ಟ್ರೆಂಡಿಂಗ್’ನಲ್ಲಿದೆ ಎಂದು ನೀವೂ Boba Tea ಕುಡಿತೀರಾ? Side Effect ತಿಳಿದ್ರೆ ಶಾಕ್ ಆಗ್ತೀರಿ

Published : Jul 15, 2026, 06:00 PM IST
boba tea

ಸಾರಾಂಶ

Boba Tea: ಟ್ರೆಂಡಿಂಗ್ ಅಲ್ಲಿದೆ, ಎಲ್ಲರೂ ಕುಡಿಯುತ್ತಾರೆ ಹಾಗೇ ನಾನು ಕುಡಿತೀನಿ ಎನ್ನುತ್ತಾ ನೀವು ಕೂಡ ಹೊರಗಡೆ ಹೋದಾಗಲೆಲ್ಲಾ ಬೋಬಾ ಟೀ ಕುಡಿಯುತ್ತೀರಾ? ಹಾಗಿದ್ರೆ ಈ ಸುದ್ದಿ ನಿಮಗಾಗಿ, ಸ್ಟೈಲ್ ಆಗಿ ಕುಡಿಯುವ ಈ ಪಾನೀಯ ನಿಮ್ಮ ಆರೋಗ್ಯಕ್ಕೆ ಹಾನಿಯನ್ನೂ ಕೂಡ ಮಾಡುತ್ತದೆ.

ನೀವು ಕೂಡ ಬೋಬಾ ಟೀ ಕುಡಿತೀರಾ?

ಬಬಲ್ ಟೀ ಎಂದೂ ಕರೆಯಲ್ಪಡುವ ಬೋಬಾ ಟೀ ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳಲ್ಲಿ ಜನಪ್ರಿಯವಾಗಿದೆ. ಹೆಚ್ಚುತ್ತಿರುವ ಟ್ರೆಂಡ್ ನಿಂದಾಗಿ ಜನರು ಇದನ್ನು ಕುಡಿಯಲು ಸಿಕ್ಕಾಪಟ್ಟೆ ಆಸಕ್ತಿ ತೋರುತ್ತಿದ್ದಾರೆ. ಆದರೆ ಇದರ ಪ್ರಯೋಜನಗಳು ಮತ್ತು ಹಾನಿಗಳ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಬಬಲ್ ಟೀ 1980 ರ ದಶಕದಲ್ಲಿ ಪ್ರಾರಂಭವಾದ ತೈವಾನ್‌ನ ವಿಶೇಷ ಪಾನೀಯವಾಗಿದೆ. ಇದನ್ನು ತಯಾರಿಸಲು ಹಾಲು ಮತ್ತು ಟಪಿಯೋಕಾ ಪರ್ಲ್ಸ್ ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇಂದು, ವಿಶ್ವಪ್ರಸಿದ್ಧವಾಗಿರುವ ಈ ಬೋಬಾ ಟೀ ಹಲವು ವಿಭಿನ್ನ ರುಚಿಗಳಲ್ಲಿ ಇದೀಗ ಲಭ್ಯವಿದೆ.

ಬೋಬಾ ಟೀಯಲ್ಲಿರುವ ಪೋಷಕಾಂಶಗಳು

ಬೋಬಾ ಟೀಯಲ್ಲಿ ಬಹಳ ಕಡಿಮೆ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳಿವೆ. ಫೋಲೇಟ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಬಹಳ ಸೀಮಿತ ಪ್ರಮಾಣದಲ್ಲಿ ಇರುತ್ತವೆ. ಹಾಗಿದ್ರೆ ಬೋಬಾ ಟೀ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆಯೇ? ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

  • ಬಬಲ್ ಗಳಿಂದ ತಯಾರಿಸಿದ ಈ ಚಹಾವು ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ. ಇದನ್ನು ಕುಡಿಯುವುದರಿಂದ ತ್ವರಿತ ಶಕ್ತಿ ದೊರೆಯುತ್ತದೆ, ಆದರೆ ಹೆಚ್ಚಿನ ಸಕ್ಕರೆ ಅಂಶವು ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ.
  • ಮತ್ತೊಂದೆಡೆ, ಹಸಿರು, ಕಪ್ಪು ಬೋಬಾ ಚಹಾಗಳು ಕ್ಯಾನ್ಸರ್, ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸಕ್ಕರೆ-ಭರಿತ ಬೋಬಾ ಚಹಾಗಳು ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತವೆ.
  • ಈ ಚಹಾದ ದೀರ್ಘಕಾಲ ಸೇವಿಸುತ್ತಿದ್ದರೆ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಅನೇಕ ವರದಿಗಳು ಹೇಳುತ್ತವೆ.
  • ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಹಲವಾರು ರೀತಿಯ ಕ್ಯಾನ್ಸರ್ ಅಪಾಯವೂ ಇದೆ.

 

ಬೋಬಾ ಚಹಾಕ್ಕೆ ಆರೋಗ್ಯಕರ ಪರ್ಯಾಯಗಳು ಯಾವುವು?

  • ಮನೆಯಲ್ಲಿ ಬೋಬಾ ಚಹಾ ತಯಾರಿಸುವಾಗ, ಸಕ್ಕರೆಗೆ ಆರೋಗ್ಯಕರ ಪರ್ಯಾಯಗಳನ್ನು ಆರಿಸಿ. ಜೇನುತುಪ್ಪ ಅಥವಾ ಖರ್ಜೂರದಂತಹ ನೈಸರ್ಗಿಕ ಸಿಹಿಕಾರಕಗಳನ್ನು ಬಳಸಬಹುದು.
  • ಟಪಿಯೋಕಾ ಪರ್ಲ್ಸ್ ಬದಲಾಗಿ ಚಿಯಾ ಸೀಡ್ಸ್, ಸಾಬೂದಾನ ಅಥವಾ ಫ್ರುಟ್ ಜೆಲ್ಲಿಯನ್ನು ಬಳಕೆ ಮಾಡಬಹುದು.
  • ಫುಲ್-ಕ್ರೀಮ್ ಹಾಲನ್ನು ಬಾದಾಮಿ, ಓಟ್ ಹಾಲು ಅಥವಾ ಸೋಯಾ ಹಾಲಿನಿಂದ ಬದಲಾಯಿಸಬಹುದು. ಡೈರಿ ಅಲರ್ಜಿ ಇರುವವರಿಗೆ ಇವು ಅತ್ಯುತ್ತಮ ಆಯ್ಕೆಗಳಾಗಿವೆ.
  • ರೆಸ್ಟೋರೆಂಟ್ ಅಥವಾ ಕೆಫೆಯಲ್ಲಿ ಇದನ್ನು ಆರ್ಡರ್ ಮಾಡಿದರೆ, ಆರೋಗ್ಯಕರ ಪರ್ಯಾಯವನ್ನು ಕೇಳಿ. ಎಂಜಾಯ್ ಮಾಡಲು ಅಥವಾ ಟ್ರೆಂಡಿಂಗ್ ನಲ್ಲಿದೆ ಎಂದು ಇದನ್ನು ಕುಡಿದರೆ ಆರೋಗ್ಯಕ್ಕೆ ಮಾರಕವಾಗಬಹುದು ಜೋಕೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cancer-Shocking: 'ಕಲ್ಲರಳಿ ಹೂವಾಗಿ' ನಟಿಗೆ ಕ್ಯಾನ್ಸರ್; ಕಾಯಿಲೆ ವಿರುದ್ಧ ಹೋರಾಡುತ್ತಿರೋ ನಟಿಯ ಭಾವನಾತ್ಮಕ ಪೋಸ್ಟ್!
ಆಂಧ್ರದಲ್ಲಿ 2 ಸಾವು ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೆ ಕೊರೋನಾ ಸಕ್ರೀಯ, ಈ ತಿಂಗಳು 32 ಪ್ರಕರಣ ಪತ್ತೆ!