ಕೆಲವರಿಗೆ ವಾಹನ ಹತ್ತಿದ ತಕ್ಷಣ ನಿದ್ರೆ ಬರುತ್ತೆ. ಮತ್ತೆ ಕೆಲವರಿಗೆ ಒಂದೆರಡು ಗಂಟೆ ಪ್ರಯಾಣದ ನಂತ್ರ ಕಣ್ಣು ಮುಚ್ಚೋಕೆ ಶುರುವಾಗುತ್ತೆ. ಟ್ರಾವೆಲ್ ವೇಳೆ ನಿದ್ರೆ ಬರೋಕೆ ನಾನಾ ಕಾರಣವಿದೆ. ಅದೇನು ಅಂತಾ ಇಲ್ಲಿ ಹೇಳ್ತೇವೆ.
ಪ್ರಯಾಣದ ವೇಳೆ ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ಬೇಕೆಂದು ನಾನು ಬಯಸ್ತೇನೆ. ಆಹ್ಲಾದಕರ ಪರಿಸರ, ವಾತಾವರಣವನ್ನು ಕಣ್ತುಂಬಿಕೊಳ್ಳುವ ಮನಸ್ಸಿರುತ್ತದೆ. ಆದ್ರೆ ವಾಹನದಲ್ಲಿ ಕುಳಿತುಕೊಂಡ ಸ್ವಲ್ಪೇ ಸಮಯದಲ್ಲಿ ಕಣ್ಣು ಮುಚ್ಚಲು ಶುರುವಾಗುತ್ತದೆ. ಅದೆಷ್ಟೇ ಪ್ರಯತ್ನಿಸಿದ್ರೂ ಎಚ್ಚರವಾಗಿರಲು ಸಾಧ್ಯವಾಗೋದಿಲ್ಲ. ಒಂದು ಸಣ್ಣ ನಿದ್ರೆಯಾದ್ರೂ ಬಂದು ಹೋಗಿರುತ್ತದೆ. ಬರೀ ನಾನು ಮಾತ್ರವಲ್ಲ, ನನಗೆ ಗೊತ್ತು ಅನೇಕರು ಪ್ರಯಾಣದ ವೇಳೆ ನಿದ್ರೆ ಮಾಡ್ತಾರೆ. ದೂರದ ಪ್ರಯಾಣದ ವೇಳೆ ನಿದ್ರೆ ಬರಲು ದಣಿವು ಕಾರಣ.
ಪ್ರಯಾಣ (Travel) ದ ಆರಂಭದಲ್ಲಿ ಲವಲವಿಕೆಯಿರುತ್ತದೆ. ಇಡೀ ಪ್ರಯಾಣವನ್ನು ಖುಷಿಯಾಗಿ ನಡೆಸುವ ಶಕ್ತಿಯಿದೆ ಎನ್ನಿಸುತ್ತದೆ. ಆದ್ರೆ ಪ್ರಯಾಣ ಶುರುವಾದ ಕೆಲವೇ ಗಂಟೆಗಳಲ್ಲಿ ನಿದ್ರೆ, ದಣಿವು ಕಾಣಿಸಿಕೊಳ್ಳುತ್ತದೆ. ಕೆಲವು ಬಾರಿ ನಿದ್ರೆ, ದಣಿವು ಎರಡೂ ಬಂದಿಲ್ಲವೆಂದ್ರೂ ಅದೆಷ್ಟು ಸಮಯ ಗಿಡ, ಮರ, ಆಕಾರ, ಮನೆಯನ್ನು ನೋಡೋದು. ಕಣ್ಣಿಗೆ, ಮನಸ್ಸಿಗೆ ಬೋರ್ ಆಗಿ ಒತ್ತಾಯಪೂರ್ವಕವಾಗಿಯಾದ್ರೂ ನಿದ್ರೆ (Sleep) ಮಾಡ್ತೇವೆ. ನಾವಿಂದು ದೂರದ ಪ್ರಯಾಣದ ವೇಳೆ ಜನರು ನಿದ್ರೆ ಆಡೋದು ಏಕೆ ಎನ್ನುವ ಬಗ್ಗೆ ನಿಮಗೆ ಇನ್ನೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
Womens Health: ಬೇಸಿಗೆಯಲ್ಲಿ ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆಯಿರಲಿ ವಿಶೇಷ ಕಾಳಜಿ
ಅತಿ ಉತ್ಸಾಹವೂ ನಿದ್ರೆಗೆ ಕಾರಣ : ನಿಮಗೆ ಅಚ್ಚರಿ ಎನ್ನಿಸಬಹುದು. ಆದ್ರೆ ಇದು ಸತ್ಯ. ನಾವು ದೂರದ ಪ್ರದೇಶಕ್ಕೆ ಹೋಗ್ಬೇಕು ಎಂದಾಗ ಉತ್ಸಾಹಕ್ಕೊಳಗಾಗ್ತೇವೆ. ಇದೇ ಉತ್ಸಾಹದಲ್ಲಿ ರಾತ್ರಿ ಸರಿಯಾಗಿ ನಿದ್ರೆ ಮಾಡೋದಿಲ್ಲ. ಪ್ರಯಾಣ ಹೇಗಿರಬಹುದು, ಅಗತ್ಯವಿರುವ ವಸ್ತುಗಳು ಪ್ಯಾಕ್ ಆಗಿದ್ಯಾ? ಹೋದ ಮೇಲೆ ಏನೆಲ್ಲ ಮಾಡ್ಬೇಕು ಎಂಬ ಆಲೋಚನೆ (Thought) ಯಲ್ಲಿ ನಿದ್ರೆ ದೂರವಾಗುತ್ತದೆ. ಹಿಂದಿನ ರಾತ್ರಿ ಸರಿಯಾಗಿ ನಿದ್ರೆ ಬರದ ಕಾರಣ ದೇಹ ಆಯಾಸಗೊಂಡಿರುತ್ತದೆ. ನಮಗೆ ಅರಿವಿಲ್ಲದೆ ನಿದ್ರೆ ಬರುತ್ತದೆ.
ಸಿರ್ಕಾಡಿಯನ್ ರಿದಮ್ ಕಾರಣ : ನಮ್ಮ ದೇಹವೂ ನಿಯಮದಂತೆ ನಡೆಯುತ್ತದೆ. ನಿಮಗೆ ರಾತ್ರಿಯಾದ ತಕ್ಷಣ ನಿದ್ರೆ ಬರುತ್ತದೆ. ಅದೇ ಹಗಲಿನಲ್ಲಿ ಎಚ್ಚರವಾಗುತ್ತದೆ. ಇದಕ್ಕೆ ಸಿರ್ಕಾಡಿಯನ್ ರಿದಮ್ ಕಾರಣ. ಸಿರ್ಕಾಡಿಯನ್ ರಿದಮ್ ಮೂಲಕ ಇದು ಪ್ರೋಗ್ರಾಮಿಂಗ್ ಆಗಿರುತ್ತದೆ. ರಾತ್ರಿ ನಾವು ಪ್ರಯಾಣ ಮಾಡ್ತಿದ್ದರೆ, ರಾತ್ರಿಯಾಯ್ತು ಮಲಗು ಎನ್ನುವ ಸಂದೇಶ ಮೆದುಳಿಗೆ ರವಾನೆಯಾಗಿ ನಿದ್ರೆ ಆವರಿಸುತ್ತದೆ. ಹಗಲಿಗಿಂತ ರಾತ್ರಿ ಪ್ರಯಾಣದ ವೇಳೆ ಹೆಚ್ಚಿನ ಜನರು ನಿದ್ರೆ ಮಾಡಲು ಇದೇ ಕಾರಣ.
ಸುಡುವ ಬಿಸಿಲಿನಲ್ಲಿ ಕೋಲ್ಡ್ ವಾಟರ್ ಕುಡಿತೀರಾ? ಹೃದಯ ಬಡಿತ ಸ್ಲೋ ಆಗುತ್ತೆ ಹುಷಾರ್!
ಕಾರಿನ ಶಬ್ಧಕ್ಕೂ ಬರುತ್ತೆ ನಿದ್ರೆ : ನೀವು ಗಮನಿಸಿರಬಹುದು, ಕೆಲವರಿಗೆ ಫ್ಯಾನ್ ಶಬ್ಧವಿಲ್ಲದೆ ನಿದ್ರೆ ಬರೋದಿಲ್ಲ. ಮತ್ತೆ ಕೆಲವರು ಮಧುರವಾದ ಹಾಡುಗಳನ್ನು ಕೇಳ್ತಾ ಕಣ್ಣು ಮುಚ್ಚುತ್ತಾರೆ. ಇದೇ ರೀತಿ, ಕಾರಿನ ಶಬ್ಧಕ್ಕೆ ನಿದ್ರೆ ಬರುತ್ತದೆ. ಕಾರಿನಲ್ಲಿ ಪ್ರಯಾಣಿಸುವ ಇಂಜಿನ್ ನಿರಂತರವಾಗಿ ಶಬ್ಧ ಮಾಡುತ್ತದೆ. ವಾಹನದಿಂದ ಬರುವ ನಿರಂತರ ಶಬ್ಧ ಮನಸ್ಸನ್ನು ನಿರಾಳಗೊಳಿಸುತ್ತದೆ. ವಿಜ್ಞಾನಿಗಳು ಇದನ್ನು ವೈಟ್ ಶಬ್ಧವೆಂದು ಕರೆಯುತ್ತಾರೆ.
ಮೋಷನ್ ಸಿಕ್ನೆಸ್ (Motion Sickeness) : ಪ್ರಯಾಣದ ವೇಳೆ ನಿದ್ರೆ ಮಾಡೋದು ಸಾಮಾನ್ಯ ಸಂಗತಿ. ಆದ್ರೆ 10 – 15 ನಿಮಿಷದ ಪ್ರಯಾಣದಲ್ಲೂ ನಿದ್ರೆ ಬರುತ್ತೆ ಅಂದ್ರೆ ಅವರಿಗೆ ಮೋಷನ್ ಸಿಕ್ನೆಸ್ ಇದೆ ಎಂದರ್ಥ. ಚಲನೆಯಿಂದ ಉಂಟಾಗುವ ಅನಾರೋಗ್ಯದ ಭಾವನೆ ಇದಾಗಿದೆ. ಇವರಿಗೆ ಪ್ರಯಾಣದ ವೇಳೆ ತಲೆ ಸುತ್ತುವುದು, ವಾಂತಿಯಂತಹ ಸಮಸ್ಯೆ ಕಾಡುತ್ತದೆ. ಹಾಗಾಗಿಯೇ ಅವರು ವಾಹನ ಹತ್ತಿದ ತಕ್ಷಣ ನಿದ್ರೆಗೆ ಜಾರುತ್ತಾರೆ.
ಬೇಸರ (Boredom) : ಮೊದಲೇ ಹೇಳಿದಂತೆ ದೀರ್ಘ ಪ್ರಯಾಣದ ವೇಳೆ ಏನು ಮಾಡ್ಬೇಕು ತಿಳಿಯೋದಿಲ್ಲ. ಸುತ್ತಮುತ್ತಲ ವಾತಾವರಣ ನೋಡೋದು, ಜೊತೆಯಲ್ಲಿ ಆಪ್ತರಿದ್ದರೆ ಅವರ ಜೊತೆ ಮಾತನಾಡೋದು, ಮೊಬೈಲ್ ನೋಡೋದು ಬಿಟ್ಟು ಬೇರೆ ಕೆಲಸ ಕಾಣೋದಿಲ್ಲ. ಆಗ ಮನಸ್ಸು ಬೇಸರಗೊಳ್ಳುತ್ತದೆ. ಮನಸ್ಸು ನಿದ್ರೆಯನ್ನು ಬಯಸುತ್ತದೆ. ದೀರ್ಘ ಪ್ರಯಾಣದ ವೇಳೆ ನಿದ್ರೆ ಬರಲು ಇದೆಲ್ಲ ಕಾರಣ. ಆದ್ರೆ ಎಲ್ಲರಿಗೂ ನಿದ್ರೆ ಬರಬೇಕೆಂದೇನೂ ಇಲ್ಲ. ಕೆಲವರು ಎಷ್ಟೇ ದೂರದ ಪ್ರಯಾಣವಾದ್ರೂ ಎಚ್ಚರದಿಂದ ಇರುತ್ತಾರೆ. ಸ್ವಲ್ಪ ಆಯಾಸವೂ ಅವರಿಗೆ ಆಗೋದಿಲ್ಲ.