health benefits peepal tree: ಅರಳಿಯಲ್ಲಡಗಿದೆ ಇಂಪೊಟೆನ್ಸಿಗೆ ಮದ್ದು!

By Suvarna News  |  First Published Dec 5, 2021, 4:07 PM IST

ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ- ಮರಗಳಲ್ಲಿ ನಾನು ಅಶ್ವತ್ಥ ವೃಕ್ಷ ಎಂದು. ಬುದ್ಧನಿಗೆ ಜ್ಞಾನೋದಯವಾಗಿದ್ದು ಕೂಡಾ ಬೋಧಿ ಎಂದು ಕರೆಯಲ್ಪಡುವ ಅಶ್ವತ್ಥ ವೃಕ್ಷದ ಕೆಳಗೆ. ಅಷ್ಟು ಪವಿತ್ರವಾದುದು ಅರಳಿ ಮರ. ಇದರಿಂದ ಹಲವಾರು ಆರೋಗ್ಯ ಲಾಭಗಳಿವೆ. 


ಅಶ್ವತ್ಥ ಮರ ಎಂದೂ ಕರೆಯಲ್ಪಡುವ ಅರಳಿ ಮರ(peepal tree) ಹಿಂದೂಗಳು, ಬೌದ್ಧರು ಹಾಗೂ ಜೈನರಿಗೆ ಬಹಳ ಪವಿತ್ರವೆನಿಸಿದೆ. ಇದು ಆಮ್ಲಜನಕವನ್ನು ಅಧಿಕ ಪ್ರಮಾಣದಲ್ಲಿ ಹೊರ ಬಿಡುವ ಕಾರಣದಿಂದ ಇದರ ಕೆಳಗೆ ಧ್ಯಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಒರಿಸ್ಸಾ ಹಾಗೂ ಹರಿಯಾಣದ ರಾಜ್ಯ ಮರವೆನಿಸಿರುವ ಅರಳಿ ಮರದ ಎಲೆ, ಕಾಂಡ, ತೊಗಟೆ, ಬೀಜಗಳು, ಹಣ್ಣು ಪ್ರತಿಯೊಂದೂ ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ. ಸಾವಿರಾರು ವರ್ಷಗಳಿಂದ ಅರಳಿ ಮರ ಕೋಟ್ಯಂತರ ಜನರಿಗೆ ಆರೋಗ್ಯದ ಭಾಗ್ಯ ನೀಡುತ್ತಲೇ ಬಂದಿದೆ. 

ರಕ್ತ ಶುದ್ಧೀಕರಣ(blood purification)
ಎರಡು ಗ್ರಾಂ ಅರಳಿ ಬೀಜದ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿಕೊಂಡು ದಿನಕ್ಕೆರಡು ಬಾರಿ ಸೇವಿಸುವುದರಿಂದ ರಕ್ತದಲ್ಲಿರುವ ದೋಷಗಳು ತೊಲಗುತ್ತವೆ. ರಕ್ತ ಶುದ್ಧೀಕರಣವಾಗುವ ಜೊತೆಗೆ ಗ್ಯಾಸ್ಟಿಕ್ ಸಂಬಂಧಿ ಸಮಸ್ಯೆಗಳು ತೊಲಗುತ್ತವೆ. 

Tap to resize

Latest Videos

ಅಸ್ತಮಾ(Asthma)
ಅರಳಿ ಮರದ ತೊಗಟೆ ಹಾಗೂ ಬೆಳೆದ ಹಣ್ಣುಗಳನ್ನು ತೆಗೆದುಕೊಳ್ಳಿ. ಇವುಗಳನ್ನು ಒಣಗಿಸಿ ಪ್ರತ್ಯೇಕವಾಗಿ ಪುಡಿ ಮಾಡಿಕೊಳ್ಳಿ. ನಂತರ ಎರಡೂ ಪುಡಿಯನ್ನು ಸಮಾನವಾಗಿ ಸೇರಿಸಿ. ಈ ಮಿಶ್ರಣವನ್ನು ಪ್ರತಿ ದಿನ ಮೂರು ಬಾರಿ ಸೇವಿಸುವುದರಿಂದ ಅಸ್ತಮಾ ತೊಲಗುತ್ತದೆ. ಅಶ್ವತ್ಥ ಮರದ ಒಣಹಣ್ಣಿನ ಪುಡಿಯನ್ನು ಸ್ವಲ್ಪ ನೀರು ಸೇರಿಸಿ 14 ದಿನಗಳ ಕಾಲ ಸೇವಿಸುವುದರಿಂದಲೂ ಅಸ್ತಮಾ ಕಡಿಮೆಯಾಗುತ್ತದೆ. 

Panchanga: ಸೂರ್ಯನಿಗೆ ಅರ್ಘ್ಯ ಪ್ರದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ

ಹಲ್ಲಿನ ಕಾಯಿಲೆಗಳು(tooth disease)
ಅಶ್ವತ್ಥ ಮರ ಹಾಗೂ ಆಲದ ಮರದ ತೊಗಟೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ಇವೆರಡನ್ನೂ ಮಿಶ್ರಣ ಮಾಡಿ ನೀರಿನಲ್ಲಿ ಕುದಿಸಿ. ನಂತರ ಇದರಿಂದ ಪ್ರತಿದಿನ ಬಾಯಿ ಮುಕ್ಕಳಿಸಿ. ಹೀಗೆ ಮಾಡುವುದರಿಂದ ಹಲ್ಲು ನೋವು ಶಮನವಾಗುವುದು. 

undefined

ಕಣ್ಣು ನೋವು(eye pain)
ಅರಳಿ ಮರದ ಹಾಲನ್ನು ತೆಗೆದು ಕಣ್ಣಿಗೆ ಹಚ್ಚುವುದರಿಂದ ಕಣ್ಣು ನೋವು ಶಮನವಾಗುತ್ತದೆ. 

ಬಿಕ್ಕಳಿಕೆ(Hiccups)
50ರಿಂದ 100 ಗ್ರಾಂ ಅಶ್ವತ್ಥ ತೊಗಟೆ ತೆಗೆದುಕೊಳ್ಳಿ. ಅದನ್ನು ಬೂದಿಯಾಗಿಸಿ ನೀರಿನಲ್ಲಿ ಬೆರೆಸಿ, ಆ ನೀರನ್ನು ಸೇವಿಸುವುದರಿಂದ ಪದೇ ಪದೆ ಕಾಡುವ ಬಿಕ್ಕಳಿಕೆಯಿಂದ ಮುಕ್ತರಾಗಬಹುದು. 

Tulsi Seeds and Health: ತುಳಸಿ ಎಲೆ ಅಲ್ಲ, ಬೀಜ ಸೇವನೆಯಿಂದ ಅರೋಗ್ಯ ಸಮಸ್ಯೆ ದೂರ

ತುರಿಕೆ ಮತ್ತು ಚರ್ಮದ ಸಮಸ್ಯೆ(itching and skin problems)
ತುರಿಕೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅರಳಿ ಮರದ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚಿ. ಹಾಗೆಯೇ ಗಾಯವಾಗಿದ್ದರೆ, ಅರಳಿ ಎಲೆಗಳಿಂದ ಪೇಸ್ಟ್ ತಯಾರಿಸಿ ಹಚ್ಚಿ. ಬೇಗ ಗುಣವಾಗುವುದು. ಎಕ್ಸಿಮಾ ಕಾರಣದಿಂದ ತುರಿಸುತ್ತಿದ್ದರೆ 50 ಗ್ರಾಂ ಅರಳಿ ತೊಗಟೆಯ ಪುಡಿಯನ್ನು ನಿಂಬೆರಸ ಹಾಗೂ ತುಪ್ಪ ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟನ್ನು ಎಕ್ಸಿಮಾ ಇರುವ ಭಾಗಕ್ಕೆ ಹಚ್ಚುವುದರಿಂದ ಅತ್ಯುತ್ತಮ ಫಲಿತಾಂಶ ಕಾಣಬಹುದು. ಅಥವಾ ತೊಗಟೆಯ ಪುಡಿಯಿಂದ ಟೀ ತಯಾರಿಸಿ ಪ್ರತಿದಿನ ಸೇವಿಸುವುದು ಕೂಡಾ ಒಳ್ಳೆಯದು. 

ಮಲಬದ್ಧತೆ(constipation)
ಪ್ರತಿ ದಿನ 5ರಿಂದ 10 ಅರಳಿ ಮರದ ಹಣ್ಣನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಮಲಬದ್ಧತೆ ಕಾಡದು. 

ಒಡೆದ ಪಾದ(Cracked Heals)
ಅರಳಿ ಮರದ ಎಲೆಯ ಹಾಲು ತೆಗೆದು ಅದನ್ನು ಒಡೆದ ಕೈ ಹಾಗೂ ಅಂಗಾಲುಗಳಿಗೆ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುವುದು. 

ಪುರುಷರ ಬಂಜೆತನ(impotency)
ಅರಳಿ ಹಣ್ಣಿನಿಂದ ತಯಾರಿಸಿದ ಪುಡಿಯನ್ನು ಪ್ರತಿದಿನ ಮೂರು ಬಾರಿ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ. ಇದರಿಂದ ಪುರುಷರ ಬಂಜೆತನ ನಿವಾರಣೆಯಾಗುವುದು. ಅರಳಿ ಹಣ್ಣು, ಬೇರು, ತೊಗಟೆ ಹಾಗೂ ಶುಂಠಿಯ ಪುಡಿಯ ಮಿಶ್ರಣ ಮಾಡಿ ಅದನ್ನು ಹಾಲಿಗೆ ಸೇರಿಸಿ. ನಂತರ ಜೇನುತುಪ್ಪ, ಸಕ್ಕರೆ ಸೇರಿಸಿ ಸೇವಿಸುವುದರಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ. 

click me!