ಕೊರೋನಾ ನಂತ್ರ ಮಹಿಳೆಯರನ್ನು ಬೆಂಬಿಡದೇ ಕಾಡ್ತಿದೆ ಈ ಅನಾರೋಗ್ಯ

Published : Apr 17, 2023, 04:35 PM IST
ಕೊರೋನಾ ನಂತ್ರ ಮಹಿಳೆಯರನ್ನು ಬೆಂಬಿಡದೇ ಕಾಡ್ತಿದೆ ಈ ಅನಾರೋಗ್ಯ

ಸಾರಾಂಶ

ಕೊರೊನಾ ನಂತ್ರ ಎಲ್ಲವೂ ಬದಲಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಕೊರೊನಾ ಗೆದ್ದು ಬಂದ ಜನರು ಈಗ್ಲೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೃದಯ, ಶ್ವಾಸಕೋಶದ ಜೊತೆ ಕಿವಿ ಕೂಡ ಇದಕ್ಕೆ ಬಲಿಯಾಗ್ತಿದೆ.  

ಕೊರೊನಾ ತಮ್ಮನ್ನಗಲುವ ಲಕ್ಷಣ ಕಾಣ್ತಿಲ್ಲ. ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ ಎದ್ದಿದೆ. ಪ್ರತಿ ದಿನ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 10 ಸಾವಿರಕ್ಕಿಂತ ಹೆಚ್ಚಾಗಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿದ್ದಷ್ಟು ಕ್ರೌರ್ಯ ಈಗಿಲ್ಲ. ಅಪಾಯಕಾರಿ ಅಲ್ಲವೆಂದ್ರೂ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲೇಬೇಕು. ಅಲ್ಲೊಂದು ಇಲ್ಲೊಂದು ಕೊರೊನಾ ಸಾವು ಸಂಭವಿಸುತ್ತಿರುವ ಜೊತೆಗೆ ಕೊರೊನಾದಿಂದ ಆಗ್ತಿರುವ ಅಡ್ಡಪರಿಣಾಮ ಹೆಚ್ಚಿದೆ. ಕೊರೊನಾ ಬರದಂತೆ ನೀವು ಕಾಳಜಿವಹಿಸಿದ್ರೆ ಅದ್ರ ಅಡ್ಡಪರಿಣಾಮದಿಂದ ರಕ್ಷಣೆ ಪಡೆಯಬಹುದು. ಈಗ ಕೊರೊನಾ ಬಗ್ಗೆ ಮತ್ತೊಂದು ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ಹೊಸ ಅಧ್ಯಯನದ ಪ್ರಕಾರ, ಕೊರೊನಾ ನಂತ್ರ ಮಹಿಳೆಯರು ಗಂಭೀರ ಪರಿಣಾಮ ಎದುರಿಸುತ್ತಿದ್ದಾರೆ. ಅವರಿಗೆ ಕಿವಿಯಲ್ಲಿ ಸಮಸ್ಯೆ ಕಾಣಿಸಿಕೊಳ್ತಿದೆ ಎಂಬುದು ಗೊತ್ತಾಗಿದೆ.

ಕೊರೊನಾ (Corona) ನಂತ್ರ ಮಹಿಳೆಯರನ್ನು ಕಾಡ್ತಿದೆ ಈ ಸಮಸ್ಯೆ : ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದ ನರ್ಸಿಂಗ್ ಉಪನ್ಯಾಸಕಿ ಕಿಮ್ ಗಿಬ್ಸನ್ ಅವರು ಕೋವಿಡ್ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಅನುಭವಗಳನ್ನು ಬ್ರಿಟಿಷ್ (British) ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ವರದಿಯ ಪ್ರಕಾರ, 2022 ರಲ್ಲಿ ಸೌಮ್ಯ ಕೋವಿಡ್ ಇವರನ್ನು ಕಾಡಿತ್ತು. ಕೊರೊನಾದ ಕೆಲವು ಲಕ್ಷಣಗಳು ಕಂಡುಬಂದರೂ ಕೆಲವೇ ದಿನಗಳಲ್ಲಿ ಗಿಬ್ಸನ್ ಗುಣಮುಖರಾಗಿದ್ದರು. ಆದರೆ ಹಲವಾರು ವಾರಗಳ ನಂತರ, ತಲೆತಿರುಗುವಿಕೆ ಮತ್ತು ಟಿನ್ನಿಟಸ್ (ಕಿವಿಯಲ್ಲಿ ರಿಂಗಿಂಗ್) ಕಾಣಿಸಿಕೊಂಡಿತು. ಅಷ್ಟೇ ಅಲ್ಲ ಒಂದು ಕಿವಿ ಕೇಳಿಸದಂತಾಗಿದೆ. ಗಿಬ್ಸನ್ ಗೆ ಚಿಕಿತ್ಸೆ ನೀಡಿದ ವೈದ್ಯರು ಶ್ರವಣ ನಷ್ಟವನ್ನು ದೃಢಪಡಿಸಿದ್ದಾರೆ. ಅವರ ಒಂದು ಕಿವಿ ಕೇಳದಿರಲು ಕೊರೊನಾ ಕಾರಣ ಎಂಬ ಸಂಗತಿ ಬಹಿರಂಗವಾಗಿದೆ. 

HEALTH TIPS: ಉಪ್ಪು ಅಥವಾ ಸಕ್ಕರೆ, ಮೊಸರನ್ನು ಯಾವುದರ ಜೊತೆ ತಿಂದ್ರೆ ಆರೋಗ್ಯಕ್ಕೆ ಉತ್ತಮ

ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ : ಆರಂಭಿಕ ಲಕ್ಷಣ  ಕಾಣಿಸಿಕೊಳ್ತಿದ್ದಂತೆ ಗಿಬ್ಸನ್ ವೈದ್ಯರ ಬಳಿ ಹೋಗಿದ್ದಾರೆ. ವೈದ್ಯರಿಂದ ಚಿಕಿತ್ಸೆ ಆರಂಭವಾಗಿದೆ. ಈಗ ಅವರು ಶ್ರವಣ ಶಕ್ತಿಯಲ್ಲಿ ಸುಧಾರಣೆ ಕಂಡು ಬಂದಿದೆ. ಕಿವಿಯಲ್ಲಿ ಮರಗಟ್ಟುವಿಕೆಯ ಶಬ್ದ ಇನ್ನೂ ಬರುತ್ತದೆ ಎಂದು ಗಿಬ್ಸನ್ ಹೇಳಿದ್ದಾರೆ. ಕೊರೊನಾದಿಂದಾಗಿ ಈ ಸಮಸ್ಯೆ ಶುರುವಾಗಿದ್ದು, ಜನರು ಎಚ್ಚರದಿಂದ ಇರಬೇಕೆಂದು ಗಿಬ್ಸನ್ ಹೇಳಿದ್ದಾರೆ. 

ಈ ಬಗ್ಗೆ ಅಧ್ಯಯನ (Study) ದಲ್ಲಿ ಹೇಳೋದೇನು? : ಕೊರೊನಾ ನಂತ್ರ ಅನೇಕ ಅಧ್ಯಯನಗಳು ನಡೆಯುತ್ತಲೇ ಇವೆ. ಕೋವಿಡ್ ಸೋಂಕಿನ ನಂತರ ಜನರಿಗೆ ಏನೆಲ್ಲ ಸಮಸ್ಯೆಯಾಗುತ್ತದೆ ಎಂದು ವಿಜ್ಞಾನಿಗಳು ಪತ್ತೆ ಮಾಡ್ತಿದ್ದಾರೆ. ಕಿವುಡುತನದ ಬಗ್ಗೆ ಕೂಡ ಅಧ್ಯಯನ ನಡೆಸಲಾಗಿದೆ. ಕೋವಿಡ್‌ನಿಂದಾಗಿ ಹಠಾತ್ ಕಿವುಡುತನ ಅಥವಾ ಶ್ರವಣ ದೋಷ (Hearing Loss ) ದ ಅಪಾಯ ಕಾಡುತ್ತದೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ. ಕೆಲವರಿಗೆ ಸೌಮ್ಯ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಹಠಾತ್ ಶ್ರವಣ ನಷ್ಟವನ್ನು ಹಠಾತ್ ಕಿವುಡುತನ ಎಂದು ಪರಿಗಣಿಸಲಾಗುತ್ತದೆ. ಕೊರೊನಾ ಬಂದ ಎಲ್ಲರಲ್ಲೂ ಈ ಸಮಸ್ಯೆ ಕಾಡುತ್ತದೆ ಎಂದಲ್ಲ. 

ತೂಕ ಹೆಚ್ಚಾಗೋದ್ರಿಂದಲೂ ಬಾಯಿಯ ಕ್ಯಾನ್ಸರ್ ಬರುತ್ತೆ ಎಚ್ಚರ!

ಕೊರೊನಾ ಕೇವಲ ಕಿವಿ (Ear) ಯ ಮೇಲೆ ಮಾತ್ರವಲ್ಲ ನಮ್ಮ ದೇಹದ ಅನೇಕ ಭಾಗಗಳನ್ನು ಹಾನಿಗೊಳಿಸುತ್ತದೆ. ಕೆಲವರ ಶ್ವಾಸಕೋಶ, ಹೃದಯ, ಮೆದುಳು, ಮೂತ್ರಪಿಂಡಗಳ ಮೇಲೂ ಕೊರೊನಾ ಪರಿಣಾಮ ಬೀರಿದೆ.
ಕೊರೊನಾ ಅಪಾಯ ಕಡಿಮೆಯಾಗಿದೆ ಎನ್ನುವ ಕಾರಣಕ್ಕೆ ಅದನ್ನು ನಿರ್ಲಕ್ಷ್ಯ ಮಾಡುವ ಬದಲು ಎಚ್ಚರಿಕೆವಹಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಕೊರೊನಾ ಇಂಜೆಕ್ಷನ್ ಪಡೆಯುವ ಜೊತೆಗೆ ಬೂಸ್ಟರ್ ಡೋಜ್ ಹಾಕಿಸಿಕೊಳ್ಳಬೇಕು. ಜನನಿಬಿಡಿ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಕಡಿಮೆ ಮಾಡ್ಬೇಕು. ಸಣ್ಣ ಜ್ವರ, ನೆಗಡಿ ಕಾಣಿಸಿಕೊಂಡ್ರೂ ಸೂಕ್ತ ಆರೈಕೆ ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..