ದಾಳಿಂಬೆ ಜೀವ ರಕ್ಷಕ, ಅಂತದ್ದೇನಿದೆ ವಿಶೇಷ ಈ ಕಾಳಿನ ಹಣ್ಣಿನಲ್ಲಿ?

By Suvarna News  |  First Published Jul 18, 2022, 3:56 PM IST

ಎಲ್ಲಾ ಸಿಜನ್‌ನಲ್ಲೂ ಸಾಮಾನ್ಯವಾಗಿ ಸಿಗುವ ಹಣ್ಣುಗಳ ಸಾಲಿನಲ್ಲಿ ದಾಳಿಂಬೆಯೂ ಒಂದು. ಮುತ್ತಿನಂತೆ ಪೂಣಿಸಿ ಇಟ್ಟಿರುವ ಈ ಹಣ್ಣು ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಕೇವಲ ದಾಳಿಂಬೆ ಕಾಳಿನಲ್ಲೇಷ್ಟೇ ಅಲ್ಲದೆ ಇದರ ಸಿಪ್ಪೆಯಲ್ಲೂ ಔಷಧೀಯ ಗುಣಗಳಿವೆ. ದಾಳಿಂಬೆ ಹಣ್ಣು ತಿನ್ನುವುದಕ್ಕೆ ಇಷ್ಟಪಡದವರು ಜ್ಯೂಸ್ ಕುಡಿಯಬಹುದು. ದಾಳಿಂಬೆ ಜ್ಯೂಸ್ ಏಕೆ ಕುಡಿಯಬೇಕು? ಅದರಿಂದ ಆರೋಗ್ಯಕ್ಕೆ ಏನು ಪ್ರಯೋಜನ ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.


ದಾಳಿಂಬೆಯನ್ನು ನಾವು ಸಾಮಾನ್ಯವಾಗಿ ಹಣ್ಣಿನ ರೂಪದಲ್ಲಿ ಸೇವಿಸಿದ್ದೇವೆ. ಇದು ಎಳೆಯದಾಗಿ ಕಾಯಿಯ ರೂಪದಲ್ಲಿದ್ದಾಗ ತಿಂದರೆ ಒಗರು ಅಥವಾ ಚೊಗರು ಹಾಗೂ ಸಿಹಿ ಮಿಶ್ರಣದ ರುಚಿ ನೀಡುತ್ತದೆ. ಇದು ಡಯಾಬಿಟಿಸ್ ರೋಗಿಗಳಿಗೆ ಬಹಳ ಒಳ್ಳೆಯದು. ಅಷ್ಟೇ ಅಲ್ಲ ದಾಳಿಂಬೆ ಹಣ್ಣನ್ನು ಮೊಸರನ್ನ, ಸಲಾಡ್, ಕೋಸಂಬರಿ ರೂಪದಲ್ಲಿ ತಿಂದಿರಬಹುದು. ಆದರೆ ಇದು ನಮ್ಮ ಜೀವ ರಕ್ಷಿಸುವ ಗುಣಹೊಂದಿದೆ ಎಂಬುವ ಸತ್ಯ ತಿಳಿದಿರುವುದು ಕಡಿಮೆ. ನೈಸರ್ಗಿಕವಾಗಿ ಸಿಗುವ ನ್ಯಾಚುರಲ್ ಮೆಡಿಸಿನ್ ಎಂದರೆ ಅದು ದಾಳಿಂಬೆ. ಕೇವಲ ದಾಳಿಂಬೆ(Pomegranate) ಹಣ್ಣಿನಲ್ಲಷ್ಟೇ ಅಲ್ಲದೆ ಇಡೀ ಸಸ್ಯದಲ್ಲೇ ಔಷಧೀಯ ಗುಣವಿದೆ. ಆಂಟಿಆಕ್ಸಿಡೆAಟ್ ಪ್ರಮಾಣವು ರೆಡ್ ವೈನ್ ಹಾಗೂ ಗ್ರೀನ್ ಟೀಗಿಂತಲೂ ಹೇರಳವಾಗಿ  ದಾಳಿಂಬೆ ಹಣ್ಣಿನಲ್ಲಿದೆ. ಅಲ್ಲದೆ ವಿಟಮಿನ್ ಸಿ, ಬಿ, ಕೆ, ಪೊಟ್ಯಾಶಿಯಂ, ಮಿನರಲ್ಸ್, ಫೈಬರ್, ಪ್ರೋಟಿನ್ ಸಹ ಬಹಳಷ್ಟಿದೆ. ಹಾಗಾದರೆ ಈ ಬಗ್ಗೆ ಮಾಹಿತಿ ಇಲ್ಲಿದೆ.

ಹೃದಯಕ್ಕೆ ಒಳ್ಳೆಯದು
ಹೃದಯ ಸಂಬAಧಿ ಕಾಯಿಲೆಗಳಿಗೆ ದಾಳಿಂಬೆ ಉತ್ತಮ ಔಷಧವಾಗಿದೆ. ಅಪಧಮನಿಗಳಲ್ಲಿ(Arteries) ಕೊಲೆಸ್ಟಾçಲ್ ಮತ್ತು ಕೊಬ್ಬಿನ ಸಂಗ್ರಹ ಹೃದ್ರೋಗಕ್ಕೆ ಸಾಮಾನ್ಯ ಕಾರಣವಾಗಿದೆ. ದಾಳಿಂಬೆ ರಸವು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟಾçಲ್(Lipoprotein Cholesterol) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟಾçಲ್ ಅಪಧಮನಿಗಳನ್ನು ಮುಚ್ಚುತ್ತದೆ. ಉತ್ತಮ ಕೊಲೆಸ್ಟಾçಲ್ ಇದು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಹಣ್ಣಿನಲ್ಲಿ ಹಾಗೂ ಅದರ ರಸದಲ್ಲಿ ಹೇರಳವಾಗಿ ಸಿಗುವುದರಿಂದ ಹೃದಯಕ್ಕೆ ಹಾಗೂ ರಕ್ತ ಪಂಪ್ ಮಾಡಲು ಸಹಾಯ ಮಾಡುತ್ತದೆ. 

Health Tips : ಆರೋಗ್ಯಕ್ಕೆ ಒಳ್ಳೆದು ಅಂತಾ ಅತಿಯಾಗಿ ದಾಳಿಂಬೆ ತಿನ್ಬೇಡಿ

Tap to resize

Latest Videos

ಡಯಾಬಿಟಿಸ್ ಕಂಟ್ರೋಲ್
ಒAದು ಅಧ್ಯಯಾನದ ಪ್ರಕಾರ Type 2 ಡಯಾಬಿಟಿಸ್ ಇರುವವರು ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಇನ್ಸುಲಿನ್ ಪ್ರತಿರೋಧದಲ್ಲಿ ಸುಧಾರಣೆ ಕಂಡಿದೆ. ಅಲ್ಲದೆ ಮಧುಮೇಹ ಇಲ್ಲದವರಿಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲೂ ಇದು ಸಹಕಾರಿಯಾಗಿದೆ.

ಕ್ಯಾನ್ಸರ್ (Cancer) ವಿರೋಧಿ
ದಾಳಿಂಬೆಯಲ್ಲಿ ಆಂಟಿಆಕ್ಸಿಡೆAಟ್ ಮತ್ತಯ ಫ್ಲೇವನಾಯ್ಡ್ಗಳಲ್ಲಿ ಸಮೃದ್ಧವಾಗಿದ್ದು, ಸ್ವತಂತ್ರ ರಾಡಿಕಲ್‌ಗಳು ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ದಾಳಿಂಬೆಯು ಪ್ರಾಸ್ಟೇಟ್, ಸ್ತನ, ಶ್ವಾಸಕೋಶ ಮತ್ತು ಕೊಲೊನ್ ಕ್ಯಾನ್ಸರ್‌ಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ದಾಳಿಂಬೆ ತಿನ್ನುವುದರಿಂದ ಶ್ವಾಸಕೋಶ, ಚರ್ಮ, ಕೊಲೊನ್ ಮತ್ತು ಪ್ರಾಸ್ಟೇಟ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಅಧ್ಯಯನದಿಂದ ತಿಳಿದಿದೆ.   

ಬಾಯಿ ಸಮಸ್ಯೆ
ಫ್ರೆಶ್ ಆದ 25ಗ್ರಾಂನಷ್ಟು ದಾಳಿಂಬೆ ಎಲೆಯನ್ನು 400 ಗ್ರಾಂ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಇದು  100 ಗ್ರಾಂಗೆ ಇಳಿದ ನಂತರ ಈ ನೀರಿನಲ್ಲಿ ಗಾರ್ಗಲ್ ಮಾಡಬೇಕು. ಹೀಗೆ ಮಾಡಿದರೆ ಬಾಯಲ್ಲಾದ ಹುಣ್ಣುಗಳನ್ನು ನಿವಾರಿಸುತ್ತದೆ. 

ಕಿವಿ ನೋವು 
100 MLನಷ್ಟು ದಾಳಿಂಬೆ ಎಲೆಯ ರಸ, 400ML ಹಸುವಿನ ಮೂತ್ರ, 100ML ಎಳ್ಳೆಣ್ಣೆಯನ್ನು ತೆಗೆದುಕೊಂಡು ಸಣ್ಣ ಉರಿಯಲ್ಲಿ ಚೆನ್ನಾಗಿ ಕಾಯಿಸಬೇಕು. ಎಣ್ಣೆ ಮಾತ್ರ ಬಿಟ್ಟುಕೊಳ್ಳುವವರೆಗೂ ಕಾಯಿಸಿ ಅದನ್ನು ಸೋಸಿಕೊಳ್ಳಿ. ಕಿವಿ ನೋವು ಕಾಣಿಸಿಕೊಂಡಾಗ ಈ ಎಣ್ಣೆಯನ್ನು ಸ್ವಲ್ಪ ತೆಗೆದುಕೊಂಡು ಬೆಚ್ಚಗೆ ಮಾಡಿ ಕಿವಿಗೆ ಬೆಳಗ್ಗೆ ಸಂಜೆ ನಾಲ್ಕು ಡ್ರಾಪ್ ಹಾಕಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಕಿವಿಯಲ್ಲಿನ ನೋವು, ತುರಿಕೆ, ಒಣಗುವಿಕೆ, ಕಿವುಡುತನ ನಿವಾರಣೆಯಾಗುತ್ತದೆ. 

ಡಯಾಬಿಟೀಸ್ ರೋಗಿಗಳಿಗೆ ರಾಮಬಾಣ ದಾಳಿಂಬೆ ಹೂವು

ಗಂಟಲ ಸಮಸ್ಯೆ
ನೆರಳಿನಲ್ಲಿ ಒಣಗಿದ ದಾಳಿಂಬೆ ಎಲೆಗಳ ಪುಡಿಯನ್ನು ಜೇನುತುಪ್ಪ ಅಥವಾ ಬೆಲ್ಲದೊಂದಿಗೆ ಕಲಸಿ ಮಾತ್ರೆಯಂತೆ ಮಾಡಿಕೊಳ್ಳಿ. ಈ ಮಾತ್ರೆಯನ್ನು ಬಾಯಿಯಲ್ಲಿಟ್ಟುಕೊಂಡು ಚಾಕೋಲೇಟ್‌ನಂತೆ(Chocolate) ರಸವನ್ನು ಹೀರಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಗಂಟಲ ಸಮಸ್ಯೆ ಹೋಗಲಾಡಿಸಬಹುದು.

ಕೂದಲು
ಫ್ರೆಶ್ ದಾಳಿಂಬೆ ಎಲೆಗಳ ಸಾರವನ್ನು ತೆಗೆದುಕೊಂಡು 100 ಗ್ರಾಂ ಎಲೆಗಳ ತಿರುಳನ್ನು 1/2 KG ಸಾಸಿವೆ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಇದನ್ನು ಬೇಕಾದಾಗ ಸ್ವಲ್ಪ ಬೆಚ್ಚಗೆ ಮಾಡಿಕೊಂಡು ತಲೆಗೆ ಹಚ್ಚಿಕೊಂಡು 20 ನಿಮಿಷ ಮಸಾಜ್ ಮಾಡಬೇಕು. ಹೀಗೆ ಮಾಡಿದಲ್ಲಿ ಕೂದಲು ಉದುರುವುದು, ಬೊಕ್ಕು ತಲೆಯಾಗುವುದನ್ನು ತಪ್ಪಿಸಬಹುದು.

ತಲೆನೋವು
ದಾಳಿಂಬೆಯ ತೊಗಟೆಯನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಹಣೆಯ ಮೇಲೆ ಹಚ್ಚಿದರೆ ತಲೆನೋವು, ಮೈಗ್ರೇನ್(Migraine) ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮೊಡವೆ
ದಾಳಿಂಬೆಯ ಎಣ್ಣೆಯನ್ನು ತೆಗೆದು ಮುಖಕ್ಕೆ ಮಸಾಜ್ ಮಾಡುವುದರಿಂದ ಮುಖದಲ್ಲಿನ ಮೊಡವೆ, ಕಪ್ಪು ಸರ್ಕಲ್(Black Circle), ಕಪ್ಪು ಮಚ್ಚೆ, ಪ್ಯಾಚಸ್‌`ಗಳು ಗುಣವಾಗುತ್ತವೆ.

ಕಫ
ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಬಾಯಿಯಲ್ಲಿಟ್ಟುಕೊಂಡು ರಸವನ್ನು ಹೀರಿಕೊಳ್ಳಬೇಕು. ಇದು ಸ್ವಲ್ಪ ಒಗರು ಹಾಗೂ ಕಹಿಯಾಗಿ ಕಾಣಿಸಿಕೊಂಡರು ಕಫ(Cough) ಹಾಗೂ ಕೆಮ್ಮು ಕಡಿಮೆ ಮಾಡುತ್ತದೆ.

ಅಜೀರ್ಣ
ದಾಳಿಂಬೆ ಹಣ್ಣನ್ನು ಚೆನ್ನಾಗಿ ಹಿಂಡಿದ 10GMನಷ್ಟು ಅದರ ರಸ ತೆಗೆದುಕೊಳ್ಳಿ. ಹುರಿದು ಪುಡಿ ಮಾಡಿದ ಒಂದು ಗ್ರಾಂ ಜೀರಿಗೆ ಪುಡಿ, ಬೆಲ್ಲಕ್ಕೆ(Jaggery) ದಾಳಿಂಬೆ ರಸ ಮಿಶ್ರಣ ಮಾಡಿ. ಇದನ್ನು ದಿನದಲ್ಲಿ 2ರಿಂದ 3 ಬಾರಿ ಸೇವಿಸಿದರೆ ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ. 

Pomegranate Peel Benefits : ದಾಳಿಂಬೆ ಹಣ್ಣಿನಂತೆ ಸಿಪ್ಪೆಯಲ್ಲೂ ಇದೆ ಮ್ಯಾಜಿಕಲ್ ಪವರ್

ಆಹಾರ ಆಸಕ್ತಿ ಹೆಚ್ಚಿಸುತ್ತದೆ
ಪ್ರತೀ ದಿನ ದಾಳಿಂಬೆ ಹಣ್ಣಿನ ಜ್ಯೂಸ್ ಅನ್ನು ಜೇನುತುಪ್ಪದೊಂದಿಗೆ(Honey) ಸೇವಿಸುವುದರಿಂದ ಆಹಾರ ಸೇವಿಸುವ ಆಸಕ್ತಿ ಹೆಚ್ಚಿಸುವಂತೆ ಮಾಡುತ್ತದಲ್ಲದೆ ಜ್ವರವೂ ಕಡಿಮೆಯಾಗುತ್ತದೆ.

ವಾಂತಿ
10ಮಿಲಿಯಷ್ಟು ಉಗುರುಬೆಚ್ಚಗಿನ ದಾಳಿಂಬೆ ರಸವನ್ನು 5GM ಸಕ್ಕರೆಯೊಂದಿಗೆ ಬೆರೆಸಿ ರೋಗಿಗೆ ನೀಡುವುದರಿಂದ ವಾಂತಿಯಾಗುವುದು ಕಡಿಮೆಯಾಗುತ್ತದೆ.

ಪೈಲ್ಸ್
8ರಿಂದ 10 ದಾಳಿಂಬೆ ಎಲೆಗಳನ್ನು ರುಬ್ಬಿಕೊಂಡು ಕೇಕ್ ರೀತಿ ಮಾಡಬೇಕು. ಇದನ್ನು ಬಿಸಿ ತುಪ್ಪದಲ್ಲಿ ರಸ್ಟ್ ಮಾಡಿ ಪೈಲ್ಸ್ ಹುಣ್ಣುಗಳ ಮೇಲೆ ಕಟ್ಟಿಕೊಳ್ಳಬೇಕು. ಹೀಗೆ ಮಾಡುವುದರಿಂದ ಹುಣ್ಣುಗಳು ದೂರವಾಗುತ್ತದೆ.

ಉಗುರಿನಲ್ಲಿ ನೋವು
ದಾಳಿಂಬೆ ಹೂವು, ಧಮಸ ಮತ್ತು ಹರದವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಉಗುರಿನಲ್ಲಿ ತುಂಬಬೇಕು. ಹೀಗೆ ಮಾಡುವುದರಿಂದ ಫಂಗಲ್ ಇನ್ಫೆಕ್ಷನ್(Fungal Infection), ಉಗುರಿನಲ್ಲಿನ ನೋವು ನಿವಾರಣೆಯಾಗುತ್ತದೆ.

ಗರ್ಭಪಾತ (Abortion) ತಡೆಯುತ್ತದೆ
20Gmನಷ್ಟು ದಾಳಿಂಬೆ ಎಲೆಗಳನ್ನು ತೆಗೆದುಕೊಂಡು 100ML ನೀರು ಹಾಕಿ ರುಬ್ಬಿಕೊಂಡು ಸೋಸಿಕೊಳ್ಳಬೇಕು. ಸೋಸಿದ ನೀರನ್ನು ಗರ್ಭಿಣಿಗೆ ಕುಡಿಯಲು ಕೊಡಬೇಕು. ಹಾಗೆಯೇ ಎಲೆಯ ಪೇಸ್ಟ್ಅನ್ನು ಹೊಟ್ಟೆಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ಗರ್ಭಾಪಾತವಾಗುವುದನ್ನು(Abortion) ತಡೆಯಬಹುದು.

click me!