ಬರೀ 15 ನಿಮಿಷ: ಸೋಷಿಯಲ್ ಮೀಡಿಯಾದಿಂದ ದೂರವಿರಿ, ಆರೋಗ್ಯ ಸುಧಾರಿಸ್ಕೊಳಿ

ಸಾಮಾಜಿಕ ಜಾಲತಾಣಗಳಿಂದ ಮಾನಸಿಕ ಆರೋಗ್ಯ ಹದಗೆಡುವುದು ಈಗಾಗಲೇ ಸಾಬೀತಾಗಿರುವ ಸಂಗತಿ. ಇವುಗಳ ಬಳಕೆ ಹೆಚ್ಚಿದಂತೆಲ್ಲ ಖಿನ್ನತೆ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ದೈಹಿಕವಾಗಿಯೂ ಹಲವು ರೀತಿಯಲ್ಲಿ ಸಮಸ್ಯೆ ಉಂಟಾಗುತ್ತದೆ, ಮುಖ್ಯವಾಗಿ, ರೋಗ ನಿರೋಧಕ ಶಕ್ತಿ ಕುಂದುತ್ತದೆ. ಆದರೆ, ಸೋಷಿಯಲ್ ಮೀಡಿಯಾ ದೂರವಿಟ್ಟರೆ ಒಟ್ಟಾರೆ ಆರೋಗ್ಯ ಸುಧಾರಣೆಯಾಗುತ್ತದೆ ಎನ್ನುವುದು ಅಧ್ಯಯನದಿಂದ ಸಾಬೀತಾಗಿದೆ.
 

Decrease social media time and improve health

ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ಎಷ್ಟು ಸಮಯ ಕಳೆಯುತ್ತೀರಿ ಎನ್ನುವುದರ ಮೇಲೆ ನಿಮ್ಮ ಆರೋಗ್ಯದ ಸ್ಥಿತಿಗತಿ ಹೇಳಬಹುದು! ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವವರಲ್ಲಿ ಖಿನ್ನತೆ, ಆತಂಕ ಸೇರಿದಂತೆ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಸೇರಿದಂತೆ ಕೆಲವು ದೈಹಿಕ ಸಮಸ್ಯೆಗಳು ಹೆಚ್ಚಿರುವುದು ಈಗಾಗಲೇ ಅಧ್ಯಯನಗಳಿಂದ ಸಾಬೀತಾಗಿರುವ ಸಂಗತಿ. ಹೆಚ್ಚು ಸಮಯ ಸೋಷಿಯಲ್ ಮೀಡಿಯಾಗಳಲ್ಲಿ ಸಮಯ ಕಳೆಯುವವರು ನೀವಾಗಿದ್ದರೆ, ಅಷ್ಟು ನಿಮ್ಮ ಆರೋಗ್ಯ ಹಾಳಾಗಿರುತ್ತದೆ. ಇದಕ್ಕೆ ಪರಿಹಾರ ಖಂಡಿತ ಸುಲಭವಿಲ್ಲ. ಏಕೆಂದರೆ, ಅಂಗೈಯಲ್ಲೇ ಪ್ರಪಂಚ ಇರುವಾಗ ಅದನ್ನು ಬಿಟ್ಟು ದೂರವಿರು ಎಂದರೆ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಸೋಷಿಯಲ್ ಮೀಡಿಯಾಗಳು ನಮ್ಮ ಜೀವನದೊಂದಿಗೆ ಬೆಸೆದಿವೆ. ಆದರೆ, ಇತ್ತೀಚಿನ ಒಂದು ಅಧ್ಯಯನ ಇನ್ನೊಂದು ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದೆ. ನೀವು ದಿನಕ್ಕೆ ಕನಿಷ್ಠ 15 ನಿಮಿಷಗಳ ಕಾಲ ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದರೂ ಸಾಕು, ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಎಷ್ಟೋ ಬದಲಾವಣೆ ಕಂಡುಬರುತ್ತದೆ. ಉತ್ತಮ ಬದಲಾವಣೆಯಾಗುತ್ತದೆ. ಅದಕ್ಕೆ ನೀವು ಮನಸ್ಸು ಮಾಡಬೇಕಷ್ಟೆ. 

ಕೇವಲ 15 ನಿಮಿಷ
ಜರ್ನಿ ಆಫ್ ಟೆಕ್ನಾಲಜಿ ಇನ್ ಬಿಹೇವಿಯರಲ್ ಸೈನ್ಸ್ ಎನ್ನುವ ನಿಯತಕಾಲಿಕದಲ್ಲಿ (Magazine) ಈ ಕುರಿತು ಲೇಖನ ಪ್ರಕಟವಾಗಿದೆ. ನಿಮ್ಮ ಸೋಷಿಯಲ್ ಮೀಡಿಯಾ (Social Media) ಸಮಯವನ್ನು ದಿನಕ್ಕೆ ಕೇವಲ 15 ನಿಮಿಷಗಳ ಕಾಲ ಕಡಿತಗೊಳಿಸಿದರೆ ಆಯಿತು. ಮೂರು ತಿಂಗಳ ಕಾಲ ಇದನ್ನು ವ್ರತದಂತೆ ಆಚರಿಸಬೇಕು. ಇದರಿಂದ ದೈಹಿಕ (Physical) ಮತ್ತು ಮಾನಸಿಕ (Mental) ಆರೋಗ್ಯ (Health) ಸುಧಾರಿಸುವುದು ಕಂಡುಬಂದಿದೆ. ಇಂಗ್ಲೆಂಡಿನ ಸ್ವಾನ್ ಸೀ (Swansea) ವಿಶ್ವವಿದ್ಯಾಲಯ ಈ ಅಧ್ಯಯನ (Study) ನಡೆಸಿದ್ದು, ಜನರನ್ನು ಎರಡು ಗುಂಪುಗಳನ್ನಾಗಿ ವಿಭಜಿಸಿ, ಒಂದು ಗುಂಪಿಗೆ ದಿನಕ್ಕೆ 15 ನಿಮಿಷಗಳ ಕಾಲ ಸೋಷಿಯಲ್ ಮೀಡಿಯಾ ಸಮಯ ಕಡಿತಗೊಳಿಸುವಂತೆ ಸೂಚಿಸಲಾಗಿತ್ತು, ಇನ್ನೊಂದು ಗುಂಪಿಗೆ ಈ ನಿರ್ಬಂಧ ಇರಲಿಲ್ಲ. 15 ನಿಮಿಷಗಳ ಕಾಲ ಸೋಷಿಯಲ್ ಮೀಡಿಯಾ ಸಮಯವನ್ನು ಕಡಿತಗೊಳಿಸಿದ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿತ್ತು.

Health Tips : ನಗ್ತಾ ನಗ್ತಾ ಇದ್ದಾನೆಂದ್ರೆ ಆತ ಸುಖಿ ಅಲ್ಲ..! ಸ್ಮೈಲಿಂಗ್ ಡಿಪ್ರೆಶನ್ ಆಗಿರ್ಬಹುದು!

ಸೋಷಿಯಲ್ ಮೀಡಿಯಾ ಕುರಿತ ಅಧ್ಯಯನದಲ್ಲಿ 50 ಜನ ಪಾಲ್ಗೊಂಡಿದ್ದರು. 20-25ರ ವಯೋಮಾನದ ಯುವ ಪೀಳಿಗೆಯ ಮೇಲೆ ಅಧ್ಯಯನ ನಡೆಸಿದ್ದುದು ವಿಶೇಷ. ಮೂರು ತಿಂಗಳ ಕಾಲ ನಡೆದ ಅಧ್ಯಯನದಲ್ಲಿ ಪ್ರತಿ ತಿಂಗಳು ಆರೋಗ್ಯ ಮತ್ತು ಮಾನಸಿಕ ಸ್ಥಿತಿಗತಿ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿತ್ತು. ಹಾಗೂ ಅವರು ವಾರದಲ್ಲಿ ಎಷ್ಟು ಬಾರಿ, ಯಾವ ವಿಚಾರಕ್ಕೆ ಸೋಷಿಯಲ್ ಮೀಡಿಯಾ ಬಳಕೆ (Use) ಮಾಡಿದ್ದಾರೆ ಎನ್ನುವ ಕುರಿತು ವರದಿ ಸಲ್ಲಿಸಬೇಕಾಗಿತ್ತು. 

ಖಿನ್ನತೆ ದೂರ
ಸೋಷಿಯಲ್ ಮೀಡಿಯಾ ಬಳಕೆಯನ್ನು ಕಡಿತಗೊಳಿಸಿರುವವರ ಆರೋಗ್ಯ (Health) ಗಮನಾರ್ಹವಾಗಿ ಚೆನ್ನಾಗಿತ್ತು. ಅವರಿಗೆ ಸಾಮಾನ್ಯ ಶೀತ (Cold), ನೆಗಡಿಯೂ ಕಡಿಮೆಯಾಗಿತ್ತು. ಜ್ವರ (Fever), ಕೆಮ್ಮು ಸಹ ಪದೇ ಪದೆ ಬರುತ್ತಿರಲಿಲ್ಲ. ಅಲ್ಲದೆ, ನಿದ್ರಾ ಗುಣಮಟ್ಟದಲ್ಲಿ (Sleep Quality) ಶೇಕಡ 50ರಷ್ಟು ಸುಧಾರಣೆಯಾಗಿತ್ತು. ಶೇ.30ರಷ್ಟು ಖಿನ್ನತೆ (Depression) ಲಕ್ಷಣಗಳು ಕಡಿಮೆಯಾಗಿವೆ ಎನ್ನುವುದು ಗಮನಾರ್ಹ ಸಂಗತಿ. ಆದರೆ, ಸೋಷಿಯಲ್ ಮೀಡಿಯಾ ಕಡಿಮೆ ಮಾಡದವರ ಆರೋಗ್ಯ ಎಂದಿನಂತೆಯೇ ಇತ್ತು, ರೋಗ ನಿರೋಧಕ ಶಕ್ತಿಯಲ್ಲಿ (Resitance Power) ಸ್ವಲ್ಪವೂ ಸುಧಾರಣೆ ಆಗಿರಲಿಲ್ಲ. 

Women's Day: ಹಲೋ ಲೇಡೀಸ್, ಮಹಿಳಾ ದಿನವೊಂದೇ ಅಲ್ಲ, ದಿನವೂ ಖುಷಿಯಾಗಿರ್ಬೇಕಾ?

ಸೋಷಿಯಲ್ ಮೀಡಿಯಾದಲ್ಲಿ ಕಳೆಯುವ ಸಮಯ ಕಡಿಮೆ ಮಾಡಿಕೊಂಡಾಗ ಸಹಜವಾಗಿ ದೈಹಿಕ ಚಟುವಟಿಕೆ ಹೆಚ್ಚುತ್ತದೆ. ಪರಿಣಾಮವಾಗಿ, ಖಿನ್ನತೆ ದೂರವಾಗುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಲಾಭ ಹೆಚ್ಚು. ಸೋಷಿಯಲ್ ಮೀಡಿಯಾ ಬಳಕೆಗೂ ಆರೋಗ್ಯಕ್ಕೂ ನೇರವಾದ ನಂಟಿರುವುದು ಇದರಿಂದ ಇನ್ನಷ್ಟು ಖಚಿತವಾಗುತ್ತದೆ ಎಂದಿದ್ದಾರೆ ತಜ್ಞರು.  

Latest Videos
Follow Us:
Download App:
  • android
  • ios