
ನೀವು ದಿನವೂ ಹಲ್ಲು ಉಜ್ಜುತ್ತೀರಾ? ದಿನಕ್ಕೆ ಎಷ್ಟು ಬಾರಿ ಹಲ್ಲುಜ್ಜುತ್ತೀರಿ? ರಾತ್ರಿ ಮಲಗುವ ಮುನ್ನ ಹಲ್ಲನ್ನು ಸ್ವಚ್ಛಗೊಳಿಸುದನ್ನು ಕಡ್ಡಾಯವಾಗಿ ಮಾಡುತ್ತೀರಾ?... ಇದೇನಿದು, ಚಿಕ್ಕ ಮಕ್ಕಳಿಗೆ ಪ್ರಶ್ನಿಸುವಂತಿದೆ ಎನ್ನುತ್ತೀರಾ? ಏಕೆಂದರೆ, ಮಕ್ಕಳಂತೆಯೇ ವಯಸ್ಕ ಭಾರತೀಯರು ಸಹ ಹಲ್ಲುಜ್ಜುವುದು ಕಡಿಮೆಯಂತೆ. ಭಾರತೀಯರಿಗೆ ಎರಡು ಹೊತ್ತು ಹಲ್ಲುಜ್ಜಲು ಸಹ ಬೇಜಾರಂತೆ. ಹೌದು. ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಬಾಯಿ ಆಯೋಗ್ಯದ ಕುರಿತ ದಾಖಲೆಗಳ ಪ್ರಕಾರ, ಹಲ್ಲುಜ್ಜುವುದರಿಂದ ಭಾರತೀಯರು ಭಾರೀ ಕಡಿಮೆ ಅಂಕ ಪಡೆದಿದ್ದಾರೆ. ಇದರಲ್ಲಿ ಆರು ದೇಶಗಳ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲಕ್ಕಿಂತ ಭಾರತದ ಜನರೇ ಹಲ್ಲುಜ್ಜುವುದರಲ್ಲಿ ಭಾರೀ ಹಿಂದಿದ್ದಾರೆ. ಬಹಳಷ್ಟು ಭಾರತೀಯರು ಎರಡು ಹೊತ್ತು ಅಂದರೆ ರಾತ್ರಿ ಸಮಯದಲ್ಲಿ ಹಲ್ಲುಜ್ಜಲು ಬೇಸರಿಸಿಕೊಳ್ಳುತ್ತಾರಂತೆ. ಪರಿಣಾಮವಾಗಿ, ಭಾರತೀಯರ ಹಲ್ಲುಗಳಲ್ಲಿ ಸಿಹಿ ಅಂಶ ಹಾಗೆಯೇ ಉಳಿದಿರುತ್ತದೆಯಂತೆ. ಚೈನಾ, ಕೊಲಂಬಿಯಾ, ಇಟಲಿ, ಕೊಲಂಬಿಯಾ, ಜಪಾನ್ ದೇಶಗಳಲ್ಲಿ ಶೇಕಡ 78-83ರಷ್ಟು ಜನ ಹಲ್ಲುಗಳ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ, ಭಾರತದಲ್ಲಿ ಕೇವಲ ಶೇ.45ರಷ್ಟು ಜನ ಎರಡು ಬಾರಿ ಹಲ್ಲುಜ್ಜುತ್ತಾರೆ.
ನಿಮಗೆ ಗೊತ್ತೇ? ವಿಶ್ವದ ಹಲವು ರಾಷ್ಟ್ರಗಳಿಗೆ (Nations) ಹೋಲಿಕೆ ಮಾಡಿದರೆ ಭಾರತೀಯರು (Indians) ಸಿಹಿ (Sweet) ತಿನ್ನುವ ಪ್ರಮಾಣ ಹೆಚ್ಚು. ಈ ಅಧ್ಯಯನದಲ್ಲೂ (Study) ಇದನ್ನು ಬೊಟ್ಟು ಮಾಡಿ ತೋರಿಸಲಾಗಿದೆ. ಸಾಮಾನ್ಯ ಭಾರತೀಯರಷ್ಟೇ ಅಲ್ಲ, ಇಲ್ಲಿನ ರೋಗಿಗಳು ಸಹ ಉಳಿದ ದೇಶಗಳ ರೋಗಿಗಳಿಗಿಂತ ಶೇ.32ರಷ್ಟು ಹೆಚ್ಚು ಸಿಹಿ ಸೇವನೆ ಮಾಡುತ್ತಾರೆ. ಈ ಸಂಬಂಧ, ವಿಶ್ವದ 12 ದೇಶಗಳ ಬಾಯಿ ಆರೋಗ್ಯದ (Oral Health) ಕುರಿತ ದಾಖಲೆಗಳನ್ನು ಜಾಗತಿಕ ಬಾಯಿ ಆರೋಗ್ಯ ವೀಕ್ಷಣಾಲಯ (Oral Health Observatory) ಸಂಗ್ರಹಿಸಿರುವುದು ಗಮನಾರ್ಹ. ಹತ್ತು ಲಕ್ಷ ದಂತವೈದ್ಯರ ಪ್ರಾತಿನಿಧ್ಯ ಹೊಂದಿರುವ ಜಿನೇವಾ ಮೂಲದ ವಿಶ್ವ ದಂತ ಒಕ್ಕೂಟ ಈ ಸಂಸ್ಥೆಯನ್ನು ಸ್ಥಾಪಿಸಿದೆ.
Health Tips : ಹಲ್ಲಲ್ಲಿ ಈ ಸಮಸ್ಯೆ ಕಾಣಿಸಿಕೊಂಡ್ರೆ ಲಿವರ್ ಕೈಕೊಡ್ತಿದೆ ಎಂದರ್ಥ..
ತಿಂಡಿಗೂ ಮುನ್ನ...
ಬೆಳಗ್ಗೆ (Morning) ಎದ್ದಾಕ್ಷಣ ಹಲ್ಲುಜ್ಜುವವರು, ಸ್ವಲ್ಪ ಸಮಯದ ಬಳಿಕ ತಿಂಡಿಗೂ (Breakfast) ಮುನ್ನ ಹಲ್ಲುಜ್ಜುವವರು, ಸ್ನಾನದ (Bath) ಸಮಯದಲ್ಲೇ ಕಡ್ಡಾಯವಾಗಿ ಹಲ್ಲುಜ್ಜುವವರು, ರಾತ್ರಿ (Night) ಮಾತ್ರವೇ ಹಲ್ಲುಜ್ಜುವವರು ಹೀಗೆ ಹಲ್ಲುಜ್ಜುವವರಲ್ಲೂ ಹಲವು ವಿಧ. ಈ ದಾಖಲೆ ಪ್ರಕಾರ, ಭಾರತ (India) ಮತ್ತು ಚೀನಾದಲ್ಲಿ (China) ಬೆಳಗಿನ ತಿಂಡಿಗೂ ಮುನ್ನ ಹಲ್ಲುಜ್ಜುವ ಜನರ ಸಂಖ್ಯೆ ಹೆಚ್ಚು. ಆದರೆ, ಇಟಲಿ (Italy), ಕೊಲಂಬಿಯಾ, ಜಪಾನ್ (Japan) ದೇಶಗಳ ಜನ ತಿಂಡಿಯ ಬಳಿಕ ಹಲ್ಲುಜುವುದು ಸಾಮಾನ್ಯ. ಈ ಅಧ್ಯಯನ ಲೇಖನ ಅಂತಾರಾಷ್ಟ್ರೀಯ ದಂತ ಜರ್ನಲ್ ನಲ್ಲಿ ಪ್ರಕಟವಾಗಿದೆ.
ತೂಕ ಹೆಚ್ಚಾಗೋದ್ರಿಂದಲೂ ಬಾಯಿಯ ಕ್ಯಾನ್ಸರ್ ಬರುತ್ತೆ ಎಚ್ಚರ!
ಕಳೆದ ವರ್ಷ ವೈದ್ಯರನ್ನು (Doctor) ಕಂಡ ರೋಗಿಗಳು ಅಧಿಕ
ಭಾರತೀಯರು ಸಾಮಾನ್ಯವಾಗಿ ಯಾವುದೇ ನೋವನ್ನಾದರೂ ತಡೆದುಕೊಳ್ಳುವುದು ಹೆಚ್ಚು. ಇನ್ನು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿದ ಬಳಿಕ ವೈದ್ಯರನ್ನು ಕಾಣುತ್ತಾರೆ. ಇದೇ ಅಭ್ಯಾಸವನ್ನು ಚೀನಾ ಜನ ಸಹ ಹೊಂದಿದ್ದಾರೆ. ದಂತ (Dental) ವೈದ್ಯರಲ್ಲಿಗೆ ಬರುವ ಬಹಳಷ್ಟು ಅದೇ ಮೊದಲ ಬಾರಿ ಬಂದಿರುತ್ತಾರೆ. ಅಲ್ಲಿಯವರೆಗೂ ಒಮ್ಮೆಯೂ ಭೇಟಿಯಾಗಿರುವುದೇ ಇಲ್ಲ. ಇನ್ನೊಂದು ಪ್ರಮುಖ ಅಂಶವೆಂದರೆ, ಕಳೆದ ವರ್ಷ ಎಲ್ಲ ದೇಶಗಳಲ್ಲೂ ದಂತ ವೈದ್ಯರನ್ನು ಭೇಟಿಯಾದ ರೋಗಿಗಳ (Patients) ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ ಈ ಪ್ರಮಾಣ ಶೇ.51 ಇದ್ದರೆ, ಜಪಾನ್ ನಲ್ಲಿ ಶೇ.80ರಷ್ಟಿದೆ.
ಅಷ್ಟೇ ಅಲ್ಲ, ಜಪಾನ್ ದೇಶ ಹೊರತು ಪಡಿಸಿ ಬೇರೆ ಎಲ್ಲ ದೇಶಗಳ ರೋಗಿಗಳು ತಮ್ಮ ಹಲ್ಲಿನ ಆರೋಗ್ಯ ಉತ್ತಮವಾಗಿಯೇ ಇದೆ ಎಂದು ಹೇಳುತ್ತಾರಂತೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.