Sex as exercise: ಸೆಕ್ಸ್ ಮಾಡಿದ್ರೆ ಬೇರೆ ವ್ಯಾಯಾಮ ಬೇಕಿಲ್ವಾ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್?

By Suvarna News  |  First Published Dec 5, 2021, 4:35 PM IST

ಲೈಂಗಿಕ ಕ್ರಿಯೆಯಲ್ಲಿ ಅಧಿಕ ಕ್ಯಾಲೊರಿ ಬರ್ನ್ ಆಗುತ್ತೆ. ಇದು ಮಾನಸಿಕ ಹಾಗೂ ದೈಹಿಕವಾಗಿ ಆನಂದ ನೀಡುವ ಕ್ರಿಯೆ ಅನ್ನೋದು ಈಗಾಗಲೇ ಗೊತ್ತಿರುವ ಅಂಶ. ಆದರೆ ಸೆಕ್ಸ್ ಮಾಡಿದರೆ ಬೇರೆ ವ್ಯಾಯಾಮ ಬೇಕಿಲ್ವಾ? ತಜ್ಞರ ಅಭಿಪ್ರಾಯ ಏನು?


ನಿತ್ಯ ವ್ಯಾಯಾಮ ಮಾಡಬೇಕು ಅನ್ನೋದು ಸಿಟಿ ಲೈಫ್‌ಸ್ಟೈಲ್‌ (City Lifestyle)ನ ಅಲಿಖಿತ ನಿಯಮ. ದಿನಾ ಬೆಳಗ್ಗೆ ಸಂಜೆ ವರ್ಕೌಟ್‌ ಮಾಡೋರಿದ್ದಾರೆ. ಜಿಮ್‌(Gym)ನಲ್ಲಿ ಬೆವರಿಳಿಸೋರಿದ್ದಾರೆ. ಆದರೆ ನಮ್ಮಲ್ಲಿರುವ ಬಹಳ ಜನಪ್ರಿಯ ಮಾತು ಅಂದರೆ ಸೆಕ್ಸ್‌(Sex) ಮಾಡಿದ್ರೆ ಬೇರೆಲ್ಲ ಎಕ್ಸರ್‌ಸೈಸ್‌ಗಳಿಗಿಂತ ಹೆಚ್ಚು ವ್ಯಾಯಾಮ ಆಗುತ್ತೆ. ಅದರಷ್ಟು ಉತ್ತಮ ಎಕ್ಸರ್‌ಸೈಸ್ ಮತ್ತೊಂದಿಲ್ಲ ಅನ್ನೋ ಮಾತಿದೆ. ಹಾಗಿದ್ದರೆ ದಿನಾ ಸೆಕ್ಸ್‌ ಮಾಡಿದ್ರೆ ಬೇರ್ಯಾವ ವರ್ಕೌಟ್‌ ಸಹ ಬೇಡವಾ, ಬರೀ ಅಷ್ಟೇ ಸಾಕಾ ಅನ್ನೋದು ಒಂದು ಡೌಟ್. ಇನ್ನೊಂದು ಅನುಮಾನ ಅಂದರೆ ಸೆಕ್ಸ್‌ ಮಾಡಿದ ಬಳಿಕ ವ್ಯಾಯಾಮ ಮಾಡೋದು ಎಷ್ಟು ಸೇಫ್, ಈಗಾಗಲೇ ಒಂದು ಚಟುವಟಿಕೆಯಿಂದ ಬಳಲಿರುವ ದೇಹ ಮತ್ತೆ ವ್ಯಾಯಾಮ ಮಾಡಿದಾಗ ನಿಶ್ಶಕ್ತವಾಗೋದಿಲ್ವಾ, ಇದರಿಂದ ಉಳುಕು, ತಲೆ ಸುತ್ತು, ಆಯಾಸ ಇತ್ಯಾದಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಾ ಅನ್ನೋದು. ಈ ಎಲ್ಲ ಡೌಟ್‌ಗಳಿಗೆ ಉತ್ತರ ಇಲ್ಲಿದೆ.

Tulsi Seeds and Health: ತುಳಸಿ ಎಲೆ ಅಲ್ಲ, ಬೀಜ ಸೇವನೆಯಿಂದ ಅರೋಗ್ಯ ಸಮಸ್ಯೆ ದೂರ

Latest Videos

undefined

ಫಿಟ್‌ನೆಟ್‌ (Fitness) ತಜ್ಞರು ಹೇಳುವ ಪ್ರಕಾರ ಸೆಕ್ಸ್‌ ಅತ್ಯುತ್ತಮವಾಗಿ ಕ್ಯಾಲೊರಿ ಬರ್ನ್ ಮಾಡುತ್ತೆ ಅನ್ನೋದೇನೋ ನಿಜ. ಆದರೆ ದೈಹಿಕ ವ್ಯಾಯಾಮವನ್ನು ಇದರ ಜೊತೆಗೆ ಸಿಂಕ್‌ ಮಾಡೋದು ಕಷ್ಟ. ಸೆಕ್ಸ್ ಮಾಡಿದ ಮಾತ್ರಕ್ಕೆ ಇತರೇ ವ್ಯಾಯಾಮಗಳು ಬೇಡ ಅನ್ನುವ ಹಾಗಿಲ್ಲ. ಆದರೆ ಇವೆರಡೂ ಅಂಶಗಳು ಪರಸ್ಪರ ಕನೆಕ್ಟೆಡ್‌ (Connected) ಅನ್ನಬಹುದು. ನೀವು ವ್ಯಾಯಾಮ ಚೆನ್ನಾಗಿ ಮಾಡುತ್ತಿದ್ದರೆ ಸೆಕ್ಸ್‌ನಲ್ಲಿ ಆಸಕ್ತಿ ಹೆಚ್ಚುತ್ತದೆ. ನೀವು ಅತ್ಯುತ್ತಮವಾಗಿ ಲೈಂಗಿಕ ಕ್ರಿಯೆಯನ್ನು ಎನ್‌ಜಾಯ್‌ ಮಾಡಬಹುದು. ವರ್ಕೌಟ್‌ ಮಾಡದೇ ಇದ್ದರೆ ದೇಹದ ಅಂಗಾಗಗಳಲ್ಲಿ ಚೈತನ್ಯ ಅಷ್ಟಾಗಿ ಇರೋದಿಲ್ಲ. ಅವು ಜಡಗೊಂಡಂತಿರುತ್ತವೆ. ಅದೇ ಪ್ರತೀ ದಿನ ವ್ಯಾಯಾಮ ಮಾಡುತ್ತಿದ್ದರೆ ದೇಹ ಹೆಚ್ಚು ಫ್ಲೆಕ್ಸಿಬಲ್‌ ಆಗಿರುತ್ತದೆ. ಉತ್ಸಾಹ ಹೆಚ್ಚುತ್ತದೆ. ಹೀಗಾಗಿ ಸೆಕ್ಸ್ ಮಾಡಿದ ಮಾತ್ರಕ್ಕೆ ವ್ಯಾಯಾಮ ಬೇಡ ಅನ್ನೋದು ಸರಿಯಲ್ಲ. ಆರೋಗ್ಯವಂತ ದೇಹಕ್ಕೆ ಇವೆರಡೂ ಬೇಕು. ಆದರೆ ತಜ್ಞರು ಹೇಳುವ ಪ್ರಕಾರ ಸೆಕ್ಸ್ ಮಾಡಿ ವರ್ಕೌಟ್‌ ಮಾಡೋದು ಅಷ್ಟು ಒಳ್ಳೆಯದಲ್ಲ. ಏಕೆಂದರೆ ಲೈಂಗಿಕ ಕ್ರಿಯೆಯಲ್ಲಿ ಡೋಪಮೈನ್‌ (Dopamine) ಬಿಡುಗಡೆ ಆಗಿರುತ್ತದೆ. ಇದರಿಂದ ದೇಹ, ಮನಸ್ಸುಗಳೆರಡೂ ಸಂತೋಷದ ತೀವ್ರಬಿಂದುವನ್ನು ತಲುಪಿರುತ್ತದೆ. ಹೀಗಾಗಿ ಆ ಬಳಿಕ ವ್ಯಾಯಾಮ ಮಾಡಲು ಅಷ್ಟಾಗಿ ಚೈತನ್ಯ ಇರೋದಿಲ್ಲ.

Shocking News of Pregnancy: ಬದಲಾದ ಭಾರತದಲ್ಲಿ 15ರ ಹರೆಯದಲ್ಲೇ ಹೆಚ್ಚಾಗ್ತಿದೆ ಗರ್ಭಧಾರಣೆ!

ಆದರೆ ವರ್ಕೌಟ್‌ (Workout) ಫ್ರೀಕ್‌ಗಳು ತಮ್ಮ ಸಂತೋಷವನ್ನು ಇನ್ನೊಂದು ಲೆವೆಲ್‌ಗೆ ಕೊಂಡೊಯ್ಯಲು ಸೆಕ್ಸ್ ಪ್ರಯೋಜನಕಾರಿ. ಒಂದು ಹಂತದ ವರ್ಕೌಟ್‌ ಮಾಡಿದ ಬಳಿಕ ಡೊಪೊಮೆನ್‌ ಹಾರ್ಮೋನು ಬಿಡುಗಡೆ ಆಗಿ ಮನಸ್ಸು ಉಲ್ಲಸಿತವಾಗೋದು ನಮಗೆಲ್ಲ ಗೊತ್ತು. ಆದರೆ ಈ ಆನಂದವನ್ನು ಇನ್ನೊಂದು ಪೀಕ್‌ಗೊಯ್ಯಲು ವರ್ಕೌಟ್‌ ನಂತರದ ಸೆಕ್ಸ್‌ ಸಹಾಯಕ. ನೀವು ಗಂಡಸಾಗಿರಿ, ಹೆಂಗಸಾಗಿರಿ.. ವರ್ಕೌಟ್‌ ಮಾಡಿದ ಬಳಿಕ ಪರಸ್ಪರ ಆಕರ್ಷಣೆಯಾಗೋದು ಹೆಚ್ಚು ಅಂತಾರೆ ಫಿಟ್‌ನೆಸ್‌ ಎಕ್ಸ್‌ಪರ್ಟ್ಸ್. ಆದರೆ ಹೆಚ್ಚಿನವರು ವರ್ಕೌಟ್‌ ಮಾಡಿದ ಬಳಿಕ ಸುಸ್ತಾಗಿರುತ್ತಾರೆ. ಹೀಗಾಗಿ ಮತ್ತೆ ಸೆಕ್ಸ್‌ ಮಾಡೋದರ ಬಗ್ಗೆ ಅವರಿಗೆ ಅಷ್ಟಾಗಿ ಆಸಕ್ತಿ ಬರಲಿಕ್ಕಿಲ್ಲ. ಆದರೆ ಸ್ಟೆಮಿನಾ ಚೆನ್ನಾಗಿರುವವರಿಗೆ ಇನ್ನು ಖುಷಿಯನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ಯಲು ಬೆಸ್ಟ್‌.

Sex and Life: ಪುರುಷರ ಯೋಚನೆ ಹೇಗಿರುತ್ತೆ, ಹೆಂಗಸರು ಏನು ಚಿಂತಿಸುತ್ತಾರೆ?
ಇವೆಲ್ಲದರ ಜೊತೆಗೆ ಇನ್ನೊಂದು ಅಭಿಪ್ರಾಯ ಇದೆ. ಸೆಕ್ಸ್‌ ಮಾಡೋಕೂ ಮೊದಲು ಕೆಲವೊಂದು ಎಕ್ಸರ್‌ಸೈಸ್‌(Exercise)ಗಳನ್ನು ಮಾಡಿದರೆ ಹೆಚ್ಚು ತೀವ್ರವಾದ ಅನುಭವ ಪಡೆಯಬಹುದು.

ಸೆಕ್ಸ್‌ ಮತ್ತು ವ್ಯಾಯಾಮ ಇವೆರಡನ್ನೂ ನಿಯಮಿತವಾಗಿ ಮಾಡುವವರು ಹೆಚ್ಚು ಸಂತೋಷದಿಂದಿರುತ್ತಾರೆ. ಅವರ ಕ್ರಿಯಾಶೀಲತೆ ಹೆಚ್ಚಾಗುತ್ತೆ. ಕೆಲಸದ ಕ್ಷೇತ್ರದಲ್ಲೂ ಅವರು ಬಹಳ ಬೇಗ ಅಂದುಕೊಂಡ ಗೋಲ್‌ ರೀಚ್‌ ಆಗುತ್ತಾರೆ. ಯೋಚನೆ ಚುರುಕಾಗುತ್ತೆ, ವಸ್ತು ಸ್ಥಿತಿಯನ್ನು ಬೇ್ ಗ್ರಹಿಸುವ ಸಾಮಥ್ರ್ಯವೂ ಹೆಚ್ಚಾಗುತ್ತೆ. ಹೀಗಾಗಿ ಸೆಕ್ಸ್ ಮತ್ತು ವ್ಯಾಯಾಮ ಎರಡನ್ನೂ ಮಾಡಿ. ಇವೆರಡರಲ್ಲಿ ಯಾವುದಾದರೂ ಒಂದು ಕಡಿಮೆ ಆದರೂ ಒಳ್ಳೆಯದಲ್ಲ ಅನ್ನೋದು ತಜ್ಞರ ಅಭಿಮತ.

click me!