ಸ್ ಮೇಲಿನ ಆಸಕ್ತಿ ಕೂಡ ಕಡಿಮೆ ಆಗುತ್ತದೆ.
ಸಾವಿನ ಹತ್ತಿರ ಹೋಗಿ ವಾಪಸ್ ಬರೋ ಅನುಭವ ಹೇಗಿರುತ್ತೆ? ಹೋಗಿ ಬಂದವರು ಹೇಳೋದೇನು?
ಟೆಸ್ಟೋಸ್ಟೆರಾನ್ - ಈಸ್ಟ್ರೊಜೆನ್ ಮಟ್ಟದಲ್ಲಿ ಕುಸಿತ : ಹಾರ್ಮೋನುಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಾರ್ಟಿಸೋಲ್, ಟೆಸ್ಟೋಸ್ಟೆರಾನ್, ಈಸ್ಟ್ರೊಜೆನ್ ಮತ್ತು ಥೈರಾಯ್ಡ್ ಲೈಂಗಿಕವಾಗಿ ಸಕ್ರಿಯವಾಗಿರಿಸಲು ಮತ್ತು ಮನಸ್ಥಿತಿಯನ್ನು ಸಮತೋಲನದಲ್ಲಿಡಲು ಅಗತ್ಯವಾದ ಕೆಲವು ಹಾರ್ಮೋನುಗಳಾಗಿವೆ. ಪರಿಸರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು ಈ ಹಾರ್ಮೋನುಗಳ ಬಿಡುಗಡೆಗೆ ಅಡ್ಡಿಯುಂಟು ಮಾಡುತ್ತದೆ. ಇದರಿಂದಾಗಿ ಲೈಂಗಿಕ ಜೀವನ ಹಾಳಾಗುತ್ತದೆ. ಮಾಲಿನ್ಯ ಮಹಿಳೆ ಹಾಗೂ ಪುರುಷರ ಉದ್ರೇಕತೆಯನ್ನು ಕಡಿಮೆ ಮಾಡುತ್ತದೆ. ಇದ್ರಿಂದ ಅವರು ಸಂಭೋಗ ಸುಖವನ್ನು ಸಂಪೂರ್ಣ ಆನಂದಿಸಲು ಸಾಧ್ಯವಾಗುವುದಿಲ್ಲ. ಇಬ್ಬರಲ್ಲಿ ನಿರಾಸಕ್ತಿ ಕಂಡುಬರುತ್ತದೆ.
ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ : ಸುತ್ತಲಿನ ಪರಿಸರವು ಕಲುಷಿತವಾದ್ರೆ ಅದು ಪುರುಷರ ಮೇಲೆ ಪರಿಣಾಮ ಬೀರುತ್ತದೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತದೆ. ವಿಷಕಾರಿ ಪದಾರ್ಥಗಳನ್ನು ಉಸಿರಾಡುವುದ್ರಿಂದ ರಕ್ತನಾಳಗಳಲ್ಲಿ ಉರಿಯೂತ ಹೆಚ್ಚಾಗುತ್ತದೆ. ಆಮ್ಲಜನಕ ಎಲ್ಲ ಪ್ರದೇಶಕ್ಕೆ ಸರಿಯಾಗಿ ತಲುಪುವುದಿಲ್ಲ. ಅಧ್ಯಯನವೊಂದರ ಪ್ರಕಾರ, ವಾಹನಗಳಿಂದ ಹೊರಸೂಸುವ ಮಾಲಿನ್ಯವು ನಿಮಿರುವಿಕೆಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿದೆ.
Health Tips : ನೋವು ನಿವಾರಕ ಮಾತ್ರೆ Vs ಜೆಲ್.. ಯಾವುದಕ್ಕೆ ಫುಲ್ ಮಾರ್ಕ್ಸ್ ?
ಗರ್ಭಿಣಿಯರನ್ನು ಕಾಡುತ್ತೆ ಈ ಸಮಸ್ಯೆ : ವಾಯುಮಾಲಿನ್ಯ ಲೈಂಗಿಕ ಜೀವನದ ಜೊತೆಗೆ ಗರ್ಭಿಣಿಯರ ಮೇಲೂ ಅಡ್ಡಪರಿಣಾಮವನ್ನುಂಟು ಮಾಡುತ್ತದೆ. ಗರ್ಭಿಣಿಯರ ಆರೋಗ್ಯ ಇದ್ರಿಂದ ಹದಗೆಡುತ್ತದೆ. ಭ್ರೂಣಗಳ ಮೇಲೂ ಕೆಟ್ಟಪರಿಣಾಮವಾಗುತ್ತದೆ. ಶಿಶು ಮರಣ, ಕಡಿಮೆ ಜನನ ತೂಕ, ದುರ್ಬಲಗೊಂಡ ಶ್ವಾಸಕೋಶದ ಬೆಳವಣಿಗೆ ಮತ್ತು ಅಭಿವೃದ್ಧಿಯಾಗದ ರೋಗನಿರೋಧಕ ಶಕ್ತಿಯಂತಹ ಕೆಲವು ಅಡ್ಡಪರಿಣಾಮಗಳು ಕಂಡುಬರಬಹುದು.
ವಾಯುಮಾಲಿನ್ಯದಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ : ಕಲುಷಿತ ಗಾಳಿಯಲ್ಲಿ ದೀರ್ಘಕಾಲ ಉಳಿಯುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಕಲುಷಿತ ಗಾಳಿಯಲ್ಲಿ ಸ್ವಲ್ಪ ಸಮಯ ಕಳೆದ್ರೆ ಕಣ್ಣುಗಳಲ್ಲಿ ಕಿರಿಕಿರಿ ಶುರುವಾಗುತ್ತದೆ. ಕಣ್ಣು ಉರಿ ಜೊತೆ ಕಣ್ಣುಗಳಲ್ಲಿ ನೀರು ಬರುವುದು ಅಥವಾ ಕಣ್ಣುಗಳು ಕೆಂಪಾಗುವುದು ಮುಂತಾದ ಸಮಸ್ಯೆ ಕಾಡುತ್ತದೆ. ಇದ್ರಿಂದ ಮೂಗು ಕಟ್ಟುವಿಕೆಯಂತಹ ಸಮಸ್ಯೆಗಳು ಕಂಡುಬರುತ್ತವೆ. ಅಲ್ಲದೆ ಗಂಟಲು ನೋವು, ಗಂಟಲಿನಲ್ಲಿ ಕಿರಿಕಿರಿ ಕಾಣಿಸಿಕೊಳ್ಳುತ್ತದೆ. ಚರ್ಮದ ಮೇಲೆ ದುದ್ದು, ಕೂದಲು ಉದುರುವಂತಹ ಸಮಸ್ಯೆಯನ್ನು ಕೂಡ ನೀವು ಅನುಭವಿಸುತ್ತೀರಿ.