ಸಾಕುಪ್ರಾಣಿ ಪ್ರೇಮಿಗಳಿಗೆ ಖುಷಿ ಸುದ್ದಿ, ಇನ್ಮುಂದೆ ಬೆಕ್ಕು – ನಾಯಿಗೂ ಹೆಲ್ತ್‌ ಇನ್ಶೂರೆನ್ಸ್

Published : Aug 28, 2026, 04:02 PM IST
Pet Health Insurance

ಸಾರಾಂಶ

Pet Health Insurance : ಸಾಕುಪ್ರಾಣಿಗಳು ಖಾಯಿಲೆ ಬಿದ್ದಾಗ ಖರ್ಚಿನ ತಲೆಬಿಸಿ ಶುರುವಾಗುತ್ತೆ. ಕುಟುಂಬಸ್ಥರು ಚಿಂತೆಗೆ ಒಳಗಾಗ್ತಾರೆ. ಆದ್ರೆ ಇನ್ಮುಂದೆ ಆ ಟೆನ್ಷನ್‌ ಬೇಡ.

ಸಾಕು ಪ್ರಾಣಿಗಳನ್ನು ಜನರು ಪ್ರಾಣಿಗಳಂತೆ ನೋಡ್ದೆ ಮನೆ ಸದಸ್ಯರಂತೆ ನೋಡಿಕೊಳ್ತಾರೆ. ಅವರಿಗೆ ಮನೆಯಲ್ಲಿ ವಿಶೇಷ ವ್ಯವಸ್ಥೆ ಇರುತ್ತೆ. ಅವರಿಗೆ ಸಣ್ಣ ಗಾಯವಾದ್ರೂ ಮನೆಯವರು ಸಹಿರೋದಿಲ್ಲ. ಮಕ್ಕಳಂತೆ ಸಾಕು ಪ್ರಾಣಿಗಳನ್ನು ಪ್ರೀತಿ ಮಾಡುವ ಜನರಿಗೆ ಖುಷಿ ಸುದ್ದಿ ಒಂದಿದೆ. ನಾಯಿ ಅಥವಾ ಬೆಕ್ಕಿಗೂ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ನಲ್ಲಿ ಕವರ್ ಸಿಗುವ ಅವಕಾಶ ಬಂದಿದೆ.

ಸಾಕು ಪ್ರಾಣಿಗೆ ಹೆಲ್ತ್‌ ಇನ್ಶೂರೆನ್ಸ್

ನಿಮ್ಮ ಮನೆಯಲ್ಲಿ ನಾಯಿ ಅಥವಾ ಬೆಕ್ಕು ಇದ್ದರೆ, ಅವುಗಳ ಆರೋಗ್ಯ ಹದಗೆಟ್ಟಾಗ, ಚಿಕಿತ್ಸೆ ಅಗತ್ಯವಿದ್ದಾಗ ಆಸ್ಪತ್ರೆಗೆ ಹೋಗ್ಬೇಕಾಗುತ್ತೆ. ಚಿಕಿತ್ಸೆಗೆ ಹಣ ಖರ್ಚಾಗುತ್ತೆ. ಇಂತಹ ಸಂದರ್ಭದಲ್ಲಿ ಅವುಗಳ ಚಿಕಿತ್ಸಾ ವೆಚ್ಚವನ್ನು ನಿರ್ವಹಿಸಲು ಹೊಸ ರೀತಿಯ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಈಗ ಬಂದಿದೆ.

ಬಜಾಜ್ ಜನರಲ್ ಇನ್ಶೂರೆನ್ಸ್ ‘ಮೈ ಫ್ಯಾಮಿಲಿ ಕಂಪ್ಲೀಟ್’ ಎಂಬ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪರಿಚಯಿಸಿದೆ. ಇದರ ವಿಶೇಷತೆ ಏನೆಂದರೆ, ಮನುಷ್ಯರ ಜೊತೆಗೆ ಮನೆಯ ಸಾಕುಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳನ್ನೂ ಒಂದೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಸೇರಿಸುವ ಆಯ್ಕೆಯನ್ನು ನೀಡಲಾಗಿದೆ.

ಈ ಪಾಲಿಸಿಯಲ್ಲಿ 3 ತಿಂಗಳಿನಿಂದ 30 ವರ್ಷದವರೆಗಿನ ಮಕ್ಕಳನ್ನು ಸೇರಿಸಿಕೊಳ್ಳುವ ಅವಕಾಶವಿದೆ. ಅದೇ ರೀತಿ, 3 ತಿಂಗಳ ವಯಸ್ಸಿನ ನಾಯಿ ಮತ್ತು ಬೆಕ್ಕುಗಳಿಗೂ ಕವರ್ ಪಡೆಯಬಹುದು. ಸಾಕುಪ್ರಾಣಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ತಿಳಿಸಲಾಗಿಲ್ಲ.

ಮನುಷ್ಯರು 5 ಲಕ್ಷ ರೂಪಾಯಿಯಿಂದ 5 ಕೋಟಿ ರೂಪಾಯಿವರೆಗೆ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡಿಕೊಳ್ಳಬಹುದು. ಆಸ್ಪತ್ರೆ ದಾಖಲಾತಿ, ಆಸ್ಪತ್ರೆ ಸೇರುವ ಮುನ್ನ ಮತ್ತು ಬಿಡುಗಡೆಯಾದ ನಂತರದ ಕೆಲವು ಚಿಕಿತ್ಸಾ ವೆಚ್ಚಗಳು, ಮನೆಯಲ್ಲೇ ಪಡೆಯುವ ಚಿಕಿತ್ಸೆ ಹಾಗೂ ಆಯುಷ್ ಚಿಕಿತ್ಸೆಯಂತಹ ಸೌಲಭ್ಯಗಳನ್ನು ಪಾಲಿಸಿ ಒಳಗೊಂಡಿವೆ.

ಇನ್ನು ಸಾಕುಪ್ರಾಣಿಗಳಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕೆಲವು ವೆಚ್ಚಗಳು ಕವರ್ ಆಗುತ್ತವೆ. ಜೊತೆಗೆ ಪೆಟ್ ಆಂಬುಲೆನ್ಸ್ನಂತಹ ಸೇವೆಯೂ ಪಾಲಿಸಿಯಲ್ಲಿ ಸೇರಿದೆ. ಸಾಕುಪ್ರಾಣಿಗಾಗಿ ಎಷ್ಟು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕು, ವೇಟಿಂಗ್ ಪೀರಿಯಡ್ ಎಷ್ಟು, ಯಾವ ಚಿಕಿತ್ಸೆಗಳು ಮತ್ತು ವೆಚ್ಚಗಳು ಕವರ್ ಆಗುವುದಿಲ್ಲ ಎಂಬೆಲ್ಲ ಮಾಹಿತಿ ಪಡೆದು ನೀವು ಪಾಲಿಸಿ ತೆಗೆದುಕೊಳ್ಳುವುದು ಉತ್ತಮ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಳ್ಳಿ ಹುಡ್ಗೀರ ಸುಂದರ ತ್ವಚೆಯ ರಹಸ್ಯ, ಈ ಬಡವರ ಬಾದಾಮಿ ಶೇಂಗಾ! ಮಕ್ಕಳಿಗೂ ಕೊಡಿ ಪೀನಟ್ ಬಟರ್!
ತಣ್ಣೀರು ಕುಡಿದ್ರೆ ನೆಗಡಿ ಬರುತ್ತಾ? ಭ್ರಮೆ ಬಿಟ್ಟುಬಿಡಿ, ಸತ್ಯ ತಿಳಿದುಕೊಳ್ಳಿ..!