ಯಾವುದೋ ಕಾರಣಕ್ಕೆ ದೇಹದಲ್ಲಿ ನೋವು ಕಾಣಿಸಿಕೊಳ್ತಿದ್ದಂತೆ ಕೈ ಮಾತ್ರೆ ಬಳಿ ಹೋಗುತ್ತದೆ. ತಕ್ಷಣ ಮಾತ್ರೆ ತಿಂದು ಮಲಗುವವರಿದ್ದಾರೆ. ನೀವೂ ನೋವಿನ ಮಾತ್ರೆಗೆ ಅಡಿಕ್ಟ್ ಆಗಿದ್ರೆ ಈ ಸುದ್ದಿ ಓದಿ.
ದೇಹಕ್ಕೆ ಗಾಯವಾದಾಗ ಅಥವಾ ಏಟು ಬಿದ್ದಾಗ ನೋವಾಗುವುದು ಸಹಜ. ಕೆಲವೊಮ್ಮೆ ನೋವು ಸಹಿಸಲು ಅಸಾಧ್ಯವಾಗಿರುತ್ತದೆ. ಇನ್ನು ಕೆಲವೊಮ್ಮೆ ನೋವು ವಿಪರೀತವಾಗಿಲ್ಲದೆ ಹೋದ್ರೂ ಕಿರಿಕಿರಿಯಾಗ್ತಿರುತ್ತದೆ. ಈ ನೋವು ತಕ್ಷಣಕ್ಕೆ ಕಡಿಮೆ ಆಗ್ಲಿ ಎನ್ನುವ ಕಾರಣಕ್ಕೆ ಜನರು ಪೇನ್ ಕಿಲ್ಲರ್ ಮಾತ್ರೆಗಳನ್ನು ಸೇವಿಸುತ್ತಾರೆ. ಮತ್ತೆ ಕೆಲವರು ಪೇನ್ ರಿಲೀಫ್ ಜೆಲ್ ಅಥವಾ ಆಯಿಲ್ ಬಳಕೆ ಮಾಡ್ತಾರೆ.
ಮೈದಾನದಲ್ಲಿ ಆಟಗಾರರು ನೋವಿ (Pain) ನಿಂದ ಕೆಳಗೆ ಬಿದ್ದಾಗ ಮಾತ್ರೆ ನೀಡುವ ಬದಲು ವೈದ್ಯರು ಜೆಲ್ (Gel) ಬಳಕೆ ಮಾಡೋದನ್ನು ನೀವು ನೋಡಿರಬಹುದು. ಕೆಲ ಜೆಲ್ ಗಳು ತಕ್ಷಣ ನೋವನ್ನು ಕಡಿಮೆ ಮಾಡುತ್ತವೆ. ನಾವು ಹೇಗೆ ಹೇಳಿದಾಗ, ನೋವು ಕಡಿಮೆಯಾಗಲು ಮಾತ್ರೆ ಒಳ್ಳೆಯದಾ ಅಥವಾ ಜೆಲ್ ಒಳ್ಳೆಯದಾ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಪಾಲಕ್ ಸೊಪ್ಪು ತಿನ್ನೋಕೆ ಮಾತ್ರವಲ್ಲ… ಕೂದಲು, ತ್ವಚೆ ಹೊಳಪಿಗೂ ತಪ್ಪದೇ ಬಳಸಬೇಕು!
ನೋವಿಗೆ ಕಾರಣ ಏನು ಎನ್ನುವುದನ್ನು ತಿಳಿಯಿರಿ : ಒಬ್ಬ ವ್ಯಕ್ತಿಗೆ ಸಾಮಾನ್ಯವಾಗಿ ಸ್ನಾಯು (Muscle) ಗಳಲ್ಲಿ ಅಥವಾ ಕೀಲುಗಳಲ್ಲಿ ನೋವು ಕಂಡುಬರುತ್ತದೆ. ಅವರವರ ಶರೀರದ ನೋವುಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ನೀಡುವ ಮೊದಲು ಅದು ಯಾವ ರೀತಿಯ ನೋವು ಎನ್ನುವುದನ್ನು ಮೊದಲು ಪರೀಕ್ಷಿಸುತ್ತಾರೆ. ನೋವುಗಳಲ್ಲಿ ಅತಿಯಾದ ನೋವು, ಹಳೆಯ ನೋವು, ನೊಸೆಸೆಪ್ಟಿವ್ ನೋವು, ನರಗಳ ನೋವು ಮುಂತಾದ ನೋವುಗಳಿರುತ್ತವೆ. ಇದರ ಹೊರತಾಗಿ ಒತ್ತಡ, ಜ್ವರ, ಶೀತ, ನಿದ್ರೆಯ ಕೊರತೆ ಮತ್ತು ನಿರ್ಜಲೀಕರಣ, ಆಘಾತದಿಂದಲೂ ನೋವು ಉಂಟಾಗುತ್ತದೆ.
ಕಪ್ಪು ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್ ಬರುತ್ತಾ? ಸತ್ಯ-ಮಿಥ್ಯೆಗಳೇನು?
ನೋವು ನಿವಾರಣೆ ಹೇಗೆ? : ಅನೇಕ ಮಂದಿ ನೋವು ಅಥವಾ ಗಾಯಗಳಾದಾಗ ಮನೆಯಲ್ಲೇ ಏನಾದರೂ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ನೋವಿನ ಕಾರಣ ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೊಡಕಾಗುತ್ತದೆ. ಇಂತಹ ನೋವುಗಳನ್ನು ಪೇನ್ ರಿಲೀಫ್ ಜೆಲ್ , ಬಾಮ್, ಸ್ಪ್ರೇ ಗಳ ಮೂಲಕವೂ ನಿವಾರಿಸಲಾಗುತ್ತದೆ.
ಪೇನ್ ಪಿಲ್ಲರ್ ಸೇವನೆ ಎಷ್ಟು ಸರಿ? : ಒತ್ತಡ ಹಾಗೂ ಬ್ಯುಸಿ ಶೆಡ್ಯುಲ್ ಕಾರಣ ಈಗ ಎಲ್ಲರೂ ಬೇಗನೆ ನೋವನ್ನು ಹೋಗಲಾಡಿಸಿಕೊಳ್ಳಬೇಕೆಂಬ ತರಾತುರಿಯಲ್ಲಿರುತ್ತಾರೆ. ನೋವು ಬೇಗ ವಾಸಿಯಾಗಬೇಕೆಂದು ಪೇನ್ ಕಿಲ್ಲರ್ ಗಳ ಮೊರೆಹೋಗುತ್ತಾರೆ. ಇದು ನೋವನ್ನು ಬಹಳ ಬೇಗ ನಿವಾರಿಸುತ್ತದೆ. ಆದರೆ ಇದರಿಂದ ಕೆಲವು ಅಡ್ಡಪರಿಣಾಮಗಳಾಗುತ್ತವೆ. ಹಾಗಾಗಿ ಇವುಗಳನ್ನು ಸೇವಿಸುವ ಬದಲು ವೈದ್ಯರ ಸಲಹೆಯನ್ನು ಪಡೆಯಬೇಕು. ಏಕೆಂದರೆ ಇಂತಹ ನೋವು ನಿವಾರಕ ಮಾತ್ರೆಗಳು ವಾಂತಿ, ಎದೆಯುರಿ, ಹುಣ್ಣು ಮುಂತಾದವುಗಳಿಗೆ ಕಾರಣವಾಗುತ್ತದೆ ಮತ್ತು ಕೆಲವೊಮ್ಮೆ ಇದರಿಂದ ಮೂತ್ರಪಿಂಡದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ಮಾತ್ರೆಗಳ ಬದಲಾಗಿ ನೋವು ನಿವಾರಕ ಜೆಲ್ ಗಳನ್ನು ಬಳಸುವುದು ಉತ್ತಮ. ಇದರಿಂದ ಯಾವುದೇ ಸೈಡ್ ಇಫೆಕ್ಟ್ ಇರೋದಿಲ್ಲ.
ಪೇನ್ ಕಿಲ್ಲರ್ ಗಳಿಗಿಂತ ಪೇನ್ ರಿಲೀಫ್ ಜೆಲ್ ಒಳ್ಳೆಯದೇ?: ಪೇನ್ ರಿಲೀಫ್ ಜೆಲ್ ಶರೀರಕ್ಕೆ ಹಾನಿ ಮಾಡೋದಿಲ್ಲ. ನೋವು ನಿವಾರಕ ಮಾತ್ರೆಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನೇ ಹಾಳುಮಾಡುತ್ತವೆ ಹಾಗೂ ಪೂರ್ತಿ ಶರೀರದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಜೆಲ್ ಗಳು ಹಾಗಲ್ಲ. ಅವು ನೋವುಗಳಿರುವ ಜಾಗವನ್ನಷ್ಟೇ ವ್ಯಾಪಿಸಿರುತ್ತವೆ. ದೇಹದ ಉಳಿದ ಭಾಗಗಳಿಗೆ ಹಾನಿ ಮಾಡುವುದಿಲ್ಲ.
ನೋವು ನಿವಾರಕ ಜೆಲ್ ಗಳನ್ನು ನಾವು ದೀರ್ಘ ಸಮಯದವರೆಗೆ ಬಳಸಿದರೂ ಅವುಗಳಿಂದ ಶರೀರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಆದರೆ ಮಾತ್ರೆಗಳ ಸೇವನೆ ಶರೀರದ ಆಂತರಿಕ ಅಂಗಗಳನ್ನೇ ಹಾಳುಮಾಡುತ್ತದೆ.
ಪೇನ್ ಕಿಲ್ಲರ್ ಗಳಿಗಿಂತಲೂ ನೋವು ನಿವಾರಕ ಜೆಲ್ ಗಳು ಬಹಳ ಬೇಗ ನೋವುಗಳನ್ನು ನಿವಾರಣೆ ಮಾಡುತ್ತವೆ. ಜೆಲ್ ಗಳನ್ನು ದಿನಕ್ಕೆ ಅನೇಕ ಬಾರಿ ಹಚ್ಚಿ ಮಸಾಜ್ ಮಾಡಿಕೊಳ್ಳಬಹುದು. ಇವು ಊತವನ್ನು ಕೂಡ ಕಡಿಮೆ ಮಾಡಿ ದೇಹವನ್ನು ಬೆಚ್ಚಗಾಗಿಸುತ್ತವೆ.