Alchohol ಒಳ್ಳೇದಲ್ಲ ಬಿಡಿ, ಆದರೂ ವಯಸ್ಸಿಗೆ ತಕ್ಕಂತೆ ಎಷ್ಟು ಓಕೆ?

By Suvarna News  |  First Published Jul 18, 2022, 2:34 PM IST

ಅತ್ಯಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದು ಆರೋಗ್ಯಕ್ಕೆ ಲಾಭ ಎನ್ನುತ್ತಾರೆ. ವಯಸ್ಸು, ಲಿಂಗಕ್ಕೆ ಅನುಗುಣವಾಗಿ ಎಷ್ಟು ಪ್ರಮಾಣದ ಆಲ್ಕೋಹಾಲ್ ಸೇವನೆ ಮಾಡಬಹುದು ಎಂಬುದನ್ನು ಇದೀಗ ಸಂಶೋಧಕರು ಬಹಿರಂಗಪಡಿಸಿದ್ದಾರೆ.


ಆಲ್ಕೋಹಾಲ್ ಸೇವನೆ ಇಂದು ಬದುಕಿನ ಭಾಗವಾಗಿದೆ ಎಂದರೂ ತಪ್ಪಿಲ್ಲ. ಅತಿಯಾದ ಆಲ್ಕೋಹಾಲ್ ಆರೋಗ್ಯಕ್ಕೆ ಉತ್ತಮವಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ, ಅಲ್ಪ ಪ್ರಮಾಣದಲ್ಲಿ ಕೆಲವು ಖುಷಿಯ ಗೆಟ್ ಟು ಗೆದರ್ ಸನ್ನಿವೇಶಗಳಲ್ಲಿ ಸೇವಿಸುವುದು ಸಾಮಾನ್ಯವಾಗಿದೆ. ಮಹಿಳೆಯರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಆಲ್ಕೋಹಾಲ್ ಅನ್ನು ಆರೋಗ್ಯಕ್ಕೆ ಹಾನಿಯಾಗುವಷ್ಟು ಪ್ರಮಾಣದಲ್ಲಿ ಸೇವಿಸಬಾರದು. ಅಷ್ಟಕ್ಕೂ ಅಲ್ಪ ಪ್ರಮಾಣದ ಆಲ್ಕೋಹಾಲ್ ಆರೋಗ್ಯಕ್ಕೆ ಉತ್ತಮ ಎನ್ನುವ ಅಧ್ಯಯನಗಳೂ ಇವೆ. ಹಾಗಿದ್ದರೆ ಯಾವ ಪ್ರಮಾಣದಲ್ಲಿ ಸೇವಿಸಿದರೆ ಆಲ್ಕೋಹಾಲ್ ನಿಂದ ದೇಹಕ್ಕೆ ಹಾನಿಯಾಗುವುದಿಲ್ಲ? ಅಥವಾ ಯಾವ ಪ್ರಮಾಣ ಆರೋಗ್ಯಕ್ಕೆ ಅನುಕೂಲಕಾರಿಯೇ ಆಗಬಹುದು ಎನ್ನುವುದರ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ. ಇದೀಗ ಈ ಕುರಿತು ಸಂಶೋಧಕರು ಕುತೂಹಲಕಾರಿ ಮಾಹಿತಿ ಬಹಿರಂಗ ಮಾಡಿದ್ದಾರೆ. ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಈ ಕುರಿತು ಪ್ರಬಂಧವೊಂದು ಪ್ರಕಟವಾಗಿದ್ದು, ವಯಸ್ಸು, ಲಿಂಗ ಹಾಗೂ ಭೌಗೋಳಿಕ ಆಧಾರದ ಮೇಲೆ ಆಲ್ಕೋಹಾಲ್ ಬೀರುವ ಪರಿಣಾಮಗಳ ಕುರಿತು ಚರ್ಚಿಸಲಾಗಿದೆ. ಅಲ್ಪ ಪ್ರಮಾಣದ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ರಿಸ್ಕ್ ಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ವರದಿಯಲ್ಲಿ ಹೇಳಿರುವುದು ವಿಶೇಷ.  

ಯಾರಿಗೆ ಎಷ್ಟು ಪ್ರಮಾಣ ಸಾಕು?
ಆಲ್ಕೋಹಾಲ್ (Alcohol) ಸೇವನೆ ಸಾರ್ವತ್ರಿಕವಾಗಿ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ಅದರ ಪರಿಣಾಮ (Effect), ಸ್ಥಳ (Region), ಲಿಂಗ (Gender), ವಯಸ್ಸು (Age) ಹಾಗೂ ಅದು ಉತ್ಪಾದನೆಯಾದ ವರ್ಷವನ್ನು ಆಧರಿಸಿ ಉಂಟಾಗುತ್ತದೆ. 2020ರಲ್ಲಿ 204 ದೇಶಗಳ ಜನರ ಆಲ್ಕೋಹಾಲ್ ಸೇವನೆ ಪ್ರಮಾಣ ಅಧ್ಯಯನ ಮಾಡಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದರ ಪ್ರಕಾರ, 15-39 ನೇ ವಯೋಮಾನದ ಪುರುಷರು (Male) ದಿನಕ್ಕೆ 0.136 ಪ್ರಮಾಣದ ಸ್ಟ್ಯಾಂಡರ್ಡ್ ಡ್ರಿಂಕ್ (Standard Drink) ತೆಗೆದುಕೊಳ್ಳಬಹುದು. ಹಾಗೆಯೇ, ಇದೇ ವಯಸ್ಸಿನ ಮಹಿಳೆಯರು (Female) 0.273 ಪ್ರಮಾಣ ಸೇವನೆ ಮಾಡಬಹುದು.

ಇದನ್ನೂ ಓದಿ: ನಶೆ ಏರುತ್ತಿಲ್ಲ ಎಂದು ಕುಡುಕನ ದೂರು: ತನಿಖೆಗೆ ಆದೇಶ

Latest Videos

undefined

ಇಲ್ಲಿ, ಒಂದು ಸ್ಟ್ಯಾಂಡರ್ಡ್ ಡ್ರಿಂಕ್ ಎಂದರೆ, ಸರಿಸುಮಾರು 10 ಗ್ರಾಮ್ ಶುದ್ಧ (Pure) ಆಲ್ಕೋಹಾಲ್. ಅಂದರೆ, 15-30 ಎಂಎಲ್ ಆಲ್ಕೋಹಾಲ್ ಒಳಗೊಂಡಿರಬಹುದು. ಆದರೆ, ಯಾವ ಪಾನೀಯದಲ್ಲಿ ಎಷ್ಟು ಆಲ್ಕೋಹಾಲ್ ಅಂಶವಿರುತ್ತದೆ ಎಂದು ನೋಡಿಕೊಂಡು ಆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಏಕೆಂದರೆ, ಬಿಯರ್ (Beer), ವೈನ್ (Wine), ಜಿನ್ (Gin) ಅಥವಾ ವಿಸ್ಕಿ (Whisky) ಇವು ವಿಭಿನ್ನ ಆಲ್ಕೋಹಾಲ್ ಪ್ರಮಾಣ ಹೊಂದಿರುತ್ತವೆ. ಸರಿಸುಮಾರು ವಾರಕ್ಕೆ 10 ಸ್ಟ್ಯಾಂಡರ್ಡ್ ಡ್ರಿಂಕ್ ಗಳು ಸಾಕಾಗುತ್ತವೆ, ಅದಕ್ಕೂ ಹೆಚ್ಚಿನ ಪ್ರಮಾಣದ ಅಗತ್ಯವಿರುವುದಿಲ್ಲ. ಹೀಗಾಗಿ, ಯಾವ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ.

40 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಕರು ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೇ ಇದ್ದರೆ ಅರ್ಧ ಸ್ಟ್ಯಾಂಡರ್ಡ್ ಡ್ರಿಂಕ್ (ಅಂದರೆ 0.527) ನಿಂದ ಎರಡು ಸ್ಟ್ಯಾಂಡರ್ಡ್ ಡ್ರಿಂಕ್ ವರೆಗೆ ಸೇವಿಸಬಹುದು. ಇದರಿಂದ ಈ ವಯೋಮಾನದ ಜನರು ಹೃದ್ರೋಗ (Heart Problem), ಮಧುಮೇಹ (Diabetes), ಪಾರ್ಶ್ವವಾಯು (Stroke) ಮುಂತಾದ ಸಮಸ್ಯೆಗಳಿಂದ ಬಚಾವಾಗಬಹುದು. 65 ವರ್ಷಕ್ಕೂ ಮೇಲ್ಪಟ್ಟವರು ದಿನಕ್ಕೆ ಮೂರು ಸ್ಟ್ಯಾಂಡರ್ಡ್ ಡ್ರಿಂಕ್ ಸೇವಿಸಿದರೆ ಅನುಕೂಲ. 

ಮದ್ಯವ್ಯಸನಿಗಳ ಚಟ ಬಿಡಿಸಲು ಹೊಸ, ವಿಶಿಷ್ಟ ಪ್ರಯೋಗ!

ಕಳಪೆ ಗುಣಮಟ್ಟದ ಪಾನೀಯ
ಈ ವರದಿಯ ಪ್ರಕಾರ, ಜಾಗತಿಕವಾಗಿ 1.34 ಮಿಲಿಯನ್ ಬಿಲಿಯನ್ ಜನ ಅಪಾಯಕಾರಿ ಮತ್ತು ಕಳಪೆ ಗುಣಮಟ್ಟದ (Low Standard) ಆಲ್ಕೋಹಾಲ್ ಸೇವನೆ ಮಾಡುತ್ತಿದ್ದಾರೆ. ಪರಿಣಾಮವಾಗಿ 15-39ರ ವಯೋಮಾನದವರು ಕೆಲವು ಆರೋಗ್ಯ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಅಪಘಾತ (Accident), ಆತ್ಮಹತ್ಯೆ (Suicide), ಖಿನ್ನತೆಗಳು (Depression) ಕೂಡ ಜಾಸ್ತಿಯಾಗಿವೆ. “ಯುವಜನರು ಅಧಿಕ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡುತ್ತಾರೆ. ಹಾಗೂ ಅವರಿಗೆ ಆದಾಯವೂ ಕಡಿಮೆ ಇರುವುದರಿಂದ ಕಳಪೆ ಗುಣಮಟ್ಟದ ಆಲ್ಕೋಹಾಲ್ ಕುಡಿಯುತ್ತಾರೆ. ಇದರಿಂದ ಯಕೃತ್ತು, ಕರುಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಹೆಚ್ಚು’ ಎಂದು ವರದಿಯಲ್ಲಿ ಹೇಳಲಾಗಿದೆ.

click me!