ಕಲಬುರಗಿ: ಮಣೂರ ಮಲ್ಟಿಸ್ಪೆಶಾಲಿಟಿ ಇದೀಗ ಐಕಾನ್‌ ಆಫ್‌ ಏಷ್ಯಾ

By Kannadaprabha NewsFirst Published Dec 22, 2022, 10:00 PM IST
Highlights

ಉತ್ತಮ ಆರೋಗ್ಯ ಸೇವೆಗಾಗಿ ಗ್ಲೋಬಲ್‌ ಹೆಲ್ತ್‌ ಪುರಸ್ಕಾರ ಪಡೆದು ಗಮನ ಸೆಳೆದಿದ್ದ ಮಣೂರ ಆಸ್ಪತ್ರೆಗೆ ಇದೀಗ ಸತತ2 ನೇ ಬಾರಿ ರಾಷ್ಟ್ರೀಯ ಪುರಸ್ಕಾರ ದೊರಕಿದೆ.

ಕಲಬುರಗಿ(ಡಿ.22): ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ತನ್ನ ಉತ್ತಮ ಆರೋಗ್ಯ ಸೇವೆಗಾಗಿ ಗ್ಲೋಬಲ್‌ ಹೆಲ್ತ್‌ ಪುರಸ್ಕಾರ ಪಡೆದು ಗಮನ ಸೆಳೆದಿದ್ದ ಮಣೂರ ಆಸ್ಪತ್ರೆಗೆ ಇದೀಗ ಸತತ2 ನೇ ಬಾರಿ ರಾಷ್ಟ್ರೀಯ ಪುರಸ್ಕಾರ ದೊರಕಿದೆ. ಈ ಬಾರಿ ಅತ್ಯುತ್ತಮ ಆರೋಗ್ಯ ಸೇವೆ ನೀಡಿದ ಸಾಧನೆಗಾಗಿ ಪ್ರತಿಷ್ಠಿತ ಐಕಾನ್‌ ಆಫ್‌ ಏಷ್ಯಾ ಪ್ರಶಸ್ತಿಯನ್ನು ಕಲಬುರಗಿಯ ಮಣೂರ ಆಸ್ಪತ್ರೆ ಪಡೆದಿದೆ. ನವದೆಹಲಿಯಲ್ಲಿ ನಡೆದ ಸಮಾರಂಭಧಲ್ಲಿ ಪುರಸ್ಕಾರ ಪ್ರದಾನ ಮಾಡಲಾಗಿದ್ದು ಆಸ್ಪತ್ರೆ ಮಖ್ಯ ವೈದ್ಯ ಡಾ. ಫಾರೂಕ್‌ ಮಣೂರೆ ಅವರು ಪಾಲ್ಗೊಂಡು ಐಕಾನ್‌ ಆಫ್‌ ಏಷಿಯಾದ ವ್ಯವಸ್ಥಾಪಕ ನಿರ್ದೇಶಕ ಉದಯವೀರ್‌ ಸಿಂಘ್‌ ಬಿಂದ್ರಾ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಆಸ್ಪತ್ರೆಯು ಕಳೆದು 1 ವರ್ಷದಿಂದ ಬಡ ಜನರ ಸೇವೆಯಲ್ಲಿ ತೊಡಗಿರುವದು ಹಾಗೂ ಉತ್ತಮ ಚಿಕಿತ್ಸೆಯನ್ನು ಕೈಗೆಟಕುವ ದರದಲ್ಲಿ ನೀಡುತ್ತಿರುವುದು ಹಾಗೂ ಕಲಬುರಗಿ ನಗರದ ಸ್ಲಮ್‌ ಪ್ರದೇಶಗಳಲ್ಲಿ ಮತ್ತು ಕಲಬುರಗಿ, ಬೀದರ್‌, ಯಾದಗಿರಿ ಜಿಲ್ಲೆಗಳ ಹಳ್ಳಿ ಹಳ್ಳಿಗಳಲ್ಲಿ 150 ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಇದರಿಂದ ಸಾಕಷ್ಟು ಬಡ ಜನರಿಗೆ ಅನುಕೂಲವಾಗಿದೆ.

ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಆರ್‌ಡಿಪಿಗೆ ಮತ್ತೊಂದು ಸಂಕಷ್ಟ?

ಮಣೂರ ಆಸ್ಪತ್ರೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ರೋಗಿಗಳಿಗೆ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ನೀಡಲು ನಮ್ಮ ಜೀವನವನ್ನೇ ಮುಡಿಪಾಗಟ್ಟಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ ಹೊಸ ಆರೋಗ್ಯ ಕ್ರಾಂತಿಯ ಭರವಸೆ ನೀಡುವಲ್ಲಿ ನಾವು ತೊಡಗಿದ್ದೇವೆ, ಇವತ್ತಿನ ಈ ಶ್ರೇಷ್ಠ ಮತ್ತು ಪ್ರತಿಷ್ಠಿತ ಐಕಾನ್‌ ಆಫ್‌ ಏಷ್ಯಾ ಪ್ರಶಸ್ತಿಯನ್ನು ಕಲ್ಯಾಣ ಕರ್ನಾಟಕದ ಜನತೆಗೆ ಸಮರ್ಪಿಸುತ್ತಿದ್ದೇನೆ ಅಂತ ಕಲಬುರಗಿಯ ಮಣೂರ ಆಸ್ಪತ್ರೆ ನಿರ್ದೇಶಕ ಡಾ. ಫಾರೂಕ್‌ ಅಹಮದ್‌ ಮಣೂರ್‌ ತಿಳಿಸಿದ್ದಾರೆ. 

click me!