
ಟೆನ್ಷನ್ ಯಾರಿಗೆ ಇರೋದಿಲ್ಲ ಹೇಳಿ? ಹಣ ಇರೋರಿಗೆ ಒಂದು ಸಮಸ್ಯೆಯಾದ್ರೆ ಹಣ ಇಲ್ಲದಿರೋರಿಗೆ ಇನ್ನೊಂದು ಸಮಸ್ಯೆ. ಖಾಯಿಲೆ ಇರೋದಿಗೆ ಇಂದು ಟೆನ್ಷನ್ ಆದ್ರೆ ರೋಗ ಇಲ್ಲದೆ ಇರೋರಿಗೆ ಇನ್ನೊಂದು ಒತ್ತಡ. ಒಟ್ಟಿನಲ್ಲಿ ಒತ್ತಡ ಇಲ್ಲದ ವ್ಯಕ್ತಿ ಇಲ್ವೇ ಇಲ್ಲ. ಹಾಗಂತ, ಟೆನ್ಷನ್ ಕಾರಣಕ್ಕೆ ಜೀವನ ನಡೆಸದೆ ಇರೋಕೆ ಆಗುತ್ತಾ? ಟೆನ್ಷನ್ (Tension) ನನಗಿಲ್ವಾ, ನಿಮಗಿಂತ ಹೆಚ್ಚಿದೆ, ಆದ್ರೆ ನಾನು ನಗ್ತಾ ಇದ್ದೇನೆ. ನೀವು ನಗ್ತಾ ನಗ್ತಾ ಎಲ್ಲ ಸಮಸ್ಯೆ ಬಗಹರಿಸಿಕೊಳ್ಳಿ ಅಂತಾ ಒತ್ತಡದಲ್ಲಿರುವ ವ್ಯಕ್ತಿಗೆ ಸುಲಭವಾಗಿ ಜನರು ಸಲಹೆ ನೀಡ್ತಾರೆ. ಆದ್ರೆ ವಿಷ್ಯ ಅವರ ಬಳಿ ಬಂದಾಗ ಈ ನಿಮಯ ಪಾಲನೆ ಮಾಡೋದು ಕಷ್ಟವಾಗುತ್ತದೆ. ಸಂತೋಷ (Happiness) ದ ವ್ಯಕ್ತಿಯನ್ನು ನಾವು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಣ್ಣಪುಟ್ಟ ವಿಷ್ಯಕ್ಕೆ ಕೆಲವರು ಟೆನ್ಷನ್ ಮಾಡಿಕೊಂಡ್ರೆ ಮತ್ತೆ ಕೆಲವರ ಟೆನ್ಷನ್ ಗೆ ಕಾರಣವೇ ಇರೋದಿಲ್ಲ. ಇಡೀ ದಿನ ಒತ್ತಡದಲ್ಲಿ ಜೀವನ ಸಾಗಿಸ್ತಾ ಆರೋಗ್ಯ (Health ) ಹಾಳು ಮಾಡಿಕೊಳ್ತಾರೆ. ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಮಾರ್ಚ್ 20ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನೀವು ಖುಷಿಯಾಗಿರೋದು ಹೇಗೆ ಎಂಬ ಬಗ್ಗೆ ಕೆಲ ಟಿಪ್ಸ್ ತಿಳಿದುಕೊಳ್ಳಿ.
Health Tips: ಫ್ರೋಜನ್ ಆಹಾರ ಬಳಸೋದ್ರಿಂದ ಕಾಡುತ್ತೆ ಗಂಭೀರ ಸಮಸ್ಯೆ
ನಿಮ್ಮೊಂದಿಗೆ ಇರೋದನ್ನು ಕಲಿತುಕೊಳ್ಳಿ : ನಮ್ಮೊಂದಿಗೆ ನಾವು ಇರೋದು ಅಂದ್ರೇನು ಅಂತಾ ನೀವು ಕೇಳ್ಬಹುದು. ಸಾಮಾನ್ಯವಾಗಿ ಬಹುತೇಕ ಜನರು, ಬೇರೆಯವರ ಮಾತನ್ನು ಹೆಚ್ಚಾಗಿ ಕೇಳ್ತಾರೆ. ಬೇರೆಯವರಿಗೆ ಏನಿಷ್ಟ ಎಂಬುದನ್ನು ಗಮನದಲ್ಲಿಟ್ಟುಕೊಂಡು ತಮ್ಮನ್ನು ಅವರಿಗೆ ತಕ್ಕಂತೆ ಬದಲಿಸುವ ಪ್ರಯತ್ನ ಮಾಡ್ತಾರೆ. ಇದ್ರಲ್ಲಿ ಸೋತಾಗ ನೋವಿಗೊಳಗಾಗ್ತಾರೆ. ಅದ್ರ ಬದಲು ನೀವು ನಿಮಗೇನಿಷ್ಟ ಎಂಬುದನ್ನು ತಿಳಿದು, ಅದ್ರಂತೆ ನಡೆದುಕೊಳ್ಳಿ. ಮೊದಲು ನಿಮ್ಮೊಂದಿಗೆ ನೀವು ಬದುಕಲು ಕಲಿಯಿರಿ. ಆಗ ನಿಮ್ಮ ಒತ್ತಡ ಅರ್ಧದಷ್ಟು ಕಡಿಮೆಯಾಗುತ್ತದೆ.
ಜನರ ಬಗ್ಗೆ ಹೆಚ್ಚು ಗಮನ ಹರಿಸ್ಬೇಡಿ : ನೋಡಿದವರು ಏನು ಹೇಳ್ತಾರೆ? ಈ ಒಂದೇ ಪ್ರಶ್ನೆ ಮೇಲೆ ನಮ್ಮ ಜೀವನ ನಡೆಯುತ್ತಿರುತ್ತದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ (Night) ಮಲಗುವವರೆಗೂ ನಾವು ಈ ಬಗ್ಗೆ ಆಲೋಚನೆ ಮಾಡ್ತಾ ಟೆನ್ಷನ್ ತೆಗೆದುಕೊಳ್ತೇವೆ. ಅವಶ್ಯಕತೆಯಿಲ್ಲದ ವಿಷ್ಯದ ಬಗ್ಗೆ ಆಲೋಚನೆ ಮಾಡೋದನ್ನು ಬಿಡ್ಬಿಡಿ. ಬೇರೆಯವರು ನೀಡಿದ ಸಲಹೆ ನಿಮಗೆ ಸೂಕ್ತವೆನ್ನಿಸಿದ್ರೆ ಮಾತ್ರ ತೆಗೆದುಕೊಳ್ಳಿ.
ಬರೀ 15 ನಿಮಿಷ: ಸೋಷಿಯಲ್ ಮೀಡಿಯಾದಿಂದ ದೂರವಿರಿ, ಆರೋಗ್ಯ ಸುಧಾರಿಸ್ಕೊಳಿ
ವರ್ತಮಾನ (Present) ದಲ್ಲಿ ಬದುಕಿ : ನಾಳೆ ಏನಾಗ್ಬಹುದು, ಒಳ್ಳೆ ಉದ್ಯೋಗ ಪಡೆಯೋದು ಹೇಗೆ, ಬಡ್ತಿಗೆ ಏನು ಮಾಡ್ಬೇಕು ಹೀಗೆ ಮುಂದಿನ ಆಲೋಚನೆ ಮಾಡ್ತೇವೆಯೇ ಹೊರತು ಇಂದಿನ ದಿನವನ್ನು ಮರೆತುಬಿಡ್ತೇವೆ. ಭವಿಷ್ಯ (Future) ಕ್ಕೆ ಭದ್ರತೆ ಮಾಡಿಕೊಳ್ಳಬೇಕು ನಿಜ ಹಾಗಂತ ಸದಾ ಅದ್ರ ಬಗ್ಗೆ ಆಲೋಚನೆ ಮಾಡಿ ಈ ಕ್ಷಣದ ಆನಂದವನ್ನು ಕಳೆದುಕೊಳ್ಳಬಾರದು. ನೀವು ಯಾವ ಸ್ಥಳದಲ್ಲಿದ್ದೀರಿ, ಸದ್ಯ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿ, ಆ ಪರಿಸರವನ್ನು ಎಂಜಾಯ್ ಮಾಡಲು ಪ್ರಯತ್ನಿಸಿ. ನಾಳೆಗಳನ್ನು ಮರೆತು ವರ್ತಮಾನದಲ್ಲಿ ಜೀವಿಸಲು ಕಲಿಯಿರಿ.
ನಿನ್ನೆ ಘಟನೆಗಳನ್ನು ಮರೆಯಲು ಪ್ರಯತ್ನಿಸಿ : ಬಹುತೇಕರ ಒತ್ತಡಕ್ಕೆ, ನೋವಿಗೆ ನಿನ್ನೆಯ ಘಟನೆಗಳು ಕಾರಣವಾಗಿರುತ್ತವೆ. 30 ವರ್ಷಗಳ ಹಿಂದೆ ನಡೆದ ಘಟನೆ ನೆನೆದು ಮರುಗುತ್ತಿರುತ್ತಾರೆ. ನಾವು ಮತ್ತೆ ಆ ದಿನಕ್ಕೆ ಹೋಗಲು ಸಾಧ್ಯವಿಲ್ಲ. ಅಲ್ಲಿ ಏನು ತಪ್ಪಾಗಿದೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ರೆ ಇಂದು ಏನು ನಡೆಯುತ್ತಿದೆ ಅದನ್ನು ನಾವು ಸರಿಪಡಿಸಬಹುದು. ಕಳೆದ ಹೋದ ಸಮಯ ಮತ್ತೆ ಬರಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬರೂ ತಿಳಿಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.