ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಜಿಮ್‌ಗಳಲ್ಲಿ ಆಗುತ್ತಿರುವ ಹಠಾತ್ ಸಾವುಗಳು ವ್ಯಾಯಾಮದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರಶ್ನೆಗಳಲ್ಲಿ ಒಂದು ಜಿಮ್ ಅನ್ನು ಪ್ರಾರಂಭಿಸುವ ಮೊದಲು ಆರೋಗ್ಯ ತಪಾಸಣೆ ಮಾಡಬೇಕು ಎಂಬುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಹೃದಯಾಘಾತದಿಂದ (Heartattack) ಸಾವನ್ನಪ್ಪುತ್ತಿರುವವ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆರೋಗ್ಯಕರ ಆಹಾರ (Healthy food) ತಿನ್ನುವಂತೆ, ನಿಯಮಿತವಾಗಿ ವ್ಯಾಯಾಮ (Exercise) ಮಾಡುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಹೆಚ್ಚಿನವರು ಜಿಮ್‌ಗೆ ಸೇರಿಕೊಂಡು ವರ್ಕ್‌ಟ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಿದ್ದೂ ವರ್ಕ್‌ಔಟ್ ಮಾಡುವಾಗಲೇ ಕುಸಿದು ಬಿದ್ದು ಹಲವರು ಸಾವನ್ನಪ್ಪಿದ್ದಾರೆ. ಹೀಗಾಗಿ ಎಲ್ಲರೂ ಜಿಮ್ ಮಾಡಬಹುದಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಜಿಮ್‌ಗಳಲ್ಲಿ ಆಗುತ್ತಿರುವ ಹಠಾತ್ ಸಾವುಗಳು ವ್ಯಾಯಾಮದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರಶ್ನೆಗಳಲ್ಲಿ ಒಂದು ಜಿಮ್ ಅನ್ನು ಪ್ರಾರಂಭಿಸುವ ಮೊದಲು ಆರೋಗ್ಯ ತಪಾಸಣೆ (Health checkup) ಮಾಡಬೇಕು ಎಂಬುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಜಿಮ್‌ಗೆ ಸೇರುವ ಮೊದಲು ಆರೋಗ್ಯ ತಪಾಸಣೆ ಮಾಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ಮ್ಯಾಕ್ಸ್ ಆಸ್ಪತ್ರೆ ಗುರುಗ್ರಾಮ್‌ನ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಆಂತರಿಕ ಔಷಧ ಮತ್ತು ವೈದ್ಯಕೀಯ ನಿರ್ದೇಶಕ ಡಾ. ರಾಜೀವ್ ಡ್ಯಾಂಗ್ ಮಾಹಿತಿ ನೀಡುತ್ತಾರೆ. ಅತಿಯಾದ ವ್ಯಾಯಾಮ ಮತ್ತು ಔಷಧಗಳು ಅಥವಾ ಪೂರಕಗಳು ಇದ್ದಾಗ ಹೆಲ್ತ್ ಚೆಕಪ್ ಮಾಡುವುದು ಅಗತ್ಯವಾಗಿರುತ್ತದೆ ಎಂದು ಅವರು ಹೇಳುತ್ತಾರೆ.
ವರ್ಕೌಟ್ ನಂತ್ರ ತುಂಬಾ ತಲೆನೋವು ಆಗುತ್ತಾ? ಇದಾಗಿರಬಹುದು ಕಾರಣ!
ದೇಹದ ಸಾಮರ್ಥ್ಯವನ್ನು ತಿಳಿದುಕೊಳ್ಳಬೇಕು: ವ್ಯಾಯಾಮಕ್ಕೆ ಸಂಬಂಧಿಸಿದ ಯಾವುದೇ ಯೋಜನೆಯನ್ನು ರೂಪಿಸುವ ಮೊದಲು, ನಿಮ್ಮ ದೇಹದ ಸಾಮರ್ಥ್ಯವನ್ನು ನೀವು ತಿಳಿದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಪೂರಕವನ್ನು ತೆಗೆದುಕೊಳ್ಳುವ ಕೆಲವರಲ್ಲಿ ಮೂತ್ರಪಿಂಡದ ಅಪಸಾಮಾನ್ಯ ಸಮಸ್ಯೆಯು ಕಂಡು ಬರುತ್ತದೆ. ಹೀಗಾಗಿ ಮೊದಲೇ ಆರೋಗ್ಯ ತಪಾಸಣೆ ಮಾಡುವುದು ಒಳ್ಳೆಯದು. ಇದು ದೇಹದ ಮೂಲಭೂತ ಆಂತರಿಕ ವಾತಾವರಣದ ಬಗ್ಗೆ ಖಂಡಿತವಾಗಿಯೂ ಹೇಳುತ್ತದೆ. ಇದು ವ್ಯಾಯಾಮದ ಪ್ರಕಾರವನ್ನು ಆಯ್ಕೆ ಮಾಡಲು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.
ವರ್ಕ್‌ಔಟ್ ಪ್ರಾರಂಭಿಸುವ ಮೊದಲು ಪರೀಕ್ಷೆ ಮಾಡಿ: ಜಿಮ್ ಪ್ರಾರಂಭಿಸುವ ಮೊದಲು, ಪ್ರಮುಖ ನಾಡಿ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ, ಮೂತ್ರಪಿಂಡದ ಕಾರ್ಯ ಮತ್ತು ಯಕೃತ್ತಿನ ಕ್ರಿಯೆಯಂತಹ ಇತರ ದೇಹದ (Body) ಭಾಗಗಳನ್ನು ಒಳಗೊಂಡಂತೆ ಹೃದಯ ಮತ್ತು ಶ್ವಾಸಕೋಶದ ಪರೀಕ್ಷೆಯನ್ನು ಮಾಡುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೇ ಹಿಮೋಗ್ಲೋಬಿನ್, ಲಿಪಿಡ್ ಪ್ರೊಫೈಲ್, ಥೈರಾಯ್ಡ್ ಪ್ರೊಫೈಲ್, ಇಸಿಜಿಯಂತಹ ರಕ್ತ ಪರೀಕ್ಷೆಗಳನ್ನು ಮಾಡಬೇಕು.
ವೈದ್ಯಕೀಯ ಸ್ಥಿತಿಯ ಬಗ್ಗೆ ತರಬೇತುದಾರರಿಗೆ ತಿಳಿಸಿ: ಅಹಮದಾಬಾದ್‌ನ ಅಪೊಲೊ ಆಸ್ಪತ್ರೆಗಳ ಆಂತರಿಕ ವೈದ್ಯಕೀಯ ಸಲಹೆಗಾರ ಡಾ.ವೈರಲ್ ಪಟೇಲ್ ಹೇಳುವಂತೆ, 'ಒಬ್ಬ ವ್ಯಕ್ತಿಗೆ ಬೆನ್ನು ನೋವು ಅಥವಾ ಬೆನ್ನುಮೂಳೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಅವರು ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು ಇದರಿಂದ ಜಿಮ್ ತರಬೇತುದಾರರಿಗೆ ಯಾವ ರೀತಿಯ ವ್ಯಾಯಾಮಗಳು ಸೂಕ್ತವೆಂದು ತಿಳಿಯುತ್ತದೆ. ಇದಲ್ಲದೆ, ನೀವು ಯಾವುದೇ ವೈದ್ಯಕೀಯ ಇತಿಹಾಸವನ್ನು ಹೊಂದಿದ್ದರೆ, ಖಂಡಿತವಾಗಿಯೂ ನಿಮ್ಮ ತರಬೇತುದಾರರಿಗೆ ತಿಳಿಸಿ.' ಎನ್ನುತ್ತಾರೆ.
Exercise Tips: ಈ ಪ್ರಿ ವರ್ಕೌಟ್ ಡ್ರಿಂಕ್ಸ್ ಕುಡಿದ್ರೆ 6 ಗಂಟೆ ಎನರ್ಜಿ ಡೌನ್ ಆಗೋದೆ ಇಲ್ಲ
ವ್ಯಾಯಾಮದ ಅನುಕೂಲಗಳು ಮತ್ತು ಅನಾನುಕೂಲಗಳು
ವ್ಯಾಯಾಮವು ತೂಕ ನಷ್ಟ ಮತ್ತು ತೂಕ (Weight) ಹೆಚ್ಚಾಗುವುದಕ್ಕಿಂತ ಉಸಿರಾಟದ ಫಿಟ್‌ನೆಸ್, ಸ್ನಾಯು ಟೋನ್, ಶಕ್ತಿ, ಮಾನಸಿಕ ಸಮತೋಲನಕ್ಕೆ ಹೆಚ್ಚು ಸಂಬಂಧಿಸಿದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಇದನ್ನು ತಪ್ಪಾಗಿ ಮಾಡಿದರೆ ಅನಾಹುತಕ್ಕೆ ಕಾರಣವಾಗಬಹುದು. ಫಿಟ್ನೆಸ್ ಫ್ರೀಕ್ ಆಗಲು ನೀವು ವಾರಪೂರ್ತಿ ವ್ಯಾಯಾಮ ಮಾಡುತ್ತಿದ್ದರೆ, ಅದು ನಿಮ್ಮ ದೇಹಕ್ಕೆ ಹೊರೆಯೆನಿಸಬಹುದು. ವರ್ಕ್‌ಔಟ್‌ನ್ನು ಯಾವಾಗಲೂ ಒತ್ತಡವಾಗಿ (Pressure) ತೆಗೆದುಕೊಳ್ಳಬೇಡಿ. ವರ್ಕ್ ಔಟ್ ಎಷ್ಟು ಮುಖ್ಯವೋ, ವ್ಯಾಯಾಮದ ಮೊದಲು ಮತ್ತು ನಂತರ ದೇಹಕ್ಕೆ ಸರಿಯಾದ ವಿಶ್ರಾಂತಿ (Rest) ನೀಡುವುದು ಸಹ ಅಷ್ಟೇ ಮುಖ್ಯ. ಯಾವುದೇ ಟ್ರೆಂಡ್ ಅನ್ನು ಕುರುಡಾಗಿ ಅನುಸರಿಸುವ ಬದಲು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವರ್ಕೌಟ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.