
ದೇಹದಲ್ಲಿ ನಮಗೆ ಗೊತ್ತಿಲ್ಲದೇ ಹಲವಾರು ವಿಷಕಾರಿ ಅಂಶಗಳು ಮನೆ ಮಾಡಿಕೊಂಡಿರುತ್ತವೆ. ನಾವು ತಿನ್ನುವ ಆಹಾರವೇ ನಮಗೆ ವಿಷವಾಗುವುದು ಇದೆ. ತಿಳಿದೋ, ತಿಳಿಯದೋ ಬೇಕಾಗಿದ್ದು, ಬೇಡವಾಗಿದ್ದು ಎಲ್ಲವೂ ತಿಂದು ಹೊಟ್ಟೆಯನ್ನು ಕೆಡಿಸಿಕೊಳ್ಳುವುದು ಇದೆ. ನಮಗೆ ಬರುವ ಬಹುತೇಕ ಕಾಯಿಲೆಗಳು ಹೊಟ್ಟೆಯ ಸಮಸ್ಯೆ, ಕರುಳಿನ ಸಮಸ್ಯೆಯಿಂದಲೇ ಬರುವುದಾಗಿ ವೈದ್ಯರೂ ಹೇಳುತ್ತಾರೆ.
ಹಾಗಿದ್ದರೆ ನಾಲ್ಕೇ ನಾಲ್ಕು ವಸ್ತುಗಳಿಂದ, ಅದೂ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಸಂಪೂರ್ಣ ದೇಹವನ್ನು ಡಿಟಾಕ್ಸಿಕ್ ಮಾಡುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ. ಕೇವಲ 20 ನಿಮಿಷ ನೀವು ಆಗಾಗ್ಗೆ ಹೀಗೆ ಮಾಡುತ್ತಿದ್ದರೆ, ಮೊದಲ ದಿನದಿಂದಲೇ ಫಲಿತಾಂಶ ಕಾಣಬಹುದಾಗಿದೆ. ಇದು ದೇಹದಲ್ಲಿನ ವಿಷಕಾರಿಯ ಅಂಶವನ್ನು ಹೊರಕ್ಕೆ ಹಾಕುವುದು ಮಾತ್ರವಲ್ಲದೇ, ಇದರ ಪರಿಣಾಮವಾಗಿ ತ್ವಚೆಯಲ್ಲಿಯೂ ಹೊಳಪು ಬರಲಿದೆ ಎನ್ನುವುದು ತಜ್ಞರ ಮಾತು.
- ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿಕೊಳ್ಳಿ. ನಿಮ್ಮ ಎರಡೂ ಪಾದಗಳು ಮುಳುಗುವಂಥ ಟಬ್ ಇರಲಿ. ಬಿಸಿ ನೀರು ನೀವು ತಡೆದುಕೊಳ್ಳುವಷ್ಟೇ ಇರಲಿ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ.
- ಬಳಿಕ ಅದಕ್ಕೆ ಒಂದಿಷ್ಟು ಎಪ್ಸಮ್ ಸಾಲ್ಟ್ (epsom salt) ಹಾಕಿ. ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ಎಲ್ಲ ಕಡೆಗಳಲ್ಲಿಯೂ ಸಿಗುತ್ತದೆ. ಒಂದು ವೇಳೆ ಎಪ್ಸಮ್ ಸಾಲ್ಟ್ ಸಿಗದಿದ್ದರೆ, ಸಾಮಾನ್ಯ ಅಡುಗೆ ಉಪ್ಪನ್ನು ಕೂಡ ಹಾಕಬಹುದು.
- ಇದಕ್ಕೆ ಒಂದೆರಡು ಚಮಚ ಆಪ್ಪಲ್ ವಿನೀಗರ್ (Apple Vinegar) ಸೇರಿಸಿ
- ಕೊನೆಯದಾಗ ಒಂದಿಂಚು ಶುಂಠಿಯನ್ನು ತುರಿದು ಆ ನೀರಿಗೆ ಸೇರಿಸಿ.
ಬಳಿಕ ಇಪ್ಪತ್ತು ನಿಮಿಷ ಅದರಲ್ಲಿ ಕಾಲನ್ನು ಮುಳುಗಿಸಿ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಇದು ದೇಹವನ್ನು ಶುದ್ಧ ಮಾಡುವುದು ಅಲ್ಲದೇ, ನಿಮ್ಮ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿಯನ್ನೂ ತೆಗೆದುಹಾಕುತ್ತದೆ ಎನ್ನುವ ಮಾತಿದೆ.
ಮೇಲೆ ತಿಳಿಸಿದಂತೆ ವಾರಕ್ಕೆ ಒಮ್ಮೆ ಅಥವಾ ನಿಮಗೆ ಸಾಧ್ಯವಾದಾಗಲೆಲ್ಲಾ ಮಾಡುತ್ತಿರಿ. ಇದರಿಂದ ನಿಮ್ಮ ದೇಹದಲ್ಲಿ ಕುಳಿತಿರುವ ಟಾಕ್ಸಿಕ್ ಅಂಶಗಳು ಹೊರಕ್ಕೆ ಹೋಗುತ್ತವೆ. ಮನಸ್ಸು ಅಹ್ಲಾದಕರವಾಗುತ್ತದೆ. ಗಟ್ ಹೆಲ್ತ್ ಅಂದರೆ ಕರುಳು ಸರಿಯಾಗಿ ಇಲ್ಲದೇ ಹೋದರೆ ಪದೇ ಪದೇ ತಲೆನೋವು ಬರುವುದು ಇದೆ. ಹೀಗೆ ವಾರಕ್ಕೊಮ್ಮೆಯಾದರೂ ಮಾಡುತ್ತಾ ಬಂದರೆ ತಲೆ ನೋವನ್ನೂ ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.