ಕಣ್ಣುಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಕಣ್ಣಿಗೆ ಸಣ್ಣ ನೋವಾದ್ರೂ ಸಹಿಸೋದು ಕಷ್ಟ. ಬ್ಯಾಕ್ಟೀರಿಯಾ ಅಟ್ಯಾಕ್ ಆದ್ರೆ ಮತ್ತಷ್ಟು ಸಮಸ್ಯೆ ಕಾಡುತ್ತದೆ. ನಮ್ಮ ಕಣ್ಣಿನ ಆರೋಗ್ಯ ಹದಗೆಟ್ಟಿದೆ ಅನ್ನೋದನ್ನು ಕಣ್ಣೇ ನಮಗೆ ಹೇಳುತ್ತೆ.
ಒಳ್ಳೆಯ ನಿದ್ರೆಯಿಂದ ಉತ್ತಮ ಆರೋಗ್ಯ ದೊರಕುತ್ತದೆ. ಒಳ್ಳೆಯ ನಿದ್ರೆ ಮನಸ್ಸು, ಮೆದುಳು ಮತ್ತು ಶರೀರವನ್ನು ರೀಫ್ರೆಶ್ ಮಾಡುವ ಕೆಲಸ ಮಾಡುತ್ತದೆ. ನಿದ್ರೆ ಸರಿಯಾಗಿ ಆಗಲಿಲ್ಲ ಎಂದಾದರೆ ಶರೀರದಲ್ಲಿ ಖಾಯಿಲೆಗಳು ವಾಸಮಾಡಲು ಆರಂಭಿಸುತ್ತವೆ. ಹೈಪರ್ ಟೆನ್ಶನ್, ಎಂಗ್ಸೈಟಿ, ಡಿಪ್ರೆಶನ್, ಬೊಜ್ಜು, ಡಯಾಬಿಟೀಸ್ ಮುಂತಾದವು ನಿದ್ರೆಯ ಕೊರತೆಯಿಂದ ಬರುವ ಖಾಯಿಲೆಗಳೇ ಆಗಿವೆ. ಫಿಟ್ ಆಗಿರಲು ಚೆನ್ನಾಗಿ ನಿದ್ರೆ ಮಾಡುವುದು ಅತ್ಯವಶ್ಯವಾಗಿದೆ. ಸಾಮಾನ್ಯವಾಗಿ ಬೆಳಿಗ್ಗೆ ನಿದ್ರೆಯಿಂದ ಎದ್ದಾಗ ಕಣ್ಣುಗಳಲ್ಲಿ ಕೊಳೆ ಬಂದಿರುತ್ತದೆ. ಅದನ್ನು ಕಣ್ಣಿನ ಮಡ್ಡಿ ಎಂದೂ ಕರೆಯಲಾಗುತ್ತದೆ. ನಿಮಗೂ ಪ್ರತಿ ನಿತ್ಯ ಕಣ್ಣು ಬಿಡಲು ಸಾಧ್ಯವಾಗದಷ್ಟು ಮಡ್ಡಿ ಬರ್ತಿದೆ ಅಂದ್ರೆ ಎಚ್ಚರವಹಿಸಿ. ಅದು ಸಾಮಾನ್ಯದ್ದಲ್ಲ.
ಕಣ್ಣಿ (Eye ) ನ ಸುತ್ತ ಆವರಿಸುವ ಕೊಳೆ ನೋಡಲು ನಮಗೆ ದೊಡ್ಡ ಸಮಸ್ಯೆಯಂತೆ ಕಾಣದಿದ್ದರೂ ಕೂಡ ಇದರಿಂದ ಅನೇಕ ಸಮಸ್ಯೆಗಳು ಉಂಟಾಗುವುದಂತೂ ನಿಜ. ಕಣ್ಣಿನಲ್ಲಿ ಬರುವ ಮಡ್ಡಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
undefined
ಕಣ್ಣಿನ ಈ ಕೊಳೆಯ ಬಗ್ಗೆ ನಿಮಗೆಷ್ಟು ಗೊತ್ತು? : ಬೆಳಿಗ್ಗೆ ಕಣ್ಣುಗಳ ಸುತ್ತ ಇರುವ ಕೊಳೆಯು ಕಣ್ಣುಗಳ ಸ್ನಾಯು (Muscle) ಗಳಿಂದ ಬರುವ ಎಣ್ಣೆಯ ಅಂಶ ಅಥವಾ ಹೊಲಸು ಮತ್ತು ನಿದ್ದೆಯಲ್ಲಿ ಬರುವ ಕಣ್ಣೀರಿನ ಮಿಶ್ರಣವಾಗಿದೆ. ಹೀಗೆ ಕಣ್ಣಿನಿಂದ ಬರುವ ಕೊಳೆ ನಮ್ಮ ಕಣ್ಣಿನ ಆರೋಗ್ಯ (Health) ವನ್ನು ಪ್ರತಿಬಿಂಬಿಸುತ್ತದೆ.
Health Tips: ಉಪ್ಪು ಅಥವಾ ಸಕ್ಕರೆ, ಮೊಸರನ್ನು ಯಾವುದರ ಜೊತೆ ತಿಂದ್ರೆ ಆರೋಗ್ಯಕ್ಕೆ ಉತ್ತಮ
ರಾತ್ರಿಯ ಸಮಯದಲ್ಲಿ ಕಣ್ಣಿನಲ್ಲಿ ಶೇಖರವಾಗುತ್ತೆ ಮಡ್ಡಿ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕಣ್ಣಿನ ಸುತ್ತ ಪೊರೆಯ ರೀತಿಯ ಕೊಳೆ ಆವರಿಸುತ್ತದೆ. ಅವರವರ ಶರೀರ ಪ್ರಕೃತಿಗೆ ಅನುಗುಣವಾಗಿ ಕಣ್ಣುಗಳಲ್ಲಿ ಕೊಳೆ ಸಂಗ್ರಹವಾಗುತ್ತದೆ. ಕೆಲವರಿಗೆ ಅವರ ಶರೀರ ವಿಪರೀತ ಉಷ್ಣವಾದಾಗ ಕೂಡ ಕಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕೊಳೆ ತುಂಬಿಕೊಳ್ಳುತ್ತೆ. ಕೆಲವೊಮ್ಮೆ ಚಿಕ್ಕ ಮಕ್ಕಳಿಗಂತೂ ಕಣ್ಣು ಬಿಡಲಾರದಷ್ಟು ಪೊರೆಯ ರೀತಿ ಕೊಳೆ ಆವರಿಸುತ್ತದೆ. ಇಂತಹ ಕೊಳೆಯು ಲೋಳೆ ಮಿಶ್ರಿತವಾಗಿರುವುದರಿಂದ ಅದನ್ನು ನಿಧಾನವಾಗಿ ಉಜ್ಜುಬೇಕಾಗುತ್ತದೆ. ಗಟ್ಟಿಯಾಗಿ ಉಜ್ಜಿದ್ರೆ, ಎಳೆದು ತೆಗೆಯುವ ಪ್ರಯತ್ನ ನಡೆಸಿದ್ರೆ ಅದು ಮಕ್ಕಳ ಕಣ್ಣಿಗೆ ಹಾನಿಯುಂಟುಮಾಡುವ ಸಾಧ್ಯತೆಯಿರುತ್ತದೆ.
ಹೊರಗಿನ ಕಲುಷಿತ ವಾತಾವರಣದಿಂದ ಕಣ್ಣುಗಳು ಕೂಡ ಕೊಳಕಾಗುತ್ತವೆ. ಇಂತಹ ಕೊಳಕು ಕಣ್ಣುಗಳನ್ನು ಮತ್ತೆ ಮತ್ತೆ ಮಿಟುಕಿಸುವುದರಿಂದ ಅಥವಾ ಕಣ್ಣೀರು ಸುರಿಸುವುದರಿಂದ ಕಣ್ಣಿನಿಂದ ಹೊರಹೋಗುತ್ತದೆ. ಕಣ್ಣೀರಿನ ಮೂಲಕ ಕೊಳೆಗಳು ಹೊರಹೋಗುತ್ತವೆ. ರಾತ್ರಿಯ ಸಮಯದಲ್ಲಿ ಈ ಪ್ರಕ್ರಿಯೆ ನಡೆಯದೇ ಇರುವುದರಿಂದ ಗುರುತ್ವಾಕರ್ಷಣೆಯ ಬಲದಿಂದಾಗಿ ಕಣ್ಣಿನ ರೆಪ್ಪೆಗಳ ಮೇಲೆ ಕೊಳಕುಗಳು ಸಂಗ್ರಹವಾಗುತ್ತದೆ.
HEALTH TIPS : ಕ್ಯಾನ್ಸರ್ ಸೇರಿ ಅನೇಕ ರೋಗಕ್ಕೆ ಮದ್ದು ಮಾವಿನ ಕಾಯಿ
ಕಣ್ಣಿನ ಕೊಳೆ ಹೀಗಿದ್ದರೆ ಅದು ಗಂಭೀರ ಸಮಸ್ಯೆ : ಕಣ್ಣಿನಿಂದ ಬರುವ ಇಂತಹ ಕೊಳೆಯ ಬಣ್ಣಗಳು ಕೂಡ ವಿಭಿನ್ನವಾಗಿರುವುದನ್ನು ನೀವು ಗಮನಿಸಿರಬಹುದು. ಈ ಕೊಳೆಗಳು ಕೆಲವೊಮ್ಮೆ ಬಿಳಿ ಮತ್ತು ಕ್ರೀಮ್ ಬಣ್ಣದಲ್ಲಿರುತ್ತದೆ. ಹೀಗೆ ಕಣ್ಣಿನ ಬಣ್ಣ ಬದಲಾಗಿದ್ದಲ್ಲಿ ಅದು ಕಣ್ಣಿನ ಅನಾರೋಗ್ಯವನ್ನು ಸೂಚಿಸುತ್ತದೆ. ಕಣ್ಣಿನಲ್ಲಿರುವ ಬ್ಯಾಕ್ಟೀರಿಯಾದ ಕಂಜಂಕ್ಟಿವೈಟಿಸ್ ಕಣ್ಣಿನ ಉರಿಯೂತ ಅಥವಾ ಕಣ್ಣಿನ ಸೋಂಕನ್ನು ಸೂಚಿಸುತ್ತದೆ. ಇದರಿಂದ ಕಣ್ಣಿನ ರೆಪ್ಪೆಗಳ ಊತ ಹಾಗೂ ರಾತ್ರಿಯ ಸಮಯದಲ್ಲಿ ಕಣ್ಣಿನಿಂದ ದಪ್ಪನೆಯ ನೀರಿನಂತಹ ಸ್ರಾವ ಬರುತ್ತದೆ. ಇದರಿಂದ ಕಣ್ಣಿನ ರೆಪ್ಪೆಗಳು ಪರಸ್ಪರ ಅಂಟಿಕೊಂಡು ಮುಂಜಾನೆ ಕಣ್ಣು ತೆರೆಯುವುದು ಕಷ್ಟವಾಗುತ್ತದೆ.
ಈ ಸಮಸ್ಯೆಯಿಂದ ಕಣ್ಣನ್ನು ಕಾಪಾಡಿಕೊಳ್ಳಲು ಕಣ್ಣುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಮುಖ್ಯವಾಗಿದೆ. ಅದಕ್ಕಾಗಿ ಕೊಳೆಯಾದ ಕೈಗಳಿಂದ ಕಣ್ಣುಗಳನ್ನು ಉಜ್ಜಬಾರದು. ಕಣ್ಣನ್ನು ಸ್ವಚ್ಛಗೊಳಿಸುವಾಗ ನಿಮ್ಮ ಕೈ ಕೂಡ ಶುಭ್ರವಾಗಿರಬೇಕು. ಮೆತ್ತನೆಯ ಬಟ್ಟೆಯಿಂದ ಕಣ್ಣುಗಳನ್ನು ಒರೆಸಿಕೊಳ್ಳಬೇಕು. ಕಣ್ಣುಗಳಿಗೆ ಕೊಳೆ ಸೇರುವುದನ್ನು ತಪ್ಪಿಸಲು ನಿಮ್ಮ ಹಾಸಿಗೆ ಹಾಗೂ ತಲೆದಿಂಬಿನ ಬಟ್ಟೆಗಳನ್ನು ಆಗಾಗ್ಗೆ ತೊಳೆಯುತ್ತಿರಬೇಕು.